GKHistorySpardha Times

ಭಾರತದ ಇತಿಹಾಸ – ಭಾಗ -1 : ಪ್ರಾಚೀನ ಭಾರತ

Share With Friends

ಭಾರತೀಯ ನಾಗರೀಕತೆಯು ಪ್ರಪಂಚದ ಒಂದು ಅತ್ಯಂತ ಹಳೆಯ ನಾಗರಿಕತೆಯಾಗಿದ್ದು, ಇದರ ಇತಿಹಾಸವು ಅತ್ಯಂತ ಶ್ರೀಮಂತವಾಗಿದೆ. ಭಾರತದ ಇತಿಹಾಸವು ಅದರ ಸ್ವಾತಂತ್ರ್ಯದ ನಂತರವಷ್ಟೇ ಸೃಷ್ಟಿಯಾದುದಲ್ಲ. ಅದು ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಭಾರತದ ಇತಿಹಾಸವನ್ನು ಮುಖ್ಯವಾಗಿ ಮೂರು ಅವಧಿಯ ಭಾಗಗಳನ್ನಾಗಿ ವಿಂಗಡಿಸಬಹುದು,.
1. ಪ್ರಾಚೀನ ಭಾರತ
2. ಮಧ್ಯಕಾಲೀನ ಭಾರತ
3. ಆಧುನಿಕ ಭಾರತ

1. ಪ್ರಾಚೀನ ಭಾರತ
1. ಸಿಂಧೂ ನದಿಯ ನಾಗರಿಕತೆ ( ಕ್ರಿ.ಪೂ 3000 – ಕಿ.ಪೂ 1500)
ಇದು ಭಾರತದ ಅತ್ಯಂತ ಪ್ರಾಚೀನ ನಾಗರಿಕತೆಯಾಗಿದ್ದು, ಸುಮಾರು ಕ್ರಿ.ಪೂ 3000 ರಿಂದ ಕ್ರಿ.ಪೂ. 1500 ರ ಕಾಲದಲ್ಲಿ ಸಿಂಧೂ ನದಿಯ ಬಯಲಿನಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಈ ನಾಗರಿಕತೆಯು ಮೊದಲು ಕ್ರಿ.ಶ 1921 ರಲ್ಲಿ ಬೆಳಕಿಗೆ ಬಂತು. ಸಿಂಧೂ ನದಿಯ ನಾಗರಿಕತೆಗೆ ಸಂಬಂಧಿಸಿದ ಪ್ರಮುಖ ಸ್ಥಳಗಳೆಂದರೆ: ಗುಜರಾತ್ ರಾಜ್ಯದ ಅಹಮದಾಬಾದ್ ಹತ್ತಿರದ ಲೋಥಾಲ್, ರಾಜಸ್ಥಾನದಲ್ಲಿರುವ ಕಾಲಿಬಂಗನ್, ಹರಿಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯ ಬಾನ್‍ವಾಲಿ, ಪಂಜಾಬ್‍ನ ಚಂಡೀಗಢ್‍ದ ಸಮೀಪವಿರುವ ರೋಪಾರ್, ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಯ ಮೊಹೆಂಜೋದಾರೋ ಹಾಗೂ ಪಂಜಾಬ್ ಪ್ರಾಂತ್ಯದ ಮಾಂಟೆಗೊಮೆರಿ ಜಿಲ್ಲೆಯ ಹರಪ್ಪಾ. ಈ ಸಿಂಧೂ ನದಿಯ ನಾಗರಿಕತೆಯು ಕರಾಚಿಯಿಂದ 300 ಮೈಲಿ ದೂರದಲ್ಲಿ ಅರೇಬಿಯಾ ಸಮುದ್ರದ ದಡದಲ್ಲಿರುವ ಸುಕ್ತಾಗೆನ್‍ಡಾರ್‍ನಿಂದ ಪಂಜಾಬ್‍ನ ಹೋಷಿಯಾರ್‍ಪುರ್ ಜಿಲ್ಲೆಯ ರೋಪಾರ್‍ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 1000 ಮೈಲಿಯಷ್ಟು ದೂರಕ್ಕೆ ವಿಸ್ತರಿಸಿತ್ತು.

ಸಿಂಧೂ ನದಿಯ ನಾಗರಿಕತೆಯ ಕಾಲದಲ್ಲಿದ್ದ ಪಟ್ಟಣಗಳು ಅಂದವಾಗಿ ನಿರ್ಮಿಸಿದ ರಸ್ತೆಗಳು ಹಾಗೂ ಬೀದಿಗಳಿಂದ ಕೂಡಿದ್ದವು. ಇಟ್ಟಿಗೆಯಿಂದ ಮನೆಗಳನ್ನು, ಸುಂದರವಾದ ಸ್ನಾನದ ಮನೆಗಳನ್ನು ಆ ಕಾಲದಲ್ಲಿ ನಿರ್ಮಿಸಿದ್ದರು. ಆ ಕಾಲದ ಯಾವುದೇ ಬರಹದ ದಾಖಲೆಗಳು ಸಿಗದ ಕಾರಣ ಸಿಂಧೂ ನದಿಯ ನಾಗರೀಕತೆಯ ವಿನಾಶಕ್ಕೆ ಕಾರಣವಾದ ಅಂಶಗಳು ಸರಿಯಾಗಿ ತಿಳಿದು ಬಂದಿಲ್ಲ.

2. ವೇದಗಳ ಕಾಲ- ಆರ್ಯನ್ನರು
ಭಾರತಕ್ಕೆ ವಲಸೆ ಬಂದ ಜನಾಂಗದವರಲ್ಲಿ ಅತಿ ಮುಖ್ಯವಾದವರು ಆಯ್ನ್ನರು. ಆರ್ಯನ್ನರು ಮಧ್ಯ ಏಷಿಯಾದಿಂದ ಭಾರತಕ್ಕೆ ಸುಮಾರು ಕ್ರಿ.ಪೂ 2000 ದ ಅವಧಿಯಲ್ಲಿ ಬಂದರು ಎಂದು ನಂಬಲಾಗಿದೆ. ಅವರು ಮೊದಲಿಗೆ ಪಂಜಾಬನ್ನು ವಶಪಡಿಸಿಕೊಂಡು ವಾಸಿಸಲು ಪ್ರಾರಂಭಿಸಿ ನಂತರ ಗಂಗಾ ಹಾಗೂ ಬ್ರಹ್ಮಪುತ್ರ ನದಿಯ ತೀರಾದಾದ್ಯಂತ ವಾಸಿಸಲಾರಂಭಿಸಿ ಇಡೀ ಉತ್ತರ ಭಾರತವನ್ನು ಆಕ್ರಮಿಸಿಕೊಂಡರು.

ಅವರು ಸೂರ್ಯ, ನೀರು, ಬೆಂಕಿ ಇತ್ಯಾದಿಯ ಆರಾಧಕರಾಗಿದ್ದರು. ಆರ್ಯರೇ ಹಿಂದೂ ಧರ್ಮದ ಸ್ಥಾಪಕರಿರಬಹುದೆಂದು ನಂಬಲಾಗಿದೆ. ಆರ್ಯರ ಕಾಲದ ಧಾರ್ಮಿಕ ಪುಸ್ತಕಗಳು ಅವರ ಸಂಸ್ಕøತಿ, ನಂಬಿಕೆಗಳು ಹಾಗೂ ಸಂಪ್ರದಾಯಗದ ಬಗೆಗೆ ಬೆಳಕು ಚೆಲ್ಲುತ್ತವೆ.

➤ವೇದಗಳು– ವೇದಗಳು ಅತ್ಯಂತ ಹಳೆಯ ಹಿಂದೂ ಧಾರ್ಮಿಕ ಗ್ರಂಥಗಳಾಗಿವೆ. ಒಟ್ಟು ವೇದಗಳು ನಾಲ್ಕು ಅವೆಂದರೆ,
1. ಋಗ್ವೇದ- ಇದು ನಾಲ್ಕು ವೇದಗಳಲ್ಲಿ ಅತ್ಯಂತ ಹಳೆಯ ವೇದವಾಗಿದ್ದು, ಇದು ದೇಶದಲ್ಲಿ ಮೊದಲ ಹಂತದಲ್ಲಿ ವಾಸವಾಗಿದ್ದ ಆರ್ಯನ್ನರ ಜೀವನ ಮತ್ತು ನಾಗರಿಕತೆಯ ಬಗೆಗೆ ವಿವರಣೆ ನೀಡುತ್ತದೆ. ಇದು ಒಟ್ಟು 1028 ದೇವೆ ಸ್ತೋತ್ರಗಳನ್ನು ಒಳಗೊಂಡಿದೆ.
2. ಸಾಮವೇದ- ಈ ವೇದವು ಮುಖ್ಯವಾಗಿ ಸಂಗೀತಕ್ಕೆ ಅರ್ಪಿತವಾಗಿದ್ದು, 1549 ದೇವರ ಸ್ತೋತ್ರಗಳನ್ನು ಒಳಗೊಂಡಿದೆ.
3. ಯಜುರ್‍ವೇದ- ಈ ವೇದವು ಯಜ್ಞ, ನರಬಲಿ ಇತ್ಯಾದಿಗಳನ್ನು ನೇರವೇರಿಸುವ ಬಗೆಗಿನ ಮಂತ್ರಗಳನ್ನು ಒಳಗೊಂಡಿದೆ.
4. ಅಥರ್ವಣ ವೇದ- ಅಥರ್ವಣ ವೇದವು 20 ಪುಸ್ತಕಗಳಾಗಿ ವಿಭಾಗಿಸಲ್ಪಟ್ಟಿದ್ದು, 73 ಸ್ತೋತ್ರಗಳನ್ನು ಒಳಗೊಂಡಿದೆ.

➤ ಬ್ರಾಹ್ಮಣಗಳು
ಇವು ಆರ್ಯನ್ನರ ಸಾಮಾಜಿಕ- ರಾಜಕೀಯ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.
➤ ಅರಣ್ಯಕಗಳು
ಅರಣ್ಯಕಗಳು ಬ್ರಾಹ್ಮಣಗಳ ಮುಕ್ತಾಯದ ಭಾಗಗಳಾಗಿದ್ದು, ಇವು ಆಧ್ಯಾತ್ಮಯೋಗ ಹಾಗೂ ತಾತ್ವಿಕ ವಿಚಾರಗಳನ್ನು ಒಳಗೊಂಡಿದೆ.

➤ ಉಪನಿಷತ್‍ಗಳು
ಉಪನಿಷತ್‍ಗಳು ಹಿಂದೂ ತಾತ್ವಿಕತೆಯ ತಳಹದಿಯಾಗಿದ್ದು, ಇವು ದೇವರು, ಆತ್ಮ ಹುಟ್ಟು, ಸಾವು , ಪುನರ್ಜನ್ಮ ಬಗೆಗೆ ಆಳವಾದ ಜ್ಞಾನ ಹಾಗೂ ವಿಚಾರಗಳನ್ನು ತಿಳಿಸುತ್ತವೆ.
➤ ಮನುಸ್ಮøತಿ
ಮನುಸ್ಮøತಿಯನ್ನು ಬರೆದವನು ಮನು ಎಂಬಾತನಾಗಿದ್ದು, ಈತ ಆತ್ಯರ ಕಾಲದ ಮಹಾನ್ ಕಾನೂನು ರೂಪಕನಾಗಿದ್ದಾನೆ. ಮನುಸ್ಮøತಿಯು ರಾಜರ ಕರ್ತವ್ಯಗಳು, ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸದ ಬಗೆಗೆ ವಿವರ ನೀಡುತ್ತದೆ.
➤ಪುರಾಣಗಳು
ಪುರಾಣಗಳು ಆರ್ಯನ್ನರ ಧಾರ್ಮಿಕ ಹಾಗೂ ಐತಿಹಾಸಿಕ ವಿವರಗಳನ್ನು ನೀಡುತ್ತವೆ. ಒಟ್ಟು ಹದಿನೆಂಟು ಪುರಾಣಗಳಿದ್ದು, ಅವುಗಳಲ್ಲಿ ಭಗವತ್ ಪುರಾಣವು ಪ್ರಮುಖವಾದದ್ದು.

3. ವೇದಗಳ ನಂತರದ ಕಾಲ
ವೇದಗಳ ನಂತರದ ಕಾಲವನ್ನು ಬ್ರಾಕ್ಮಣ್ಯದ ಯುಗ ಎಂದೂ ಸಹ ಕರೆಯಲಾಗುತ್ತದೆ. ಈ ಕಾಲದಲ್ಲಿ ಸಂಸ್ಥಾನಗಳು ಬೆಳವಣಿಗೆಯಾಗುತ್ತವೆ. ಈ ಅವಧಿಯಲ್ಲಿ ಸಮಾಜವು ವೃತ್ತಿಯ ಆಧಾರದ ಮೇಲೆ ನಾಲ್ಕು ಜಾತಿಗಳಾಗಿ ವಿಂಗಡಿಸಲ್ಪಟ್ಟಿತ್ತು. ಆ ಝಾತಿಗಳೆಂದರೆ ಬ್ರಾಹ್ಮಣರು, ಕ್ಷತ್ರಿಯರು , ವೈಶ್ಯರು ಹಾಗೂ ಶೂದ್ರರು.

ವೇದಗಳ ನಂತರದ ಕಾಲದಲ್ಲಿ ಆರ್ಯರು ಇಡೀ ಉತ್ತರ ಭಾರತದಾದ್ಯಂತ ವಾಸಿಸಲು ಪ್ರಾರಂಭಿಸಿದರು. ಈ ಕಾಲದಲ್ಲಿ ಮಹಾಭಾರತ ಹಾಗೂ ರಾಮಾಯಣ ಮಹಾಗ್ರಂಥಗಳು ರಚಿತವಾದವಲ್ಲದೆ, ಇದೇ ಅವಧಿಯಲ್ಲಿ ಬ್ರಾಹ್ಮಣರು ಅತ್ಯಂತ ಪ್ರಬಲರಾದರು. ಧಾರ್ಮಿಕ ಆಚರಣೆಗಳು ತೀರಾ ಸಂಕೀರ್ಣಗೊಂಡು ಬ್ರಾಹ್ಮಣರು ಮಾತ್ರ ಅವುಗಳನ್ನು ನೇರವೇರಿಸುವಂತಹ ವಾತಾವರನ ನಿರ್ಮಾಣವಾಯಿತು.

4. ಬೌದ್ಧ ಹಾಗೂ ಜೈನ ಧರ್ಮಗಳ ಬೆಳವಣಿಗೆ
➤ ಬೌದ್ಧ ಧರ್ಮ
ಬೌದ್ಧ ಧರ್ಮದ ಸ್ಥಾಪಕ ಗೌತಮ ಸಿದ್ಧರ್ಥ ಅಥವಾ ಬುದ್ಧ. ಅವನು ಕ್ರಿ.ಪೂ 567 ಅಥವಾ ಕ್ರಿ.ಪೂ 563 ರಲ್ಲಿ ನೇಪಾಳದ ಲುಂಬಿನಿಯಲ್ಲಿ ಶಾಕ್ಯ ಕ್ಷತ್ರಿಯ ವಂಶದಲ್ಲಿ ಶುದ್ಧೋದನ ಹಾಗೂ ಮಹಾಮಾಯರ ಮಗನಾಗಿ ಜನಿಸಿದನು. ಅವನು ತನ್ನ 29 ನೆ ವಯಸ್ಸಿನಲ್ಲಿ ಸತ್ಯದ ಅನ್ವೇಷಣೆಯಲ್ಲಿ ತನ್ನ ಅರಮನೆಯನ್ನು ತೊರೆದು 7 ವರ್ಷಗಲ ಕಾಲ ಅಲೆದಾಡಿದನು. ನಂತರ ಬೋಧ್‍ಗಯಾದ ಬಳಿಯ ಬೋಧಿ ಮರದ ಕೆಳಗೆ ಅವನಿಗೆ ಜ್ಞಾನೋದಯವಾಯಿತು.ಅವನು ತನ್ನ ಸಂದೇಶಗಳನ್ನು ಸುಮಾರು 40 ವರ್ಷಗಳ ಕಾಲ ಹರಡಿ ಕ್ರಿ.ಪೂ 483 ರಲ್ಲಿ ಕುಶಿನಗರ ಎಂಬಲ್ಲಿ ತನ್ನ 80 ನೇ ವಯಸ್ಸಿನಲ್ಲಿ ನಿಧನ ಹೊಂದಿದನು,. ಬೌದ್ಧ ಧರ್ಮದ ನಾಲ್ಕು ಸತ್ಯಗಳೆಂದರೆ.

