Multiple Choice Questions SeriesQUESTION BANKSpardha Times

ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ

Share With Friends

NOTE :  ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಚೀನಿ ಯಾತ್ರಿಕ ಯುವಾನ್ ಚ್ವಾಂಗ್ (ಹ್ಯೂಯೆನ್‍ತ್ಸಾಂಗ್) ಭಾರತಕ್ಕೆ ಬೇಟಿಯಿತ್ತಾಗ ಭಾರತದ ಆ ಕಾಲದ ಸಾಮಾನ್ಯ ಸ್ಥಿತಿಗಳು ಮತ್ತು ಸಂಸ್ಕøತಿಯ ಬಗೆಗೆ ಅವರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಳಗಿನ ಯಾವ ಹೇಳಿಕೆ/ ಗಳು ಸರಿ?
1. ರಸ್ತೆಗಳು ಮತ್ತು ಜಲಮಾರ್ಗಗಳು ಕಳ್ಳತನದಿಂದ ಸಂಪೂರ್ಣವಾಗಿ ಮುಕ್ತವಾಗಿದ್ದವು.
2. ಅಪರಾಧಿಗಳೋ ಅಥವಾ ನಿರಪರಾಧಿಗಳೋ ಎಂದು ನಿರ್ಧರಿಸಲು ಅಗ್ನಿ, ನೀರು ಮತ್ತು ವಿಷಗಳಿಂದ ಸತ್ವ ಪರೀಕ್ಷೆ ಮಾಡಲಾಗುತ್ತಿತ್ತು.
3. ವ್ಯಾಪಾರಸ್ಥರು ಬಂದರುಗಳಲ್ಲಿ ಮತ್ತು ಸುಂಕದ ಕಟ್ಟೆಗಳಲ್ಲಿ ಸುಂಕವನ್ನು ಕಟ್ಟಬೇಕಾಗಿತ್ತು.
ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಎ. 1 ಮಾತ್ರ
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 1, 2 ಮತ್ತು 3

2. ಬಂಗಾಳದ ತೇಭಂಗಾ ರೈತರ ಚಳುವಳಿಯ ಪ್ರಮುಖ ಬೇಡಿಕೆ ಯಾವುದಾಗಿತ್ತು?
ಎ. ಜಮೀನ್ದಾರರಿಗೆ ನೀಡುತ್ತಿದ್ದ ಬೆಳೆಯಲ್ಲಿನ ಪಾಲನ್ನು 1/2 ದಿಂದ 1/3 ಕ್ಕೆ ಇಳಿಸುವುದು.
ಬಿ. ಭೂಮಿಯ ಒಡೆತನವನ್ನು ಅದರ ಉಳುಮೆ ಮಾಡುವ ರೈತರಿಗೆ ನೀಡಬೇಕು.
ಸಿ. ಜಮೀನ್ದಾರಿ ಪದ್ಧತಿ ಮತ್ತು ಜೀತದಾಳು ಪದ್ಧತಿಯ ನಿರ್ಮೂಲನೆ
ಡಿ. ರೈತರ ಎಲ್ಲಾ ಸಾಲಗಳ ