GKIndian ConstitutionSpardha Times

ರಾಷ್ಟ್ರಪತಿಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳು

Share With Friends

➤ ರಾಷ್ಟ್ರಪತಿ ಕುರಿತು ಸಂಕ್ಷಿಪ್ತ ಮಾಹಿತಿ : 
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.

➤ ಸಂಕ್ಷಿಪ್ತ ಇತಿಹಾಸ :
ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಆರನೇ ಜಾರ್ಜ್ ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು.

ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

➤ಮಹಾಭಿಯೋಗ : ಸಂವಿಧಾನದ 61 ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

# ಕೆಲವು ಪ್ರಮುಖ ಪ್ರಶ್ನೆಗಳು

( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)

1) ಭಾರತದ ರಾಷ್ಟ್ರಪತಿಯನ್ನು ಯಾರು ಆಯ್ಕೆಮಾಡುತ್ತಾರೆ ?
2) ಪೌರತ್ವ ಹೊಂದಲು ಅರ್ಹತೆಗಳನ್ನು ನೀಡಲು ಯಾರಿಗೆ ಅಧಿಕಾರ ಕೊಡಲಾಗಿದೆ ?
3) ಯಾವ ಅಧಾರದ ಮೇಲೆ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಬಹುದು ?
4)ಎರಡು ಬಾರಿ ಭಾರತದ ರಾಷ್ಟ್ರಾಧ್ಯಕ್ಷ ಆಗಿದ್ದವರು ಯಾರು ?
5)ಭಾರತದ ಸಂಸತ್ತು ಎಂದರೆ ?

6)ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ವಿವಾದಗಳನ್ನು ಬಗೆಹರಿಸುವವರು ಯಾರು ?
7)ರಾಷ್ಟ್ರಪತಿಯು ಅವಧಿಗೆ ಮುನ್ನವೇ ರಾಜೀನಾಮೆ ನೀಡಬೇಕೆಂದು ಬಯಸಿದಾಗ 1. ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕಾಗುತ್ತದೆ ?
8)ರಾಷ್ಟ್ರಧ್ಯಕ್ಷರು ಗರಿಷ್ಟ ಎಷ್ಟು ವಷ9 ವಯಸ್ಸಿನವರೆಗೆ ಅಧಿಕಾರದಲ್ಲಿ ಇರಬಹುದು ?
9)ತುತು9ಪರಿಸ್ಥಿತಿ ಘೋಷಣೆಯ ಅಂತಿಮ ಅಧಿಕಾರವಿರುವುದು ಯಾರಿಗೆ ?
10)ರಾಷ್ಟ್ರಪತಿ ಸ್ಥಾನ ಖಾಲಿ ಇದ್ದಾಗ ಎಷ್ಟು ದಿನಗಳೊಳಗೆ ಆ ಸ್ಥಾನವನ್ನು ತುಂಬಬೇಕು ?

11) ಹಣಕಾಸಿನ ಮಸೂದೆಯನ್ನು ರಾಷ್ಟ್ರಪತಿಗಳ ಅನುಮತಿಯೊಡನೆ ಮಂಡಿಸಬೇಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?
12)ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಬಾರಿ ಜಾರಿಯಾಗಿದೆ?
13)ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸು ಕೇಂದ್ರಾಡಳಿತ ಪ್ರದೇಶಗಳು ಯಾವುವು?
14) ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳು ಪ್ರಧಾನಿಯನ್ನು ನೇಮಕ ಮಾಡುತ್ತಾರೆ.. ?
15)ರಾಷ್ಟ್ರಾಧ್ಯಕ್ಷರು ಲೋಕಸಭೆಗೆ ಈ ಜನಾಂಗಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನೇಮಿಸಬಹುದು ?

16)ಭಾರತದ ಎರಡನೇ ರಾಷ್ಟ್ರಪತಿ ಯಾರು?
17)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
18)ಭಾರತದ ರಾಷ್ಟ್ರಪತಿಗಳ ಸಂಬಳ ಎಷ್ಟು (ಪ್ರಸ್ತುತ)
19)ಭಾರತದ ರಾಷ್ಟ್ರಪತಿಯಾಗಲು ಕನಿಷ್ಟ ವಯಸ್ಸು ಎಷ್ಟು ?
20) ಭಾರತದ ರಾಷ್ಟ್ರಪತಿಗಳು…?

21) ಅವಧಿಗೂ ಮುನ್ನ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು?
22) ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ?
23) ರಾಷ್ಟ್ರಪತಿಯವರು ಇವರ ಸಲಹೆಯ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು
24) ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕ ಯಾರು ?
25) ಭಾರತದ ರಾಷ್ಟ್ರಪತಿಯು ಯಾವುದರ ಅಖಂಡ ಭಾಗವಾಗಿದ್ದಾರೆ ?

26) ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಇವರು ನೇಮಿಸುತ್ತಾರೆ?
27) ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?
28) ಭಾರತ ಸಂವಿಧಾನಕ್ಕೆ ತಿದ್ದುಪಡಿ ಕಾರ್ಯವಿಧಾನವನ್ನು ಇವರು ಆರಂಭಿಸಬಹುದಾಗಿದೆ…
29)ಭಾರತ ಸಂವಿಧಾನದ ಪ್ರಕಾರ ಅಟಾರ್ನಿ ಜನರಲ್ ಅವರ ಸಂಬಳವನ್ನು ಯಾರು ನಿರ್ಧರಿಸುತ್ತಾರೆ?
30)ರಾಷ್ಟ್ರಪತಿ ಭವನ ಎಲ್ಲಿದೆ…?

31) 123 ವಿಧಿ ಎನನ್ನು ಹೇಳುತ್ತದೆ?
32) ವಿಧಿ 352 ಏನನ್ನು ಹೇಳುತ್ತದೆ?
33) ಸಾಮಾನ್ಯ ಮಸೂದೆಯನ್ನು ರಾಷ್ಟ್ರಪತಿಯವರು ಎಷ್ಟು ಬಾರಿ ತಿರಸ್ಕರಿಸಬಹುದು?

# ಉತ್ತರಗಳು :
1. ಲೋಕಸಭಾ ಮತ್ತು ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ
2. ರಾಷ್ಟ್ರಪತಿ
3. ಸಂವಿಧಾನದ ಉಲ್ಲಂಘನೆ
4. ಡಾ ರಾಜೇಂದ್ರ ಪ್ರಸಾದ್
5. ರಾಜ್ಯಸಭೆ,ಲೋಕಸಭೆ ಮತ್ತು ರಾಷ್ಟ್ರಪತಿ
6. ಸುಪ್ರೀಮ್ ಕೋಟ್9
7. ಉಪರಾಷ್ಟ್ರಪತಿಗೆ
8. ಗರಿಷ್ಟ ವಯೋಮಿತಿ ಇಲ್ಲಾ
9. ರಾಷ್ಟ್ರಪತಿಗಳಿಗೆ
10. 6 ತಿಂಗಳೊಳಗೆ
11. 117 ನೇ ವಿಧಿ
12. 3 ಬಾರಿ (1962, 1971, 1975 )
13. ದೆಹಲಿ, ಪಾಂಡಿಚೆರಿ
14. 75 ನೇ ವಿಧಿ
15. ಸಿ) ಆಂಗ್ಲೊ ಇಂಡಿಯನ್
16. ಡಾ.ಸರ್ವಪಲ್ಲಿ ರಾಧಾಕೃಷ್ಣನ್
17. ಶ್ರೀಮತಿ ಪ್ರತಿಭಾ ಪಾಟೀಲ್
18. 5 ಲಕ್ಷ,( ಪ್ರತಿ ತಿಂಗಳಿಗೆ)
19. 35 ವರ್ಷ
20. ನಾಮಮಾತ್ರ ಕಾರ್ಯಪಾಲರು,
21. ದೋಷಾರೋಪಣೆ
22. ರಾಷ್ಟ್ರಪತಿ
23. ಪ್ರಧಾನಮಂತ್ರಿ
24. ರಾಷ್ಟ್ರಪತಿ
25. ಸಂಸತ್ತಿನ
26. ರಾಷ್ಟ್ರಪತಿಗಳು
27. ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
28. ಲೋಕಸಭೆ, ರಾಜ್ಯಸಭೆ
29. ರಾಷ್ಟ್ರಪತಿ
30. ದೆಹಲಿ
31. ಸುಗ್ರೀವಾಜ್ಞೆ
32. ರಾಷ್ಟ್ರ ತುರ್ತು ಪರಿಸ್ಥಿತಿ
33. 2 ಬಾರಿ (3 ನೇ ಬಾರಿ ಸಹಿ ಹಾಕಲೇಬೇಕು)

Leave a Reply

Your email address will not be published. Required fields are marked *

error: Content Copyright protected !!