ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -3 [ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ]
1. ಒಬ್ಬನು ಒಂದು ಸ್ಕೂಟರ್ ನ್ನು 20,000ರೂ.ಗೆ ಕೊಂಡು ರೂ.22,000 ಕ್ಕೆ ಮಾರಿದಾಗ ಅವನಿಗೆ ಸಿಗುವ ಶೇಕಡಾ ಎಷ್ಟು..?
1. 15%
2. 12%
3. 10%
4.20%
2. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200 ರೂ. ಅದನ್ನು 900ರೂ. ಗಳಿಗೆ ಕೊಂಡರೆ, ಸೋಡಿದರ ಎಷ್ಟು..?
1. 15%
2. 20%
3.25%
4.30%
3. ರೈಲೊಂದು 500ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್ಟು..?
1. 180.5 km
2. 183.5 km
3. 185.5 km
4. 187.5 km
4. ಒಂದು ವೇಳೆ AT=20, ಮತ್ತು BAT=40 ಎಂದು ಬರೆಯುವುದಾದರೆ CATನ್ನು ಹೇಗೆ ಬರೆಯಬಹುದು..?
1.30
2.40
3.60
4.70
5. ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ ಈಗ ಅವನು ಯಾವ ದಿಕ್ಕಿನಲ್ಲಿ ಮುಖ ಮಾಡಿ ನಡೆಯುತ್ತಿದ್ದಾನೆ..?
1. ಉತ್ತರ
2. ದಕ್ಷಿಣ
3. ಪೂರ್ವ
4. ಪಶ್ಚಿಮ
6. ಒಂದು ಸಂಖ್ಯೆಯ 30% ರಷ್ಟು ಸಂಖ್ಯೆಯು 12.6 ಆದರೆ ಆ ಸಂಖ್ಯೆ ಯಾವುದು..?
1. 45
2. 42
3. 46
4. 41
7. ಜನವರಿ 1,2000 ಭಾನುವಾರವಿದ್ದರೆ ಜನವರಿ 1, 2001ಯಾವ ವಾಗಿರುತ್ತದೆ..?
1. ಸೋಮವಾರ
2. ಮಂಗಳವಾರ
3. ಬುಧವಾರ
4. ಗುರುವಾರ
8. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ ಎಷ್ಟು..?
1. ರೂ. 12.50
2.ರೂ. 13.50
3. ರೂ. 14.50
4.ರೂ. 16.50
9. ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0
4. 10.8
10. ಎ ಮತ್ತು ಬಿ ಇಬ್ಬರೂ ಒಂದು ಸ್ಥಳದಿಂದ ಒಂದೇ ದಿಕ್ಕಿನತ್ತ ಪ್ರಯಾಣ ಬೆಳೆಸುತ್ತಾರೆ. ಎ ಯ ವೇಗ ಗಂಟೆಗೆ 5ಕಿಮೀ ಆದರೆ, ಬಿ ಯ ವೇಗ ಗಂಟೆಗೆ 8 ಕಿಮೀ ಇದೆ. ಇವರಿಬ್ಬರೂ ಒಂದೇ ದಿಕ್ಕಿನತ್ತ ಸಾಗಿದರೆ ಇವರಿಬ್ಬರ ನಡುವೆ ಅಂತರವು 27ಕಿಮೀ ಇರಲು ಎಷ್ಟು ಗಂಟೆ ಬೇಕು..?
1. 6 ಗಂಟೆ
2. 5 ಗಂಟೆ
3. 9 ಗಂಟೆ
4. 4 ಗಂಟೆ
11. ಒಬ್ಬ ವ್ಯಕ್ತಿಯು ಪೂರ್ವಕ್ಕೆ ಮುಖ ಮಾಡಿ ನಿಂತಿದ್ದಾನೆ. ಅವನು ಗಡಿಯಾರದ ದಿಕ್ಕಿನಂತೆ (ಪ್ರದಕ್ಷಿಣೆ) 90 ಡಿಗ್ರಿ ತಿರುಗುತ್ತಾನೆ. ಮತ್ತೇ 45 ಡಿಗ್ರಿ ಅದೇ ರೀತಿ ಪ್ರದಕ್ಷಿಣೆ ಹಾಕುತ್ತಾರೆ. ಮತ್ತೇ 90 ಡಿಗ್ರಿ ಪ್ರದಕ್ಷಿಣೆ ಹಾಕುತ್ತಾನೆ. ಹಾಗಾದರೆ ಅವನು ಈಗ ಯಾವ ದಿಕ್ಕಿನಲ್ಲಿದ್ದಾನೆ..?
1. ಪೂರ್ವ
2. ಪಶ್ಚಿಮ
3. ವಾಯುವ್ಯ
4. ಈಶಾನ್ಯ
12. ರಾಜೀವನು ಉತ್ತರಕ್ಕೆ 7ಕಿಮೀ ಹೋಗುವನ್ನು. ನಂತರ ಅವನು ಬಲಗಡೆಗೆ ತಿರುಗಿ ಮತ್ತೇ 3 ಕಿಮೀ ಹೋಗುತ್ತಾನೆ. ಮತ್ತೇ ಅವನು ಬಲಗಡೆಗೆ 7ಕಿಮೀ ಚಲಿಸುವನು. ಆರಂಭದ ಬಿಂದುವಿನಿಂದ ಅವನು ಇರುವ ದೂರ ಎಷ್ಟು..?
1. 10 ಕಿಮೀ
2. 5 ಕಿಮೀ
3. 3 ಕಿಮೀ
4. 9 ಕಿಮೀ
# ಉತ್ತರಗಳು :
1. 3. 10%
2. 3.25%
3. 4. 187.5 km
4. 3.60
5. 3. ಪೂರ್ವ
6. 2. 42
7. 2. ಮಂಗಳವಾರ
8. 2.ರೂ. 13.50
9. 3. 30.0
10. 2. 5 ಗಂಟೆ
11. 3. ವಾಯುವ್ಯ
12. 3. 3 ಕಿಮೀ
# ಇವುಗಳನ್ನೂ ಓದಿ..
# ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -1
# ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -2
# ಮಾನಸಿಕ ಸಾಮರ್ಥ್ಯ : ಸಾಮ್ಯತಾ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳು