ಸತ್ಯ ನಾಡೆಲ್ಲಾಗೆ ಮೈಕ್ರೋಸಾಫ್ಟ್ ಚೇರ್ಮನ್ ಹುದ್ದೆ
ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪೆನಿಗೆ ಸತ್ಯ ನಾಡೆಲ್ಲಾ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಲಾಗಿದೆ. ಇವರು ಇದೇ ಕಂಪೆನಿಯ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಂಪೆನಿಯಲ್ಲಿ ಇದುವರೆಗೆ ಚೇರ್ಮನ್ ಆಗಿದ್ದ ಜಾನ್ ಥಾಮ್ಸನ್ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಹ ಸ್ಥಾಪಕರಾಗಿದ್ದ ಬಿಲ್ ಗೆಟ್ಸ್ ಅವರಿಂದ ಚೇರ್ಮನ್ ಸ್ಥಾನವನ್ನು ಥಾಮ್ಸನ್ ಪಡೆದುಕೊಂಡಿದ್ದರು. ಇನ್ನು ಮುಂದೆ ಇವರು ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಸತ್ಯ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದರು. ಸ್ಟೀವ್ ಬಲ್ವರ್ ಅವರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸಭೆ ಸಿಇಒ ಹುದ್ದೆಯ ಜತೆಗೆ ಲಿಂಕ್ಡ್ ಇನ್, ಜೆನಿಮ್ಯಾಕ್ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನೂ ಇವರು ನಿಭಾಯಿಸುತ್ತಿದ್ದರು.
ಯಾರು ಈ ಸತ್ಯ ನಾಡೆಲ್ಲಾ..?
‘ಸತ್ಯ ನಾಡೆಲ್ಲಾ’, ಎಂದು ಇಂಗ್ಲೀಷ್ ಇಂಟರ್ನೆಟ್ ತಾಣಗಳಲ್ಲಿ ಮತ್ತು ಅವರು ಕೆಲಸಮಾಡುತ್ತಿರುವ, ‘ಮೈಕ್ರೋಸಾಫ್ಟ್ ಕಂಪೆನಿ’ಯ ಸಹೋದ್ಯೋಗಿಗಳಿಗೆ, ವಿಶ್ವದಾದ್ಯಂತ ಜನಪ್ರಿಯರಾಗಿರುವ ಸತ್ಯ ನಾಡೆಲ್ಲಾ,ರವರ ಮನೆಯ ಹೆಸರು, ಸತ್ಯನಾರಾಯಣ ನಾದೆಳ್ಲ ಚೌಧರಿ, ಎಂದು.(ಜನನ: 1967) ಅವರೊಬ್ಬ ಭಾರತೀಯ ಅಮೆರಿಕನ್, ಬಿಝಿನೆಸ್ ಎಕ್ಸಿಕ್ಯುಟೀವ್, ಹಾಗೂ ಇಂಜಿನಿಯರ್, ಈಗಿನ ಅಮೆರಿಕದ ಬಹುದೊಡ್ಡ ಸಾಫ್ಟ್ವೇರ್ ಕಂಪೆನಿ, ಮೈಕ್ರೊಸಾಫ್ಟ್ ನ ಚೇರ್ಮೆನ್ ಆಗಿ ನೇಮಿಸಲ್ಪಟ್ಟಿದ್ದಾರೆ.
‘ನಾದೆಳ್ಲ ಸತ್ಯನಾರಾಯಣ ಚೌಧರಿ’, ಭಾರತದ ಹೈದರಾಬಾದ್ ನಲ್ಲಿ ವಾಸಿಸುವ ಒಂದು ತೆಲುಗು ಕಮ್ಮೆ ಪರಿವಾರದಲ್ಲಿ ಜನಿಸಿದರು. ಇವರ ಪರಿವಾರದವರು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು. ತಂದೆ,ಬಿ.ಎನ್.ಯುಗಂಧರ್,1962 ರ ಬ್ಯಾಚಿನ ‘ಐ.ಎ.ಎಸ್.ಆಫೀಸರ್’ ಆಗಿದ್ದರು. ತಾಯಿ, ಪ್ರಭಾವತಿ. ತಂದೆಯವರು, ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಾಗಿದ್ದರು.
ಗ್ರಾಮೀಣ ವಿಕಾಸ ಯೋಜನೆಗೆ ಕಾರ್ಯದರ್ಶಿ, ‘ಲಾಲ್ಬಹದ್ದುರ್ ಶಾಸ್ತ್ರಿ ನ್ಯಾಷನಲ್ ಅಕ್ಯಾಡೆಮಿ ಆಫ್ ಅಡ್ಮಿಸ್ಟ್ರೇಶನ್’ ಗೆ ನಿರ್ದೇಶಕರು. ಅವರು ಪ್ರಧಾನಿ, ಮನಮೋಹನ್ ಸಿಂಗ್ ರ ಕಾರ್ಯಕಾಲದಲ್ಲಿ (2004-2009) ರ ಸಮಯದಲ್ಲಿ ‘ಪ್ಲಾನಿಂಗ್ ಕಮೀಶನ್ ನ ಸದಸ್ಯ’ರಾಗಿದ್ದರು.
ನಾದೆಳ್ಗ, ಹೈದರಾಬಾದ್ ನ ಬೇಗಂ ಪೇಟೆಯ ಸಾರ್ವಜನಿಕ ಶಾಲೆಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲ್ ಶಿಕ್ಷಣಗಳಿಸಿ, 1987 ರಲ್ಲಿ ಕರ್ನಾಟಕದ ಮಣಿಪಾಲ್ ನಲ್ಲಿ ‘ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಯಲ್ಲಿ ‘ಎಲೆಕ್ಟ್ರಾನಿಕ್ಸ್ ಹಾಗೂ ಟೆಲಿಕಮ್ಯೂನಿ ಕೇಶನ್ ವಿಷಯ’ದಲ್ಲಿ ಪದವಿಗಳಿಸಿದರು.
ಮುಂದೆ, ಉನ್ನತ ಶಿಕ್ಷಣಕ್ಕಾಗಿ 1990 ರಲ್ಲಿ ಅಮೇರಿಕಾದ ‘ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್-ಮಿಲ್ವಾಕಿ’, ಯಲ್ಲಿ ಶಿಕ್ಷಣ ಮುಂದುವರೆಸಿ, ಚಿಕಾಗೋನ ‘ಬೂತ್ ಸ್ಕೂಲ್ ಆಫ್ ಬಿಜಿನೆಸ್’, ನಿಂದ ‘ಎಮ್.ಬಿ.ಎ. ಪದವಿ’ ಗಳಿಸಿದರು. ಬಾಲ್ಯದಿಂದಲೂ ನಾದೆಳ್ಲ,ಏನಾದರು ಹೊಸದನ್ನು ಕಂಡು ಹಿಡಿಯುವ ತವಕವನ್ನು ವ್ಯಕ್ತ ಪಡಿಸುತ್ತಿದ್ದರು.
ಅದಕ್ಕಾಗಿ, ‘ಕಂಪ್ಯೂಟರ್ ಸೈನ್ಸ್’ ನಲ್ಲಿ ಶಿಕ್ಷಣ ಪಡೆಯಲು ಅಪೇಕ್ಷಿಸಿದ್ದರು. ಅವರು, ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಓದುವ ಸಮಯದಲ್ಲಿ ಆ ವಿಶಯಕ್ಕೆ ಒತ್ತು ಕೊಡಲಿಲ್ಲ. ಅದಕ್ಕಾಗಿ ನಾದೆಳ್ಲ,’ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಕೋರ್ಸ್’ ನ್ನು ಆರಿಸಿಕೊಂಡರು.ಇದರ ನಂತರ, ಅವರ ಆಸೆಗಳನ್ನು ಈಡೇರಿಸಿಕೊಳ್ಳಲು ಸಹಾಯವಾಯಿತು.
# ವೃತ್ತಿ ಜೀವನ ಆರಂಭ :
ಮೊದಲು ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ, ನಾದೆಳ್ಲರವರು, ‘ಸನ್ ಮೈಕ್ರೋ ಸಿಸ್ಟಮ್’ ಎಂಬ ಸಂಸ್ಥೆಯಲ್ಲಿ ಸೇರಿಕೊಂಡು, ಟೆಕ್ನೋಲೋಜಿ ಸಿಬ್ಬಂದಿಯ ಒಬ್ಬ ಸದಸ್ಯರಾಗಿ ಕೆಲಸ ಆರಂಭಿಸಿದರು. ಮುಂದೆ, 1992 ರಲ್ಲಿ ‘ಮೈಕ್ರೋ ಸಾಫ್ಟ್ ಕಂಪೆನಿ’ಗೆ ಸೇರಿದರು. ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಅವರು ಮಾಡಿದ ಕೆಲಸಗಳು ಅಪಾರ ಕೀರ್ತಿ ಮತ್ತು ದೊಡ್ಡ ಪದವಿಗಳನ್ನು ತಂದುಕೊಟ್ಟವು. ‘ದೊಡ್ಡ ದೊಡ್ಡ ಪ್ರಾಜಕ್ಟ್’ ಗಳನ್ನು ತೆಗೆದುಕೊಂಡು ಅವನ್ನು ಬಹಳ ಯಶಸ್ವಿಯಾಗಿ ಮುಂದೆತಂದರು.
# ವೈಯಕ್ತಿಕ ಜೀವನ :
1992 ರಲ್ಲಿ ಸತ್ಯರವರು, ಬ್ರಾಹ್ಮಣಜಾತಿಯ ತಮ್ಮ ಕಾಲೇಜಿನ ಸಹಪಾಠಿ,’ಅನುಪಮ’ರನ್ನು ವಿವಾಹವಾದರು. ಅನುಪಮರ ತಂದೆ, ಕೆ.ಆರ್.ವೇಣುಗೋಪಾಲ್,(39)ನಾದೆಳ್ಲ ರ ತಂದೆಯವರ ಜೊತೆ ಐ.ಎ.ಎಸ್. ಓದುವ ಸಮಯದಲ್ಲಿ ಸಹಪಾಠಿಯಾಗಿದ್ದರು.
ಎನ್.ಟಿ.ಆರ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೇಣುಗೋಪಾಲರು,’ಬಡವರಿಗೆ 2 ರೂ/ಕಿಜಿ ಅಕ್ಕಿ ವಿತರಣೆಯ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾದೆಳ್ಲ-ಅನುಪಮ ದಂಪತಿಗಳಿಗೆ 3 ಮಕ್ಕಳು. ಒಬ್ಬ ಮಗ, ಮತ್ತು ಇಬ್ಬರು ಹೆಣ್ಣು ಮಕ್ಕಳು. ನಾದೆಲ್ಗ ತಮ್ಮ ಪರಿವಾರದ ಜೊತೆ ವಾಶಿಂಗ್ಟನ್ ರಾಜ್ಯದ, ‘ಬೆಲ್ಲೆವ್ಯು’ ನಲ್ಲಿ ವಾಸಿಸುತ್ತಿದ್ದಾರೆ.
ಅಮೇರಿಕನ್ ಹಾಗು ಇಂಡಿಯನ್ ಕವನಗಳನ್ನು ಓದುವಲ್ಲಿ ತೀವ್ರ ಆಸಕ್ತರು. ಕ್ರಿಕೆಟ್ ಅವರ ಪರಮ ಪ್ರಿಯ ಕ್ರೀಡೆಗಳಲ್ಲೊಂದು. ಅವರ ವಿದ್ಯಾರ್ಥಿಜೀವನದಲ್ಲಿ ಸ್ಕೂಲ್ ನ ಒಂದು ಕ್ರಿಕೆಟ್ ತಂಡದ ಜೊತೆ ನಿಕಟ ಸಂಪರ್ಕ ಹೊಂದಿದ್ದರು.
ಕ್ರಿಕೆಟ್ ಆಟ ಅವರಿಗೆ, ಒಂದು ತಂಡದ ನಾಯಕತ್ವವನ್ನು ಹೇಗೆ ನಿಭಾಯಿಸುವುದು ಎನ್ನುವ ಮತ್ತು ಹಲವಾರು ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟು ಉಪಕರಿಸಿತು. ಮುಂದೆ ಅವರ ವೃತ್ತಿಜೀವನದಲ್ಲಿ ಬಹುದೊಡ್ಡ ಸಾಧನೆಗಳನ್ನು ಮಾಡಲು ಸ್ಪೂರ್ತಿಯಾಗಿ ಪರಿಣಮಿಸಿತು.