ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ತಯಾರಿಗೆ ಸಂಭವನೀಯ ಪ್ರಶ್ನೆಗಳು
1. ಮಹಾಭಾರತದ ಮಹಾಕಾವ್ಯದಲ್ಲಿ ಭೀಷ್ಮನ ಮುಂಚಿನ ಹೆಸರೇನಾಗಿತ್ತು
ಎ) ದೇವದತ್ತ ಬಿ) ದೇವವ್ರತ
ಸಿ) ದೇವಸಿಂಹ, ಡಿ) ದೇವವರ್ಮ
➤ ಉತ್ತರ : ಬಿ
2. ಇವುಗಳಲ್ಲಿ ಯಾವುದು ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ
ಎ) ಆಂಗ್ಲಭಾಷೆ ಬಿ) ಹಿಂದಿ ಭಾಷೆ
ಸಿ) ಅಸ್ಸಾಮಿ ಭಾಷೆ ಡಿ) ನಾಗಾ ಭಾಷೆ
➤ ಉತ್ತರ : ಎ)
3. ಪತ್ರಿಕಾ ಸ್ವಾತಂತ್ರವು ಸಂವಿಧಾನದ ಯಾವ ವಿಧಿಯನ್ನು ಆಧರಿಸಿ ರೂಪುಗೊಂಡಿದೆ
ಎ) ವಿಧಿ 21 ಬಿ) ವಿಧಿ 14
ಸಿ) ವಿಧಿ 19 ಡಿ) ವಿಧಿ 16
➤ ಉತ್ತರ : ಸಿ)
4. ಕುಸುಮ ಬಾಲೆ ಈ ಕೃತಿಯ ಕರ್ತೃ
ಎ) ದೇವನೂರು ಮಹದೇವ ಬಿ) ಎಸ್.ಎಲ್ ಬೈರಪ್ಪ
ಸಿ) ಯು.ಆರ್.ಅನಂತಮೂರ್ತಿ ಡಿ) ಲಂಕೇಶ್
➤ ಉತ್ತರ : ಎ
5. ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
ಎ) ರಾಜ ರಾಜ ಚೋಳ-1
ಬಿ) ರಾಜೇಂದ್ರ ಚೋಳ-2
ಸಿ) ಸಮುದ್ರ ಗುಪ್ತ
ಡಿ) ವಿಕ್ರಮಾದಿತ್ಯ
➤ ಉತ್ತರ : ಬಿ
6. ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
ಎ) ಖಾನ್ ಅಬ್ದುಲ್ ಗಫರ್ ಖಾನ್
ಬಿ) ರಾಜಗೋಪಾಲ ಚಾರಿ
ಸಿ) ಲಾಲಾ ಲಜಪತರಾಯ್
ಡಿ) ದಾದಾಬಾಯಿ ನವರೋಜಿ
➤ ಉತ್ತರ : ಡಿ
7. ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ
ಬಿ) ಸಂತತಿ
ಸಿ) ಆಸ್ತಿಗಳಿಕೆ
ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು
➤ ಉತ್ತರ : ಸಿ
8. ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ
ಎ) ಅಮಾವಾಸ್ಯೆಯಂದು
ಬಿ) ಶುಕ್ಲಪಕ್ಷದ ಮೊದಲ ವಾರ
ಸಿ) ಶೂಕ್ಲ ಪಕ್ಷದ ಮೂರನೆ ವಾರ
ಡಿ) ಹುಣ್ಣಿಮೆಯಂದು
➤ ಉತ್ತರ : ಎ
9. ಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು
ಎ) ಭಾರತ್ ಪೆಟ್ರೋಲಿಯಂ
ಬಿ) ಇಂಡಿಯನ್ ಆಯಿಲ್
ಸಿ) ಹಿಂದುಸ್ತಾನ್ ಪೆಟ್ರೋಲಿಯಂ
ಡಿ) ರಿಲಯನ್ಸ್
➤ ಉತ್ತರ : ಎ
10. 14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
ಎ) ಸಸಾರಜನಕ
ಬಿ) ಜೀವಸತ್ವ
ಸಿ) ಕೊಬ್ಬು
ಡಿ) ಹಾಲು
➤ ಉತ್ತರ : ಎ
11. ಪೂರ್ವ ದೇಶಗಳ ಪವಿತ್ರ ಗ್ರಂಥಗಳು (ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್) ಬರೆದಂತಹ ಜರ್ಮನ್ ವಿದ್ವಾಂಸನ ಹೆಸರೇನು?
