AwardsCurrent AffairsLatest Updates

PM Modi : ಮೋದಿಗೆ ಘಾನಾ ದೇಶದ ಅತ್ಯುನ್ನತ ರಾಷ್ಟೀಯ ಪ್ರಶಸ್ತಿ ಪ್ರದಾನ

Share With Friends

PM Modi conferred Ghana’s highest honour for distinguished statesmanship : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಘಾನಾ ದೇಶದ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ (Officer Of The Order Of The Star) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಘಾನಾ ಸರ್ಕಾರ ಭಾರತದ ಪ್ರಧಾನಿ ಅವರ ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವಕ್ಕಾಗಿ ಈ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರ ಸಾಧನೆಯನ್ನು ಗುರುತಿಸಿದೆ.

ಪ್ರಧಾನ ಮಂತ್ರಿಯವರ “ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವ”ವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ಮೋದಿ ಅವರಿಗೆ ಪ್ಯಾಲೆಸ್ಟೈನ್ ಮತ್ತು ರಷ್ಯಾ ಸೇರಿದಂತೆ 24 ಜಾಗತಿಕ ಪ್ರಶಸ್ತಿಗಳನ್ನು ನೀಡಲಾಗಿದೆ.

[PM Modi : ಮಾರಿಷಸ್‌ನ ಅತ್ಯುನ್ನತ ನಾಗರಿಕ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ]

5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲು ಘಾನಾ (Ghana) ದೇಶಕ್ಕೆ ಭೇಟಿ ನೀಡಿದ್ದಾರೆ. 30 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ ಪ್ರಭಾವಶಾಲಿ ಜಾಗತಿಕ ನಾಯಕ ಎಂದು ಗುರುತಿಸಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಣಿ ಮಹಾಮ (John Dramani Mahama) ಅವರು ಮೋದಿಗೆ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ :
ಪ್ರಧಾನಿ ನರೇಂದ್ರ ಮೋದಿ (PM Narendra Modi) ಘಾನಾ ಭೇಟಿ 30 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಪಶ್ಚಿಮ ಆಫ್ರಿಕಾದ ರಾಷ್ಟ್ರಕ್ಕೆ ನೀಡಿದ ಮೊದಲ ಭೇಟಿಯಾಗಿದೆದೆ.

[ಪ್ರಧಾನಿ ನರೇಂದ್ರ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ]

ಘಾನಾ ಮತ್ತು ಭಾರತ ಸಂಬಂಧದ ಇತಿಹಾಸ :
ಘಾನಾ ಮತ್ತು ಭಾರತದ ನಡುವಿನ ಸಂಬಂಧವು ಹೊಸ ಅಧ್ಯಾಯವಲ್ಲ, ಅಂದರೆ, ಘಾನಾದ ಸ್ವಾತಂತ್ರ್ಯಕ್ಕೂ ಮುಂಚೆಯೇ ಪ್ರಾರಂಭವಾದ ಐತಿಹಾಸಿಕ ಕಥೆಯಾಗಿದೆ. ಹೌದು, 1953 ರಲ್ಲಿ, ಘಾನಾ ಬ್ರಿಟಿಷ್ ವಸಾಹತುವಾಗಿದ್ದಾಗ, ಭಾರತವು ರಾಜಧಾನಿ ಅಕ್ರಾದಲ್ಲಿ ತನ್ನ ಪ್ರತಿನಿಧಿ ಕಚೇರಿಯನ್ನು ತೆರೆಯಿತು. ಇದು ಕೇವಲ ರಾಜತಾಂತ್ರಿಕ ನಡೆಯಲ್ಲ ಆದರೆ ಆಫ್ರಿಕನ್ ಸ್ವಾತಂತ್ರ್ಯ ಚಳುವಳಿಗಳಿಗೆ ಭಾರತದ ಬೆಂಬಲದ ಸ್ಪಷ್ಟ ಸೂಚನೆಯಾಗಿದೆ. ಇದೇ ವೇಳೆ, ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಘಾನಾದ ಮೊದಲ ಅಧ್ಯಕ್ಷ ಕ್ವಾಮೆ ನ್ಕ್ರುಮಾ ಅವರ ನಡುವಿನ ಸ್ನೇಹ ಮತ್ತು ವಸಾಹತುಶಾಹಿ ವಿರೋಧಿ ಮನೋಭಾವವು ಈ ಸಂಬಂಧಗಳನ್ನು ಬಲಪಡಿಸಿತು.

error: Content Copyright protected !!