ನೈಟ್ರೋಜನ್ ಗ್ಯಾಸ್ ನೀಡಿ ಮರಣದಂಡನೆ, ಅಮೆರಿಕದಲ್ಲಿ ವಿಶ್ವದ ಮೊದಲ ಪ್ರಕರಣ
ಇತಿಹಾಸದಲ್ಲಿ ಇದೇ ಮೊದಲ ಅಮೆರಿಕ ಸರ್ಕಾರವು )ಅಮೆರಿಕದ (America) ಅಲಬಾಮಾ (Alabama) ರಾಜ್ಯವು) ನೈಟ್ರೋಜನ್ ಅನಿಲದ ಮೂಲಕ ಮರಣ ದಂಡನೆ (Nitrogen Execution) ಶಿಕ್ಷೆ ವಿಧಿಸಿದೆ. ಮೆರಿಕದ ಸುಪ್ರೀಂಕೋರ್ಟ್ ಗುರುವಾರ (ಜನವರಿ 25) ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ. 1982ರಿಂದ ಈ ರೀತಿ ಕೈದಿಗಳಿಗೆ ಮರಣದಂಡನೆ ವಿಧಿಸುವುದನ್ನ ವಿರೋಧಿಸಿದ್ದ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ. ಮೊದಲ ಬಾರಿಗೆ, ಕೆನ್ನೆತ್ ಸ್ಮಿತ್ (58)(Kenneth Eugene Smith) ನೈಟ್ರೋಜನ್ ಅನಿಲದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
ಈ ಶಿಕ್ಷೆಯನ್ನು ಅಮೆರಿಕದ ಕಾರಾಗೃಹದಲ್ಲಿ ಹೊಸ ರೀತಿಯಲ್ಲಿ ಜಾರಿಗೆ ತರಲಾಗಿದೆ. ಇದಕ್ಕೂ ಮುನ್ನ ವಿಷಕಾರಿ ರಾಸಾಯನಿಕ ದ್ರವ ಪದಾರ್ಥಗಳನ್ನು ಮರಣ ದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ಇಂಜೆಕ್ಷನ್ ಮೂಲಕ ನೀಡಿ ಕೊಲ್ಲಲಾಗುತ್ತಿತ್ತು. ಈ ರೀತಿಯ ಮರಣ ದಂಡನೆ ಶಿಕ್ಷೆ ವಿಶ್ವಾದ್ಯಂತ ಸಾಮಾನ್ಯವಾಗಿ ಬಳಕೆಯಲ್ಲಿದೆ. ಆದರೆ, ಇದೀಗ ಅಮೆರಿಕ ಹೊಸ ಪದ್ದತಿಯ ಮೊರೆ ಹೋಗಿದೆ.
ಸಾರಜನಕ ನೀಡಿದ ಬಳಿಕ ಸರಿಸುಮಾರು 5 ನಿಮಿಷಗಳ ಕಾಲ ಸ್ಮಿತ್ ತುಂಬಾ ಕಷ್ಟಪಟ್ಟು ಉಸಿರಾಟ ಮಾಡಿ ಕೈಕಾಲು ಬಡಿಯಲು ಪ್ರಾರಂಭಿಸಿದ. ಈ ವೇಳೆ ಆತನ ಹೆಂಡತಿ ಮತ್ತು ಇತರ ಸಂಬಂಧಿಕರು ಹಾಜರಾಗಿದ್ದರು. ಅಲ್ಲದೇ ಐದು ಪತ್ರಕರ್ತರಿಗೆ ಮಾಧ್ಯಮ ಸಾಕ್ಷಿಗಳಾಗಿ ಗಾಜಿನ ಮೂಲಕ ಮರಣದಂಡನೆಯನ್ನು ವೀಕ್ಷಿಸಲು ಅವಕಾಶ ನೀಡಲಾಯಿತು.
ಇನ್ನು ಸಾಯುವ ಮುನ್ನ ಅಪರಾಧಿ ಸ್ಮಿತ್ ‘ಇಂದು ರಾತ್ರಿ ಅಲಬಾಮಾ ರಾಜ್ಯವು ಮಾನವತೆಯನ್ನು ಒಂದು ಹೆಜ್ಜೆ ಹಿಂದಕ್ಕೆ ಕರೆದೊಯ್ಯಲಿದೆ’ ಎಂದು ಕೊನೆಯ ಮಾತು ಆಡಿದ ಎಂದು ಅಮೆರಿಕದ ಸ್ಥಳೀಯ ಸಿಬಿಎಸ್ ಸುದ್ದಿ ಸಂಸ್ಥೆಯ ವರದಿಗಾರ ಹೇಳಿದ್ದಾನೆ. ಈ ವರದಿಗಾರ ಮರಣ ದಂಡನೆ ಶಿಕ್ಷೆಯ ಪ್ರತ್ಯಕ್ಷ ಸಾಕ್ಷಿ ಕೂಡಾ ಆಗಿದ್ದಾನೆ.
✦ ಇದು ಹೇಗೆ ಕೆಲಸ ಮಾಡುತ್ತದೆ?
ನೈಟ್ರೋಜನ್ ಹೈಪೋಕ್ಸಿಯಾವು ವ್ಯಕ್ತಿಯನ್ನು ಸಾರಜನಕವನ್ನು ಮಾತ್ರ ಉಸಿರಾಡುವಂತೆ ಮಾಡುತ್ತದೆ. ಮಾನವ ದೇಹಕ್ಕೆ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಮ್ಲಜನಕವನ್ನು ವ್ಯಕ್ತಿಯಿಂದ ಕಸಿದುಕೊಳ್ಳುತ್ತದೆ. ಮರಣದಂಡನೆಯ ಈ ವಿಧಾನದಲ್ಲಿ, ಕೈದಿಗಳ ಮುಖದ ಮೇಲೆ ಉಸಿರಾಟದ ಮುಖವಾಡವನ್ನು ಇರಿಸಲಾಗುತ್ತದೆ. ಆಮ್ಲಜನಕದ ಬದಲಿಗೆ ಶುದ್ಧ ಸಾರಜನಕವನ್ನು ವ್ಯಕ್ತಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾಗುತ್ತದೆ. ಸ್ಮಿತ್‌ನ ಮರಣಕ್ಕೆ ಸುಮಾರು 22 ನಿಮಿಷಗಳ ಕಾಲ ತೆಗೆದುಕೊಂಡಿತು. ಸಾರಜನಕವನ್ನು ಕೊಟ್ಟ ಬಳಿಕವೂ ಸ್ಮಿತ್ ಹಲವಾರು ನಿಮಿಷಗಳ ಕಾಲ ಜೀವಂತವಾಗಿದ್ದ.
ಅಮೆರಿಕದಲ್ಲಿ ಮಾನವರನ್ನು ಮರಣದಂಡನೆಗೆ ಒಳಪಡಿಸಲು ನೈಟ್ರೋಜನ್ ಅನಿಲವನ್ನು ಹಿಂದೆಂದೂ ಬಳಸದಿದ್ದರೂ, ಇದನ್ನು ಕೆಲವೊಮ್ಮೆ ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತದೆ. ಆದರೆ ಅಮೆರಿಕನ್ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ಕೂಡ ಈ ರೀತಿಯಲ್ಲಿ ದಯಾಮರಣ ಮಾಡುವಾಗ ದೊಡ್ಡ ಪ್ರಾಣಿಗಳಿಗೆ ನೈಟ್ರೋಜನ್ ನೀಡಲು ಶಿಫಾರಸು ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.