ಎ) ಮ್ಯಾಕ್ಸ್ ಮುಲ್ಲರ್
ಬಿ) ವಿಲಿಯಂ ಶೇಕ್ಸ್ ಪಿಯರ್
ಸಿ) ಕಾರ್ಲ್ಮಾರ್ಕ್ಸ್
ಡಿ) ಮ್ಯಾಕ್ಸ್ ವೆಬರ್
➤ ಉತ್ತರ : ಎ
12. ಅಕೌಸ್ಟಿಕ್ಸ್ ಈ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂದಿಸಿದೆ
ಎ) ಅಕೌಂಟ್ಸ್
ಬಿ) ಭೌತಶಾಸ್ತ್ರ
ಸಿ) ಶಬ್ದ
ಡಿ) ವಿದ್ಯುಚ್ಛಕ್ತಿ
➤ ಉತ್ತರ : ಸಿ
13. ಭಾರತದ ಮೇಲೆ ಬಾಬರನು ಆಕ್ರಮಣವೆಸಗಿದಾಗ ದೆಹಲಿಯಲ್ಲಿ ಯಾವ ಅರಸೊತ್ತಿಗೆಯ ಆಳ್ವಿಕೆ ಇತ್ತು
ಎ) ಗುಲಾಮ
ಬಿ) ಖಿಲ್ಜಿ
ಸಿ) ಲೋಧಿ
ಡಿ) ತುಘಲಕ್
➤ ಉತ್ತರ : ಸಿ
14. ಇವರಲ್ಲಿ ಯಾವು 20 ನೇ ಶತಮಾನದಲ್ಲಿ ಬದುಕಿದ್ದ ಭಾರತದ ಮಹಾನ್ ಗಣಿತಜ್ಞ
ಎ) ಸರ್.ಸಿ.ವಿ.ರಾಮನ್
ಬಿ) ಶ್ರೀನಿವಾಸ ರಾಮಾನುಜಂ
ಸಿ) ಚಂದ್ರಶೇಖರ ಸುಬ್ರಮಣ್ಯಂ
ಡಿ) ಜಯಂತ ನಾರ್ಳೀಕರ್
➤ ಉತ್ತರ : ಬಿ
15. ಈ ಕೆಳಗಿನವರಲ್ಲಿ ಯಾರು ಖ್ಯಾತ ಯಕ್ಷಗಾನ ಕಲಾವಿದರು
ಎ) ಕಯ್ಯಾರ ಕಿಞ್ಞಣ್ಣರೈ
ಬಿ) ಕೆರೆಮನೆ ಶಂಭುಹೆಗಡೆ
ಸಿ) ಪ್ರಕಾಶ ರೈ
ಡಿ) ಗುರುಕಿರಣ
➤ ಉತ್ತರ : ಬಿ
16. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಯಾರು
ಎ) ಸರ್. ಎಂ.ವಿಶ್ವೇಶ್ವರಯ್ಯ
ಬಿ) ಬಿ.ಎಂ.ಶ್ರೀಕಂಠಯ್ಯ
ಸಿ) ಎಚ್.ವಿ.ನಂಜುಂಡಯ್ಯ
ಡಿ) ಕೆ.ಶ್ರೀನಿವಾಸರಾವ್
➤ ಉತ್ತರ :ಸಿ
17. ಇವುಗಳಲ್ಲಿ ಯಾವುದನ್ನು ಭೂಕಂಪವೊಂದರ ಮೂಲ ಬಿಂದುವೆಂದು ಕರೆಯಲಾಗುತ್ತದೆ
ಎ) ಎಪಿಸೆಂಟರ್
ಬಿ) ಸಿಸ್ಮಿಕ್ ಫೋಕಸ್
ಸಿ) ಕ್ವೇಕ್ ಸೆಂಟರ್
ಡಿ) ಟೆಕ್ಟೋನಿಕ್ ಪಾಯಿಂಟ್
➤ ಉತ್ತರ : ಬಿ
18. ಸಂಸ್ಕೃತ ಕೃತಿ ‘ಲೀಲಾವತಿ’ ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ತಂತ್ರಜ್ಞಾನ
ಬಿ) ಗಣಿತಶಾಸ್ತ್ರ
ಸಿ) ವಿಜ್ಞಾನ
ಡಿ) ವೈದ್ಯಕೀಯ ಶಾಸ್ತ್ರ
➤ ಉತ್ತರ : ಬಿ
19. ಜವಾಹರ್ ರೋಜ್ಗಾರ್ ಯೋಜನೆಯ ಉದ್ದೇಶ
ಎ) ಗ್ರಾಮೀಣ ಜನರಿಗೆ ವಸತಿಗಳನ್ನು ಕಲ್ಪಿಸುವುದು
ಬಿ) ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು,
ಸಿ) ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು
ಡಿ) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು
➤ ಉತ್ತರ : ಸಿ
20. ಇವುಗಳಲ್ಲಿ ಯಾವುದು ಪ್ರಾಥಮಿಕ ವರ್ಣಬಣ್ಣಗಳು
ಎ) ಕೆಂಪು, ಹಸಿರು, ನೀಲಿ
ಬಿ) ಕೆಂಪು, ಹಳದಿ, ನೀಲಿ
ಸಿ) ಹಳದಿ, ನೀಲಿ, ಹಸಿರು
ಡಿ) ಹಳದಿ, ಹಸಿರು,ಕೆಂಪು
➤ ಉತ್ತರ :ಎ
21. ಇವುಗಳನ್ನು ಹೊಂದಿಸಿ
ಎ) ಎಪಿಕಲ್ಚರ್ 1)ದ್ರಾಕ್ಷಿಬಳ್ಳಿ
ಬಿ)ಸಿಲ್ವಿಕಲ್ಚರ್ 2)ಮೀನು
ಸಿ)ವಿಟಿಕಲ್ಚರ್ 3)ಜೇನು
ಡಿ)ಪಿಸಿಕಲ್ಚರ್ 4)ವೃಕ್ಷಗಳು
ಎ ಬಿ ಸಿ ಡಿ
A) 1 4 3 2
B) 3 4 1 2
C) 1 3 4 4
D) 4 3 2 1
➤ ಉತ್ತರ : B
22. ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
14, 16, 13, 17, 12, 18, 11, ?