ಎ. ಪ್ರಪಂಚವು ಸಂಪೂರ್ಣವಾಗಿ ದು:ಖ ಹಾಗೂ ಸಂಕಷ್ಟದಿಂದ ಕೂಡಿದೆ.
ಬಿ. ಎಲ್ಲಾ ನೋವು ಹಾಗೂ ಸಂಕಷ್ಟಕ್ಕೂ ಆಸೇಯೇ ಮೂಲ.
ಸಿ. ಆಸೆಯನ್ನು ನಿಗ್ರಹಿಸುವ ಮೂಲಕ ಎಲ್ಲಾ ನೋವು ಹಾಗೂ ಸಂಕಷ್ಟಗಳಿಗೆ ಮುಕ್ತಿ ನೀಡಬಹುದು.
ಡಿ. ಆಸೆಯನ್ನು ಎಂಟು ಮಡಿಲ ಮಾರ್ಗವನ್ನು ಪಾಲಿಸುವುದರಿಂದ ನಿಯತ್ರಿಸಬಹುದು.
ಆ ಎಂಟು ಮಡಿಲ ಮಾರ್ಗವೆಂದರೆ.- ಸರಿಯಾದ ನಂಬಿಕೆ, ಸರಿಯಾದ ಚಿಂತನೆ, ಸರಿಯಾದ ಕ್ರಿಯೆ, ಸರಿಯಾದ ಜೀವನಕ್ರಮ, ಸರಿಯಾದ ಪ್ರಯತ್ನ, ಸರಿಯಾದ ಮಾತು, ಸರಿಯಾದ ನೆನಹು, ಸರಿಯಾದ ಗಮನ.  ಬೌದ್ಧ ಧರ್ಮವು ಅಶೋಕ ಸಾಮ್ರಾಟನ ಆಶ್ರಯ ದೊರಕಿದ ಕಾರಣ ಅದು ಇನ್ನಿತರ ಅಕ್ಕಪಕ್ಕದ ದೇಶಗಳಿಗೂ ಹಬ್ಬಿತ್ತು.

➤ ಜೈನ ಧರ್ಮ
ಜೈನ ಧರ್ಮವು ದೊರೆ ಭರತನ ತಂದೆಯಾದ ಋಶಭನಿಂದ ಸ್ಥಾಪಿಸಲ್ಪಟ್ಟಿತು. ಜೈನ ಧರ್ಮದ ಪ್ರವಾದಿ ಅಥವಾ 24 ನೇ ತಿರ್ಥಂಕರ ಎನಿಸಿರುವ ವರ್ಧಮಾನ ಮಹಾವೀರನ ಕಾಲದಲ್ಲಿ ಜೈನ ಧರ್ಮವು ಪ್ರವರ್ಧಮಾನಕ್ಕೆ ಬಂದಿತು. ಮಹಾವೀರನು ಮಗಧ ರಾಜವಂಶಕ್ಕೆ ಸೇರಿದವನಾಗಿದ್ದು, ವೈಶಾಲಿಯಲ್ಲಿ ಕ್ರಿ.ಪೂ 599 ರಲ್ಲಿ ಜನಿಸಿದನು ಎಂದು ನಂಬಲಾಗಿದೆ. ಅವನ ತಮದೆ ಸಿದ್ದಾರ್ಥ ಹಾಗೂ ತಾಯಿ ತ್ರಿಶಾಲ.

ಅವನು ಯಶೋಧ ಎಂಬುವವಳನ್ನು ಮದುವೆಯಾಗಿದ್ದನು. ಹಾಗೂ ಒಬ್ಬಳು ಮಗಳು ಸಹ ಜನಿಸಿದ್ದಳು. ಅವನು ತನ್ನ 301 ನೇ ವಯಸ್ಸಿನಲ್ಲಿ ಮನೆ ಬಿಟ್ಟು, ತಪಸ್ಸು ಮಾಡಿ 12 ವರ್ಷಗಳ ನಂತರ ಜ್ಞಾನವನ್ನು ಪಡೆದು, ಜಿನನಾದನು. ಅವನು ತನ್ನ 72 ನೇ ವಯಸ್ಸಿನಲ್ಲಿ ಈಗಿನ ರಾಜಗಿರ್ ಸಮೀಪದ ಪಾವಪುರಿ ಎಂಬಲ್ಲಿ ನಿರ್ವಾಣ ಹೊಂದಿದನು.

ಜೈನ ಧರ್ಮವು ವೇದಗಳ ಬೋಧನೆಯನ್ನು ಮಾನ್ಯ ಮಾಡಲಿಲ್ಲ. ಅವುಗಳ ಬೋಧನೆಯಾದ ಸಾರ್ವತ್ರಿಕ ಆತ್ಮ ಅಥವಾ ದೇವರು ಎಂಬ ಸಿದ್ಧಾಂತವನ್ನು ಒಪ್ಪಲಿಲ್ಲ. ಜೈನ ಧರ್ಮವು ನಿರ್ವಾಣವನ್ನು ಹೊಂದಬೇಕಾದರೆ ಸರಿಯಾದ ವಿಶ್ವಾಸ, ಸರಿಯಾದ ಜ್ಞಾನ ಮತ್ತು ಸರಿಯಾದ ನಡತೆಯನ್ನು ಪಾಲಿಸಬೇಕು ಎಂದು ಬೋಧಿಸಿತು.

5. ಮಗಧ ಸಾಮ್ರಾಜ್ಯ ( ಕ್ರಿ.ಪೂ 6 ನೇ ಶತಮಾನದಿಂದ- ಕ್ರಿ.ಪೂ 4 ನೆ ಶತಮಾನದವರೆಗೆ)
ಚಿಕ್ಕ ಸಂಸ್ಥಾನವಾಗಿದ್ದ ಮಗಧ ಸಾಮ್ರಾಜ್ಯವು ಬಿಹಾರದ ಗಯಾ ಮತ್ತು ಪಾಟ್ನಾಗಳನ್ನು ಅವರಿಸಿಕೊಂಡು ಉತ್ತರ ಭಾರತದಲ್ಲಿ ಪ್ರಬಲ ಶಕ್ತಿಯಾಯಿತು. ಮಗಧ ಸಂಸ್ಥಾನದ ರಾಜಧಾನಿಯು ಪಾಟೀಲಪುತ್ರವಾಗಿತ್ತು.

➤  ಮಗಧರ ಪ್ರಮುಖ ಆಡಳಿತಗಾರರು
* ಹರ್ಯಂಕ ಸಂತತಿ– ಹರ್ಯಂಕ ಸಂತತಿಯನ್ನು ಕ್ರಿ.ಪೂ 566 ರಲ್ಲಿ ಬಿಂಬಸಾರನ ಅಜ್ಜ ಸ್ಥಾಪಿಸಿದನಾದರೂ ನೈಜ ತಳಪಾಯವನ್ನು ಹಾಕಿದವರು ಬಿಂಬಸಾರ ಹಾಗೂ ಅಜಾತಶತ್ರು. ಬಿಂಬಸಾರನು ಸುಮಾರು 52 ವರ್ಷಗಳ ಕಾಲ ಮಗಧ ಸಾಮ್ರಾಜ್ಯವನ್ನು ಆಳಿದನು. ಅವನ ನಂತರ ಅವನ ಮಗ ಅಜಾತಶತ್ರುವು ಸಿಂಹಾಸನವೇರಿದನು.
* ಶಿಶುನಾಗ ಸಂತತಿ- ಹರ್ಯಂಕ ಸಂತತಿಯನ್ನು ಕೆಳಗಿಳಿಸಿ ಶಿಶುನಾಗನು ಕ್ರಿ.ಪೂ. 413 ರಲ್ಲಿ ಸಿಂಹಾಸನವೇರಿದನು. ಅವನು ಹಲವಾರು ಪ್ರದೇಶಗಳನ್ನು ಮಗಧ ಸಾಮ್ರಾಜ್ಯಕ್ಕೆ ಸೇರಿಸಿದನು.
* ನಂದ ಸಂತತಿ– ನಂದ ಸಂತತಿಯು ಮಹಾಪದ್ಮನಿಂದ ಸ್ಥಾಪಿಸಲ್ಪಟ್ಟಿತು. ನಂದ ಸಂತತಿಯನ್ನು ‘ಚಂದರಗುಪ್ತ ಮೌರ್ಯನು ಸಿಂಹಾಸನದಿಂದ ಇಳಿಸಿದನು. ನಂದರನ್ನು ಸಿಂಹಾಸನದಿಂದ ಇಳಿಸಲು ಕೌಟಿಲ್ಯ ಅಥವಾ ಚಾಣಕ್ಯನೆಂಬ ಬ್ರಾಹ್ಮಣನು ಪ್ರಮುಖ ಪಾತ್ರ ವಹಿಸಿದನು.

6. ಅಲೆಗ್ಸಾಂಡರನ ದಂಡೆಯಾತ್ರೆ
ಎರಡನೇ ಫಿಲಿಫನ ಮಗನಾದ ಅಲೆಗ್ಸಾಂಡರನು ( ಕ್ರಿ.ಪೂ 356- ಕ್ರಿ.ಪೂ 323) ಮರ್ಸಿಡೋನಿಯಾದ ಸಿಂಹಾಸನವೇರಿದನು. ಗ್ರೀಕ್‍ನ ಮಹಾನ್ ತತ್ವಜ್ಞಾನಿ ಅರಿಸ್ಟಾಟಲನು ಅವನ ಗುರುವಾಗಿದ್ದನು. ಕ್ರಿ.ಪೂ 326 ರಲ್ಲಿ ಅಲೆಗ್ಸಾಂಡರನು ಭಾರತದ ಮೇಲೆ ದಾಳಿ ಮಾಡಿದನು. ಅವನು ಸಣ್ಣಪುಟ್ಟ ಸಂಸ್ಥಾನಗಳನ್ನು ಗೆದ್ದ ನಂತರ ಪಂಜಾಬಿನ ರಾಜ ಪುರೂರವನ ಮೇಲೆ ಜೀಲಂ ನದಿಯ ದಡದ ಮೇಲೆ (ಹೈಡಾಸ್ಪಸ್ ಯುದ್ಧ) ಘೋರ ಯುದ್ಧ ಮಾಡಿದನು. ಈ ಯುದ್ಧದಲ್ಲಿ ಪುರೂರವನಿಗೆ ಸೋಲಾಯಿತು. ನಂತರ ತನ್ನ ಸೈನಿಕರ ಕೋರಿಕೆಯ ಮೇರೆಗೆ ತಾಯ್ನಾಡಿಗೆ ಹಿಂತಿರುಗುವಾಗ ಮಾರ್ಗಮಧ್ಯೆ ಬೆಬಿಲೋನ್‍ನಲ್ಲಿ ಕ್ರಿ.ಪೂ 323 ರಲ್ಲಿ ಮರಣ ಹೊಂದಿದನು.

