18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ : ಇಲ್ಲಿದೆ ಸಂಪೂರ್ಣ ಮಾಹಿತಿ
ಮೂರನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರ ಹಿಡಿದ ಬೆನ್ನಲ್ಲೆ ಎರಡನೇ ಭಾರಿಗೆ ಬಿಜೆಪಿ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾದರು. ಈ ಮೊದಲು ಓ ಬಿರ್ಲಾ ಅವರು 2019 ರಿಂದ 2024 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ಮುಂದಿನ 2029ರವರೆಗೆ ಮತ್ತೆ ಎರಡನೇ ಭಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
*ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ (Lok Sabha Speaker Election) ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು. ಆದರೆ 1976ರ ಬಳಿಕ ಇದೇ ಮೊದಲ ಬಾರಿಗೆ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ. ಈ ಹಿಂದೆ 1952 ಮತ್ತು 1976ರಲ್ಲಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು. ಎಂಟು ಬಾರಿಯ ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರನ್ನು ಕಣಕ್ಕಿಳಿಸಿದ್ದವು. ಆದರೆ ಸಾಕಷ್ಟು ಸಂಖ್ಯಾಬಲ ಹೊಂದಿರುವ ಎನ್‌ಡಿಎ, ಧ್ವನಿಮತದ ಮೂಲಕ ಓಂ ಬಿರ್ಲಾ ಅವರನ್ನು ಮತ್ತೆ ಆಯ್ಕೆ ಮಾಡಿದೆ.
*ಕಾಂಗ್ರೆಸ್ ನಾಯಕ ಬಲರಾಮ್ ಜಖಾರ್ ಅವರು 1980 ಹಾಗೂ 1985ರಲ್ಲಿ ಸ್ಪೀಕರ್ ಆಗಿ ಎರಡು ಅವಧಿಗೆ ಕರ್ತವ್ಯ ನಿರ್ವಹಿಸಿದ್ದರು. ಅವರ ನಂತರ ಸತತ ಎರಡು ಅವಧಿಗೆ ಆಯ್ಕೆಯಾದ ಮೊದಲ ಸ್ಪೀಕರ್ ಓಂ ಬಿರ್ಲಾ.
*ಓಂ ಬಿರ್ಲಾ, ರಾಜಸ್ಥಾನದ ಕೋಟಾ ಲೋಕಸಭೆ ಕ್ಷೇತ್ರದ ಸಂಸದ. 2024ರ ಲೋಕಸಭೆ ಚುನಾವಣೆಯಲ್ಲಿ ಅವರು 7.44 ಲಕ್ಷ ಮತಗಳನ್ನು ಪಡೆದು, ಸುಮಾರು 44 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ಅವರನ್ನು ಸೋಲಿಸಿದ್ದರು. ಇದು ಅವರ ಸತತ ಮೂರನೇ ಗೆಲುವು.
*ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಈ ಪ್ರಸ್ತಾಪವನ್ನು ಬಿಜೆಪಿಯ ಹಿರಿಯ ನಾಯಕರು ಮತ್ತು ಅದರ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಅನುಮೋದಿಸಿತು. ಓಂ ಬಿರ್ಲಾ ಅವರನ್ನು ಮತ್ತೆ ಸ್ಪೀಕರ್ ಆಗಿ ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರು ಲೋಕಸಭೆಯ ಸ್ಪೀಕರ್ ಆಗಿ ಕಾಂಗ್ರೆಸ್ ಸಂಸದ ಕೆ.ಸುರೇಶ್‌ರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಮಂಡಿಸಿದ್ದರು. ಆದರೆ, ಧ್ವನಿಮತದ ಮೂಲಕ ಸುರೇಶ್ ಸ್ಪರ್ಧೆಯಿಂದ ಪರಾಭವಗೊಂಡರು. 18ನೇ ಲೋಕಸಭಾ ಈ ಸ್ಪೀಕರ್ ಹುದ್ದೆಗೆ INDIA ಬಣದಿಂದ ಕೋಡಿಕುನ್ನಿಲ್ ಸುರೇಶ್ ಹಾಗೂ ಎನ್‌ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಓಂ ಬಿರ್ಲಾ ಹಿನ್ನೆಲೆ, ರಾಜಕೀಯ ಹಾದಿ :
1962ರ ನವೆಂಬರ್ 23ರಂದು, ಶ್ರೀಕೃಷ್ಣ ಬಿರ್ಲಾ ಮತ್ತು ಶಕುಂತಲಾ ದೇವಿ ಅವರ ಮಗನಾಗಿ, ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಓಂ ಬಿರ್ಲಾ ಜನಿಸಿದರು. ಕೋಟಾದ ಸರ್ಕಾರಿ ವಾಣಿಜ್ಯ ಕಾಲೇಜು ಹಾಗೂ ಅಜ್ಮೇರ್‌ನ ಮಹರ್ಷಿ ದಯಾನಂದ ಸರಸ್ವತಿ ವಿವಿಯಲ್ಲಿ ಅವರು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ವೈದ್ಯೆಯಾಗಿರುವ ಅಮಿತಾ ಬಿರ್ಲಾ ಜತೆ 1991ರಲ್ಲಿ ವಿವಾಹವಾಗಿದ್ದು, ಅವರಿಗೆ ಆಕಾಂಕ್ಷಾ ಮತ್ತು ಅಂಜಲಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
*ವಿದ್ಯಾರ್ಥಿದೆಸೆಯಿಂದಲೂ ರಾಜಕೀಯದ ಕಡೆ ಓಂ ಬಿರ್ಲಾ ಅವರಲ್ಲಿ ಅಪಾರ ಆಸಕ್ತಿ. ಅವರು ಜನಿಸಿದ್ದೇ ರಾಷ್ಟ್ರೀಯ ಸ್ವಯಂ ಸೇವಕ (ಆರೆಸ್ಸಸ್) ಕುಟುಂಬದಲ್ಲಿ. 1979ರಲ್ಲಿ ಕೋಟಾದ ಗುಮಾನ್‌ಪುರದ ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು.
*ಎಬಿವಿಪಿ ಸದಸ್ಯರಾಗಿದ್ದಾಗ ಕೋಟಾದಲ್ಲಿ ನಿರುದ್ಯೋಗದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆಗಿನ ಜನತಾ ಪಕ್ಷದ ಸರ್ಕಾರದ ಸಚಿವರಾಗಿದ್ದ ಭನ್ವರ್ ಲಾಲ್ ಶರ್ಮಾ ಅವರ ಕಾರನ್ನು ಅಡ್ಡಗಟ್ಟುವ ಮೂಲಕ ಬೆಳಕಿಗೆ ಬಂದರು.
*1987- 1991ರವರೆಗೆ ಕೋಟಾ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷರಾಗಿದ್ದ ಅವರು, 1991- 97ರ ಅವಧಿಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ 1997ರಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2003ರವರೆಗೂ ಈ ಹುದ್ದೆಯಲ್ಲಿದ್ದರು. ಎಂ ವೆಂಕಯ್ಯ ನಾಯ್ಡು ಅವರು 2002-04ರ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ, ಅವರಿಗೆ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡರು.
*ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿ ವಸುಂಧರಾ ರಾಜೇ ಆಯ್ಕೆಯಾದ ಬಳಿಕ ಬಿರ್ಲಾ ಅವರು ರಾಜಕೀಯದಲ್ಲಿ ಏಳಿಗೆ ಕಂಡರು.
*ರಾಷ್ಟ್ರೀಯ ಸಹಕಾರ ಗ್ರಾಹಕ ಸಂಸ್ಥೆ ನಿಯಮಿತದ ಉಪಾಧ್ಯಕ್ಷ, ಜೈಪುರದ ಕಾನ್ಫೆಡ್‌ನ ಅಧ್ಯಕ್ಷರಾಗಿ (1992- 1995) ಕಾರ್ಯನಿರ್ವಹಿಸಿದ್ದರು. ಹೊಸದಿಲ್ಲಿಯ ನೆಹರೂ ಯುವ ಕೇಂದ್ರ ಮತ್ತು ನ್ಯಾಷನಲ್ ಕೋಲ್ ಇಂಡಿಯಾ ಲಿಮಿಟೆಡ್‌ನ ಹಂಗಾಮಿ ನಿರ್ದೇಶಕರಾಗಿದ್ದರು.
ಚುನಾವಣಾ ರಾಜಕಾರಣ :
ಅವರು ಮೊದಲ ಬಾರಿ ಚುನಾವಣೆ ಎದುರಿಸಿದ್ದು 2003ರಲ್ಲಿ. ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೋಟಾ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸಿಎಂ ಆದ ರಾಜೇ, ಸಂಸದೀಯ ಕಾರ್ಯದರ್ಶಿಯನ್ನಾಗಿ ಬಿರ್ಲಾ ಅವರನ್ನು ನೇಮಿಸಿದ್ದರು. ಆದರೆ ಮುಂದೆ ಅವರ ನಡುವೆ ಮನಸ್ತಾಪ ಉಂಟಾಗಿತ್ತು.
*2008ರ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ವರ್ಮಾ ಅವರನ್ನು 24,300 ಮತಗಳ ಅಂತರದಿಂದ ಸೋಲಿಸಿದ್ದರು. 2013ರ ವೇಳೆಗೆ ಅವರ ಬಲ ಮತ್ತಷ್ಟು ಹೆಚ್ಚಿತ್ತು. ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಮೆಹ್ತಾ ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರು.
*2014 ಲೋಕಸಭೆ ಚುನಾವಣೆಯಲ್ಲಿ ಓಂ ಬಿರ್ಲಾ ಅವರು ಕೋಟಾ- ಬುಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಹಾಲಿ ಸಂಸದ ಕಾಂಗ್ರೆಸ್ ಅಭ್ಯರ್ಥಿ ಇಜಯರಾಜ್ ಸಿಂಗ್ ಅವರನ್ನು ಸುಮಾರು 2 ಲಕ್ಷ ಮತಗಳ ಅಂತರದಿಂದ ಮಣಿಸಿದರು. ಬಿರ್ಲಾ ಅವರಿಗೆ 6.44 ಲಕ್ಷ ಮತಗಳು ದೊರಕಿದ್ದವು. 2019ರ ಲೋಕಸಭೆ ಚುನಾವಣೆಯಲ್ಲಿ 8 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಅವರು, ಕಾಂಗ್ರೆಸ್ ಅಭ್ಯರ್ಥಿ ರಾಮನಾರಾಯಣ್ ಮೀನಾ ಅವರನ್ನು ಸುಮಾರು 2.80 ಲಕ್ಷ ಮತಗಳಿಂದ ಸೋಲಿಸಿದ್ದರು.
*ಸಮಾಜ ಸೇವಾ ಕಾರ್ಯಗಳ ಮೂಲಕ ಓಂ ಬಿರ್ಲಾ ಹೆಸರು ಮಾಡಿದ್ದರು. ಬೈರೋನ್ ಸಿಂಗ್ ಶೆಖಾವತ್ ಹಾಗೂ ರಾಜೇ ಅವರ ಅವಧಿಯಲ್ಲಿ ಅವರಿಗೆ ವಿಧಾನಸಭೆಯಲ್ಲಿ ಮಹತ್ವದ ಅವಕಾಶಗಳು ಸಿಕ್ಕಿರಲಿಲ್ಲ. ಹಾಗಿದ್ದರೂ ಅವರು ದಿಲ್ಲಿಯಲ್ಲಿ ರಾಜಸ್ಥಾನದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು.
*2001ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪನದ ನಂತರ ಅಲ್ಲಿ ಪರಿಹಾರ ಕಾರ್ಯಗಳಲ್ಲಿ ಓಂ ಬಿರ್ಲಾ ತೊಡಗಿಸಿಕೊಂಡಿದ್ದರು. ಆಗ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಈ ಗುಜರಾತ್ ನಂಟೇ ಅವರಿಗೆ ಕೇಂದ್ರದಲ್ಲಿ ಮಹತ್ವದ ಹುದ್ದೆ ಸಿಗಲು ಕಾರಣ ಎನ್ನಲಾಗಿದೆ.
ಸ್ಪೀಕರ್ ಆಯ್ಕೆ ಹೇಗೆ..?
*ಲೋಕಸಭೆಯಿಂದ ಹೊಸದಾಗಿ ಚುನಾಯಿತರಾದ ಸಂಸದರು ತಮ್ಮಲ್ಲಿಯೇ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತಾರೆ. ಸ್ಪೀಕರ್ ಲೋಕಸಭೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವವರಾಗಿರಬೇಕು ಮತ್ತು ಸ್ಪೀಕರ್ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಒಪ್ಪಿಕೊಳ್ಳುವ ವ್ಯಕ್ತಿಯಾಗಬೇಕು.
