ದ್ಯುತಿಸಂಶ್ಲೇಷಣೆ
• ಹಸಿರು ಸಸ್ಯಗಳು ಆಹಾರ ತಯಾರಿಸುವ ಕ್ರಿಯೆಯೇ ‘ದ್ಯುತಿ ಸಂಶ್ಲೇಷಣೆ ಕ್ರಿಯೆ’. ಹಸಿರು ಸಸ್ಯಗಳು ನಿರವಯವ ವಸ್ತುಗಳಾದ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು, ಸೂರ್ಯನ ಬೆಳಕು ಮತ್ತು ಪತ್ರಹರಿತ್ತಿನ ಸಹಾಯದಿಂದ ಸಾವಯವ ವಸ್ತುಗಳನ್ನಾಗಿ ಸಂಶ್ಲೇಷಿಸುವ ಕ್ರಿಯೆಯೇ ದ್ಯುತಿಸಂಶ್ಲೇಷಣೆ.
• ದ್ಯುತಿ ಸಂಶ್ಲೇಷಣೆ ಒಂದು ರಾಸಾಯನಿಕ ಕ್ರಿಯೆಯಾಗಿದೆ. ಇದನ್ನು ಈ ಕೆಳಗಿನ ಸಮೀಕರಣದ ಸಹಾಯದಿಂದ ಪ್ರತಿನಿಧಿಸಬಹುದು.
ಇಂಗಾಲದಡೈಆಕ್ಸೈಡ್ + ನೀರು ಸೂರ್ಯನ ಬೆಳಕು/ ಹರಿತ್ತು —-> ಪಿಷ್ಟ + ಆಕ್ಸಿಕನ್ + ನೀರು
ದ್ಯುತಿಸಂಶ್ಲೇಷಣೆ ಕ್ರಿಯೆ ಸಸ್ಯದ ಎಲೆಯ ಭಾಗದಲ್ಲಿ “ ಕ್ಲೋರೋಪ್ಲಾಸ್ಟ್” ನಲ್ಲಿ ನಡೆಯುತ್ತದೆ. ಎಲೆಯ ಸಣ್ಣ ಸಣ್ಣ ರಂಧ್ರಗಳನ್ನು (ಸ್ಟೋಮಾಟ) ಎಂದು ಕರೆಯುತ್ತಾರೆ. ಈ ಪತ್ರರಂಧ್ರಗಳ ಮೂಲಕ ಕಾರ್ಬನ್ ಡೈ ಆಕ್ಸೈಡ್ ಸಸ್ಯ ದೇಹವನ್ನು ಪ್ರವೇಶಿಸುತ್ತದೆ.
• ದ್ಯುತಿ ಸಂಶ್ಲೇಷಣೆ ಕ್ರಿಯೆಯು 2 ಹಂತಗಳಲ್ಲಿ ನಡೆಯುತ್ತವೆ.
1. ಬೆಳಕಿನ ಪ್ರತಿಕ್ರಿಯೆ( ಹಿಲ್ಸ್ ರಿಯಾಕ್ಷನ್) : ಇದು ಬೆಳಕಿನ ಸಹಾಯದಿಂದ ಕ್ಲೋರೋ ಪ್ಲಾಸ್ಟ್‍ನಲ್ಲಿರುವ ‘ಗ್ರಾನ’ನಲ್ಲಿ ನಡೆಯುತ್ತದೆ. ಇದನ್ನು ದ್ಯುತಿ ರಾಸಾಯನಿಕ ಪ್ರತಿಕ್ರಿಯೆ ಎನ್ನುತ್ತಾರೆ. ಈ ಹಂತದಲ್ಲಿ ನೀರು ಹೈಡ್ರಾಕ್ಸಿಲ್ ಮತ್ತು ಹೈಡ್ರೋಜನ್ ಆಯಾನುಗಳಾಗಿ ವಿಭಜಸಲ್ಪಡುತ್ತದೆ. ಈ ಹಂತದಲ್ಲಿ ಆಕ್ಸಿಜನ್ ಬಿಡುಗಡೆಯಾಗುತ್ತದೆ.
2. ಇರುಳಿನ ಪ್ರತಿಕ್ರಿಯೆ( ಕೆಲ್ವಿನ್ ಚಕ್ರ) : ಇದು ಬೆಳಕಿನ ಸಹಾಯವಿಲ್ಲದೆ ‘ ಕ್ಲೋರೋಪ್ಲಾಸ್ಟ್‍ನ ‘ಸ್ಟ್ರೋಮಾ’ದಲ್ಲಿ ನಡೆಯುತ್ತದೆ. ಇದನ್ನು ‘ಕೆಲ್ವಿನ್ ಚಕ್ರ’ವೆಂದು ಕರೆಯುತ್ತಾರೆ. ಈ ಹಂತದಲ್ಲಿ ಬೆಳಕಿನ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡ್, ಕಾರ್ಬೋಹೈಡ್ರೇಟುಗಳಾಗಿ ಅಪಕರ್ಷಿಸಲ್ಪಡುತ್ತದೆ.
• ದ್ಯುತಿ ಸಂಶ್ಲೇಷಣೆಯ ಮೇಲೆ ಪ್ರಭಾವ ಬೀರುವ ಅಂಶಗಳು
1. ಬಾಹ್ಯ ಅಂಶಗಳು : ಸೂರ್ಯನ ಬೆಳಕು, ಕಾರ್ಬನ್ ಡೈ ಆಕ್ಸೈಡ್, ಉಷ್ಣಾಂಶ, ನೀರು, ಆಕ್ಸಿಜನ್
2. ಆಂತರಿಕ ಅಂಶ : ಕ್ಲೋರೋಫಿಲ್(ಪತ್ರಹರಿತ್ತು)
ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪತ್ರ ಹರಿತ್ತು ತುಂಬಾ ಅವಶ್ಯಕ. ಪತ್ರಹರಿತ್ತು ಕಡಿಮೆ ಇರುವುದನ್ನು ‘ಈಟಿಯೋಲೇಶನ್’ ಎನ್ನುವರು. ಆಗ ಎಲೆಯು ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ದ್ಯುತಿ ಸಂಶ್ಲೇಷಣೆಯ ವೇಗವನ್ನು ಕಡಿಮೆ ಮಾಡುತ್ತದೆ.