Current AffairsLatest Updates

Indian Railways : ರೈಲ್ವೆ ಪ್ರಯಾಣದಲ್ಲಿ ಮಹತ್ವದ ಬದಲಾವಣೆ : ಇಲ್ಲಿದೆ ಕಂಪ್ಲೀಟ್ ಅಪ್ಡೇಟ್ಸ್

Share With Friends

Indian Railways new rules from July 1 : ಜುಲೈ 1ರಿಂದ ರೈಲ್ವೆ ಪ್ರಯಾಣ ತುಟ್ಟಿಯಾಗಲಿದೆ. ರೈಲು ಪ್ರಯಾಣ ದರ ಹೆಚ್ಚಾಗಿದೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ದರಗಳು ಪ್ರತಿ ಕಿ.ಮೀ.ಗೆ 1 ಪೈಸೆ, ಎಸಿ ದರಗಳು 2 ಪೈಸೆ ಹೆಚ್ಚಾಗಲಿವೆ. ಮಾಸಿಕ ಪಾಸ್ ಮತ್ತು 500 ಕಿ.ಮೀ ವರೆಗಿನ ಸೆಕೆಂಡ್ ಕ್ಲಾಸ್ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದರೊಂದಿಗೆ ಸೆಂಟರ್ ಫಾರ್ ರೈಲ್ವೆ ಇನ್‌ ಫಾರ್ಮೆಷನ್ ಸಿಸ್ಟಮ್ (CRIS) ವತಿಯಿಂದ ರೈಲು ಪ್ರಯಾಣದ ಟಿಕೆಟ್ ಬುಕಿಂಗ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದ್ದು, ಬಹುತೇಕ ಬದಲಾವಣೆಗಳು ಈ ವರ್ಷಾಂತ್ಯಕ್ಕೆ ಸರಾಗವಾಗಲಿವೆ.

ಜುಲೈ 1ರಿಂದ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಆ್ಯಪ್‌ ಮೂಲಕ ದೃಢೀಕರಿಸಿಕೊಂಡ ಬಳಿಕವೇ ಬಳಕೆದಾರರು ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಬಹುದು. ಹಾಗೆಯೇ, ಪಿಆರ್‌ಎಸ್‌ ಕೌಂಟರ್‌, ಆನ್‌ಲೈನ್‌ ಅಥವಾ ಅಧಿಕೃತ ಏಜೆಂಟರ ಮೂಲಕ ಆನ್‌ಲೈನ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಗೆ ಜುಲೈ 15ರಿಂದ ಒಟಿಪಿ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಆದರೆ, ರೈಲ್ವೆ ಕೌಂಟರ್‌ಗಳಲ್ಲಿ ಬುಕಿಂಗ್‌ ಮಾಡುವಾಗ ಆಧಾರ್‌ ಪರಿಶೀಲನೆ ಕಡ್ಡಾಯವಲ್ಲ.

ಹೊಸ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಬಹುಭಾಷಾ ಮತ್ತು ಬಳಕೆದಾರ ಸ್ನೇಹಿ ಬುಕಿಂಗ್ ಮತ್ತು ವಿಚಾರಣಾ ಇಂಟರ್ಫೇಸ್ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

*ಬೇಕಾದ ಸೀಟುಗಳಿಗೆ ಅವಕಾಶ
ಮುಖ್ಯವಾಗಿ ಟಿಕೆಟ್ ಬುಕ್ ಮಾಡುವಾಗ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತಿದೆ. ಬಸ್ ಟಿಕೆಟ್ ಬುಕಿಂಗ್‌ನಲ್ಲಿ ಈ ಅವಕಾಶ ಇದೆ. ಇದೇ ರೀತಿ ಇನ್ಮುಂದೆ ರೈಲಿನಲ್ಲೂ ತಮಗೆ ಬೇಕಾದ ಸೀಟುಗಳನ್ನು ಪ್ರಯಾಣಿಕರು ಮುಂಗಡ ಬುಕ್ ಮಾಡಬಹುದು.

ಇದರಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಎಂಬ ಕೆಲ ವರ್ಗದ ಮೀಸಲು ಆಯ್ಕೆಗಳೂ ಸಹ ಇರುತ್ತವೆ. ಟಿಕೆಟ್ ಬುಕಿಂಗ್ ಹಿಂದೆಂದಿಗಿಂತಲೂ ಸುಲಭ ಮತ್ತು ಪಾರದರ್ಶಕವಾಗಿ ಇರುವಂತೆ ವೆಬ್‌ಸೈಟ್ ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಸದ್ಯ CRIS ವತಿಯಿಂದ ನಿಮಿಷಕ್ಕೆ ಗರಿಷ್ಠ 32,000 ಟಿಕೆಟ್‌ಗಳು ಬುಕ್ ಆಗುತ್ತಿವೆ. ಹೊಸ ವ್ಯವಸ್ಥೆ ಜಾರಿಯಿಂದ ಇದರ ಪ್ರಮಾಣವನ್ನು 1.50 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ಹೀಗಾಗಿ ಟಿಕೆಟ್ ಬುಕಿಂಗ್ ವೇಳೆ ಗೊಂದಲ, ಸಮಸ್ಯೆಗಳು ಇರುವುದಿಲ್ಲ, ಅತ್ಯಂತ ತ್ವರಿತವಾಗಿ ಟಿಕೆಟ್ ಬುಕ್ ಆಗುತ್ತವೆ ಎಂದು ಹೇಳಲಾಗಿದೆ.

