2020ನೇ ಸಾಲಿನ ಶ್ರೇಷ್ಟ ಚಿಂತಕಿ
ಕೊರೋನ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದಕ್ಕಾಗಿ ಬ್ರಿಟನ್ ನ ‘ಪ್ರೋಸ್ಪೆಕ್ಟ್ ಮ್ಯಾಗಝಿನ್’ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾರನ್ನು ‘2020ನೆ ಸಾಲಿನ ಶ್ರೇಷ್ಟ ಚಿಂತಕಿ’ ಎಂದು ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಶೈಲಜಾ ಮೊದಲನೆ ಸ್ಥಾನ ಗಳಿಸಿದ್ದರೆ, ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್ 2ನೆ ಸ್ಥಾನ ಗಳಿಸಿದ್ದಾರೆ. ಕೇರಳದಲ್ಲಿ ಕೋವಿಡ್ 19 ಮರಣ ಪ್ರಮಾಣ ಕಡಿಮೆಯಾಗಲು ಶೈಲಜಾ ಅವರ ಕಾರ್ಯವೈಖರಿ ಕಾರಣ ಎಂದಿರುವ ಮ್ಯಾಗಝಿನ್, ಅವರನ್ನು ‘ಸೂಕ್ತ ಜಾಗದಲ್ಲಿರುವ ಸೂಕ್ತ ಮಹಿಳೆ’ ಎಂದು ಬಣ್ಣಿಸಿದೆ.
ಈ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡಾ, ಚಿಂತಕ ಕೋರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೀಲ್ ಸೇರಿದಂತೆ 50 ಪ್ರಮುಖ ವ್ಯಕ್ತಿಗಳಿದ್ದಾರೆ. ಜನವರಿಯಲ್ಲಿ ಕೋವಿಡ್ -19 ಇನ್ನೂ ಚೀನಾದ ಕಥೆಯಾಗಿದ್ದಾಗ, ನಿಖರವಾಗಿ ಕೊರೋನಾ ಆಗಮನವನ್ನು ಗಮನಿಸಿ ಅದರಿಂದ ಉಂಟಾಗುವ ಪರಿಣಾಮಗಳ ಮುನ್ಸೂಚನೆ ನೀಡಿದ್ದರು ಎಂದು ಮ್ಯಾಗಜೀನ್ ತಿಳಿಸಿದೆ.ಕೊರೋನಾ ನಿರ್ವಹಣೆಯಲ್ಲಿ ಕೇರಳ ವಹಿಸಿದ ಪಾತ್ರದ ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಮತ್ತಿತರ ಅಂತರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದವು.