Educational PsychologyLatest UpdatesQuiz

ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -1 [ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ]

Share With Friends

1. ಒಂದು ಕಾರು 810 ಕಿ.ಮೀಯನ್ನು 15 ಗಂಟೆಗಳಲ್ಲಿ ಕ್ರಮಿಸಿದರೆ ಕಾರಿನ ವೇಗ ಗಂಟೆಗೆ ಎಷ್ಟು
ಎ) 54 ಕಿಮೀ
ಬಿ) 56 ಕಿಮೀ
ಸಿ) 58 ಕಿಮೀ
ಡಿ) 60 ಕಿಮೀ

2. 120132 ರೂಗಳನ್ನು 141 ಜನರಿಗೆ ಸಮನಾಗಿ ಹಂಚಿದರೆ ಪ್ರತಿಯೊಬ್ಬರಿಗೂ ದೊರೆಯುವ ಹಣ
ಎ) 896
ಬಿ) 878
ಸಿ) 854
ಡಿ) 852

3. ಎರಡು ಅನುಕ್ರಮ ಸಂಖ್ಯೆಗಳ ವರ್ಗಗಳ ಮೊತ್ತ 33124 ಆದರೆ ಅದರಲ್ಲಿನ ಚಿಕ್ಕಸಂಖ್ಯೆಯ ವರ್ಗಮೂಲವೇನು
ಎ) 169
ಬಿ) 2197
ಸಿ) 39
ಡಿ) 13

4. ಉತ್ತರಕ್ಕೆ ಮುಖಮಾಡಿ ಕುಳಿತಿರುವ ಮಕ್ಕಳ ಸಾಲಿನಲ್ಲಿ ಭರತ್ ಬಲತುದಿಯಿಂದ 11 ನೆಯವನಾಗಿದ್ದು ಎಡಗಡೆಯಿಂದ 15ನೆಯವನಾದ ರಾಮನಿಗೆ ಬಲಗಡೆಯಿಂದ 3ನೆಯವನಾಗಿದ್ದರೆ ಆ ಸಾಲಿನಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ ಎಷ್ಟು
ಎ) 29
ಬಿ) 28
ಸಿ) 30
ಡಿ) 33

5. ಒಬ್ಬ ವ್ಯಕ್ತಿಯು 7 ನಿಮಿಷಗಳಲ್ಲಿ ಒಂದು ಹಾಳೆಯನ್ನು ಟೈಪ್ ಮಾಡುತ್ತಾನೆ. ಒಂದು ಕಂಪನಿಯು 1 ಗಂಟೆಯಿಂದ 4.30 ಗಂಟೆಯೊಳಗೆ 1290 ಹಾಳೆಗಳನ್ನು ಟೈಪ್ ಮಾಡಿಸಬೇಕಾದರೆ ಎಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು
ಎ) 54
ಬಿ) 30
ಸಿ) 21
ಡಿ) 43

6. 1111 ಸಂಖ್ಯೆಗೆ ನಿಖರವಾದ ವರ್ಗಮೂಲ ಉಂಟಾಗಲು ಕನಿಷ್ಟ ಎಷ್ಟು ಸಂಖ್ಯೆ ಕೂಡಬೇಕು
ಎ) 22
ಬಿ) 45
ಸಿ) 65
ಡಿ) ಯಾವುದು ಅಲ್ಲ

7. ತಾಯಿ, ಮಗಳ ಸರಾಸರಿ ವಯಸ್ಸು 25 ವರ್ಷವಾಗಿದ್ದು 7:3ರ ಅನುಪಾತದಲ್ಲಿದೆ, ಹಾಗಾದರೆ 9 ವರ್ಷಗಳ ನಂತರ ಅವರ ವಯಸ್ಸಿನ ಅನುಪಾತವೇನು
ಎ) 2:1
ಬಿ) 5:2
ಸಿ) 4:1
ಡಿ) 11:6

8. ಒಬ್ಬ ಅಂಗಡಿಯಾತನು ಒಂದು ವಸ್ತುವಿನ ಮೂಲ ಬೆಲೆಗಿಂತ 37% ಹೆಚ್ಚು ಬೆಲೆಗೆ ಮಾರಿದಾಗ ಒಬ್ಬ ಗ್ರಾಹಕನು ಅದನ್ನು 822 ರೂಗೆ ಕೊಂಡರೆ ಆ ವಸ್ತುವಿನ ಮೂಲಬೆಲೆ ಏನು?
ಎ) 595
ಬಿ) 635
ಸಿ) 615
ಡಿ) ಯಾವುದು ಅಲ್ಲ

9. ಕೆಳಗಿನ ಸಂಖ್ಯೆಗಳ ಮೊತ್ತದ ಸರಾಸರಿ ಏನು?
352, 324, 679, 748, 523, 425, 340, 249
ಎ) 520
ಬಿ) 455
ಸಿ) 606
ಡಿ) 428

10. ಒಂದು ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ 450 ಅಂಕ ಪಡೆದಿರಬೇಕು ಒಬ್ಬ ವಿದ್ಯಾರ್ಥಿಯು 315 ಅಂಕ ಪಡೆದಿದ್ದು 12% ದಿಂದ ಅನುತ್ತೀರ್ಣನಾಗಿರುವನು ಹಾಗಾದರೆ ಒಬ್ಬ ವಿದ್ಯಾರ್ಥಿಯು ಪಡೆಯಬಹುದಾದ ಗರಿಷ್ಟ ಅಂಕವೇನು
ಎ) 1085
ಬಿ) 1275
ಸಿ) 1125
ಡಿ) ಯಾವುದು ಅಲ್ಲ

11. ಒಂದು ಕ್ಯಾಂಟೀನಿನಲ್ಲಿ 4 ದಿನಗಳಿಗೆ 56 ಕೆ.ಜಿ.ಅಕ್ಕಿ ಖರ್ಚಾಗುತ್ತದೆ. ಹಾಗಾದರೆ ಜುಲೈ, ಆಗಸ್ಟ್ & ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಎಷ್ಟು ಕೆ.ಜಿ. ಅಕ್ಕಿ ಖರ್ಚಾಗುತ್ತದೆ.
ಎ) 1280
ಬಿ) 1286
ಸಿ) 1288
ಡಿ) 1390

12. ಒಂದು ಕೆಲಸವನ್ನು Aಯು 4 ಗಂಟೆಗಳಲ್ಲಿ ಮಾಡುತ್ತಾನೆ, B&C ಒಟ್ಟುಗೂಡಿ 3 ಗಂಟೆಯಲ್ಲಿ ಮಾಡುತ್ತಾರೆ A&C ಒಟ್ಟುಗೂಡಿ 2 ಗಂಟೆಯಲ್ಲಿ ಮಾಡುತ್ತಾರೆ ಹಾಗಾದರೆ B ಮಾತ್ರ ಎಷ್ಟು ಗಂಟೆಯಲ್ಲಿ ಮುಗಿಸುತ್ತಾನೆ?
ಎ) 10 ಗಂ
ಬಿ) 12 ಗಂ
ಸಿ) 8 ಗಂ
ಡಿ) 24 ಗಂಟೆ

13. A ಮತ್ತು B ಪಾಲುದಾರರಾಗಿ ಒಂದು ವ್ಯಾಪಾರವನ್ನು ಪ್ರಾರಂಭಿಸಿದರು A ಯು 6 ತಿಂಗಳ ಕಾಲ 2000 ರೂಗಳನ್ನು ಮತ್ತು Bಯು 8 ತಿಂಗಳ ಕಾಲ 1500 ರೂಗಳನ್ನು ಬಂಡವಾಳ ಹೂಡಿದರು. ಆ ವ್ಯಾಪಾರದಲ್ಲಿ ಒಟ್ಟು ಲಾಭ ರೂ.510 ಬಂದರೆ ಅದರಲ್ಲಿ Aಯ ಪಾಲೆಷ್ಟು?
ಎ) 250
ಬಿ) 255
ಸಿ) 275
ಡಿ) 280

14. 5 ಜನ ಗಂಡಸರು ಒಂದು ಕೆಲಸವನ್ನು ಪ್ರಾರಂಭಿಸಿ 15 ದಿನಗಳಲ್ಲಿ ಮುಗಿಸುವರು, ಆ ಕೆಲಸ ಪ್ರಾರಂಭಿಸಿದ 5 ದಿನಗಳ ನಂತರ 10 ಜನ ಹೆಂಗಸರು ಹೊಸದಾಗಿ ಸೇರಿ ನಂತರದ 5 ದಿನಗಳಲ್ಲಿ ಆ ಕೆಲಸ ಮುಗಿಸುವರು. ಬರೀ ಹೆಂಗಸರೇ ಆ ಕೆಲಸವನ್ನು ಮಾಡಿದರೆ ಆ 10 ಹೆಂಗಸರು ಸೇರಿದಂದಿನಿಂದ ಎಷ್ಟು ದಿನಗಳಲ್ಲಿ ಆ ಕೆಲಸವನ್ನು ಮುಗಿಸುವರು
ಎ) 10ದಿನ
ಬಿ) 18ದಿನ
ಸಿ) 15ದಿನ
ಡಿ) 12 ದಿನ

15. ಒಂದು ತರಗತಿಯಲ್ಲಿರುವ ಹುಡುಗರನ್ನು ಕ್ರಮವಾಗಿ ಕೂಡಿಸಿದಾಗ ರಾಮನ ಸ್ಥಾನವು ಕ್ರಮವಾಗಿ ಬಲಗಡೆಯಿಂದ 15 & ಎಡಗಡೆಯಿಂದ 13 ಆದರೆ ಆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು
ಎ) 28
ಬಿ) 24
ಸಿ) 27
ಡಿ) 29

# ಉತ್ತರಗಳು :
1. ಎ) 54 ಕಿಮೀ
2. ಡಿ) 852
3. ಡಿ) 13
4. ಬಿ) 28
5. ಡಿ) 43
6. ಡಿ) ಯಾವುದು ಅಲ್ಲ
7. ಬಿ) 5:2
8. ಡಿ) ಯಾವುದು ಅಲ್ಲ
9. ಬಿ) 455
10. ಸಿ) 1125
11. ಸಿ) 1288
12. ಬಿ) 12 ಗಂ
13. ಬಿ) 255
14. ಸಿ) 15ದಿನ
15. ಸಿ) 27

Leave a Reply

Your email address will not be published. Required fields are marked *

error: Content Copyright protected !!
ಉದ್ಯೋಗಾವಕಾಶಗಳು Current Affairs Today Current Affairs