4 ಗಂಟೆಯಲ್ಲ 8 ಗಂಟೆ ಮೊದಲೇ ಚಾರ್ಟ್ ತಯಾರಿ
ಸದ್ಯ ರೈಲು ಪ್ರಯಾಣದ ಚಾರ್ಟ್ ಕೇವಲ 4 ಗಂಟೆ ಮೊದಲು ಬಿಡುಗಡೆಯಾಗುತ್ತಿತ್ತು. ಇದರಿಂದ ಟಿಕೆಟ್ ತಪ್ಪುವ ಪ್ರಯಾಣಿಕರಿಗೆ ಕೊನೆಯ ಕ್ಷಣಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತೀವ್ರ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಚಾರ್ಟ್ ಪಟ್ಟಿಯನ್ನು ಒಂದು ದಿನ ಮೊದಲೇ ಬಿಡುಗಡೆ ಮಾಡಬೇಕು ಎಂದು ಕಳೆದ ಕೆಲ ದಿನಗಳಿಂದ ಕೆಲ ರೈಲು ವಲಯಗಳಲ್ಲಿ ಪ್ರಾಯೋಗಿಕವಾಗಿ ಸಿದ್ಧತೆ ಆರಂಭಿಸಲಾಗಿತ್ತು.

ಸಿದ್ಧತೆಗಳ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿರುವ ರೈಲ್ವೆ ಇಲಾಖೆ, ಇನ್ಮುಂದೆ 8 ಗಂಟೆ ಮೊದಲೇ ಚಾರ್ಟ್ ಪಟ್ಟಿ ಬಿಡುಗಡೆಯಾಗಬೇಕು ಎಂದು ಆದೇಶಿಸಿದೆ. ಉದಾಹರಣೆಗೆ ನಾಳೆ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲುಗಳ ಚಾರ್ಟ್ ಪಟ್ಟಿ ಇಂದು ರಾತ್ರಿ 9 ಗಂಟೆಗೆ ಬಿಡುಗಡೆಯಾಗಬೇಕು. ಈ ನಿಯಮ ಮುಂದಿನ ಒಂದೆರಡು ತಿಂಗಳಲ್ಲಿ ದೇಶದಾದ್ಯಂತ ಜಾರಿಗೆ ಬರಲಿದೆ ಎನ್ನಲಾಗಿದೆ.

ದೃಢಿಕರಿಸಿಕೊಂಡವರಿಗೆ ಮಾತ್ರ ತತ್ಕಾಲ್ ಟಿಕೆಟ್
ವೆಬ್‌ಸೈಟ್‌ ಹಾಗೂ ಐಆರ್‌ಸಿಟಿಸಿ ಆ್ಯಪ್‌ನಲ್ಲಿ ಅಧಾರ್ ಮೂಲಕ ದೃಢಿಕರಿಸಿಕೊಂಡವರಿಗೆ ಮಾತ್ರ ಇನ್ಮುಂದೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.ಈ ನಿಯಮ ನಾಳೆಯಿಂದಲೇ (ಜುಲೈ 1ರಿಂದ) ಜಾರಿಗೆ ಬರಲಿದೆ ಎಂದು ಇಲಾಖೆ ತಿಳಿಸಿದೆ. ಈ ಮೊದಲು ಆಧಾರ್ ಮೂಲಕ ದೃಢೀಕರಣ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಹೊಸ ಬದಲಾವಣೆ ಪ್ರಕಾರ ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಇತರೆ ಸೂಕ್ತ ದಾಖಲೆಗಳನ್ನು ಕೊಟ್ಟೂ ದೃಢಿಕರಿಸಿಕೊಳ್ಳಬಹುದು ಎಂದು ತಿಳಿಸಿದೆ.

ಅಲ್ಲದೇ ಒಟಿಪಿ ಮೂಲಕವೂ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು.ಈ ನಿಯಮದಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಆಗುತ್ತಿದ್ದ ಗೊಂದಲ, ಟಿಕೆಟ್ ಬ್ಲಾಕ್ ಆಗುವುದನ್ನು ತಡೆಯಬಹುದಾಗಿದೆ ಎಂದು ಹೇಳಿದೆ.ಈ ಎಲ್ಲ ಹೊಸ ಬದಲಾವಣೆಗಳ ಜೊತೆ ಜೊತೆಯಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಹಾಗೂ ಐಆರ್‌ಸಿಟಿಸಿ ಸೂಪರ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು ಇದೇ ವರ್ಷ ಡಿಸೆಂಬರ್ ವೇಳೆಗೆ ಎಲ್ಲ ಹೊಸ ಬದಲಾವಣೆಗಳು ಸಾರ್ವಜನಿಕರಿಗೆ ಸುಲಭವಾಗಿ ದೊರೆಯುತ್ತವೆ ಎನ್ನಲಾಗಿದೆ. ಈ ಕುರಿತು ‘ಟೈಮ್ಸ್ ಆಫ್ ಇಂಡಿಯಾ ಇಂಡಿಯಾ ಟೈಮ್ಸ್’ ವೆಬ್‌ಸೈಟ್ ವರದಿ ಮಾಡಿದೆ.

ತತ್ಕಾಲ್ ಬುಕಿಂಗ್‌ಗಳಲ್ಲಿ ಏಜೆಂಟರಿಗೆ ನಿರ್ಬಂಧ :
ಜೂನ್ ತಿಂಗಳಿನಲ್ಲಿ ಸಚಿವಾಲಯ ಹೊರಡಿಸಿದ ಸುತ್ತೋಲೆಯಲ್ಲಿ ಬುಕಿಂಗ್ ಏಜೆಂಟ್‌ಗಳಿಗೆ ರೈಲ್ವೆ ನಿಯಮ ಬದಲಾವಣೆಯ ಬಗ್ಗೆ ತಿಳಿಸಲಾಗಿದೆ. ಹೊಸ ರೈಲ್ವೆ ನಿಯಮಗಳ ಪ್ರಕಾರ, ಭಾರತೀಯ ರೈಲ್ವೆಯ ಅಧಿಕೃತ ಟಿಕೆಟ್ ಏಜೆಂಟ್‌ಗಳು ಕಿಟಕಿ ತೆರೆದ ನಂತರ ಮೊದಲ 30 ನಿಮಿಷಗಳ ಕಾಲ ಆರಂಭಿಕ ದಿನದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗುವುದಿಲ್ಲ. ಇದರರ್ಥ ಹವಾನಿಯಂತ್ರಿತ ತರಗತಿಗಳಿಗೆ ಬೆಳಿಗ್ಗೆ 10.00 ರಿಂದ ಬೆಳಿಗ್ಗೆ 10.30 ರವರೆಗೆ ಮತ್ತು ಹವಾನಿಯಂತ್ರಿತವಲ್ಲದ ತರಗತಿಗಳಿಗೆ ಬೆಳಿಗ್ಗೆ 11.00 ರಿಂದ ಬೆಳಿಗ್ಗೆ 11.30 ರವರೆಗೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ.

ಯಾವ ರೈಲು ಪ್ರಯಾಣ ಟಿಕೆಟ್‌ ಎಷ್ಟು ಹೆಚ್ಚಳ?
ಸೆಕೆಂಡ್‌ ಕ್ಲಾಸ್‌ – ಪ್ರತಿ ಕಿಲೋಮೀಟರ್‌ಗೆ 0.5 ಪೈಸೆ ಹೆಚ್ಚಳ.
0- 500 ಕಿಲೋ ಮೀಟರ್‌ವರೆಗೆ ಪ್ರಯಾಣಿಸುವವರಿಗೆ ಯಾವುದೇ ಬದಲಾವಣೆ ಇಲ್ಲ.
501 – 1500 ಕಿಲೋ ಮೀಟರ್‌ವರೆಗೆ ಪ್ರಯಾಣಿಸುವವರಿಗೆ 5 ರೂಪಾಯಿ ಹೆಚ್ಚಳ.
1501 – 2500 ಕಿಲೋ ಮೀಟರ್‌ವರೆಗೆ 10 ರೂಪಾಯಿ ಹೆಚ್ಚಳ.
2501 – 3000 ಕಿಲೋ ಮೀಟರ್‌ವರೆಗೆ 15 ರೂಪಾಯಿ ಹೆಚ್ಚಳ.
ಸ್ಲೀಪರ್ ಕ್ಲಾಸ್ ಪ್ರತಿ ಕಿಲೋ ಮೀಟರ್‌ಗೆ 0.5 ಪೈಸೆ ಹೆಚ್ಚಳ.
ಫಸ್ಟ್‌ ಕ್ಲಾಸ್‌ ಪ್ರತಿ ಕಿಲೋ ಮೀಟರ್‌ಗೆ 0.5 ಪೈಸೆ ಹೆಚ್ಚಳ.
ಎಸಿ ಬೋಗಿಗಳಿಗೆ ಪ್ರತಿಕಿ ಲೋ ಮೀಟರ್‌ಗೆ 2 ಪೈಸೆ ಹೆಚ್ಚಳ.

