ಅಮೆರಿಕದ ಗಗನ ನೌಕೆಗೆ ಕಲ್ಪನಾ ಚಾವ್ಲಾ ಹೆಸರು
ಅಮೆರಿಕದ ಗಗನ ನೌಕೆಯೊಂದಕ್ಕೆ ಭಾರತೀಯ ಮೂಲದ ಹೆಮ್ಮೆಯ ಖಗೋಳ ವಿಜ್ಞನಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ವಾಣಿಜ್ಯ ಸರಕು ಸಾಗಾಣೆ ಗಗನ ನೌಕೆಗೆ ಇಂದು ಎಸ್.ಎಸ್.ಕಲ್ಪನಾ ಚಾವ್ಲಾ ಎಂದು ಹೆಸರಿಡಲಾಗಿದೆ.
ಅಮೆರಿಕದ ಜಾಗತಿಕ ವೈಮಾಂತರೀಕ್ಷ ಮತ್ತು ರಕ್ಷಣಾ ತಂತ್ರಜ್ಞಾನ ಮುಂಚೂಣಿ ಸಂಸ್ಥೆಯಾದ ನಾರ್ತ್‍ರೋಪ್ ಗ್ರುಮ್‍ನ್ ತನ್ನ ಮುಂದಿನ ಸಿಗ್ನಸ್ ಕ್ಯಾಪ್ಚುಯಲ್(ಐಎಸ್‍ಎಸ್‍ಗೆ ತೆರಳಿರುವ ಬೃಹನ್ ನೌಕೆ)ಗೆ ಕಲ್ಪನಾ ಚಾವ್ಲಾ ಎಂದು ಹೆಸರಿಟ್ಟಿದೆ.
ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವಿಜ್ಞಾನಿ ಮತ್ತು ಅಂತರಿಕ್ಷಾ ಯಾನಿಯಾಗಿದ್ದರು. ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲ್ಪನಾ 2003ರಲ್ಲಿ ಕೊಲಂಬಿಯಾ ಗಗನನೌಕೆಯ ಸ್ಫೋಟ ದುರಂತದಲ್ಲಿ ಇತರ ಆರು ಖಗೋಳ ಯಾತ್ರಿಗಳೊಂದಿಗೆ ದುರಂತ ಸಾವಿಗೀಡಾದರು.