ಎ) 12
ಬಿ) 19
ಸಿ) 22
ಡಿ) 14
➤ ಉತ್ತರ :ಬಿ
23. ಇವರಲ್ಲಿ ಯಾರು ನಮಗೆ ಯೋಗ ಸೂತ್ರ ಗಳನ್ನು ನೀಡಿದವರು ಯಾರು
ಎ) ಕಣಾದ
ಬಿ) ವ್ಯಾಸ
ಸಿ) ಪತಂಜಲಿ
ಡಿ) ಗೌತಮ
➤ ಉತ್ತರ : ಸಿ
24. ಜಲಾಂತರರ್ಗಾಮಿಯಿಂದ ಸಮುದ್ರದ ಮೇಲ್ಮೈಯಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಬಳಸುವ ಉಪಕರಣ ಯಾವುದು
ಎ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್)
ಬಿ) ದೂರದರ್ಶಕ (ಟೆಲಿಸ್ಕೋಪ್)
ಸಿ) ಪೆರಿಸ್ಕೋಪ್
ಡಿ) ಎಲೆಕ್ಟ್ರೋಸ್ಕೋಪ್
➤ ಉತ್ತರ : ಸಿ
25. ಒಂದು ಚದರ ಕೀ.ಮೀ. ನಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯನ್ನು
ಎ. ಒಟ್ಟು ಜನಸಂಖ್ಯೆ ಎನ್ನುವರು
ಬಿ. ಕಿ.ಮೀ ಜನಸಂಖ್ಯೆ ಎನ್ನುವರು
ಸಿ. ಜನಸಾಂದ್ರತೆ ಎನ್ನುವರು
ಡಿ. ಸರಾಸರಿ ಜನಸಂಖ್ಯೆ ಎನ್ನುವರು
➤ ಉತ್ತರ : ಸಿ
26. ಒಂದು ವರ್ಷದಲ್ಲಿ ಜನಿಸುವ ಸಾವಿರ ಮಕ್ಕಳಲ್ಲಿ ಸರಾಸರಿ ಸಾವಿಗೀಡಾಗುವ ಮಕ್ಕಳ ಸಂಖ್ಯೆಯನ್ನು
ಎ. ಲಿಂಗಾನುಪಾತ ಎನ್ನುವರು
ಬಿ. ಕಚ್ಚಾ ಜನನಗತಿ ಎನ್ನುವರು
ಸಿ. ಮಕ್ಕಳ ಮತ್ರ್ಯತೆಯ ಗತಿ ಎನ್ನುವರು
ಡಿ. ಜನಸಾಂಧ್ರತೆ ಎನ್ನುವರು
➤ ಉತ್ತರ :ಸಿ
27. ಶೀತಲ ಸಮರದ ಸಂದರ್ಭದಲ್ಲಿ ಆದ ಒಪ್ಪಂದಗಳು
ಎ. ಸೇವ್ ಒಪ್ಪಂದ
ಬಿ. ನ್ಯಾಟೋ ಒಪ್ಪಂದ
ಸಿ. ಸಿಯಾಟೋ ಒಪ್ಪಂದ
ಡಿ. ಸಾಲ್ಟ್ ಒಪ್ಪಂದ
ಇ. ಸೆಂಟೋ ಒಪ್ಪಂದ
1. ಬಿ ಮತ್ತು ಇ
2. ಬಿ, ಸಿ, ಮತು ಇ
3. ಎ, ಬಿ, ಸಿ ಮತ್ತು ಡಿ
4. ಎ, ಬಿ, ಸಿ, ಮತ್ತು ಇ
➤ ಉತ್ತರ : 2
27. ಖಿಲಾಫತ್ ಚಳುವಳಿ ಅಂತ್ಯಗೊಳ್ಳಲ್ಲು ಪ್ರಮುಖ ಕಾರಣ
ಎ. ಬ್ರಿಟಿಷರು ಮುಸಲ್ಮಾನರಿಗೆ ರಿಯಾಯಿತಿ ನೀಡಿದ್ದರಿಂದ
ಬಿ. ಕಾಂಗ್ರೇಸ್ ಮತ್ತು ಮುಸ್ಲಿಂ ಲೀಗ್ ನಡುವೆ ಒಪ್ಪಂದವಾದ್ದರಿಂದ
ಸಿ. ಚೌರಿಚೌರಾ ಘಟನೆಯಿಂದ
ಡಿ. ಟರ್ಕಿಯ ಸುಲ್ತಾನನಾಗಿ ಕಮಾಲ್ ಪಾಷ ಅಧಿಕಾರ ವಹಿಸಿಕೊಂಡಿದ್ದರಿಂದ
➤ ಉತ್ತರ : ಡಿ
29. ಬ್ರಿಟಿಷರಿಗೆ ಫ್ರೇಂಚರಿಂದ ಮದ್ರಾಸನ್ನು ಪುನರ್ ಪಡೆಯಲು ಕಾರಣವಾದ ಒಪ್ಪಂದ
ಎ. ಪ್ಯಾರಿಸ್ ಒಪ್ಪಂದ
ಬಿ. ಎಕ್ಸ್- ಲಾ- ಚಾಪೆಲ್ ಒಪ್ಪಂದ
ಸಿ. ಮದ್ರಾಸ್ ಒಪ್ಪಂದ
ಡಿ. ಬರ್ಲಿನ್ ಒಪ್ಪಂದ
➤ ಉತ್ತರ : ಬಿ
30. ರಣಜಿತ್ ಸಿಂಗ್‍ನ ಸೈನ್ಯದ ಕುರಿತಾದ ಸರಿಯಾದ ಹೇಳಿಕೆ ಯಾವುದು
ಎ. ಹಿಂದೂಗಳು ಮತ್ತು ಮುಸ್ಲಿಂ ಸಮುದಾಯದ ಸಮಾನ ಸಂಖ್ಯೆಯ ಸೈನಿಕರನ್ನು ಹೊಂದಿದ್ದನು.
ಬಿ. ಭಾರತದಲ್ಲಿಯೇ ಅತ್ಯುತ್ತಮ ತರಬೇತಿ ಪಡೆದ ಸೈನ್ಯ ಹೊಂದಿದ್ದನು
ಸಿ. ಕಂಪನಿಯ ಸೈನ್ಯವನ್ನು ಎದುರಿಸುವ ಸಾಮಥ್ರ್ಯವಿದ್ದ ಸೈನ್ಯ ಹೊಂದಿದ್ದ
ಡಿ. ಜಗತ್ತಿನಲ್ಲಿ ಎರಡನೆಯ ಅತ್ಯುತ್ತಮ ಸೈನ್ಯ ಇವನ ಬಳಿ ಇತ್ತು.
➤ ಉತ್ತರ : ಸಿ
31. ಪ್ರತಿಪಾದನೆ – (ಎ) ರೈತವಾರಿ ಪದ್ಧತಿಯನ್ನು ಅಲೆಕ್ಸಾಂಡರ್ ರೀಡನು ಜಾರಿಗೊಳಿಸಿದನು.
(ಆರ್) ಇದು ಸರಕಾರ ಮತ್ತು ರೈತರ ನಡುವೆ ನೇರ ಸಂಪರ್ಕ ಕಲ್ಪಿಸಿತು.
ಎ. ಎ ಮತ್ತು ಆರ್ ಎರಡೂ ಸರಿ ಹಾಗೂ ಆರ್ ,ಎ ಗೆ ಸರಿಯಾದ ವಿವರಣೆಯಾಗಿದೆ.
ಬಿ. ಎ ಮತ್ತು ಆರ್ ಎರಡೂ ಸರಿ ಆದರೆ ಆರ್ , ಎ ಗೆ ಸರಿಯಾದ ವಿವರಣೆಯಲ್ಲ
ಸಿ. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
ಡಿ. ಎ ತಪ್ಪು ಆದರೆ ಆರ್ ಸರಿ
➤ ಉತ್ತರ : ಎ
32. ಗ್ರಾಹಕ ಸಂರಕ್ಷಣಾ ಕಾಯ್ದೆ ಅನ್ವಯವಾಗದ ಭಾರತದ ರಾಜ್ಯ
ಎ. ಗೋವಾ
ಬಿ. ಕರ್ನಾಟಕ
ಸಿ. ಮೇಘಾಲಯ
ಡಿ. ಜಮ್ಮುಕಾಶ್ಮೀರ
➤ ಉತ್ತರ : ಡಿ
33. ಬ್ಯಾಂಕುಗಳ ಕಾರ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ.
ಎ. ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಅಂಗೀಕರಿಸುವುದು
ಬಿ. ಎಲ್ಲಾ ವಿಧದ ಖಾತೆಗಳ ಹಣಕ್ಕೆ ಸಮಾನ ಬಡ್ಡಿದರವನ್ನು ನೀಡುತ್ತದೆ.
ಸಿ. ಭದ್ರತಾ ಕಪಾಟುಗಳ ಸೇವೆಗಳನ್ನು ಒದಗಿಸುತ್ತದೆ.
ಡಿ. ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು.
➤ ಉತ್ತರ : ಬಿ
34. ರಮೇಶ ಭವಿಷ್ಯದಲ್ಲಿ ಕಾರನ್ನು ಖರೀದಿಸಲು ಉದ್ದೇಶಿಸಿದ್ದು, ಅವನು ಹಣವನ್ನು ಉಳಿತಾಯ ಮಾಡಲು ಯಾವ ವಿಧದ ಖಾತೆಯನ್ನು ಸೂಚಿಸುವಿರಿ
ಎ. ಉಳಿತಾಯ ಖಾತೆ
ಬಿ. ಚಾಲ್ತಿ ಕಾತೆ
ಸಿ. ಆವರ್ತ ಠೇವಣಿ ಖಾತೆ
ಡಿ. ನಿಶ್ಚಿತ ಠೇವಣಿ ಖಾತೆ
➤ ಉತ್ತರ : ಸಿ
35. ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುವ ಹಂತಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ
ಎ. ಪ್ರಸ್ತಾವನೆಯ ಅರ್ಜಿ
ಬಿ. ಬ್ಯಾಂಕಿನ ಅಧಿಕಾರಿಯನ್ನು ಸಮಪರ್ಕಿಸುವುದಿ
ಸಿ. ಪ್ರಾರಂಭಿಕ ಠೇವಣಿ
ಡಿ. ಪರಿಚಿತರ ಉಲ್ಲೇಖವನ್ನು ಕೊಡುವುದು
ಇ. ಅಧಿಕಾರಿಯಿಂದ ಪರಿಶೀಲನೆ
1. ಎ, ಬಿ, ಡಿ, ಸಿ, ಇ
2. ಎ, ಬಿ, ಸಿ, ಡಿ, ಇ
3. ಬಿ, ಎ, ಡಿ, ಇ, ಸಿ
4. ಬಿ, ಎ, ಡಿ, ಸಿ, ಇ
➤ ಉತ್ತರ : 3
36. ಪ್ರತಿಪಾದನೆ ( ಎ) ಐರೋಪ್ಯದ ಬಗ್ಗೆ ಭಾರತೀಯ ವ್ಯಾಪಾರಿಗಳ ಸಂಬಂಧ ಸ್ನೇಹಪೂರ್ಣವಾಗಿತ್ತು.
(ಆರ್) ಐರೋಪ್ಯದ ವ್ಯಾಪಾರ ಭಾರತೀಯ ವರ್ತಕರ ಲಾಭಕ್ಕೆ ಕಾರಣವಾಗಿತ್ತು.
ಎ. ಎ ಮತ್ತು ಆರ್ ಗಳು ಎರಡೂ ಸರಿ ಹಾಗೂ ಆರ್ ,ಎ ಗೆ ಸರಿಯಾದ ವಿವರಣೆಯಾಗಿದೆ
ಬಿ. ಎ ಮತ್ತು ಆರ್ ಗಳು ಸರಿ ಆದರೆ ಆರ್ ಗೆ ಎ ಯು ಸರಿಯಾದ ವಿವರಣೆಯಲ್ಲ
ಸಿ. ಎ ಯು ಸರಿಯಾಗಿದೆ ಆದರೆ ಆರ್ ತಪ್ಪು
ಡಿ. ಎ ತಪ್ಪು ಆದರೆ ಆರ್ ಸರಿ
➤ ಉತ್ತರ : ಬಿ
37. ಜಾತ್ಯಾತೀತ ರಾಷ್ಟ್ರ ಎಂಬುದರ ಅರ್ಥ
ಎ. ರಾಷ್ಟ್ರವು ಧರ್ಮವನ್ನು ಹೊಂದಿವೆ
ಬಿ. ರಾಷ್ಟ್ರವು ಧರ್ಮ ನಿರಪೇಕ್ಷವಾಗಿದೆ
ಸಿ. ರಾಷ್ಟ್ರವು ಧರ್ಮ ವಿರೋಧಿಯಾಗಿದೆ
ಡಿ. ಧರ್ಮದ ವಿಷಯದಲ್ಲಿ ರಾಷ್ಟ್ರವು ಸಮಾನ ಧೋರಣೆಯನ್ನು ಹೊಂದಿದೆ.
➤ ಉತ್ತರ : ಡಿ
38. ಈ ಕೆಳಗಿನವುಗಳಲ್ಲಿ ಯಾವುದನ್ನು ಡಾ. ಬಿ. ಆರ್ ಅಂಬೇಡ್ಕರ್ ರವರು “ ಸಂವಿಧಾನದ ಹೃದಯ ಮತ್ತು ಆತ್ಮ ಎಂದು ವಿವರಿಸಿದ್ದಾರೆ.
ಎ. ಸಮಾನತೆಯ ಹಕ್ಕು
ಬಿ. ಶೋಷಣೆಯ ವಿರುದ್ಧ ಹಕ್ಕು
ಸಿ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಡಿ. ಸಂವಿಧಾನಾತ್ಮಕ ಪರಿಹಾರದ ಹಕ್ಕು
➤ ಉತ್ತರ : ಡಿ
39. ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಅಚಿತಿಮ ಅಧಿಕಾರ ಇದರಲ್ಲಿದೆ
ಎ. ಸಂಸತ್ತು
ಬಿ. ಉಚ್ಚ ನ್ಯಾಯಾಲಯ
ಸಿ. ಸರ್ವೋಚ್ಚ ನ್ಯಾಯಾಲಯ
ಡಿ. ರಾಜ್ಯ ಸರ್ಕಾರಗಳು
➤ ಉತ್ತರ : ಸಿ
40. ‘ಪ್ರಜಾಪ್ರಭುತ್ವ’ ವನ್ನು ಮೌಲ್ಯಿಕರಿಸುವ ದೃಷ್ಟಿಕೋನದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಗುಂಪಿಗೆ ಸೇರುವುದಿಲ್ಲ.
ಎ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು
ಬಿ. ವ್ಯಕ್ತಿಯ ಗೌರವ / ಘನತೆ
ಸಿ. ಬಹುಸಂಖ್ಯಾತರ ಆಳ್ವಿಕೆ
ಡಿ. ಕಾನೂನಿನ ಮುಂದೆ ಸಮಾನತೆ
➤ ಉತ್ತರ : ಸಿ
41. ಈ ಕೆಳಗಿನ ಲಕ್ಷಣಗಳ ಆಧಾರದ ಮೇಲೆ ಸರಿಯಾದ ಆಯ್ಕೆಯನ್ನು ಗುರುತಿಸಿ
1.ಭಾರತ ಮತ್ತು ಚೀನಾ ಇದರ ಭಾಗೀದಾರ ರಾಷ್ಟ್ರಗಳು
2. ಜವಹರಲಾಲ್ ನೆಹರು ಮತ್ತು ಚಾ. ಎನ್. ಲಾಯ್ ಇದರ ಸೃಷ್ಟಿಕರ್ತರು
3. 1954 ಜೂನ್ ತಿಂಗಳಿನಲ್ಲಿ ಇದು ಉಂಟಾಯಿತು
ಆಯ್ಕೆಗಳು –
ಎ. ಅಲಿಪ್ತ ನೀತಿ
ಬಿ. ನಿಶ್ಯಸ್ತ್ರೀಕರಣ
ಸಿ. ಪಂಚಶೀಲ
ಡಿ. ಸಪ್ತ
➤ ಉತ್ತರ : ಸಿ
42. ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ ಉತ್ತರವನ್ನು ಆಯ್ಕೆ ಮಾಡಿ
ಎ. ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ಹಂಚಿಕೆ – ಸಂಯುಕ್ತ ಸರ್ಕಾರ
ಬಿ. ವಿವಿಧ ಹಂತಗಳ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ – ಅಧಿಕಾರ ಪ್ರತ್ಯೇಕತೆ
ಈ ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ
ಎ. ಎ ಸರಿ ಆದರೆ ಬಿ ತಪ್ಪು
ಬಿ. ಎ ತಪ್ಪು ಆದರೆ ಬಿ ಸರಿ
ಸಿ. ಎ ಮತ್ತು ಬಿ ಎರಡೂ ಸರಿ
ಡಿ. ಎ ಮತ್ತು ಬಿ ಎರಡೂ ತಪ್ಪು
➤ ಉತ್ತರ : ಡಿ
43. ಈ ಕೆಳಗಿನ ಯಾವ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿಗಳು ಸಂವಿಧಾನದ 352 ನೇ ವಿಧಿಯಂತೆ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದಾಗಿದೆ.
ಎ. ಬಾಹ್ಯ ಆಕ್ರಮಣ
ಬಿ. ಸಶಸ್ತ್ರ ದಂಗೆ
ಸಿ. ಸರ್ಕಾರದ ಅಸ್ಥಿರತೆ
ಡಿ. ಹಣಕಾಸು ಮುಗ್ಗಟ್ಟು
ಸಂಕೇತಗಳು-
1. ಎ ಮತ್ತು ಬಿ
2. ಎ ಮತ್ತು ಡಿ
3. ಬಿ ಮತ್ತು ಸಿ
4. ಸಿ ಮತ್ತು ಡಿ
➤ ಉತ್ತರ : 1
44. ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ
ಪಟ್ಟಿ ವಿಷಯ
ಎ. ಕೇಂದ್ರ- ಅರಣ್ಯಗಳು
ಬಿ. ರಾಜ್ಯ – ಆರೋಗ್ಯ
ಸಿ. ಸಮವರ್ತಿ- ಶಿಕ್ಷಣ
ಮೇಲಿನ ಯಾವ ಜೋಡಿ/ ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿದೆ.
1. ಎ ಮತ್ತು ಬಿ
2. ಬಿ ಮತ್ತು ಸಿ
3. ಸಿ ಮಾತ್ರ
4. ಎ ಮಾತ್ರ
➤ ಉತ್ತರ : 2
45. ಕೆಳಗಿನವುಗಳಲ್ಲಿ ಪರಿಗಣಿಸಿ
ಭಾರತದ ಪ್ರಧಾನಮಂತ್ರಿಗಳು ಇದರ/ ಇವುಗಳ ಮುಖ್ಯಸ್ಥರಾಗಿದ್ದಾರೆ
ಎ. ಹಣಕಾಸು ಆಯೋಗ
ಬಿ. ಚುನಾವಣಾ ಆಯೋಗ
ಸಿ. ಸಂಸದೀಯ ಕಾರ್ಯಾಲಯ
ಈ ಕೆಳಗಿನ ಯಾವ ಹೇಳಿಕೆ/ ಹೇಳಿಕೆಗಳು ಸರಿಯಾಗಿವೆ
1. ಎ ಮಾತ್ರ
2. ಬಿ ಮತ್ತು ಸಿ ಮಾತ್ರ
3. ಎ ಮತ್ತು ಬಿ ಮಾತ್ರ
4. ಎ ಮತ್ತು ಸಿ ಮಾತ್ರ
➤ ಉತ್ತರ :4
46. ಈ ಕೆಳಗಿನ ಯಾವ ವಿಷಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಸಮಾನ ಅಧಿಕಾರವನ್ನು ಹೊಂದಿವೆ.
ಎ. ಸಂವಿಧಾನ ತಿದ್ದುಪಡಿ
ಬಿ. ಹೈಕೋರ್ಟ್ ನ್ಯಾಯಾದೀಶರ ಪದಚ್ಯುತಿ
ಸಿ. ಹಣಕಾಸಿನ ಮಸೂದೆ
1. ಎ ಮತ್ತು ಬಿ
2. ಬಿ ಮತ್ತು ಸಿ
3. ಎ ಮತ್ತು ಸಿ
4. ಎ, ಬಿ ಮತ್ತು ಸಿ
➤ ಉತ್ತರ : 1
47. ಈ ಕೆಳಗಿನ ಯಾವ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಎ. ಪಂಚಾಯತ್‍ಗಳು
ಬಿ. ಮುನಿಸಿಪಾಲಿಟಿಗಳು
ಸಿ. ಶಾಸಕಾಂಗ ಸಭೆಗಳು
ಡಿ. ರಾಜ್ಯಸಭೆ
ಇ. ಲೋಕಸಭೆ
ಆಯ್ಕೆಗಳು
1. ಎ ಮಾತ್ರ
2. ಬಿ ಮಾತ್ರ
3. ಎ ಮತ್ತು ಬಿ ಮಾತ್ರ
4. ಎ, ಬಿ, ಡಿ ಮತ್ತು ಇ
➤ ಉತ್ತರ : 3
48. ಈ ಕೆಳಗಿನವುಗಳಲ್ಲಿ ಯಾವುದು/ ಯಾವುವು ಭಾರತದ ಸಂಯುಕ್ತ ವ್ಯವಸ್ಥೆ ಲಕ್ಷಣಗಳನ್ನು ತಿಳಿಸುತ್ತದೆ.
ಎ. ಸಂವಿಧಾನದ ಸಾರ್ವಭೌಮತೆ
ಬಿ. ಅಖಿಲ ಭಾರತ ಸೇವೆಗಳು
ಸಿ. ತುರ್ತು ಪರಿಸ್ಥಿತಿಯ ಅಧಿಕಾರಗಳು
ಡಿ. ಅಧಿಕಾರ ವಿಭಜನೆ
ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ
1. ಎ, ಬಿ, ಸಿ, ಮತ್ತು ಡಿ
2. ಬಿ, ಸಿ, ಮತ್ತು ಡಿ
3. ಎ ಮತ್ತು ಡಿ ಮಾತ್ರ
4. ಎ ಮಾತ್ರ
➤ ಉತ್ತರ : 3
49. ಭಾರತದಲ್ಲಿ ಈ ಕೆಳಗಿನವುಗಳಲ್ಲಿ ಯಾರು ಸಾಮಾನ್ಯವಾಗಿ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಯಾಗುತ್ತಾರೆ
ಎ. ಲೋಕಸಭಾ ಸದಸ್ಯರು
ಬಿ. ರಾಜ್ಯಸಭಾ ಸದಸ್ಯರು
ಸಿ. ರಾಷ್ಟ್ರಪತಿಗಳು
ಡಿ. ಉಪರಾಷ್ಟ್ರಪತಿ
ಆಯ್ಕೆಗಳು
1. ಎ ಮಾತ್ರ
2. ಎ ಮತ್ತು ಬಿ ಮಾತ್ರ
3. ಎ, ಬಿ ಮತ್ತು ಸಿ ಮಾತ್ರ
4. ಬಿ, ಸಿ ಮತ್ತು ಡಿ ಮಾತ್ರ
➤ ಉತ್ತರ : 4
50. ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
ಎ) ವರ್ಸೆಲ್ಸ್ ಒಪ್ಪಂದ
ಬಿ) ಪ್ಯಾರಿಸ್ ಒಪ್ಪಂದ
ಸಿ) ವಾಷಿಂಗ್ಟನ್ ಒಪ್ಪಂದ
ಡಿ) ಲಂಡನ್ ಒಪ್ಪಂದ
➤ ಉತ್ತರ : ಎ
51. ಇವುಗಳಲ್ಲಿ ಯಾವುದರಿಂದ ಅಂಡಮಾನ್ ಸಮೂಹದ ಮತ್ತು ನಿಕೋಬಾರ್ ಸಮೂಹದ ದ್ವೀಪಗಳು ಪರಸ್ಪರ ಬೇರ್ಪಡಿಸಲ್ಪಟ್ಟಿವೆ
ಎ) ಗ್ರೇಟ್ ಚಾನೆಲ್
ಬಿ) ಟೆನ್ ಡಿಗ್ರಿ ಚಾನೆಲ್
ಸಿ) ಬಂಗಾಳ ಕೊಲ್ಲಿ
ಡಿ) ಅಂಡಮಾನ್ ಸಮುದ್ರ
➤ ಉತ್ತರ : ಬಿ
52. 1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ,
ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ,
ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,
ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ
➤ ಉತ್ತರ : ಬಿ
53. ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (National Agricultural Cooperative Marketing Federation of India Ltd-NAFED) ನ ಅಧ್ಯಕ್ಷರು ಯಾರು..?
1) ಬಿಜೇಂದರ್ ಸಿಂಗ್
2) ಸಂಜೀವ್ ಕುಮಾರ್ ಚಾಧಾ
3) ಅಜಯ್ ತ್ಯಾಗಿ
4) ಸುನಿಲ್ ಅರೋರಾ
➤ ಉತ್ತರ : 1
54. ಅಕ್ಟೋಬರ್ 29, 2020 ರಂದು ಯಾವ ರಾಷ್ಟ್ರೀಯ ಉದ್ಯಾನವನ್ನು ಯುನೆಸ್ಕೋ ಜೀವಗೋಳ ಮೀಸಲು (Biosphere Reserve ) ಪ್ರದೇಶವೆಂದು ಘೋಷಿಸಲಾಗಿದೆ..?
1) ಪೆಂಚ್ ರಾಷ್ಟ್ರೀಯ ಉದ್ಯಾನ (ಮಧ್ಯಪ್ರದೇಶ)
2) ಪನ್ನಾ ರಾಷ್ಟ್ರೀಯ ಉದ್ಯಾನ (ಮಧ್ಯಪ್ರದೇಶ)
3) ಬಾಂಧವಗ h ರಾಷ್ಟ್ರೀಯ ಉದ್ಯಾನ (ಮಧ್ಯಪ್ರದೇಶ)
4) ಕನ್ಹಾ ರಾಷ್ಟ್ರೀಯ ಉದ್ಯಾನ (ಮಧ್ಯಪ್ರದೇಶ)
➤ ಉತ್ತರ : 2
55. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಯಾವ ವಿಭಾಗದ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನವೆಂಬರ್ 24, 2020 ರಂದು 43 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಿದೆ (ಇಲ್ಲಿಯವರೆಗೆ ಒಟ್ಟು 220 ಚೈನೀಸ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ) ..?
1) ಸೆಕ್ಷನ್ 66 ಎ
2) ಸೆಕ್ಷನ್ 69 ಎ
3) ಸೆಕ್ಷನ್ 67 ಎ
4) ಸೆಕ್ಷನ್ 43
➤ ಉತ್ತರ : 2
56. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ..?
1) ಅಹಮದಾಬಾದ್, ಗುಜರಾತ್
2) ಆನಂದ್, ಗುಜರಾತ್
3) ಜೈಪುರ, ರಾಜಸ್ಥಾನ
4) ಉದಯಪುರ, ರಾಜಸ್ಥಾನ
➤ ಉತ್ತರ : 2
57. ಫಿನ್ಲೆಂಡ್ ಪ್ರಧಾನಿ ಯಾರು..?
1) ಜಸಿಂಡಾ ಆರ್ಟೆನ್
2) ಸನ್ನಾ ಮೆರೈನ್
3) ಆಂಗ್ ಸಾನ್ ಸೂಕಿ
4) ಕತ್ರಿನ್ ಜಾಕೋಬ್ಸ್‌ಡಾಟ್ಟಿರ್
➤ ಉತ್ತರ : 2
58. 2019ರ ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ ಯಾವಾಗ ಜಾರಿಗೆ ಬಂದಿತು?
1) ಅಕ್ಟೋಬರ್ 10, 2019
2) ಡಿಸೆಂಬರ್ 10, 2019
3) ಜನವರಿ 10, 2019
4) ಜನವರಿ 10, 2020
➤ ಉತ್ತರ : 4
59. ಹಿರಕುಡ್ ಅಣೆಕಟ್ಟು (ಭಾರತದ ಅತಿ ಉದ್ದದ ಅಣೆಕಟ್ಟು) ಎಲ್ಲಿದೆ..?
1) ಕೇರಳ 2) ಗುಜರಾತ್
3) ಮಧ್ಯಪ್ರದೇಶ 4) ಒಡಿಶಾ
➤ ಉತ್ತರ : 4
60. ರೇಡಿಯೊ-ಟ್ಯಾಗಿಂಗ್ ರಣಹದ್ದುಗಳ ಯೋಜನೆ (radio-tagging vultures)ಯನ್ನು ವಿಜ್ಞಾನಿಗಳು ಎಲ್ಲಿ ಪ್ರಾರಂಭಿಸಿದರು..?
1) ಮುದುಮಲೈ ಹುಲಿ ಮೀಸಲು (ತಮಿಳುನಾಡು)
2) ಪನ್ನಾ ಟೈಗರ್ ರಿಸರ್ವ್ (ಮಧ್ಯಪ್ರದೇಶ)
3) ಕನ್ಹಾ ಟೈಗರ್ ರಿಸರ್ವ್ (ಮಧ್ಯಪ್ರದೇಶ)
4) ಬಕ್ಸಾ ಟೈಗರ್ ರಿಸರ್ವ್ (ಪಶ್ಚಿಮ ಬಂಗಾಳ)
➤ ಉತ್ತರ : 2
61. ಶ್ರೀ ಗುರು ರಾಮ್ ದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯಾವ ರಾಜ್ಯದಲ್ಲಿದೆ..?
1) ಕೇರಳ 2) ಗುಜರಾತ್
3) ಮಧ್ಯಪ್ರದೇಶ 4) ಪಂಜಾಬ್
➤ ಉತ್ತರ : 4
62. ಚತ್ಬೀರ್ ಜೂಲಾಜಿಕಲ್ ಪಾರ್ಕ್ (Chhatbir Zoological Park ) ಎಂದೂ ಕರೆಯಲ್ಪಡುವ ಮೊಹಿಂದ್ರಾ ಚೌಧರಿ ಜೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿದೆ..?
1) ಉತ್ತರ ಪ್ರದೇಶ
2) ಪಂಜಾಬ್
3) ಮಧ್ಯಪ್ರದೇಶ
4) ಹರಿಯಾಣ
➤ ಉತ್ತರ : 2
63. OECD (Organisation for Economic Co-operation and Development) -ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ಯ ಪ್ರಧಾನ ಕಚೇರಿ ಎಲ್ಲಿದೆ?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಪ್ಯಾರಿಸ್, ಫ್ರಾನ್ಸ್
3) ನ್ಯೂಯಾರ್ಕ್ ನಗರ, ಯುಎಸ್
4) ರೋಮ್, ಇಟಲಿ
➤ ಉತ್ತರ : 2
64. ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ ( UNCTAD-United Nations Conference on Trade and Development) ಪ್ರಧಾನ ಕಚೇರಿ ಎಲ್ಲಿದೆ?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಮಾಂಟ್ರಿಯಲ್, ಕೆನಡಾ
3) ನ್ಯೂಯಾರ್ಕ್ ನಗರ, ಯುಎಸ್
4) ಜಿನೀವಾ, ಸ್ವಿಟ್ಜರ್ಲೆಂಡ್
➤ ಉತ್ತರ : 4
65. ಹಾರ್ನ್‌ಬಿಲ್ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತೆ..?
1) ಮಣಿಪುರ
2) ಅಸ್ಸಾಂ
3) ಮಿಜೋರಾಂ
4) ನಾಗಾಲ್ಯಾಂಡ್
➤ ಉತ್ತರ : 4
66. ರಾಷ್ಟ್ರೀಯ (ಭಾರತೀಯ) ‘ಅಂಗಾಂಗ ದಾನ ದಿನ’ವನ್ನು ಯಾವ ದಿನದಂದು ಆಚರಿಸಲಾಗುತ್ತದೆ..?
1) ನವೆಂಬರ್ 25
2) ನವೆಂಬರ್ 26
3) ನವೆಂಬರ್ 27
4) ನವೆಂಬರ್ 28
➤ ಉತ್ತರ : 3
67. ‘Simply Fly: A Deccan Odyssey’’ ಶೀರ್ಷಿಕೆಯ ಪುಸ್ತಕವನ್ನು (ಆತ್ಮಚರಿತ್ರೆ) ಬರೆದವರು ಯಾರು..?
1) ಜಿ.ಆರ್. ಗೋಪಿನಾಥ್
2) ವಿನಯ್ ಸೀತಾಪತಿ
3) ಫ್ರಾನ್ಸೆಸ್ಕಾ ಮರಿನೋ
4) ಅಭಿಜೀತ್ ಗುಪ್ತಾ
➤ ಉತ್ತರ : 1
68. ಯುನೈಟೆಡ್ ಸ್ಟೇಟ್ ಸೆನೆಟ್ ಎಷ್ಟು ಸದಸ್ಯರನ್ನು ಒಳಗೊಂಡಿದೆ. ?
1) 200
2) 300
3) 100
4) 150
➤ ಉತ್ತರ : 3
69. ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
1) ಸಿ.ರಾಜಗೋಪಾಲ ಚಾರಿ,
2) ಎಂ.ಕೆ.ಗಾಂಧಿ
3) ಜೆ.ಎಲ್.ನೆಹರು,
4) ಎಂ.ಎ.ಜಿನ್ನಾ
➤ ಉತ್ತರ : 2
70. ಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
1) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,
2) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ
3) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ
4) 1919-22 ರ ಮೊದಲ ಅಸಹಕಾರ ಚಳುವಳಿ
➤ ಉತ್ತರ : 2
71. ಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ
1) ಜಾನ್ ಮಥಾಯಿ
2) ಎಂ.ಎನ್.ರಾಯ್
3) ಎಂ.ವಿಶ್ವೇಶ್ವರಯ್ಯ
4) ಶ್ರೀಮನ್ ನಾರಾಯಣ್
➤ ಉತ್ತರ : 3
72. ಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ. ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ. ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
1) 2
2) 3
3) 4
4) 5
➤ ಉತ್ತರ : 2
73. ಶಬ್ಧ ಅಳೆಯುವ ಪ್ರಮಾಣ ಯಾವುದು
1) ನ್ಯೂಟನ್
2) ಜೌಲ್
3) ಡೆಸಿಬಲ್
4) ವ್ಯಾಟ್
➤ ಉತ್ತರ : 3
74. ಮೊದಲ ರೈಲ್ವೆ ಮಾರ್ಗ ಯಾವ ಗೌರ್ನರ್ ಜನರಲ್ ಕಾಲದಲ್ಲಿ ಪ್ರಾರಂಭವಾಯಿತು
1)ಡಾಲ್ ಹೌಸಿ
2) ವೆಲ್ಲೆಸ್ಲಿ
3) ಕಾರ್ನ್ವಾಲೀಸ್
4) ಯಾರು ಅಲ್ಲ
➤ ಉತ್ತರ : 1
75. ಇವುಗಳಲ್ಲಿ ಯಾವುದು ಭಾರತಕ್ಕೆ ಅತಿಹೆಚ್ಚು ವಿದೇಶಿವಿನಿಮಯಗಳಿಸಿ ಕೊಡುತ್ತದೆ
1) ಕಬ್ಬಿಣ & ಉಕ್ಕು
2) ಆಹಾರ ರಫ್ತು
3) ಪೆಟ್ರೋಲಿಯಂ
4)ಟೀ
➤ ಉತ್ತರ : 4