Impotent Days

ರಾಷ್ಟ್ರೀಯ ಶಿಕ್ಷಣ ದಿನ – National Education Day

Share With Friends

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್-ಹುಸೇನಿ ಆಜಾದ್ (ಮೌಲಾನಾ ಅಬುಲ್ ಕಲಾಂ ಆಜಾದ್ ಎಂದು ಕರೆಯಲ್ಪಡುವ) ಅವರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ವಾರ್ಷಿಕವಾಗಿ ನವೆಂಬರ್ 11 ರಂದು ಆಚರಿಸಲಾಗುತ್ತದೆ.

ಶಿಕ್ಷಣ ಮತ್ತು ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ದಿನವನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 11, 2008 ರಂದು, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (ಈಗ ಶಿಕ್ಷಣ ಸಚಿವಾಲಯ) ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಘೋಷಿಸಿತು.

ಭಾರತದ ಒಬ್ಬ ಸ್ಕಾಲರ್ ಆಗಿಯೂ ಮತ್ತು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು ಮೌಲಾನಾ ಅಜಾದ್. ಅವರು ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೊಡುಗೆ ನೀಡಿದ್ದರು. 1922 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಗೌರವಿಸಲಾಯಿತು. ಭಾರತದಲ್ಲಿ ಐಐಟಿಗಳ ಸ್ಥಾಪನೆ ಮತ್ತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗಗಳ ಅಡಿಪಾಯಕ್ಕೂ ಇವರ ಕೊಡುಗೆ ಅಪಾರ.

ನವೆಂಬರ್ 11, 1888 ರಲ್ಲಿ ಮೌಲಾನಾ ಅಬ್ದುಲ್‌ ಕಲಾಂ ಅಜಾದ್ ರವರು ಜನಿಸಿದರು. ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ ‘ಅಜಾದ್ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ದಿ. ಶಿಕ್ಷಣ ಎಂದರೆ ಕೇವಲ ಓದುವುದು ಅಲ್ಲ. ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು ಎಂಬುದನ್ನು ಹೇಳಿಕೊಟ್ಟವರು ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು.

ಮೌಲಾನಾ ಆಜಾದ್ ವಿದ್ವಾಂಸರು ಮತ್ತು ಕವಿಗಳಾಗಿ ಅನೇಕ ಭಾಷೆಗಳಲ್ಲಿ ಪರಿಣತರಾಗಿದ್ದರು.14 ನೇ ವಯಸ್ಸಿನವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಅವರ ಮಹತ್ತರವಾದ ಕನಸಾಗಿತ್ತು, ವೃತ್ತಿ ತರಬೇತಿ ಮತ್ತು ತಾಂತ್ರಿಕ ಶಿಕ್ಷಣದ ಬಗ್ಗೆ ಅವರು ಹೆಚ್ಚಿನ ಒತ್ತನ್ನು ನೀಡಿದ್ದಲ್ಲದೆ ಮಹಿಳೆಯರ ಶಿಕ್ಷಣಕ್ಕಾಗಿಯೂ ಕೂಡ ಅವರು ಧ್ವನಿ ಎತ್ತಿದ್ದರು.

ಮೌಲಾನಾ ಅಬ್ದುಲ್ ಕಲಾಮ್ ಆಜಾದ್ 1949ರಲ್ಲಿ ಕೇಂದ್ರ ಸದನದಲ್ಲಿ ಮಾತನಾಡುತ್ತಾ ಆಧುನಿಕ ವಿಜ್ಞಾನ ಮಹತ್ವವನ್ನು ಪ್ರತಿಪಾಧಿಸಿದ್ದರು. ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರಿಗೆ ಶಿಕ್ಷಣ ನೀಡದ ಹೊರತು ಯಾವುದೇ ರಾಷ್ಟ್ರೀಯ ಕಾರ್ಯಕ್ರಮವು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು.

ಅಬ್ದುಲ್ ಕಲಾಂ ಅಜಾದ್ ಅವರ ಪ್ರಯತ್ನ ಮತ್ತು ದೃಷ್ಟಿಕೋನದಲ್ಲಿ ಸಂಗೀತ ನಾಟಕ್ ಅಕಾಡೆಮಿ, ಲಲಿತ್ ಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಮತ್ತು ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸೇರಿದಂತೆ ಹಲವು ಪ್ರಮುಖ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಕಾಡೆಮಿಗಳನ್ನು ಸ್ಥಾಪನೆಯಾದವು. ಅಲ್ಲದೆ ಈಗಿನ ಐಐಟಿ, ಐಐಎಸ್ಸಿ, ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ಮತ್ತು ಯುಜಿಸಿ ಅವರ ಅಧಿಕಾರಾವಧಿಯಲ್ಲಿ ಸ್ಥಾಪಿತಗೊಂಡ ಮಹತ್ತರ ಸಂಸ್ಥೆಗಳಾಗಿವೆ.

ಮೌಲಾನಾ ಅವರು ಉರ್ದು, ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರಾಗಿದ್ದರು. ಶೈಕ್ಷಣಿಕದ ಅನುಕೂಲಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಅವರು ನಂಬಿದ್ದರು.

Leave a Reply

Your email address will not be published. Required fields are marked *

error: Content Copyright protected !!