*ಸಾರ್ವತ್ರಿಕ ಚುನಾವಣೆಯ ನಂತರ, ಭಾರತದ ರಾಷ್ಟ್ರಪತಿಗಳು ಲೋಕಸಭೆಯ ಮೊದಲ ಸಭೆ ಮತ್ತು ಸ್ಪೀಕರ್ ಆಯ್ಕೆಯ ದಿನಾಂಕವನ್ನು ಸೂಚಿಸುತ್ತಾರೆ. ಸಾಮಾನ್ಯವಾಗಿ ಅದರ ಹಿಂದಿನ ದಿನದ ಸ್ಪೀಕರ್ ಚುನಾವಣೆಯ ದಿನದಂದು, ಪ್ರಧಾನಿ ಅಥವಾ ಸಂಸದೀಯ ವ್ಯವಹಾರಗಳ ಸಚಿವರು ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸುತ್ತಾರೆ. ಯಾವುದೇ ಇತರ ಅಭ್ಯರ್ಥಿಗಳು ಸಹ ತಮ್ಮ ಹೆಸರನ್ನು ಸಲ್ಲಿಸಬಹುದು. ನಾಲ್ಕು ನಿದರ್ಶನಗಳಿವೆ. 1952, 1967, 1976 ಮತ್ತು 2024ರಲ್ಲಿ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು. ಕೇವಲ ಒಂದು ಹೆಸರನ್ನು ಪ್ರಸ್ತಾಪಿಸಿದರೆ, ಯಾವುದೇ ಔಪಚಾರಿಕ ಮತವಿಲ್ಲದೆ ಸ್ಪೀಕರ್ ಅನ್ನು ಆಯ್ಕೆ ಮಾಡಲಾಗುತ್ತದೆ. ಆದಾಗ್ಯೂ, ಒಂದಕ್ಕಿಂತ ಹೆಚ್ಚು ನಾಮನಿರ್ದೇಶನಗಳು ಬಂದರೆ, ವಿಭಾಗವನ್ನು (ಮತ) ಎಂದು ಕರೆಯಲಾಗುತ್ತದೆ. ಯಶಸ್ವಿ ಅಭ್ಯರ್ಥಿ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗುತ್ತಾರೆ.
ಸ್ಪೀಕರ್‌ನ ಅಧಿಕಾರಗಳು ಮತ್ತು ಕಾರ್ಯಗಳು :
*ಲೋಕಸಭೆಯ ಸ್ಪೀಕರ್ ಅವರು ಸದನದಲ್ಲಿ ವ್ಯವಹಾರವನ್ನು ನಡೆಸುತ್ತಾರೆ ಮತ್ತು ಮಸೂದೆಯು ಹಣದ ಮಸೂದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಾರೆ. ಅವರು ಮನೆಯಲ್ಲಿ ಶಿಸ್ತು ಮತ್ತು ಸಜ್ಜನಿಕೆಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಅವರನ್ನು ಅಮಾನತುಗೊಳಿಸಿದ ನಂತರ ಕಾನೂನಿಗೆ ಸಂಬಂಧಿಸಿದಂತೆ ಅಶಿಸ್ತಿನ ವರ್ತನೆಗಾಗಿ ಸದಸ್ಯರನ್ನು ಶಿಕ್ಷಿಸಬಹುದು. ಅವರು ನಿಯಮಗಳ ಪ್ರಕಾರ ಅವಿಶ್ವಾಸ ನಿರ್ಣಯ , ಮುಂದೂಡಿಕೆ , ಖಂಡನೆ ಮತ್ತು ಗಮನ ಸೆಳೆಯುವ ಸೂಚನೆಯಂತಹ ವಿವಿಧ ರೀತಿಯ ಚಲನೆಗಳು ಮತ್ತು ನಿರ್ಣಯಗಳನ್ನು ಚಲಿಸಲು ಸಹ ಅನುಮತಿಸುತ್ತಾರೆ . ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕಾದ ಅಜೆಂಡಾವನ್ನು ಸ್ಪೀಕರ್ ನಿರ್ಧರಿಸುತ್ತಾರೆ.