7. ಮೌರ್ಯ ಸಾಮ್ರಾಜ್ಯ
ಮಗಧದಲ್ಲಿ ನಂದರನ್ನು ಸಿಂಹಾಸನದಿಂದ ಇಳಿಸಿ ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತ ಮೌರ್ಯನು ಕ್ರಿ.ಪೂ 321 ರಲ್ಲಿ ಸ್ಥಾಪಿಸಿದನು. ಅವನು ಭಾರತದ ಕೆಲವೆಡೆ ಆಳುತ್ತಿದ್ದ ಅಲೆಗ್ಸಾಂಡರ್‍ನ ಪ್ರತಿನಿಧಿಗಳಾಗಿದ್ದ ಗ್ರೀಕ್ ಸೈನ್ಯಾಧಿಕಾರಿಗಳನ್ನು ಸೋಲಿಸಿದನು. ಹಲವಾರು ಭೂ ಪ್ರದೇಶಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿದನು. ಅವನ ನಂತರ ಅವನ ಮಗ ಬಿಂದೂಸಾರನು ಮೌರ್ಯ ಸಾಮ್ರಾಜ್ಯವನ್ನು ವಿಸ್ತರಿಸಿದನು. ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಕೌಟಿಲ್ಯನು ‘ ಅರ್ಥಶಾಸ್ತ್ರ’ ಕೃತಿಯನ್ನು ರಚಿಸಿದನು.
➤ ಸಾಮ್ರಾಟ ಅಶೋಕ ( ಕ್ರಿಪೂ 273 – ಕ್ರಿ.ಪೂ. 236)
ಬಿಂದುಸಾರನ ನಂತರ ಅವನ ಮಗ ಅಶೋಕನು ಮೌರ್ಯ ಸಿಂಹಾನವೇರಿದನು. ಅವನು ಮೌರ್ಯ ಸಾಮ್ರಾಜ್ಯವನ್ನು ಸುಮಾರು 40 ವರ್ಷಗಳ ಕಾಲ ಆಳಿದನು. ಕ್ರಿ.ಪೂ. 261 ರಲ್ಲಿ ಅವನು ಕಳಿಂಗ ರಾಜ್ಯದ ಮೇಲೆ ದಾಳಿ ಮಾಡಿ ಕಳಿಂಗ ಯುದ್ಧದಲ್ಲಿ ಜಯಗಳಿಸಿದನು. ಆ ಯುದ್ಧದಲ್ಲಿ ಆದ ಅಪಾರ ಸಾವು ನೋವಿನಿಂದ ಮನನೊಂದ ಅಶೋಕನು ಯುದ್ಧವನ್ನು ತ್ಯಜಿಸಿದ್ದೇ ಅಲ್ಲದೇ ಬೌದ್ಧ ಧರ್ಮವನ್ನು ಸ್ವೀಕರಿಸಿದನು.
ಅಶೋಕನ ನಂತರ ಐವತ್ತು ವರ್ಷಗಳಲ್ಲೇ ಮೌರ್ಯ ಸಂತತಿಯು ನಶಿಸಿತು. ಪ್ರಬಲ ರಾಜರಾರೂ ಬಾರದಿರುವುದು, ಪ್ರಾತಗಳಲ್ಲಿನ ದಂಗೆ, ಬೌದ್ಧ ಧರ್ಮದ ಪ್ರಭಾವ, ಶಕ್ತಿಹೀನ ಸೈನ್ಯ ಇವೆಲ್ಲಾ ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣವಾದವು.

8.  ಗುಪ್ತ ಸಾಮ್ರಾಜ್ಯ
ಕ್ರಿ.ಶ 4 ನೇ ಶತಮಾನದಲ್ಲಿ ಗುಪ್ತ ಸಂತತಿಯು ಮಗಧದಲ್ಲಿ ಅತ್ಯಂತ ಪ್ರಬಲ ಸಾಮ್ರಾಜ್ಯವನ್ನು ಸ್ಥಾಪಿಸಿತು. ಗುಪ್ತರ ಅವಧಿಯನ್ನು ಪ್ರಾಚೀನ ಭಾರತದ ಸ್ವರ್ಣಯುಗ ಎಂದು ಕರೆಯಲಾಗುತ್ತದೆ. ಇವರ ಅವಧಿಯಲ್ಲಿ ದೇಶವು ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿತ್ತು. ಮೊದಲನೇ ಚಂದ್ರಗುಪ್ತನು ಕ್ರ.ಶ. 320 ರಲ್ಲಿ ಸಿಂಹಾಸನವೇರಿದನು.

