ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ
1. ರಾಕೆಟ್‍ನ ಜನಕ – ರಾಬರ್ಟ್ ಗೊಡ್ಡಾರ್ಡ್
2. ರಾಕೆಟ್‍ಗಳ ಬಗ್ಗೆ ಯೋಚಿಸಿದ್ದ ಕಲ್ಪನಾ ಬರಹಗಾರ – ಜೂಲ್ಸ್ ವೆರ್ನ್
3. ರಾಕೆಟುಗಳ ತತ್ವ ಯಾವುದು – ಸಂವೇಗ ಸಂರಕ್ಷಣಾ ತತ್ವ
4. ರಾಕೆಟ್‍ಗಳು ನಿರ್ವಾತ ಪ್ರದೇಶದಲ್ಲೂ ಕಾರ್ಯ ನಿರ್ವಹಿಸಲು ಕಾರಣ – ಆಕ್ಸಿಡಕವನ್ನು( ಇಂಧನ ದಹನಕ್ಕೆ ಆಕ್ಸಿಜನ್ ಒದಗಿಸುವ ಪದಾರ್ಥ) ತಮ್ಮ ಜೊತೆ ಹೊತ್ತೊಯ್ಯುತ್ತವೆ.
5. ಆಕ್ಸಿಡಕಗಳಿಗೆ ಉದಾಹರಣೆ – ದ್ರವ ಆಕ್ಸಿಜನ್ , ದ್ರವ ಪ್ಲೋರಿನ್
6. ರಾಕೆಟ್‍ನ ಮುಂಬಾಗದಲ್ಲಿ ಇಟ್ಟು ಕಳುಹಿಸುವ ವೈಜ್ಞಾನಿಕ ಸಾಧನ ಅಥವಾ ಉಪಗ್ರಹ -ಉಪಯುಕ್ತ ಹೊರೆ(ಪೇಲೋಡ್)
7. ವೃತ್ತಾಕಾರದ ಪಥದಲ್ಲಿ ಚಲಿಸುತ್ತಿರುವ ಒಂದು ಕಾಯದ ವೇಗ – ಕಕ್ಷಾ ವೇಗ
8. ಒಂದು ಕಾಯವು ಭೂಮಿಯು ಗುರುತ್ವ ಕೇಂದ್ರದಿಂದ ತಪ್ಪಿಸಿಕೊಂಡು ಹೋಗುವಂತಾಗಲು ಅದಕ್ಕೆ ನೀಡಬೇಕಾದ ಕನಿಷ್ಠ ಆರಂಭಿಕ ವೇಗ – ವಿಮೋಚನಾ ವೇಗ
9. ಭೂಮಿಗೆ ಸಂಬಂಧಿಸಿದಂತೆ ವಿಮೋಚನಾ ವೇಗ – 11.2 ಕಿ. ಮೀ/ಸೆಕೆಂಡು
10. ಭೂಸ್ಥಿರ ಪುಗ್ರಹಗಳ ಪರಿಭ್ರಮಣಾ ಅವಧಿ- ಭೂಮಿಯ ಭ್ರಮಣೆಯ ಅವಧಿಯಷ್ಟೇ (24 ಗಂಟೆ)
11. ಭಾರತೀಯ ವ್ಯೊಮ ಕಾರ್ಯಕ್ರಮಗಳು ಯಾವಾಗ ಪ್ರಾರಂಭವಾದವು – 1963 ನವೆಂಬರ್ 21 ರಂದು
12. ಭಾರತ ರಾಷ್ಟ್ರೀಯ ಉಪಗ್ರಹ ಸರಣಿ ಎಂದು ಪ್ರಾರಂಭವಾಯಿತು – 1982
13. ಚಂದ್ರನನ್ನು ತಲುಪಿದ ಮೊದಲ ಗಗನನೌಕೆ – ಲೂನಾ 1959 ರಂದು ರಷ್ಯಾ
14. ಭೂಮಿಗೆ ಕಾಣದ ಚಂದ್ರನ ಮತ್ತೊಂದು ಮುಖವನ್ನು ತೋರಿಸಿದ ನೌಕೆ – ಲೂನಾ-3
15. ಮಾನವ ಮೊದಲು ಚಂದ್ರನ ಮೇಲೆ ಯಾವಾಗ ಪಾದಾರ್ಪಣೆ ಮಾಡಿದರು – 1969 ರಲ್ಲಿ ಜುಲೈ 21
16. ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲಿಗಳು– ನೀಲ್ ಆರ್ಮಸ್ಟ್ರಾಂಗ್ ಮತ್ತು ಎಡ್ವಿನ್ ಇ ಅಡ್ರಿನ್
17. ನೀಲ್ ಆರ್ಮಾಸ್ಟಾಂಗ್ ಚಂದ್ರನ ಮೇಲಿನ ಯಾ ಪ್ರದೇಶವನ್ನು ಇಳಿದನು – ಸೀ ಆಫ್ ಟ್ರಾಂಕ್ಟೀಲಿಟಿ
18. ಚಂದ್ರನಿಂದ ಕಲ್ಲು ಮಣ್ಣುಗಳನ್ನು ಹೊತ್ತು ತಂದ ನೌಕೆ- ಲೂನಾ- 16
19. ಕಲ್ಪನಾ ಚಾವ್ಲಾ ಪ್ರಯಾಣಿಸಿ, ನಿಧನ ಹೊಂದಿದ ನೌಕೆ – ಕೊಲಂಬಿಯಾ
20. ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಪ್ರಾಣಿ – ನಾಯಿ( ಲೈಕಾ)
21. ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಮಾನವ – ಯೂರಿಗಾಗರಿನ್
22. ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಮಹಿಳೆ – ವ್ಯಾಲೆಂಟಿನಾ ಟೆರಸ್ಕೋವಾ
23. ಬಾಹ್ಯಾಕಾಶದಲ್ಲಿ ಓಡಾಡಿದ ಮೊದಲ ಮಾನವ – ಲಿಯೋನಾಲ್
24. ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಭಾರತೀಯ – ರಾಕೇಶ ಶರ್ಮ
25. ಬಾಹ್ಯಾಕಾಶಕ್ಕೆ ಕಳುಹಿಸಲ್ಪಟ್ಟ ಮೊದಲ ಭಾರತೀಯ ಮಹಿಳೆ – ಕಲ್ಪನಾ ಚಾವ್ಲ
26. ಮೊಟ್ಟಮೊದಲು ಉಡಾವಣೆಯಾದ ಕೃತಕ ಉಪಗ್ರಹ – ಸ್ಫುಟ್ನಿಕ್-1
27. ರಾಕೆಟ್‍ಗೆ ಮುಮ್ಮುಖ ನೂಕುಬಲವನ್ನು ಒದಗಿಸುವುದು- ನಿಷ್ಕಾಸ ಅನಿಲಗಳು
28. ಭಾರತದಲ್ಲಿ ಉಪಗ್ರಹಗಳನ್ನು ನಿಯಂತ್ರಿಸುವ ಮುಖ್ಯ ಕೇಂದ್ರ ಎಲ್ಲಿದೆ – ಹಾಸನ
29. ಭಾರತದಲ್ಲಿ ಅಗ್ನಿ ಕ್ಷಿಪಣಿಗಳನ್ನು ಎಲ್ಲಿ ತಯಾರಿಸಲಾಗುತ್ತದೆ-ಹೈದರಾಬಾದ್
30. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೆಸರು – ಆಲ್ಫಾ