*ಅಧ್ಯಕ್ಷರ ಆಯ್ಕೆಯ ದಿನಾಂಕವನ್ನು ಅಧ್ಯಕ್ಷರು ನಿರ್ಧರಿಸುತ್ತಾರೆ . ಇದಲ್ಲದೆ, ಸದನದ ಸದಸ್ಯರು ಮಾಡಿದ ಎಲ್ಲಾ ಕಾಮೆಂಟ್‌ಗಳು ಮತ್ತು ಭಾಷಣಗಳನ್ನು ಸ್ಪೀಕರ್‌ಗೆ ತಿಳಿಸಲಾಗುತ್ತದೆ. ಭಾರತದ ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಸ್ಪೀಕರ್ ವಹಿಸುತ್ತಾರೆ .
*ರಾಜ್ಯಸಭೆಯಲ್ಲಿ (ರಾಜ್ಯಗಳ ಕೌನ್ಸಿಲ್) ಅಧ್ಯಕ್ಷರ ಪ್ರತಿರೂಪವು ಅದರ ಅಧ್ಯಕ್ಷರಾಗಿದ್ದಾರೆ; ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ . ಪ್ರಾಶಸ್ತ್ಯದ ಕ್ರಮದಲ್ಲಿ , ಭಾರತದ ಮುಖ್ಯ ನ್ಯಾಯಾಧೀಶರೊಂದಿಗೆ ಲೋಕಸಭೆಯ ಸ್ಪೀಕರ್ ಆರನೇ ಸ್ಥಾನದಲ್ಲಿದ್ದಾರೆ . ಸ್ಪೀಕರ್ ಸದನಕ್ಕೆ ಜವಾಬ್ದಾರರು. ಬಹುಪಾಲು ಸದಸ್ಯರು ಅಂಗೀಕರಿಸಿದ ನಿರ್ಣಯದ ಮೂಲಕ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಇಬ್ಬರನ್ನೂ ತೆಗೆದುಹಾಕಬಹುದು. ಲೋಕಸಭೆಯ ಸ್ಪೀಕರ್ ಅನ್ನು ರಾಷ್ಟ್ರಪತಿಗಳು ನಾಮನಿರ್ದೇಶನದ ಆಧಾರದ ಮೇಲೆ ಆಯ್ಕೆ ಮಾಡಬಹುದು.
*ಅಂಗೀಕಾರವಾದ ಎಲ್ಲಾ ಮಸೂದೆಗಳು ರಾಜ್ಯಸಭೆಗೆ ಅದರ ಪರಿಗಣನೆಗೆ ಹೋಗಲು ಸ್ಪೀಕರ್ ಅವರ ಸಹಿ ಅಗತ್ಯವಿದೆ. ಸಮಬಲದ ಸಂದರ್ಭದಲ್ಲಿ ಸ್ಪೀಕರ್‌ಗೆ ಮತ ಚಲಾಯಿಸುವ ಅವಕಾಶವೂ ಇದೆ. ಯಥಾಸ್ಥಿತಿ ಕಾಯ್ದುಕೊಳ್ಳುವ ರೀತಿಯಲ್ಲಿ ಪೀಠಾಧಿಪತಿಗಳು ಮತ ಚಲಾಯಿಸುವುದು ವಾಡಿಕೆ.