ಇವನ ನಂತರ ಕ್ರಿ.ಶ 335 ರಲ್ಲಿ ಸಿಂಹಾನವೇರಿದ ಸಮುದ್ರಗುಪ್ತನು ಗುಪ್ತ ಸಂತಿತಿಯ ಮಹಾನ್ ದೊರೆ ಎನಿಸಿಕೊಂಡನು. ಅವನು ತನ್ನ ಸಾಮ್ರಾಜ್ಯವನ್ನು ಸಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ವಿಸ್ತರಿಸದನು. ಅವನು ಶಿಲಕಲೆ, ಸಾಹಿತ್ಯ ಹಾಗೂ ಸಂಗೀತವನ್ನು ಬಲ್ಲ ಬುದ್ಧಿ ಜೀವಿಯಾಗಿದ್ದನು. ಸಮುದ್ರಗುಪ್ತನ ನಂತರ ಎರಡನೇ ಚಂದ್ರಗುಪ್ತನು ಕ್ರಿ.ಶ 375 ರಲ್ಲಿ ಸಿಂಹಾಸನವೇರಿದನು. ಗುಪ್ತರ ಕಾಲದಲ್ಲಿ ಅವರ ಸಾಮ್ರಾಜ್ಯವು ಎಲ್ಲಾ ರಿತಿಯಲ್ಲೂ ಅಭಿವೃದ್ಧಿ ಹೊಂದಿತು.

ಅವರ ಆಸ್ಥಾನದಲ್ಲಿ ಕಾಳಿದಾಸ ಎಂಬ ಕವಿ ಹಾಗೂ ನಾಟಕಕಾರ, ಆರ್ಯಭಟ್ಟ, ವರಾಹಿಮಿಹಿರ ಮತ್ತು ಬ್ರಹ್ಮಗುಪ್ತ ಎಂಬ ಗಣಿತಶಾಸ್ತ್ರಜ್ಞರು ಹಾಗೂ ಖಗೋಳಶಾಸ್ತ್ರಜ್ಞರು,ಧನ್ವಂತರಿ ಎಂಬ ಭೌತಶಾಸ್ತ್ರಜ್ಞರು ಇದ್ದರು. ಗುಪ್ತರ ಸಮುದ್ರಗುಪ್ತನನ್ನು ‘ ಭಾರತದ ನೆಪೋಲಿಯನ್’ ಎಂದು ಕರೆಯಲಾಗುತ್ತದೆ. ಸ್ಕಂದಗುಪ್ತನು ಕ್ರಿ.ಶ. 455 ರಿಂದ ಕ್ರಿ.ಶ. 477 ರವರೆಗೆ ರಾಜ್ಯವಾಳಿದನು. ಸ್ಕಂದ ಗುಪ್ತನ ನಂತರ ಬಂದ ದುರ್ಬಲ ರಾಜರಿಂದಾಗಿ ಗುಪ್ತ ಸಾಮ್ರಾಜ್ಯವು ಕ್ಷೀಣಿಸಲು ಪ್ರಾರಂಭಿಸಿತು.

9. ಹರ್ಷವರ್ಧನ ( ಕ್ರಿ.ಶ. 606 – ಕ್ರಿ.ಶ 647)
ಗುಪ್ತ ಸಾಮ್ರಾಜ್ಯವು ಕ್ಷೀಣಿಸಿದ ಕಾರಣ ಅದು ಹಲವಾರು ಸಣ್ಣ ಸಂಸ್ಥಾನಗಳಾಗಿ ಸಿಡಿಯಿತು. ಹಾಗೂ ಪ್ರಬಲವಾದ ಹರ್ಷವರ್ಧನನು ಕನೂಜ್‍ನ ರಾಜನಾಗಿ ಕ್ರಿ.ಶ 606 ರಲ್ಲಿ ಸಿಂಹಾಸನವೇರಿದನು. ಇವನು ಉತ್ತರಭಾರತವನ್ನು ಆಳಿದ ಕೊನೆಯ ಹಿಂದೂ ದೊರೆ. ಅವನು ತನ್ನ ಸಾಮ್ರಾಜ್ಯವನ್ನು ಬಂಗಾಳ, ಮಾಳ್ವ, ಪೂರ್ವ ರಾಜಸ್ಥಾನ ಹಾಗೂ ಅಸ್ಸಾಂನವರೆಗಿನ ಗಂಗಾ ಪ್ರಸ್ಥಭೂಮಿಯನ್ನು ಗೆಲ್ಲುವ ಮೂಲಕ ವಿಸ್ತರಿಸಿದನು. ಅವನು ಕಲೆ ಹಾಗೂ ಸಾಹಿತ್ಯದ ಆರಾಧಕನಾಗಿದ್ದನು. ‘ಹರ್ಷಚರಿv’À ಮತ್ತು ‘ಕಾದಂಬರಿ’ ಕೃತಿಗಳನ್ನು ಬರೆದ ಬಾಣಬಟ್ಟನು ಇವನ ಆಸ್ಥಾನದಲ್ಲಿದ್ದನು. ಚೀನಾದ ಪ್ರವಾಸಿ ‘ಹ್ಯೂಯೆನ್‍ತ್ಸಾಂಗನು’ ಇವನ ಅವಧಿಯಲ್ಲಿ ಭಾರತ ಪ್ರವಾಸ ಮಾಡಿದನು. ಹರ್ಷವರ್ಧನನು ಕ್ರಿ.ಶ 647 ರಲ್ಲಿ ತೀರಿಕೊಂಡನು.

10. ರಜಪೂತರು
ಹರ್ಷವರ್ಧನನ ನಂತರ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ರಜಪೂತರು ಪ್ರಬಲರಾಗಿ ಉದಯಿಸಿದರು. ರಜಪೂತಾನದಲ್ಲಿ ಹಲವಾರು ರಜಪೂತ ದೊರೆಗಳು ತಮ್ಮನ್ನು ಸ್ವತ: ಪ್ರತಿಸ್ಥಾಪಿಸಿಕೊಂಡರು. ಕನೂಜನ್ನು ಪೃಥ್ವಿರಾಜನು, ಅಜ್ಮೀರ್ ಮತ್ತು ದೆಹಲಿಯನ್ನು ಚೌಹಾನರು, ಬಂಡೇಲ್‍ಖಂಡನ್ನು ಚಾಂಡೇಲರು ಹಾಗೂ ಗುಜರಾತನ್ನು ಸೋಲಂಕಿಗಳು ಆಳಿದರು.

ಈ ಸಣ್ಣ ಪುಟ್ಟ ರಜಪೂತ ಸಂಸ್ಥಾನಗಳು ಮುಸ್ಲಿಂ ದಾಳಿಕೋರರು ಅವರನ್ನು ಮುಗಿಸುವವರೆಗೂ ಸುಮಾರು 500 ವರ್ಷಗಳ ಕಾಲ ಮುಂದುವರೆದವು. ದೆಹಲಿ ಮತ್ತು ಆಗ್ರಾವನ್ನು ಆಳಿದ ‘ಪೃಥ್ವಿರಾಜ್ ಚೌಹಾನನು’ ರಜಪೂತರ ಅತ್ಯಂತ ಪ್ರಮುಖ ದೊರೆ ಹಾಗೂ ಪರಾಕ್ರಮಿ. ಮಹಮದ್ ಘೋರಿಯಿಂದ ಸಾಯಿಸಲ್ಪಟ್ಟ ‘ಜೈ ಚಂದ್’ ರಾಥೋರನು ರಜಪೂತರ ಕೊನೆಯ ದೊರೆ.

11. ಇತರ ಸಂತತಿಗಳು-
• ಚಾಳುಕ್ಯರು– ಇವರು ಕ್ರಿ..ಶ 550 ರಿಂದ ಕ್ರಿ.ಶ 642 ರವರೆಗೆ ದಕ್ಷಿಣ ಭಾರತದಲ್ಲಿ ರಾಜ್ಯಭಾರ ಮಾಡಿದರು.
ಚೋಳ ಸಂತತಿ – ಇವರು ಕ್ರಿ.ಶ 985 ರಿಂದ ಕ್ರಿ.ಶ 1014 ರವರೆಗೆ ಮದ್ರಾಸ್ ಹಾಗೂ ಕರ್ನಾಟಕದ ಕೆಲವು ಪ್ರದೇಶಗಳನ್ನು ಸೇರಿಸಿ ರಾಜ್ಯಭಾರ ಮಾಡಿದರು. ಇವರ ರಾಜಧಾನಿ ತಂಜಾವೂರು ಆಗಿತ್ತು. ತಂಜಾವೂರಿನ ಬೃಹದೇಶ್ವರದ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಯಿತು.
ರಾಷ್ಟ್ರಕೂಟರು – ಇವರು ದಕ್ಷಿಣ ಭಾರತದಲ್ಲಿ ಕ್ರಿ.ಶ. 753 ರಿಂದ ಕ್ರಿ.ಶ 973 ರವರೆಗೆ ಆಳ್ವಿಕೆ ನಡೆಸಿದರು. ದಂತಿದುರ್ಗನು ಇವರ ಸಾಮ್ರಾಜ್ಯ ಸ್ಥಾಪಕ. ರಾಷ್ಟ್ರಕೂಟರ ರಾಜಧಾನಿ ಎಲ್ಲೋರವಾಗಿತ್ತು. ನಂತರ ಮಾನ್ಯಖೇಟಕ್ಕೆ ರಾಜಧಾನಿಯು ವರ್ಗಾಯಿಸಲ್ಪಟ್ಟಿತು.
ಯಾದವರು – ಇವರು ದೇವಗಿರಿಯಿಂದ ಕ್ರಿ.ಶ 1191 ರಿಂದ ಕ್ರಿ.ಶ 1318 ರವರೆಗೆ ರಾಜ್ಯಭಾರ ಮಾಡಿದರು. ಸಿಘಾನ ಮತ್ತು ರಾಮಚಂದ್ರ ಈ ಇಬ್ಬರು ಯಾದವರ ಪ್ರಮುಖ ದೊರೆಗಳು.

# ಇದನ್ನೂ ಓದಿ..
[ ಭಾರತದ ಇತಿಹಾಸ – ಭಾಗ – 2 : ಮಧ್ಯಕಾಲೀನ ಭಾರತ ]
[ ಭಾರತದ ಇತಿಹಾಸ – ಭಾಗ – 3 : ಆಧುನಿಕ ಭಾರತ ]

Leave a Reply

Your email address will not be published. Required fields are marked *

error: Content Copyright protected !!