ISROದಲ್ಲಿ SSLC ಪಾಸಾದವರಿಗೆ ಉದ್ಯೋಗಾವಕಾಶ
ISRO VSSC Jobs Notification 2025 for 16 Posts
ವಿಕ್ರಮ್ ಸಾರಭಾಯ್ ಸ್ಪೇಸ್ ಸೆಂಟರ್ (ಇಸ್ರೋ VSSC) ಇಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುವ ಸಂಬಂಧ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸಲು 15 ಏಪ್ರಿಲ್ ಕೊನೆಯ ದಿನವಾಗಿದೆ. ನೇಮಕಾತಿ ಕುರಿತ ವಿವರಗಳು ಈ ಕೆಳಕಂಡಂತಿವೆ.
ಇಸ್ರೋ ಸಂಸ್ಥೆ ಆಹ್ವಾನ ಮಾಡಿರುವ ಉದ್ಯೋಗಗಳಲ್ಲಿ 10ನೇ ತರಗತಿ ಇಂದ ಪದವಿ ಓದಿದವರಿಗೂ ಅವಕಾಶ ನೀಡಲಾಗಿದೆ. ನಿಮ್ಮ ವಿದ್ಯಾರ್ಹತೆ ಅನ್ವಯ ಆಗುವ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಸಲ್ಲಿಕೆ ಮಾಡುವ ದಿನಾಂಕ, ಶುಲ್ಕ, ಎಷ್ಟು ಉದ್ಯೋಗಗಳು, ಕೊನೆ ದಿನಾಂಕ ಯಾವಾಗ ಎನ್ನುವ ಮಾಹಿತಿ ಈ ಕೆಳಗೆ ಕೊಡಲಾಗಿದೆ.
ಹುದ್ದೆಗಳ ವಿವರ : 16
ಸಹಾಯಕ- ಸಹಾಯಕ (ರಾಜಭಾಷಾ) – 02
ಲಘು ವಾಹನ ಚಾಲಕ-ಎ- 05 ಹುದ್ದೆಗಳು (ವಾಹನದ ಲೈಸೆನ್ಸ್ ಇರಲೇಬೇಕು)
ಹೆವಿ ವೆಹಿಕಲ್ ಡ್ರೈವರ್- 05 ಹುದ್ದೆ (ಹೆವಿ ವೆಹಿಕಲ್ ಲೈಸೆನ್ಸ್ ಇರಲೇಬೇಕು)
ಅಗ್ನಿಶಾಮಕ-ಎ- 03 ಕೆಲಸಗಳು
ಅಡುಗೆಗಾರ- 01 ಕೆಲಸ
ವಿದ್ಯಾರ್ಹತೆ : 10ನೇ ತರಗತಿ, ಯಾವುದೇ ಪದವಿ
ವಯೋಮಿತಿ : 18 ರಿಂದ 35 ವರ್ಷಗಳು
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ (ಕೆಲವು ಹುದ್ದೆಗಳಿಗೆ ಅನ್ವಯ), ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ
ವೇತನಶ್ರೇಣಿ : 19,900 ದಿಂದ 81,100 ರೂಪಾಯಿ (ಹುದ್ದೆಗಳಿಗೆ ಅನುಗುಣವಾಗಿ)
ಅಧಿಸೂಚನೆ : click Here
ಹೆಚ್ಚಿನ ಮಾಹಿತಿಗಾಗಿ : vssc.gov.in
ಇಸ್ರೋ VSSC ನೇಮಕಾತಿ ಅಧಿಸೂಚನೆ 2025 | |
ಸಂಸ್ಥೆಯ ಹೆಸರು | ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ |
ಪೋಸ್ಟ್ ಹೆಸರು | ಸಹಾಯಕ, ಚಾಲಕ, ಅಗ್ನಿಶಾಮಕ ಸಿಬ್ಬಂದಿ, ಅಡುಗೆಯವರು |
ಪೋಸ್ಟ್‌ಗಳ ಸಂಖ್ಯೆ | 16 |
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 1 ಏಪ್ರಿಲ್ 2025 |
ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ | 15ನೇ ಏಪ್ರಿಲ್ 2025 |
ಅಪ್ಲಿಕೇಶನ್ ವಿಧಾನ | ಆನ್ಲೈನ್ |
ವರ್ಗ | ಕೇಂದ್ರ ಸರ್ಕಾರಿ ಉದ್ಯೋಗಗಳು |
ಕೆಲಸದ ಸ್ಥಳ | ಅಖಿಲ ಭಾರತ |
ಆಯ್ಕೆ ಪ್ರಕ್ರಿಯೆ | ದೈಹಿಕ ಪರೀಕ್ಷೆ |
ಅಧಿಕೃತ ಜಾಲತಾಣ | vssc.gov.in |
Read More : Current Recruitments : ಪ್ರಸ್ತುತ ನೇಮಕಾತಿಗಳು