GKSpardha Times

ಭಾರತದಲ್ಲಿರುವ ಪ್ರಮುಖ ಬಂದರುಗಳ ಪಟ್ಟಿ ಹಾಗೂ ಅವುಗಳ ಮಾಹಿತಿ

Share With Friends

1.ಕಾಂಡ್ಲಾ ಬಂದರು
ಸ್ವತಂತ್ರ ಭಾರತದ ಮೊದಲ ಬಂದರು. ಗುಜರಾತ್ ಕಛ್ ಕರಾವಳಿಯ ಅತೀ ದೊಡ್ಡ ಬಂದರು. 1955 ರಲ್ಲಿ ಘೋಷಣೆ. ಇದು ಒಂದು ಉಬ್ಬರವಿಳಿತದ ಬಂದಾರಾಗಿದೆ.

2.ಮುಂಬೈ ಬಂದರು
✦ಭಾರತದ ಮೊದಲ ಸ್ವಾಭಾವಿಕ ಬಂದರು. ಬ್ರಿಟಿಷರ ಕಾಲದಲ್ಲಿ ಬೆಳೆವಣಿಗೆಯಾದ ಬಂದರು.
” ಭಾರತದ ಹೆಬ್ಬಾಗಿಲು”.

3.ನವಸೇನಾ
ಮುಂಬೈ ಬಂದರಿನ ಒತ್ತಡವನ್ನು ತಡೆಗಟ್ಟಲು ಸ್ಥಾಪನೆಯಾಗಿದ್ದು, ಇದಕ್ಕೆ ” ಜವಹರಲಾಲ್ ನೆಹರು ” ಎಂದು ನಾಮಕರಣ ಮಾಡಲಾಗಿದೆ. ಒಣವಸ್ತುಗಳ ವ್ಯಾಪಾರಕ್ಕಾಗಿ ಪ್ರಸಿದ್ದವಾಗಿದೆ.

4.ನವಮಂಗಳೂರು
ಇದನ್ನು ” ಕರ್ನಾಟಕದ ಹೆಬ್ಬಾಗಿಲು” ಎನ್ನುವರು. ಅತೀ ಹೆಚ್ಚು ಕಾಫಿ ರಫ್ತು ಮಾಡುವುದರಿಂದ ಇದನ್ನು ” ಕಾಫಿ ಬಂದರು ” ಎನ್ನುವರು.

5.ಕೊಚ್ಚಿನ್ ಬಂದರು
✦ ಪಶ್ಚಿಮ ಕರಾವಳಿಯ ಕೊನೆಯ ಬಂದರು”,
✦ “ಕೇರಳದ ಅತಿ ದೊಡ್ಡ ಬಂದರು” ಆಗಿದೆ.
✦ ಇದು ಅತೀ ಹೆಚ್ಚು ಮಸಾಲೆ ರಫ್ತು ಮಾಡುವುದರಿಂದ ಇದನ್ನು ” ಮಸಾಲೆ ಯ ಬಂದರು ” ಎನ್ನುವರು.
✦ ಇದು ದೇಶದಲ್ಲಿಯೇ ಅತೀ ಸುಂದರವಾಗಿದ್ದರಿಂದ ” ಅರಬ್ಬೀ ಸಮುದ್ರದ ರಾಣಿ ” ಎನ್ನುವರು. ಇದರ ಪಕ್ಕದಲ್ಲಿ “ಕೊಲ್ಲಂ” ಬಂದರು ಕಂಡು ಬಂದು ಇದನ್ನು ” ಅರಬ್ಬೀ ಸಮುದ್ರದ ರಾಜ ” ಎನ್ನುವರು.

6.ಟುಟಿಕೊರಿನ್ ಬಂದರು —
” ಪೂರ್ವ ಕರಾವಳಿಯ ಕೊನೆಯ ಬಂದರು “. ತಮಿಳುನಾಡಿನ ಕೋರಮಂಡಲ ತೀರದಲ್ಲಿ ಕಂಡು ಬಂದು, ಈ ಬಂದರಿನ ಮೂಲಕ ಅತೀ ಹೆಚ್ಚು ಹವಳ ಮುತ್ತುಗಳು ರಫ್ತು ಮಾಡುವುದರಿಂದ ” ಹವಳದ ಬಂದರು ” ಎನ್ನುವರು.

7.ಚೆನ್ನೈ ಬಂದರು
” ದಕ್ಷಿಣ ಭಾರತದ ಹೆಬ್ಬಾಗಿಲು ” ಇಲ್ಲಿ ಅತೀ ಹೆಚ್ಚು ಚರ್ಮ ರಫ್ತು ಮಾಡುವುದರಿಂದ ಇದನ್ನು ” ಚರ್ಮದ ಬಂದರು ” ಎನ್ನುವರು.

8.ಎನ್ನೋರ ಬಂದರು 2001 –
” ಭಾರತ ದೇಶದ ಏಕೈಕ ಖಾಸಗಿ ಬಂದರು “. 2013 ರಲ್ಲಿ ಇದನ್ನು ” ಕಾಮರಾಜ ಬಂದರು ” ಎಂದು ನಾಮಕರಣ ಮಾಡಲಾಗಿದೆ. ಇದು ತಮಿಳುನಾಡಿನ ಬಂದರು.

9.ವಿಶಾಖ ಪಟ್ಟಣ ಬಂದರು
“ಭಾರತ ದೇಶದ ಅತ್ಯಂತ ಆಳವಾದ ಬಂದರು”. “ಆಂಧ್ರಪ್ರದೇಶದ ಅತಿ ದೊಡ್ಡ ಬಂದರು”. ” ಪೂರ್ವ ಕರಾವಳಿಯ ಅತಿ ದೊಡ್ಡ ನೈಸರ್ಗಿಕ ಬಂದರು “. ಇಲ್ಲಿ ಅತೀ ಹೆಚ್ಚು ಸಿದ್ಧ ಹಡಗುಗಳನ್ನು ರಫ್ತು ಮಾಡಲಾಗುತ್ತದೆ.
✦ಈ ಬಂದರಿನ ಪಕ್ಕದಲ್ಲಿ ” ಗಂಗಾವರಂ ” ಎಂಬ ಚಿಕ್ಕ ಬಂದರು ಕಂಡು ಬಂದು ಇದು ” ಭಾರತ ದೇಶದಲ್ಲಿಯೇ ಅತ್ಯಂತ ಆಳವಾದ ಚಿಕ್ಕ ಬಂದರ “ವಾಗಿದೆ – ಆಳ – 21ಮೀ.

10.ಪಾರಾದೀಪ ಬಂದರು
“ಓಡಿಸ್ಸಾ ರಾಜ್ಯದ ಅತೀ ದೊಡ್ಡ ಬಂದರು”. ರಫ್ತು – ಖನಿಜ ಸಂಪನ್ಮೂಲಗಳು.

11.ಕೊಲ್ಕತ್ತಾ ಬಂದರು(ಡೈಮಂಡ್ ಹಾರ್ಬರ್)
✦” ಭಾರತ ದೇಶದ ಏಕೈಕ ನದಿಯ ಬಂದರು “. ಔರಂಗಜೇಬನ ಕಾಲದಲ್ಲಿ ನಿರ್ಮಾಣ. ಅತೀ ಹೆಚ್ಚು ಚಹಾ ರಫ್ತು ಮಾಡುವುದರಿಂದ” ಚಹಾದ ಬಂದರು ” & ಸೆಣಬು ರಫ್ತು ಮಾಡುವುದರಿಂದ “ ಬಂಗಾರದ ನಾರು” ಎನ್ನುವರು.
✦ಇದನ್ನು ” ಪೂರ್ವ ಭಾರತದ ಹೆಬ್ಬಾಗಿಲು ” ಎನ್ನುವರು.

12.ಹಾಲ್ಡಿಯ ಬಂದರು
✦ಕೊಲ್ಕತ್ತ ಬಂದರಿನ ಒತ್ತಡವನ್ನು ತಡೆಗಟ್ಟಲು ಈ ಬಂದರು ಸ್ಥಾಪನೆ ಮಾಡಿದ್ದು ಪ.ಬಂಗಾಳದಲ್ಲಿ ಇದೆ.

13.ಪೋರ್ಟಬ್ಲಯರ್ 2010
ಇದು ಅಂಡಮಾನ್ ಮತ್ತು ನಿಕೋಬಾರ್ನಲ್ಲಿರುವ ಪ್ರಮುಖ ಬಂದರಾಗಿದೆ.

14.ಮರ್ಮಗೋವಾ 1964
✦ಭಾರತದ ಅತ್ಯಂತ ಚಿಕ್ಕ ಬಂದರು, ಗೋವಾ ರಾಜ್ಯದ ಅತಿ ದೊಡ್ಡ ಬಂದರು. ಅತೀ ಹೆಚ್ಚು ರಫ್ತು ಮಾಡುವ ವಸ್ತು ಕಬ್ಬಿಣ.

Leave a Reply

Your email address will not be published. Required fields are marked *

error: Content Copyright protected !!