*ಈ ಪರಿಷ್ಕೃತ ದರಗಳು ಎಲ್ಲಾ ಪ್ರೀಮಿಯಂ ಮತ್ತು ವಿಶೇಷ ಸೇವೆಗಳಿಗೂ ಅನ್ವಯಿಸುತ್ತವೆ. ಉದಾಹರಣೆಗೆ, ವಂದೇ ಭಾರತ್, ತೇಜಸ್, ರಾಜಧಾನಿ, ಶತಾಬ್ದಿ, ದುರಂತೊ, ಹಮ್ಸಫರ್ , ಅಮೃತ್ ಭಾರತ್ , ಗತಿಮಾನ್, ಮಹಾಮಾನ , ಜನ್ ಶತಾಬ್ದಿ , ಯುವ ಎಕ್ಸ್‌ಪ್ರೆಸ್ , ಅಂತ್ಯೋದಯ, ಎಸಿ ವಿಸ್ಟಾಡೋಮ್ ಕೋಚ್‌ಗಳು, ಅನುಭೂತಿ ಕೋಚ್‌ಗಳು.

*ಹೊಸ ದರಗಳು ಜುಲೈ 1, 2025 ರಿಂದ ಖರೀದಿಸುವ ಟಿಕೆಟ್‌ಗಳಿಗೆ ಅನ್ವಯಿಸುತ್ತವೆ. ಈ ಹಿಂದೆ ನೀಡಲಾದ ಟಿಕೆಟ್‌ಗಳು ಯಾವುದೇ ಹೊಂದಾಣಿಕೆಗಳಿಲ್ಲದೆ ತಮ್ಮ ಮೂಲ ದರಗಳನ್ನು ಉಳಿಸಿಕೊಳ್ಳುತ್ತವೆ” ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದರರ್ಥ, ನೀವು ಈಗಾಗಲೇ ಟಿಕೆಟ್ ಖರೀದಿಸಿದ್ದರೆ, ಹೆಚ್ಚುವರಿ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇತರ ಶುಲ್ಕಗಳು ಬದಲಾಗುವುದಿಲ್ಲ. ರಿಸರ್ವೇಷನ್ ಶುಲ್ಕ , ಸೂಪರ್‌ಫಾಸ್ಟ್ ಸರ್ಚಾರ್ಜ್ ಮತ್ತು ಇತರ ಹೆಚ್ಚುವರಿ ಶುಲ್ಕಗಳು ಮೊದಲಿನಂತೆಯೇ ಇರುತ್ತವೆ. ದರವನ್ನು ರೌಂಡ್ ಆಫ್ ಮಾಡುವ ನಿಯಮಗಳು ಸಹ ಬದಲಾಗುವುದಿಲ್ಲ.

ಕಾಯ್ದಿರಿಸದ(Unreserved) ವರ್ಗಗಳಲ್ಲಿ ರೈಲು ಟಿಕೆಟ್ ಬುಕಿಂಗ್ ಕುಸಿತ :
2014–15 ಮತ್ತು 2019–20ರ ನಡುವಿನ ಅವಧಿಗೆ ಹೋಲಿಸಿದರೆ, 2021–22 ರಿಂದ ಇಲ್ಲಿಯವರೆಗೆ ಉಪನಗರ ಮತ್ತು ಉಪನಗರವಲ್ಲದ ಪ್ರದೇಶಗಳಲ್ಲಿನ ಕಾಯ್ದಿರಿಸದ(Unreserved) ವರ್ಗಗಳಲ್ಲಿ ರೈಲು ಟಿಕೆಟ್ ಬುಕಿಂಗ್ ಕಡಿಮೆಯಾಗಿದೆ. ಮತ್ತೊಂದೆಡೆ, ಕೋವಿಡ್-19 ನಂತರ ಭಾರತೀಯ ರೈಲ್ವೆಯು ಕಾಯ್ದಿರಿಸಿದ ವರ್ಗದ ಟಿಕೆಟ್‌ಗಳ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಹಿರಿಯ ರೈಲ್ವೆ ಮೂಲದ ಪ್ರಕಾರ, ಮಧ್ಯಮ ವರ್ಗದ ಪ್ರಯಾಣಿಕರ ಹಣದ ಖರ್ಚು ಸಾಮರ್ಥ್ಯ ಸುಧಾರಿಸಿದೆ, ಇದು ಕಾಯ್ದಿರಿಸಿದ ತರಗತಿಗಳಲ್ಲಿ ಟಿಕೆಟ್‌ಗಳ ಬುಕಿಂಗ್‌ನಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

error: Content Copyright protected !!