ಸ್ಪೀಕರ್ ಅವರನ್ನು ತೆಗೆದುಹಾಕಬಹುದು :
ಭಾರತದ ಸಂವಿಧಾನದ ಪ್ರಕಾರ ಸದನದ ಬಹುಪಾಲು ಸದಸ್ಯರು ಅಂಗೀಕರಿಸಿದ ನಿರ್ಣಯದ ಮೂಲಕ ಲೋಕಸಭೆಯು ಸ್ಪೀಕರ್ ಅವರನ್ನು ತೆಗೆದುಹಾಕಬಹುದು [ಆರ್ಟಿಕಲ್ 94]. 1951 ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 7 ಮತ್ತು 8 ರ ಅಡಿಯಲ್ಲಿ ಲೋಕಸಭಾ ಸದಸ್ಯರಾಗಿದ್ದಕ್ಕಾಗಿ ಅನರ್ಹಗೊಳಿಸಿದ ನಂತರ ಸ್ಪೀಕರ್ ಅವರನ್ನು ತೆಗೆದುಹಾಕಲಾಗುತ್ತದೆ . ಇದು ಸಂವಿಧಾನದ 110 ನೇ ವಿಧಿಯಲ್ಲಿ ನೀಡಲಾದ ವ್ಯಾಖ್ಯಾನದೊಂದಿಗೆ ಅಸಮಂಜಸವಾದ ಹಣದ ಬಿಲ್ ಎಂದು ಸ್ಪೀಕರ್‌ನ ತಪ್ಪು ಪ್ರಮಾಣೀಕರಣದಿಂದ ಉದ್ಭವಿಸುತ್ತದೆ . ನ್ಯಾಯಾಲಯಗಳು ಮಸೂದೆಯನ್ನು ಹಣದ ಮಸೂದೆ ಎಂದು ತಪ್ಪಾಗಿ ಪ್ರಮಾಣೀಕರಿಸಲು ಸ್ಪೀಕರ್‌ನ ಅಸಾಂವಿಧಾನಿಕ ಕಾರ್ಯವನ್ನು ಎತ್ತಿ ಹಿಡಿದಾಗ, ಅದು ಸ್ಪೀಕರ್‌ನ ಲೋಕಸಭಾ ಸದಸ್ಯತ್ವದ ಅನರ್ಹತೆಗೆ ಅನ್ವಯಿಸುವ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ, 1971 ರ ಅಡಿಯಲ್ಲಿ ಸಂವಿಧಾನಕ್ಕೆ ಅರ್ಹವಾದ ಶಿಕ್ಷೆಗೆ ಅರ್ಹವಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 8K ಅಡಿಯಲ್ಲಿ. ಆದಾಗ್ಯೂ, ಲೋಕಸಭೆಯಲ್ಲಿ ಸ್ಪೀಕರ್ ಮಾಡಿದ ಕಾರ್ಯವಿಧಾನದಲ್ಲಿನ ಲೋಪಗಳನ್ನು ಆರ್ಟಿಕಲ್ 122 ರ ಪ್ರಕಾರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ .
ಪ್ರೊ ಟೆಮ್ ಸ್ಪೀಕರ್ :
ಸಾರ್ವತ್ರಿಕ ಚುನಾವಣೆ ಮತ್ತು ಹೊಸ ಸರ್ಕಾರದ ರಚನೆಯ ನಂತರ, ಶಾಸಕಾಂಗ ವಿಭಾಗವು ಸಿದ್ಧಪಡಿಸಿದ ಹಿರಿಯ ಲೋಕಸಭಾ ಸದಸ್ಯರ ಪಟ್ಟಿಯನ್ನು ಸಂಸದೀಯ ವ್ಯವಹಾರಗಳ ಸಚಿವರಿಗೆ ಸಲ್ಲಿಸಲಾಗುತ್ತದೆ , ಅವರು ಭಾರತದ ರಾಷ್ಟ್ರಪತಿಗಳಿಗೆ ಹೆಸರನ್ನು ರವಾನಿಸುತ್ತಾರೆ . ಭಾರತದ ರಾಷ್ಟ್ರಪತಿಗಳು ಹಂಗಾಮಿ ಸ್ಪೀಕರ್ ಅನ್ನು ನೇಮಿಸುತ್ತಾರೆ.
ಚುನಾವಣೆಯ ನಂತರ ಸ್ಪೀಕರ್ ಮತ್ತು ಉಪಸಭಾಪತಿಯನ್ನು ಸಂಸತ್ತಿನ ಸದಸ್ಯರು ಆಯ್ಕೆ ಮಾಡಿದಾಗ ಮೊದಲ ಸಭೆಯು ಹಂಗಾಮಿ ಸ್ಪೀಕರ್ ಅಡಿಯಲ್ಲಿ ನಡೆಯುತ್ತದೆ. ಸ್ಪೀಕರ್ ಅನುಪಸ್ಥಿತಿಯಲ್ಲಿ, ಡೆಪ್ಯೂಟಿ ಸ್ಪೀಕರ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಎರಡೂ ಅನುಪಸ್ಥಿತಿಯಲ್ಲಿ ಸ್ಪೀಕರ್ ಆಯ್ಕೆ ಮಾಡಿದ ಆರು ಸದಸ್ಯರ ಸಮಿತಿಯು ಅವರ ಹಿರಿತನಕ್ಕೆ ಅನುಗುಣವಾಗಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತದೆ.