Indian ConstitutionMultiple Choice Questions Series

ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 5

Share With Friends

1. ಭಾರತದ ಸಂಸತ್ತಿನ ಮೇಲ್ಮನೆಯನ್ನು ಏನೆಂದು ಕರೆಯುತ್ತಾರೆ..?
ಎ. ಸಂಸತ್ ಸದನ
ಬಿ. ರಾಷ್ಟ್ರಪತಿ ಭವನ
ಸಿ. ಲೋಕಸಭೆ
ಡಿ. ರಾಜ್ಯಸಭೆ

2. ಡಾ. ಬಿ. ಆರ್. ಅಂಬೇಡ್ಕರ್‍ರವರ ಪ್ರಕಾರ ಯಾವ ಮೂಲಭೂತ ಹಕ್ಕು ಸಂವಿಧಾನದ ಹೃದಯವಿದ್ದಂತೆ ಆಗಿದೆ..?
ಎ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಬಿ. ಸಮಾನತೆಯ ಹಕ್ಕು
ಸಿ. ಸ್ವಾತಂತ್ರ್ಯದ ಹಕ್ಕು
ಡಿ. ಸಂವಿಧಾನಿಕ ಪರಿಹಾರಗಳ ಹಕ್ಕು

3. ಈ ಕೆಳಗಿನ ಯಾವುದರ ಸ್ಥಾಪನೆಯ ಕುರಿತು ಸಂವಿಧಾನದಲ್ಲಿ ಉಲ್ಲೇಖಗೊಂಡಿಲ್ಲ..?
ಎ. ಹಣಕಾಸು ಆಯೋಗ
ಬಿ. ಚುನಾವಣಾ ಆಯೋಗ
ಸಿ. ಯೋಜನಾ ಆಯೋಗ
ಡಿ. ಕೇಂದ್ರ ಲೋಕಸೇವಾ ಆಯೋಗ

4. ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರನ್ನು ಯಾಋಉ ಚುನಾಯಿಸುತ್ತಾರೆ..?
ಎ. ಲೋಕಸಭಾ ಸದಸ್ಯರು
ಬಿ. ಸಂಸತ್ತಿನ ಉಭಯ ಸದನಗಳು ಚುನಾಯಿಸುತ್ತವೆ.
ಸಿ. ಲೋಕಸಭಾಧ್ಯಕ್ಷರು ನೇಮಕ ಮಾಡುತ್ತಾರೆ.
ಡಿ. ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

5. ‘ ಆರ್ಥಿಕ ನ್ಯಾಯ’ ವು ಭಾರತದ ಸಂವಿಧಾನದ ಎಲ್ಲಿ ಉಲ್ಲೇಖಗೊಂಡಿದೆ..?
ಎ. ಪೀಠಿಕೆ ಮತ್ತು ಮೂಲಭೂತ ಹಕ್ಕುಗಳು
ಬಿ. ಪೀಠಿಕೆ ಮತ್ತು ನಿರ್ದೇಶಾತ್ಮಕ ಸೂತ್ರಗಳು
ಸಿ. ಮೂಲಭೂತ ಹಕ್ಕುಗಳು
ಡಿ. ಮೂಲಭೂತ ಹಕ್ಕುಗಳು ಮತ್ತು ನಿರ್ದೆಶಾತ್ಮಕ ಸೂತ್ರಗಳು

6. ಭಾರತ ಸಂವಿಧಾನದ ಯಾವ ವಿಧಿಯನ್ವಯ ಪ್ರತಿಯೊಂದು ರಾಜ್ಯದಲ್ಲೂ ಒಬ್ಬ ರಾಜ್ಯಪಾಲನಿರಬೇಕು..?
ಎ. 273 ನೇ ವಿಧಿ
ಬಿ. 226 ನೇ ವಿಧಿ
ಸಿ. 173 ನೇ ವಿಧಿ
ಡಿ. 153 ನೇ ವಿಧಿ

7. ಮಂತ್ರಿಮಂಡಲದ ಸೃಷ್ಟಿಕರ್ತನೆಂದು ಯಾರನ್ನು ಪರಿಗಣಿಸಬಹುದು..?
ಎ. ರಾಷ್ಟ್ರಪತಿಗಳು
ಬಿ. ಪ್ರಧಾನಮಂತ್ರಿಗಳು
ಸಿ. ಆಡಳಿತ ಪಕ್ಷದ ಅಧ್ಯಕ್ಷರು
ಡಿ. ಇವರಾರೂ ಅಲ್ಲ

8. ಸಂವಿಧಾನದ ಪ್ರಕಾರ ಭಾರತದ ಅಧಿಕೃತ ಭಾಷೆ ಯಾವುದು..?
ಎ. ಹಿಂದಿ
ಬಿ. ಸಂಸ್ಕøತ
ಸಿ. ಇಂಗ್ಲಿಷ್
ಡಿ. ಇವು ಯಾವುದೂ ಅಲ್ಲ

9. ಸಂವಿಧಾನದ ಯಾವ ಅನುಸೂಚಿಯು ಸಂವಿಧಾನದಿಂದ ಗುರುತಿಸಲ್ಪಟ್ಟ ಭಾಷೆಗಳ ಪಟ್ಟಿಯನ್ನು ಒಳಗೊಂಡಿದೆ..?
ಎ. 8 ನೇ ಅನುಸೂಚಿ
ಬಿ. 6 ನೇ ಅನುಸುಚಿ
ಸಿ. 7 ನೇ ಅನುಸೂಚಿ
ಡಿ. 9 ನೇ ಅನುಸೂಚಿ

10. ಯಾವಾಗ ನಡೆದ ಚುನಾವಣೆಯಲ್ಲಿ ಮೊದಲ ಬಾಋಇಗೆ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಬಳಸಲಾಯಿತು..?
ಎ. 1996
ಬಿ. 1998
ಸಿ. 1999
ಡಿ. 1997

11. ಭಾರತದ ಸಂಸತ್ತು..
ಎ. ಪ್ರತ್ಯಕ್ಷವಾಗಿ ಚುನಾಯಿತರಾದ ಸದಸ್ಯರನ್ನು ಮಾತ್ರ ಒಳಗೊಂಡಿದೆ.
ಬಿ. ಪ್ರತ್ಯಕ್ಷವಾಗಿ ಮತ್ತು ನಾಂನಿರ್ದೇಶನಗೊಂಡ ಸದಸ್ಯರನ್ನು ಮಾತ್ರ ಒಳಗೊಂಡಿದೆ.
ಸಿ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಚುನಾಯಿತರಾದ ಸದಸ್ಯರನ್ನು ಒಳಗೊಂಡಿದೆ.
ಡಿ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಚುನಾಯಿತರಾದ ಹಾಗೂ ನಾಮನಿರ್ದೆಶನಗೊಂಡ ಸದಸ್ಯರನ್ನು ಒಳಗೊಂಡಿದೆ.

12. ಭಾರತದ ಸಂವಿದಾನದ 360 ನೇ ವಿಧಿಯು ಯಾವ ವಿಷಯಕ್ಕೆ ಸಂಬಂಧಿಸಿದೆ..?
ಎ. ರಾಷ್ಟ್ರೀಯ ತುರ್ತುಪರಿಸ್ಥಿತಿ
ಬಿ. ರಾಜ್ಯವೊಂದರಲ್ಲಿ ತುರ್ತುಪರಿಸ್ಥಿತಿ
ಸಿ. ಹಣಕಾಸಿನ ತುರ್ತುಪರಿಸ್ಥಿತಿ
ಡಿ. ಸಂಸತ್ ಚುನಾವಣೆ ನಡೆಸುವ ಕುರಿತು

13. ಪಂಚಾಯತ್‍ರಾಜ್ ಮತ್ತು ಮುನಿಸಿಪಾಲಿಟಿಗೆ ಸಂಬಂಧಿಸಿದಂತೆ 73 ಮತ್ತು 74 ನೇ ಸಂವಿದಾನದ ತಿದ್ದುಪಡಿ ಕಾನೂನು ರೂಪಿಸಿದ್ದಾಗ ಭಾರತದ ಪ್ರಧಾನಮಂತ್ರಿ ಯಾರಾಗಿದ್ದರು..?
ಎ. ರಾಜೀವ್‍ಗಾಂಧಿ
ಬಿ. ಇಂದಿರಾಗಾಂಧಿ
ಸಿ. ಪಿ. ವಿ. ನರಸಿಂಹರಾವ್
ಡಿ. ವಿ. ಪಿ. ಸಿಂಗ್

14. ಸಂವಿಧಾನದ ಯಾವ ವಿಧಿಯು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ..?
ಎ. 20 ನೇ ವಿಧಿ
ಬಿ, 19 ನೇ ವಿಧಿ
ಸಿ. 22 ನೇ ವಿಧಿ
ಡಿ. 21 ನೇ ವಿಧಿ

15. ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದಾಗ, ಯಾರ ಶಿಪಾರಸ್ಸು ಅತ್ಯವಶ್ಯಕವಾಗಿ ಬೇಕು..?
ಎ. ಲೋಕಸಭಾಧ್ಯಕ್ಷರು
ಬಿ. ರಾಷ್ಟ್ರಪತಿಗಳು
ಸಿ. ಕೇಂದ್ರ ಹಣಕಾಸು ಸಚಿವರು
ಡಿ. ಕೇಂದ್ರ ಕಾನೂನು ಸಚಿವರು

16. ಭಾರತ ಸಂವಿಧಾನದ ಪೀಠಿಕೆಯು ಒಳಗೊಂಡಿರುವ ‘ ಭಾರತದ ಪ್ರಜೆಗಳಾದ ನಾವು’ ಎಂಬ ಸಾಲಿಗೆ ತಳಹದಿ ಹಾಕಿರುವ ಸಂವಿಧಾನ ಯಾವುದು..?
ಎ. ಫ್ರೆಂಚ್ ಸಂವಿಧಾನ
ಬಿ. ಐರಿಶ್ ಸಂವಿಧಾನ
ಸಿ. ಬ್ರಿಟಿಷ್ ಸಂವಿಧಾನ
ಡಿ. ಅಮೇರಿಕಾದ ಸಂವಿಧಾನ

17. ಹಣಕಾಸು ಆಯೋಗವು ಅದರ ಅಧಿಕಾರಗಳನ್ನು ಯಾರಿಂದ ಪಡೆದಿದೆ..?
ಎ. ಸಂವಿಧಾನ
ಬಿ. ಸಂಸತ್ತು
ಸಿ. ಸುಪ್ರೀಂಕೋರ್ಟ್
ಡಿ. ರಾಷ್ಟ್ರಪತಿಗಳು

18. ಅವಧಿಗೆ ಮುನ್ನ ಲೋಕಸಭೆಯ ವಿಸರ್ಜನೆಯ ಅಧಿಕಾರವನ್ನು ಭಾರತದ ಸಂವಿಧಾನವು ಯಾರಿಗೆ ನೀಡಿದೆ..?
ಎ. ಪ್ರಧಾನಮಂತ್ರಿಗಳು
ಬಿ. ರಾಷ್ಟ್ರಪತಿಗಳು
ಸಿ. ಮುಖ್ಯ ಚುನಾವಣಾಧಿಕಾರಿಗಳು
ಡಿ. ಪ್ರಧಾನಮಂತ್ರಿಯವರ ಸಲಹೆ ಮೇರೆಗೆ ರಾಷ್ಟ್ರಪತಿಗಳು

19. ಈ ಕೆಳಕಂಡವರಲ್ಲಿ ಯಾರು ಭಾರತದ ರಾಷ್ಟ್ರಪತಿಯವರ ಚುನಾವಣೆಯಲ್ಲಿ ಮತದಾರರಲ್ಲ..?
ಎ. ರಾಜ್ಯಸಭೆಯ ಚುನಾಯಿತ ಸದಸ್ಯರು
ಬಿ. ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು
ಸಿ. ಲೋಕಸಭೆಯ ಸದಸ್ಯರು
ಡಿ. ರಾಜ್ಯ ವಿಧಾನಪರಿಷತ್ತುಗಳ ಚುನಾಯಿತ ಸದಸ್ಯರು

20. ಲೋಕಸಭಾಧ್ಯಕ್ಷರನ್ನು ಯಾರು ಅಧಿಕಾರದಿಂದ ಕಿತ್ತು ಹಾಕಬಹುದು..?
ಎ. ರಾಷ್ಟ್ರಪತಿಗಳು
ಬಿ. ಲೋಕಸಭೆಯ ಬಹುಸಂಖ್ಯಾತ ಸದಸ್ಯರು
ಸಿ. ಸಂಸತ್ತಿನ ಉಭಯ ಸದಸನಗಳ ಸದಸ್ಯರು
ಡಿ. ಪ್ರಧಾನಮಂತ್ರಿಗಳು

# ಉತ್ತರಗಳು :
1. ಡಿ. ರಾಜ್ಯಸಭೆ
2. ಡಿ. ಸಂವಿಧಾನಿಕ ಪರಿಹಾರಗಳ ಹಕ್ಕು
3. ಸಿ. ಯೋಜನಾ ಆಯೋಗ
4. ಸಿ. ಲೋಕಸಭಾಧ್ಯಕ್ಷರು ನೇಮಕ ಮಾಡುತ್ತಾರೆ.
5. ಬಿ. ಪೀಠಿಕೆ ಮತ್ತು ನಿರ್ದೇಶಾತ್ಮಕ ಸೂತ್ರಗಳು
6. ಡಿ. 153 ನೇ ವಿಧಿ
7. ಬಿ. ಪ್ರಧಾನಮಂತ್ರಿಗಳು
8. ಎ. ಹಿಂದಿ
9. ಎ. 8 ನೇ ಅನುಸೂಚಿ
10. ಎ. 1996

11. ಡಿ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಚುನಾಯಿತರಾದ ಹಾಗೂ ನಾಮನಿರ್ದೆಶನಗೊಂಡ ಸದಸ್ಯರನ್ನು ಒಳಗೊಂಡಿದೆ.
12. ಸಿ. ಹಣಕಾಸಿನ ತುರ್ತುಪರಿಸ್ಥಿತಿ
13. ಸಿ. ಪಿ. ವಿ. ನರಸಿಂಹರಾವ್
14. ಬಿ, 19 ನೇ ವಿಧಿ
15. ಬಿ. ರಾಷ್ಟ್ರಪತಿಗಳು
16. ಡಿ. ಅಮೇರಿಕಾದ ಸಂವಿಧಾನ
17. ಎ. ಸಂವಿಧಾನ
18. ಡಿ. ಪ್ರಧಾನಮಂತ್ರಿಯವರ ಸಲಹೆ ಮೇರೆಗೆ ರಾಷ್ಟ್ರಪತಿಗಳು
19. ಡಿ. ರಾಜ್ಯ ವಿಧಾನಪರಿಷತ್ತುಗಳ ಚುನಾಯಿತ ಸದಸ್ಯರು
20. ಬಿ. ಲೋಕಸಭೆಯ ಬಹುಸಂಖ್ಯಾತ ಸದಸ್ಯರು

# ಹಿಂದಿನ ಸಂಚಿಕೆಗಳನ್ನೂ ಓದಿ..
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2 
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4

# ಇವುಗಳನ್ನೂ ಓದಿ…
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

error: Content Copyright protected !!