Gifts Tree : ಕಿಂಗ್ ಚಾರ್ಲ್ಸ್‌ಗೆ ವಿಶೇಷ ಉಡುಗೊರೆಯಾಗಿ ಗಿಡವೊಂದನ್ನು ನೀಡಿದ ಪ್ರಧಾನಿ ಮೋದಿ, ಏನಿದರ ವಿಶೇಷ..?
PM Modi gifts tree to King Charles to be planted under “ek ped Maa ke naam’ : ಪ್ರಧಾನಿ ನರೇಂದ್ರ ಮೋದಿ(Narendra Modi) ಬ್ರಿಟನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸ್ಯಾಂಡ್ರಿಂಗ್‌ಹ್ಯಾಮ್ ಹೌಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ ಅವರು ಚಾರ್ಲ್ಸ್‌ಗೆ ಗಿಡವೊಂದನ್ನು ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏಕ್ ಪೇಡ್ ಮಾ ಕೆ ನಾಮ್(ತಾಯಿಯ ಹೆಸರಿನಲ್ಲಿ ಒಂದು ಮರ/ Ek Ped Maa Ke Naam)ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಭಾಗವಾಗಿ ಒಂದು ಗಿಡವನ್ನು ಕಿಂಗ್ ಚಾರ್ಲ್ಸ್‌ಗೆ ನೀಡಿದ್ದಾರೆ.
ಆ ಸಸ್ಯ ಯಾವುದು?
ಪ್ರಧಾನಿ ಮೋದಿ ಅವರು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿಯಲ್ಲಿ ಕಿಂಗ್ ಚಾರ್ಲ್ಸ್‌ಗೆ ಡೇವಿಡಿಯಾ ಇನ್ವೊಲುಕ್ರಾಟಾ ‘ಸೋನೋಮಾ’ ಜಾತಿಯ ಸಸ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಸ್ಯವನ್ನು ಸಾಮಾನ್ಯವಾಗಿ ‘ಸೋನೋಮಾ ಡವ್ ಟ್ರೀ’ ಎಂದೂ ಕರೆಯಲಾಗುತ್ತದೆ.
ಸೋನೋಮಾ ಡವ್ ಟ್ರೀ ಅನ್ನು ಅಲಂಕಾರಿಕ ಗಿಡ. ಇದರಲ್ಲಿ ಕಡಿಮೆ ಸಮಯದಲ್ಲಿ ಅನೇಕ ಹೂವುಗಳು ಅರಳುತ್ತವೆ. ಡೇವಿಡಿಯಾ ಇನ್ವೊಲುಕ್ರಾಟಾ ಜಾತಿಯ ಸಸ್ಯಗಳು ಹೆಮ್ಮರವಾಗಿ ಬೆಳೆಯಲು 10 ರಿಂದ 20 ವರ್ಷಗಳನ್ನು ತೆಗೆದುಕೊಳ್ಳುತ್ತದೆ.ಈ ಸಸ್ಯವನ್ನು ನೆಟ್ಟ 2 ರಿಂದ 3 ವರ್ಷಗಳಲ್ಲಿ ಹೂವುಗಳು ಅರಳಲು ಪ್ರಾರಂಭಿಸುತ್ತವೆ.
ಇದರ ಅತ್ಯಂತ ಪ್ರತಿಮಾರೂಪದ ವೈಶಿಷ್ಟ್ಯವೆಂದರೆ, ಕೊಂಬೆಗಳಿಂದ ನೇತಾಡುವ ಕರವಸ್ತ್ರಗಳು ಅಥವಾ ಪಾರಿವಾಳಗಳನ್ನು ಹೋಲುವ ದೊಡ್ಡ, ಬೀಸುವ ಬಿಳಿ ಕವಚಗಳು, ವಸಂತಕಾಲದ ಕೊನೆಯಲ್ಲಿ ಅದ್ಭುತ ದೃಶ್ಯ ಪ್ರದರ್ಶನವನ್ನು ಸೃಷ್ಟಿಸುತ್ತವೆ.