Job NewsLatest Updates

India Post Recruitment : ಭಾರತೀಯ ಅಂಚೆ ಇಲಾಖೆಯಲ್ಲಿ 30,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ

Share With Friends

India Post Recruitment : Vacancies for 10th Pass in Postal Department
ಭಾರತೀಯ ಅಂಚೆ ಇಲಾಖೆ 2026ರಲ್ಲಿ 30,000ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಶಾಖಾ ಪೋಸ್ಟ್‌ಮಾಸ್ಟರ್ (BPM), ಸಹಾಯಕ ಶಾಖಾ ಪೋಸ್ಟ್‌ಮಾಸ್ಟರ್ (ABPM), ಪೋಸ್ಟ್‌ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಈ ಅಧಿಸೂಚನೆ ಹೊರಬೀಳಲಿದೆ. ಅಧಿಕೃತ ಜಾಹೀರಾತು 2026ರ ಜನವರಿ 15ರಂದು ಪ್ರಕಟವಾಗಲಿದೆ.

ಭಾರತೀಯ ಅಂಚೆ ಇಲಾಖೆ ದೇಶದ ಅತಿದೊಡ್ಡ ಸರ್ಕಾರಿ ಇಲಾಖೆಗಳಲ್ಲೊಂದು ಆಗಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗವಾಗಿರುವುದರಿಂದ ಉತ್ತಮ ಸಂಬಳ, ಭತ್ಯೆಗಳು ಹಾಗೂ ಭದ್ರ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಪ್ರತಿ ವರ್ಷ ಸಾವಿರಾರು ಯುವಕರು ಅಂಚೆ ಇಲಾಖೆಯ ಉದ್ಯೋಗ ಜಾಹೀರಾತಿಗಾಗಿ ನಿರೀಕ್ಷಿಸುತ್ತಿದ್ದು, ಈ ಬಾರಿ ಬಿಡುಗಡೆಯಾಗುತ್ತಿರುವ ನೇಮಕಾತಿ ಅಧಿಸೂಚನೆ ಅವರಿಗೆ ಮಹತ್ವದ ಅವಕಾಶವಾಗಲಿದೆ.

ಗ್ರಾಮೀಣ ಪ್ರದೇಶದ ಯುವಕರಿಗೆ ಸ್ಥಿರ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಭಾರೀ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಅರ್ಜಿ ದಿನಾಂಕ, ರಾಜ್ಯವಾರು ಹುದ್ದೆಗಳ ವಿವರಗಳು ಲಭ್ಯವಾಗಲಿವೆ.

ಗ್ರಾಮೀಣ ಶಾಖಾ ಕಚೇರಿಗಳಲ್ಲಿ ನೇಮಕಾತಿ

ಈ ನೇಮಕಾತಿಯಡಿ ಶಾಖೆಯೇತರ ಅಂಚೆ ಕಚೇರಿಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಗ್ರಾಮ ಮಟ್ಟದ ನೌಕರರು, ಶಾಖಾ ಪೋಸ್ಟ್‌ಮಾಸ್ಟರ್‌ಗಳು ಹಾಗೂ ಸಹಾಯಕ ಶಾಖಾ ಪೋಸ್ಟ್‌ಮಾಸ್ಟರ್ ಹುದ್ದೆಗಳು ಇದರಲ್ಲಿ ಸೇರಿವೆ. ಒಟ್ಟು ಸುಮಾರು 30,000 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ.

ವಯೋಮಿತಿ ಮತ್ತು ಅರ್ಹತೆ :

ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷಗಳೊಳಗಿರಬೇಕು. ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳಿಗೆ (OBC) 3 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷಗಳ ವಯೋಸಡಿಲಿಕೆ ನೀಡಲಾಗಿದೆ.

ಅರ್ಹ ಅಭ್ಯರ್ಥಿಗಳು 10ನೇ ತರಗತಿ ಅಥವಾ ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. 10ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು. ಜೊತೆಗೆ ದ್ವಿಚಕ್ರ ವಾಹನ ಅಥವಾ ಸೈಕಲ್ ಸವಾರಿ ಮಾಡುವ ಜ್ಞಾನ ಇರಬೇಕು.

ಅರ್ಜಿಸುವ ವಿಧಾನ ಮತ್ತು ಶುಲ್ಕ :

ಅಭ್ಯರ್ಥಿಗಳು indiapostgdsonline.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶೈಕ್ಷಣಿಕ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಫೋಟೋ, ಸಹಿ, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು ಹಾಗೂ ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಶುಲ್ಕವನ್ನು UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ವಿವಿಧ ಆನ್‌ಲೈನ್ ಪಾವತಿ ಮಾರ್ಗಗಳ ಮೂಲಕ ಪಾವತಿಸಬಹುದಾಗಿದೆ.

ಕೇಂದ್ರ ಸರ್ಕಾರಿ ಉದ್ಯೋಗವನ್ನು ಕನಸಾಗಿಟ್ಟುಕೊಂಡಿರುವ ಯುವಕರಿಗೆ ಈ ಅಂಚೆ ಇಲಾಖೆಯ ನೇಮಕಾತಿ ಮಹತ್ವದ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಗಾಗಿ ಕಾಯುವಂತೆ ಅಂಚೆ ಇಲಾಖೆ ಸೂಚಿಸಿದೆ.

ವೇತನ ವಿವರ :

GDS ಮತ್ತು ABPM ಹುದ್ದೆಗಳಿಗೆ ಮಾಸಿಕವಾಗಿ ₹10,000 ರಿಂದ ₹24,470 ವರೆಗೆ ವೇತನ ದೊರೆಯಲಿದೆ. BPM ಹುದ್ದೆಗಳಿಗೆ ₹12,000 ರಿಂದ ₹29,380 ವರೆಗೆ ವೇತನ ನಿಗದಿಯಾಗಿದೆ.


✶ Read this also : Current Recruitments : ಪ್ರಸ್ತುತ ನೇಮಕಾತಿಗಳು



author avatar
spardhatimes
error: Content Copyright protected !!