ಮೆಟ್ರೋ ಮ್ಯಾನ್ ಆಫ್ ಇಂಡಿಯಾ ಇ. ಶ್ರೀಧರನ್
ಇ. ಶ್ರೀಧರನ್ (ಎಲಟ್ಟು ವಪ್ಪಿಲ್ ಶ್ರೀಧರನ್)ರವರನ್ನು “ಭಾರತದ ಮೆಟ್ರೋ ಮ್ಯಾನ್” ಎಂದು ಕರೆಯುತ್ತಾರೆ. ಇವರು ಜೂನ್ 12 ರಲ್ಲಿ 1932 ರಂದು ಕೇರಳದ ಪಾಲಿಕಡ್ ಜಿಲ್ಲೆಯಲ್ಲಿ ಜನಿಸಿದರು. ಇವರು ಇಂಡಿಯನ್ ಇಂಜಿನಿಯರಿಂಗ್ ಸೇವೆ ನಿವ್ರತ್ತ ಆಧಿಕಾರಿ. ಇವರು 1995ರಿಂದ 2012ರವರೆಗೆ ದೆಹಲಿ ಮೇಟ್ರೋದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಭಾರತ ದೇಶದ ಮೊದಲ ಮೆಟ್ರೋ ಎಂದೇ ಖ್ಯಾತವಾದ ಕೊಲ್ಕತ್ತಾ ಮೆಟ್ರೋದ ( ಅಕ್ಟೋಬರ್ 24, 1984) ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಇ. ಶ್ರೀಧರನ್‍ರವರು ಕೊಂಕಣ ರೈಲ್ವೆ ಅನುಷ್ಠಾನ ತರುವಲ್ಲಿ ಕೂಡ ಸಕ್ರಿಯ ಪಾತ್ರ ವಹಿಸಿದರು.
ಭಾರತದಲ್ಲಿ ಅನೇಕ ಮೇಟ್ರೋ ಯೋಜನೆಯ ರುವಾರಿಯಾದ ಇ. ಶ್ರೀಧರನ್‍ವರನ್ನು ಭಾರತದ ಮೇಟ್ರೋ ಮ್ಯಾನ್ ಆಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2001 ರಲ್ಲಿ ಪದ್ಮಶ್ರೀ, 2008 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ಅನೇಕ ಪ್ರಶಸ್ತಿಗಳು ಕೂಡ ದೊರಕಿವೆ. ಕಡಿಮೆ ಅವಧಿಯಲ್ಲಿ ಅವರು ಸಿವಿಲ್ ಇಂಜಿನಿಯರ್ ಉಪನ್ಯಾಸಕಾರಾಗಿ ಕಾರ್ಯನಿರ್ವಹಿಸಿದರು.