Current AffairsLatest Updates

GDP : ಆರ್ಥಿಕ ಬೆಳವಣಿಗೆಯಲ್ಲಿ ಅಮೆರಿಕ, ಚೀನಾವನ್ನು ಹಿಂದಿಕ್ಕಿದ ಭಾರತ, ಕಳೆದ 10 ವರ್ಷಗಳಲ್ಲಿ ದುಪ್ಪಟ್ಟಾದ ಜಿಡಿಪಿ

Share With Friends

India’s GDP Doubles in a Decade: A Remarkable Economic Milestone

2015ರಿಂದ 2025ರವರೆಗೆ ಹತ್ತು ವರ್ಷಗಳಲ್ಲಿ ಭಾರತದ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಯು ಇತರ ರಾಷ್ಟ್ರಗಳಿಗಿಂತ ಉನ್ನತ ಸ್ಥಾನದಲ್ಲಿದ್ದು, ಆರ್ಥಿಕ ಮೈಲಿಗಲ್ಲನ್ನು ಸಾಧಿಸಿದೆ.2015ರಲ್ಲಿ ಭಾರತದ ದೇಶದ ಒಟ್ಟು ಆಂತರಿಕ ಉತ್ಪನ್ನ 2.1 ಟ್ರಿಲಿಯನ್ ನಿಂದ 2025 ರಲ್ಲಿ 4.3 ಟ್ರಿಲಿಯನ್‌ಗೆ ತನ್ನ GDP ಶೇ.100 ರಷ್ಟು ವೃದ್ಧಿಯಾಗಿದೆ.

ಹತ್ತು ವರ್ಷಗಳಲ್ಲಿ 14 ರಾಷ್ಟ್ರಗಳ ಜಿಡಿಪಿ ಬೆಳವಣಿಗೆ ಕಂಡ ರಾಷ್ಟಗಳ ಪಟ್ಟಿಯನ್ನು IMF ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತವು ತನ್ನ GDP ಶೇ. 105 ರಷ್ಟು ಬೆಳವಣಿಗೆಯೊಂದಿಗೆ ದ್ವಿಗುಣಗೊಳಿಸಿದೆ. ಇತರ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ GDP $2.1 ಟ್ರಿಲಿಯನ್ ನಿಂದ $4.3 ಟ್ರಿಲಿಯನ್‌ಗೆ ಜಿಗಿದಿದೆ. ಐಎಂಎಫ್ ಅಂಕಿಅಂಶಗಳ ಪ್ರಕಾರ, ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ, 2025 ರಲ್ಲಿ ಜಪಾನ್ ಮತ್ತು 2027 ರಲ್ಲಿ ಜರ್ಮನಿಯನ್ನು ಮೀರಿಸಲು ಭಾರತ ಸಿದ್ಧವಾಗಿದೆ ಎಂದು ಅಂದಾಜಿಸಿದೆ.

ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾಕ್ಕೂ ಸಹ ಇಷ್ಟು ಪ್ರಮಾಣದ ಆರ್ಥಿಕ ಬೆಳವಣೀಗೆ ಸಾಧ್ಯವಾಗಿಲ್ಲ. ಇದರೊಂದಿಗೆ, ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಬಹುದು.

ಜಪಾನ್‌ ಹಿಂದಿಕ್ಕಲಿದೆ ಭಾರತ :
ಐಎಂಎಫ್ ಪ್ರಕಾರ, ಭಾರತದ ಆರ್ಥಿಕತೆಯ ಬೆಳವಣಿಗೆಯ ದರ ಇದೇ ದರದಲ್ಲಿ ಮುಂದುವರಿದರೆ, 2025 ರ ವೇಳೆಗೆ ಜಪಾನ್ ಮತ್ತು 2027 ರ ವೇಳೆಗೆ ಜರ್ಮನಿಯನ್ನು ಮೀರಿಸುವ ನಿರೀಕ್ಷೆಯಿದೆ. ‘2015 ಮತ್ತು 2025 ರ ನಡುವೆ ಭಾರತದ ಆರ್ಥಿಕತೆ ಗಮನಾರ್ಹವಾಗಿ ಬೆಳೆದಿದೆ. ಇದು ವಿಶ್ವದ ಟಾಪ್ -5 ಆರ್ಥಿಕತೆಗಳಲ್ಲಿ ಒಂದಾಗಲು ಕಾರಣವಾಗಿದೆ. ಐಎಂಎಫ್ ದತ್ತಾಂಶದ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆ ಹೀಗೆಯೇ ಮುಂದುವರಿದರೆ, ಅದು ಶೀಘ್ರದಲ್ಲೇ ಜಪಾನ್ ಮತ್ತು ಜರ್ಮನಿಯನ್ನು ಮೀರಿಸಲಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಅದೇ ಸಮಯದಲ್ಲಿ, ಹಣದುಬ್ಬರಕ್ಕೆ ಸರಿಹೊಂದಿಸಿದ ನಂತರ, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ಶೇಕಡಾ 77 ರಷ್ಟು ಬೆಳೆದಿದೆ. ಈ ಕ್ರಮದಲ್ಲಿ, ಇದು 2025 ರಲ್ಲಿ $2.4 ಟ್ರಿಲಿಯನ್ ನಿಂದ $4.3 ಟ್ರಿಲಿಯನ್ ಗೆ ಏರಿದೆ.

ಎಪ್ಪತರ ದಶಕದಿಂದೀಚೆ ಅಗಾಧವಾಗಿ ಬೆಳವಣಿಗೆ ಹೊಂದುತ್ತಾ ಬಂದಿದ್ದ ಚೀನಾ, 2015ರಿಂದ 2025ರವರೆಗೆ ಶೇ. 76ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ. ಅಮೆರಿಕದ ಬೆಳವಣಿಗೆ ದರ ಈ ಅವಧಿಯಲ್ಲಿ ಶೇ. 28 ಇದೆ. ಇತರ ಪ್ರಮುಖ ಆರ್ಥಿಕತೆಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳ ಜಿಡಿಪಿ ಈ ಅವಧಿಯಲ್ಲಿ ಶೇ. 6ರಿಂದ 14ರ ಶ್ರೇಣಿಯಲ್ಲಿ ಮಾತ್ರ ಹೆಚ್ಚಳ ಕಂಡಿದೆ. ಅಂದರೆ, 10 ವರ್ಷದಲ್ಲಿ ಇವುಗಳು ಬೆಳವಣಿಗೆ ಹೊಂದಿರುವುದು ಬಹಳ ಅಲ್ಪ. ಬ್ರೆಜಿಲ್ ದೇಶದ ಜಿಡಿಪಿ 2015ರಲ್ಲಿ 2.1 ಟ್ರಿಲಿಯನ್ ಡಾಲರ್ ಇದ್ದದ್ದು ಈಗ 2.3 ಟ್ರಿಲಿಯನ್ ಡಾಲರ್​ಗೆ ಮಾತ್ರವೇ ಏರಿಕೆ ಆಗಿದೆ.

ಕೆಲ ವರ್ಷಗಳ ಹಿಂದಿನವರೆಗೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದ ಜಪಾನ್ ಈ ವರ್ಷ ಶೇ. 1ರಷ್ಟು ಮಾತ್ರ ಬೆಳೆಯುವ ನಿರೀಕ್ಷೆ ಇದೆ. ಹೀಗಾಗಿ, ಭಾರತವು ಜಪಾನ್ ಅನ್ನು ಬಹಳ ಬೇಗ ಹಿಂದಿಕ್ಕುವ ಎಲ್ಲಾ ಸಾಧ್ಯತೆ ಇದೆ. ಇನ್ನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕುವ ಅವಕಾಶ ಇದೆ.

ಹತ್ತು ವರ್ಷದಲ್ಲಿ ಡಬಲ್ ಆದ ಭಾರತದ ಜಿಡಿಪಿ
ಭಾರತದ ಜಿಡಿಪಿ 2015ರಲ್ಲಿ 2.1 ಟ್ರಿಲಿಯನ್ ಡಾಲರ್ ಇತ್ತು. ಹತ್ತು ವರ್ಷಗಳ ನಂತರ, ಅಂದರೆ, 2025ರಲ್ಲಿ ಜಿಡಿಪಿ 4.3 ಟ್ರಿಲಿಯನ್ ಡಾಲರ್ ಆಗಿದೆ. ಅಂದರೆ, ಶೇ. 105ರಷ್ಟು ಜಿಡಿಪಿ ಬೆಳೆದಿದೆ. ವಿಶ್ವದ ಯಾವ ಪ್ರಮುಖ ಆರ್ಥಿಕತೆಯೂ ಈ ಹತ್ತು ವರ್ಷದಲ್ಲಿ ಭಾರತದಷ್ಟು ವೇಗವಾಗಿ ಬೆಳವಣಿಗೆ ಹೊಂದಿಲ್ಲ.

2025ರಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು
ಅಮೆರಿಕ: 30.3 ಟ್ರಿಲಿಯನ್ ಡಾಲರ್
ಚೀನಾ: 19.5 ಟ್ರಿಲಿಯನ್ ಡಾಲರ್
ಜರ್ಮನಿ: 4.9 ಟ್ರಿಲಿಯನ್ ಡಾಲರ್
ಜಪಾನ್: 4.4 ಟ್ರಿಲಿಯನ್ ಡಾಲರ್
ಭಾರತ: 4.3 ಟ್ರಿಲಿಯನ್ ಡಾಲರ್
ಬ್ರಿಟನ್: 3.7 ಟ್ರಿಲಿಯನ್ ಡಾಲರ್
ಫ್ರಾನ್ಸ್: 3.3 ಟ್ರಿಲಿಯನ್ ಡಾಲರ್
ಇಟಲಿ: 2.5 ಟ್ರಿಲಿಯನ್ ಡಾಲರ್
ಕೆನಡಾ: 2.3 ಟ್ರಿಲಿಯನ್ ಡಾಲರ್
ಬ್ರೆಜಿಲ್: 2.3 ಟ್ರಿಲಿಯನ್ ಡಾಲರ್

ಹತ್ತು ವರ್ಷದಲ್ಲಿ ಜಿಡಿಪಿ ಏರಿಕೆ ಕಂಡ ರಾಷ್ಟ್ರಗಳ ಪಟ್ಟಿ ಇಲ್ಲಿದೆ ( ಡಾಲರ್‌ಗಳಲ್ಲಿ)

ದೇಶಗಳು2015 ಜಿಡಿಪಿ2025 ಜಿಡಿಪಿಶೇಕಡಾವಾರು
ಭಾರತ2.1 ಟ್ರಿಲಿಯನ್‌4.3T100%
ಅಮೆರಿಕ$11.1 T30.3T105%
ಚೀನಾ$ 11.1T$19.5T76%
ಜರ್ಮನಿ$3.4T$4.9T44 %
ಜಪಾನ್$4.4 T$4.4T0%
ಯುನೈಟೆಡ್ ಕಿಂಗಡಂ$2.9T$3.7T28%
ಫ್ರ್ಯಾನ್ಸ್‌$2.4T$3.3T38%
ಇಟಲಿ$1.8T$2.5T39%
ಕೆನಡಾ$1.6T$2.3T44%
ಬ್ರೆಜಿಲ್‌$1.8T$2.3T28%
ರಷ್ಯಾ$1.4T$2.2T57%
ದಕ್ಷಿಣಾ ಕೊರಿಯಾ$1.5T$1.9T27%
ಆಸ್ಟ್ರೇಲಿಯಾ$1.2T$1.9T58%
ಸ್ಪೇನ್‌$1.8T$2.3T50%


ಜಿಡಿಪಿ ಎಂದರೇನು?
ಜಿಡಿಪಿ (ಗ್ರೋಸ್ ಡೊಮೆಸ್ಟಿಕ್ ಪ್ರಾಡಕ್ಟ್) ಎಂದರೆ ಒಂದು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಉತ್ಪಾದನೆಯಾದ ಎಲ್ಲಾ ಸಾಮಾನ್ಯ. ಸರಕು ಮತ್ತು ಸೇವೆಗಳ ಒಟ್ಟುಗೂಡಿಸುವುದು. ಇದು ಆರ್ಥಿಕ ಪ್ರಗತಿ, ಜನರ ಬದುಕಿನ ಮಟ್ಟ ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಅಳೆಯುವ ಪ್ರಮುಖ ಸೂಚಕವಾಗಿದೆ. ಜಿಡಿಪಿಯನ್ನು ಮೂರು ಮುಖ್ಯ ವಿಧಗಳಲ್ಲಿ ಅಳೆಯಲಾಗುತ್ತದೆ.

ಆರ್ಥಿಕ ವೃದ್ಧಿ: ಹೆಚ್ಚಿದ ಜಿಡಿಪಿ ಇದು ದೇಶದ ಆರ್ಥಿಕ ವೃದ್ಧಿಯನ್ನು ಸೂಚಿಸುತ್ತದೆ.
ಉದ್ಯೋಗ ಸೃಷ್ಟಿ: ಜಿಡಿಪಿ ಹೆಚ್ಚಿದಂತೆ ಉದ್ಯೋಗದ ಅವಕಾಶಗಳು ಹೆಚ್ಚುತ್ತವೆ.
ಮಾನವಕೋಶ: ದೇಶದ ಸಮೃದ್ಧಿ ಹೆಚ್ಚಿದಂತೆ ಜನರ ಜೀವಮಟ್ಟ ಮತ್ತು ಶಿಕ್ಷಣದಲ್ಲಿ ಸುಧಾರಣೆ ಕಾಣಬಹುದು.

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs