2024-25ನೇ ದೇಶದ ಸ್ವಚ್ಛ ನಗರ(Cleanest Cities)ಗಳ ಪಟ್ಟಿ ಬಿಡುಗಡೆ
List of Cleanest Cities : 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಪಟ್ಟಿಯಲ್ಲಿ ದೇಶದ ಸ್ವಚ್ಛ ನಗರಗಳ (India’s Cleanest City) ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ (Indore) ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಮೈಸೂರು (Mysuru) 3ನೇ ಸ್ಥಾನದಲ್ಲಿದೆ.
10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್ ನಗರವು ದೇಶದಲ್ಲೇ ಅತ್ಯಂತ ಸ್ವಚ್ಛ ನಗರ(ಸೂಪರ್ ಸ್ವಚ್ಛ್ ಲೀಗ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸ್ವಚ್ಛ ನಗರವೆಂಬ ಮುಕುಟ ಇಂದೋರ್ ನಗರದ ಪಾಲಾಗುತ್ತಿರುವುದು ಇದು ಸತತ ಎಂಟನೇ ಬಾರಿ.
ಇನ್ನು 3ರಿಂದ 10 ಲಕ್ಷ ಜನಸಂಖ್ಯೆಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಮೂರನೇ ಸ್ಥಾನಕ್ಕೆ ಭಾಜನವಾಗಿದ್ದರೆ, ರಾಜ್ಯಗಳ ಭರವಸೆಯ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ದಾವಣಗೆರೆ 15ನೇ ಸ್ಥಾನ ಪಡೆದಿದೆ.
ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಲಾಗಿದೆ.
ಹತ್ತು ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್ ನಂತರದ ಸ್ಥಾನದಲ್ಲಿವೆ.
‘ಸೂಪರ್ ಲೀಗ್’ ವಿಭಾಗವು ಹೊಸದಾಗಿ ಸೇರ್ಪಡೆಯಾಗಿದೆ. 2024 ರ ಜನವರಿಯಲ್ಲಿ ಘೋಷಿಸಲಾದ ಈ ಪ್ರಶಸ್ತಿಗಳ ಹಿಂದಿನ ಆವೃತ್ತಿಯಲ್ಲಿ, ಇಂದೋರ್ ಸತತ ಏಳನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿತು. ಸೂರತ್ ಜಂಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಪ್ಲೇಗ್ ಪೀಡಿತ ನಗರ ಎಂಬ ತನ್ನ ಹಿಂದಿನ ಪರಂಪರೆಯನ್ನು ಅಳಿಸಿಹಾಕಿದೆ.
ಮೈಸೂರಿಗೆ 3ನೇ ಸ್ಥಾನ :
ಕರ್ನಾಟಕದ ಮೈಸೂರು 3 ಲಕ್ಷದಿಂದ 10 ಲಕ್ಷಕ್ಕೂ ಅಧಿಕ ಜನರು ವಾಸಿಸುವ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.2016 ರಲ್ಲಿ ದೇಶದಲ್ಲಿಯೇ ನಂಬರ್ 1 ಸ್ಥಾನ ಪಡೆದಿದ್ದ ಮೈಸೂರು ಬಳಿಕ ಕುಸಿತ ಕಂಡಿತ್ತು. ಅದರಲ್ಲೂ 2023 ನೇ ಸಾಲಿನಲ್ಲಿ 27 ನೇ ಸ್ಥಾನ ಪಡೆದುಕೊಂಡಿತ್ತು. ಇದು ನಗರದ ಅತ್ಯಂತ ಕಳಪೆ ಸಾಧನೆಯಾಗಿತ್ತು. ಈ ಬಾರಿ ನಗರದ ಅಂದವನ್ನು ಹೆಚ್ಚಿಸುವಲ್ಲಿ ಮಹಾನಗರಪಾಲಿಕೆಯು ಶ್ರಮ ವಹಿಸಿತ್ತು.ಕರ್ನಾಟಕದ ಮೈಸೂರು ಪಟ್ಟಿಯ ಟಾಪ್ 10 ರಲ್ಲಿ ಸ್ಥಾನ ಪಡೆದಿರುವ ಏಕೈಕ ನಗರವಾಗಿದೆ. ಉತ್ತಮ ಪ್ರದರ್ಶನ ನೀಡಿದ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್ಗಢ ಮತ್ತು ಕರ್ನಾಟಕ ನಂತರದ ಸ್ಥಾನಗಳಲ್ಲಿವೆ.