ಪಾಕಿಗಳ ಕೈಗೆ ಅಣ್ವಸ್ತ್ರ ತಯಾರಿಸಿಕೊಟ್ಟ ಅಬ್ದುಲ್ ಖದೀರ್ ಖಾನ್ ನಿಧನ
ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್‍ನ ಜನಕ ಅಬ್ದುಲ್ ಖದೀರ್ ಖಾನ್ (85) ವಯೋ ಸಹಜ ಕಾಯಿಲೆಗಳಿಂದ ಮೃತರಾಗಿದ್ದಾರೆ. ಎ.ಕ್ಯೂ.ಖಾನ್ ಎಂದೇ ಖ್ಯಾತರಾಗಿದ್ದ ಅವರು ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ತಯಾರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
* 1936ರ ಏಪ್ರಿಲ್ 1ರಂದು ಅವಿಭಜಿತ ಭಾರತದ ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಜನಿಸಿದ್ದ ಖಾನ್, 1947ರಲ್ಲಿ ದೇಶ ವಿಭಜನೆಯಾದಾಗ ಪೋಷಕರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದ ಪೈಕಿ ಖಾನ್ ಅವರ ಕುಟುಂಬವೂ ಸೇರಿತ್ತು.
* 1967ರಲ್ಲಿ ನೆದರ್ಲೆಂಡ್ ದೇಶದಲ್ಲಿ ಪದವಿ ಪಡೆದ ಖಾನ್ ನಂತರ ಮೆಟಲರ್ಜಿಯಲ್ಲಿ ಪದವಿಯನ್ನು ಬೆಲ್ಜಿಯಂನಲ್ಲಿ ಪಡೆದುಕೊಂಡರು. ನಂತರ ಡಾ. ಅಬ್ದುಲ್ ಖಾದರ್ ಖಾನ್ ಅವರು ಪಾಕಿಸ್ತಾನ ಅಣು ವಿಜ್ಞಾನಿಯಾಗಿ ಬೆಳೆದರು. ಪಾಕಿಸ್ತಾನದ ಉನ್ನತ ನಾಗರಿಕ ಪ್ರಶಸ್ತಿ ಗಳಿಸಿದ ಮೊದಲ ವಿಜ್ಞಾನಿ ಎನಿಸಿಕೊಂಡರು. ರಾಷ್ಟ್ರಪತಿಗಳಿಂದ ನಿಶಾನ್ ಎ ಇಮ್ತಿಯಾಜ್ ಪುರಸ್ಕಾರ ಎರಡು ಬಾರಿ ಪಡೆದುಕೊಂಡರು. ಹಿಲಾಲ್ ಎ ಇಮ್ತಿಯಾಜ್ ಒಮ್ಮೆ ಗಳಿಸಿದರು.
* ಮುಸ್ಲಿಂ ರಾಷ್ಟ್ರಗಳು ಮೊದಲ ಬಾರಿಗೆ ಅಣು ಬಾಂಬ್ ಹೊಂದುವ ಸಾಧ್ಯತೆಯನ್ನು ನಿಜವಾಗಿಸಿದ್ದು ಡಾ. ಎಕ್ಯೂ ಖಾನ್ ಎನ್ನಬಹುದು.
* ಪಾಕಿಸ್ತಾನದ ರೆಡಿಯೋ ವರದಿಯ ಪ್ರಕಾರ ಜನರಲ್ ಪರ್ವೇಝ್ ಮುಶ್ರಫ್ ಮಿಲಿಟರಿ ಆಡಳಿತದಲ್ಲಿ ಡಾ.ಖಾನ್‍ರನ್ನು ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನಲ್ಲಿಡಲಾಗಿತ್ತು. ಗೃಹ ಬಂಧನದ ಬಗ್ಗೆ ತೀವ್ರ ಅಸಮಧಾನ ಹೊಂದಿದ್ದ ಅವರು ಈ ದೇಶದಲ್ಲಿ ವಿಜ್ಞಾನಿಗಳಿಗೆ ಅವರ ಅರ್ಹತೆ ತಕ್ಕಂತೆ ಗೌರವ ಸಿಗುವುದಿಲ್ಲ ಎಂದು ವಿಷಾದಿಸಿದ್ದರು.
* 2004ರಲ್ಲಿ ನ್ಯೂಕ್ಲಿಯರ್ ತಂತ್ರಜ್ಞಾನ ಅಭಿವೃದ್ದಿಯ ಜವಾಬ್ದಾರಿ ವಹಿಸಿಕೊಂಡಿದ್ದ ಖಾನ್, ಅದಕ್ಕಾಗಿ ಗೃಹ ಬಂಧನದಲ್ಲಿಯೂ ಕಾಲ ಕಳೆದಿದ್ದರು.
* 2009ರಲ್ಲಿ ಇಸ್ಲಮಾಬಾದ್ ಹೈಕೋರ್ಟ್ ಡಾ.ಖಾನ್‍ರನ್ನು ಗೃಹ ಬಂಧನದಿಂದ ಮುಕ್ತಿಗೊಳಿಸಿ, ದೇಶದ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಸಂಚರಿಸಲು ಅವರು ಸ್ವತಂತ್ರರು ಎಂದು ತೀರ್ಪು ನೀಡಿತ್ತು.
* 2016ರಲ್ಲಿ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ನ್ಯೂಕ್ಲಿಯರ್ ಶಕ್ತಿ ಹೊಂದಿದೆ. ಸಂಶೋಧನಾ ಕೇಂದ್ರ ಇರುವ ರಾವಲ್‍ಪಿಂಡಿ ಸಮೀಪದ ಕಹುಟಾದಿಂದ ಭಾರತದ ದೆಹಲಿಗೆ ಐದು ನಿಮಿಷದಲ್ಲಿ ಗುರಿ ಇಡುವ ಸಾಮಥ್ರ್ಯ ಹೊಂದಿದೆ ಎಂದು ಡಾ.ಖಾನ್ ಹೇಳಿಕೆ ನೀಡಿದ್ದರು. ಯಾಂತ್ರಿಕ ಬಾಂಬ್‍ಗಳನ್ನು ಖಾನ್ ತಯಾರಿಸಿ ಮತ್ತಷ್ಟು ವಿವಾದಕ್ಕೆ ಸಿಲುಕಿದ್ದರು.
* ಭಾರತದ ಅಣು ವಿಜ್ಞಾನಿ ಡಾ. ಅಬ್ದುಲ್ ಕಲಾಂ ಓರ್ವ ಸಾಧಾರಣ ವಿಜ್ಞಾನಿ ಎಂದು ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದರು.
* ಲಾಡೆನ್ ಅಣ್ವಸ್ತ್ರ ನೀಡಲು ಮುಂದಾಗಿದ್ದ ಖಾನ್
ಒಸಾಮಾ ಬಿನ್ ಲಾಡೆನ್ ಅಣ್ವಸ್ತ್ರ ಖರೀದಿಸಲು ಆಸಕ್ತಿ ಹೊಂದಿದ್ದ. ಆದರೆ ನಂತರ ಆತ ಇದ್ದಕ್ಕಿದ್ದಂತೆಯೇ ಸಂಗಡಿರೊಂದಿಗೆ ಅಫ್ಘಾನಿಸ್ತಾನದ ವಾಯುವ್ಯ ಪ್ರಾಂತ್ಯದ ತಪ್ಪಲಿಗೆ ತೆರಳಿದ್ದರಿಂದ ವ್ಯವಹಾರ ಕುದುರಲಿಲ್ಲ, ನಂತರ ಖಾನ್ ಅವರು ಆತನನ್ನು ಭೇಟಿ ಮಾಡಲಿಲ್ಲ ಎಂದು ಖಾನ್ ಅವರ ಕುರಿತ ಆತ್ಮಚರಿತ್ರೆ ‘ದಿ ಮ್ಯಾನ್ ಫ್ರಮ್ ಪಾಕಿಸ್ತಾನ’ದಲ್ಲಿ ಬರೆಯಲಾಗಿದೆ. ಈ ಪುಸ್ತಕ ಬರೆದಿರುವ ಡಗ್ಲಾಸ್ ಫ್ರಾಂಜ್ ಹಾಗೂ ಕ್ಯಾಥರೀನ್ ಕೂಲಿನ್ಸ್ ಪ್ರಕಾರ, ಎ ಕ್ಯೂ ಖಾನ್ ಅವರ ಸಹ ಉದ್ಯೋಗಿಗಳಾದ ಚೌಧರಿ ಅಬ್ಧುಲ್ ಮಜೀದ್ ಹಾಗೂ ಸುಲ್ತಾನ್ ಬಶೀರುದ್ದೀನ್ ಇಬ್ಬರು 2001 ರ ಅಗಸ್ಟ್ ಮಧ್ಯಭಾಗದಲ್ಲಿ ಕಂದಹಾರ್‌ನಲ್ಲಿ ಬಿನ್ ಲಾಡೆನ್ ಜತೆ ಮೂರು ದಿನ ಕಳೆದಿದ್ದರು.