Current AffairsLatest Updates

Miss World 2025 : ಥೈಲ್ಯಾಂಡ್‌ನ ಓಪ್ಲಾ ಸುಚಾತಾ ಚುಂಗಸಿರಿಗೆ 2025ರ ವಿಶ್ವ ಸುಂದರಿ ಕಿರೀಟ

Share With Friends

Miss World 2025: Thailand’s Suchata wins crown, India’s Nandini Gupta shines in Top 20

ಬಹು ನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆ ಶನಿವಾರ ಸಂಜೆ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಥೈಲ್ಯಾಂಡ್‌ನ ಓಪಲ್ ಸುಚಾತಾ ಚುವಾಂಗ್ಸ್ರಿ (Opal Suchata Chuangsri) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಅದ್ಧೂರಿಯಾಗಿ ನಡೆದ ಸಮಾರಂಭದಲ್ಲಿ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಟೋ ಅವರು ಓಪ್ಲಾ ಸುಚಾತಾ ಚುಂಗಸಿರಿ ಅವರಿಗೆ ಕಿರೀಟ ಧಾರಣೆ ಮಾಡಿದರು.

ಅಂತರರಾಷ್ಟ್ರೀಯ ಸಂಬಂಧಗಳ ವಿದ್ಯಾರ್ಥಿನಿ ಮತ್ತು ವೃತ್ತಿಪರ ಮಾಡೆಲ್ ಆಗಿರುವ ಸುಚತಾ, ತೀವ್ರ ಪೈಪೋಟಿಯ ಅಂತಿಮ ಸುತ್ತಿನ ನಂತರ ವಿಜೇತರಾದರು. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ ಅಪ್ ಆದರೆ, ಪೋಲೆಂಡ್‌ನ ಮಜಾ ಕ್ಲಾಜ್ಡಾ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು.

https://twitter.com/i/status/1928845960701935835

ವಿಜೇತರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂಪಾಯಿಯ ಬೆಲೆ ಬಾಳುವ ವಜ್ರದ ಕಿರೀಟವನ್ನು ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಸುಂದರಿ ಮೊದಲ ರನ್ನರ್ ಅಪ್ ಆದರು. ಮೆಕ್ಸಿಕೋ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಓಪಲ್ ಥೈಲ್ಯಾಂಡ್ ಅನ್ನು ಪ್ರತಿನಿಧಿಸಿದರು, ಮೂರನೇ ರನ್ನರ್ ಅಪ್ ಆದರು.

ಅಗ್ರ 8 ರಲ್ಲಿ ಸ್ಥಾನ ಪಡೆಯುವಲ್ಲಿ ಭಾರತದ ನಂದಿನಿ ವಿಫಲ :
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅಂತಿಮ (ಟ್ಯಾಲೆಂಟ್ ಕಾಂಪಿಟಿಷನ್) ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದರು, ಇದರಲ್ಲಿ ಭಾರತದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ (Nandini Gupta) ಒಬ್ಬರಾಗಿದ್ದರು. ಏಪ್ರಿಲ್ 2023 ರಲ್ಲಿ, 19ನೇ ವಯಸ್ಸಿನಲ್ಲಿ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್’ ಕಿರೀಟವನ್ನು ನಂದಿನಿ ಗೆದ್ದುಕೊಂಡಿದ್ದರು. ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸುವ ನಿರೀಕ್ಷೆ ಹುಟ್ಟಿಸಿದ್ದ ನಂದಿನಿ ರೇಸ್‌ನಿಂದ ಹೊರಬಿದ್ದು ಅಗ್ರ 8 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುವ ಮೂಲಕ ಭಾರತದ ಕನಸು ನುಚ್ಚುನೂರಾಗಿದೆ.

ವಿಶ್ವ ಸುಂದರಿಯ ಆಯ್ಕೆ ಪ್ರಕ್ರಿಯೆ ಹೀಗಿತ್ತು..
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಅಮೆರಿಕ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಓಸಿನಿಯಾ ಎಂಬ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಒಂದು ವಿಭಾಗದಿಂದ 10 ಜನರನ್ನು ಸೆಮಿಫೈನಲ್ಸ್‌ ಗೆ ಆಯ್ಕೆ ಮಾಡಲಾಗುತ್ತದೆ. ನಂತರ ಒಂದು ವಿಭಾಗದಿಂದ 4 ಜನರಂತೆ 16 ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆಮಾಡಲಾಗಿತ್ತು. ಅದರಲ್ಲಿ ಟಾಪ್ 8 ಹಾಗೂ ಫೈನಲ್ ನಡೆಯುತ್ತದೆ. ವಿಶ್ವ ಸುಂದರಿಯ ಜೊತೆಗೆ ಫೈನಲ್ ಪ್ರವೇಶಿಸಿದ ಮೂವರಿಗೆ ರನ್ನರ್ ಅಪ್ ಸ್ಥಾನ ಲಭಿಸಿದೆ.

ಗ್ರಾಂಡ್ ಫಿನಾಲೆಯ ನಿರೂಪಣೆಯನ್ನು 2016ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ನಡೆಸಿಕೊಟ್ಟರು. ಅವರೊಂದಿಗೆ ಭಾರತದ ಸಚಿನ್ ಕುಂಬಾರ್ ಇದ್ದರು. ಕಾರ್ಯಕ್ರಮದಲ್ಲಿ 2017ರಲ್ಲಿ ವಿಶ್ವ ಸುಂದರಿಯಾಗಿದ್ದ ಮಾನುಶಿ ಚಿಲ್ಲರ್, ಬಾಲವುಡ್ ನಟ ಸೋನು ಸೂದ್ ಸೇರಿದಂತೆ ಹಲವು ನಟ – ನಟಿಯರು ಭಾಗವಹಿಸಿದ್ದರು.

ಜಾಗತಿಕ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯು ಮಹಿಳೆಯರಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ವೈವಿಧ್ಯತೆ, ನಾಯಕತ್ವ ಗುಣ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ನೆರವಾಗುತ್ತದೆ. 1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿತ್ತು.

ಇತಿಹಾಸ ಸೃಷ್ಟಿಸಿದ ಓಪಲ್ ಸುಚಾತಾ
ಥೈಲ್ಯಾಂಡ್ ಸುಂದರಿ ಓಪಲ್ ಸುಚಾತಾ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಓಪಲ್ ಸುಚಾತಾ ಅವರಿಗೆ 21 ವರ್ಷ. ಈ ಯುವ ಸುಂದರಿ ಹೊಸ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದ್ದದ್ದಾರೆ.

ಮೂರು ಸಲ ಮಿಸ್ ವರ್ಲ್ಡ್‌ಗೆ ಆತಿಥ್ಯ ವಹಿಸಿದ ಭಾರತ
ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತ ಮೂರು ಸಲ ಆತಿಥ್ಯ ವಹಿಸಿದೆ. 1951ರಲ್ಲಿ ಲಂಡನ್‌ನಲ್ಲಿ ಸ್ಪರ್ಧೆ ಶುರುವಾದಾಗ 1996ರಲ್ಲಿ 46ನೇ ಸ್ಪರ್ಧೆ ನಮ್ಮ ದೇಶದ ಬೆಂಗಳೂರಿನಲ್ಲಿ ನಡೆಯಿತು. ಆಮೇಲೆ 71ನೇ ಸ್ಪರ್ಧೆ ಮುಂಬೈನಲ್ಲಿ, 72ನೇ ಸ್ಪರ್ಧೆ ಈಗ ಹೈದರಾಬಾದ್‌ನಲ್ಲಿ ನಡೀತಿದೆ. ಆದ್ರೆ ಇಲ್ಲಿಯವರೆಗೆ ಮೂರು ಸಲ ಆತಿಥ್ಯ ವಹಿಸಿದ ನಮ್ಮ ದೇಶ ದಾಖಲೆಯ 6 ಸಲ ಮಿಸ್ ವರ್ಲ್ಡ್ ಕಿರೀಟ ಗೆದ್ದಿದೆ.

ಮಿಸ್ ವರ್ಲ್ಡ್ ಕಪ್ ಗೆದ್ದ ಭಾರತೀಯ ತಾರೆಯರು ಯಾರು?
ಭಾರತ ಇಲ್ಲಿಯವರೆಗೆ ಆರು ಸಲ ವಿಶ್ವ ಸುಂದರಿ ಕಿರೀಟ ಗೆದ್ದಿದೆ. 1966ರಲ್ಲಿ ನಮ್ಮ ದೇಶದಿಂದ ಮಿಸ್ ವರ್ಲ್ಡ್ ಕಿರೀಟವನ್ನ ರೀಟಾ ಫಾರಿಯಾ ಮೊದಲ ಸಲ ಗೆದ್ದರು. ಆಮೇಲೆ 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖಿ, 2000 ರಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಛಿಲ್ಲರ್ ನಮ್ಮ ದೇಶದ ಪರವಾಗಿ ಮಿಸ್ ವರ್ಲ್ಡ್ ಕಿರೀಟ ಗೆದ್ದು ಭಾರತದ ಹೆಸರು ಹೆಚ್ಚಿಸಿದ್ರು. ನಮ್ಮ ದೇಶದ ಹಾಗೆ ವೆನೆಜುವೆಲಾ ಕೂಡ ಆರು ಸಲ ಈ ಕಿರೀಟ ಗೆದ್ದಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸುಂದರಿಯರು ತಮ್ಮ ದೇಶವನ್ನ ಪ್ರತಿನಿಧಿಸುತ್ತಾರೆ. ಹೀಗೆ ನಮ್ಮ ದೇಶ ಆರು ಸಲ, ವೆನೆಜುವೆಲಾ ಆರು ಸಲ ವಿಶ್ವ ಸುಂದರಿ ಕಿರೀಟ ಗೆದ್ದಿವೆ. ಆದ್ರೆ ಈ ಸಲ ನಮ್ಮ ದೇಶದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂದಿನಿ ಗುಪ್ತಾ.. 2023ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದಿದ್ರು. ಮಿಸ್ ಇಂಡಿಯಾ 2025ರಲ್ಲಿ ಮಾತ್ರ ಟಾಪ್ 20ರವರೆಗೆ ಬಂದ್ರು. ಇವರು ರಾಜಸ್ಥಾನದ ಕೋಟಾದ 21 ವರ್ಷದ ಯುವತಿ. ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಮಾಡಿದ್ದಾರೆ. ಈ ಸಲ ನಂದಿನಿ ಗುಪ್ತಾ ಈ ಸ್ಪರ್ಧೆಯಲ್ಲಿ ಗೆದ್ದಿದ್ರೆ ವಿಶ್ವ ದಾಖಲೆ ಆಗುತ್ತಿತ್ತು. ಆದ್ರೆ ಅವರು ಸೋತಿದ್ದರಿಂದ ಭಾರತದ ಆಸೆ ಈಡೇರಲಿಲ್ಲ.

error: Content Copyright protected !!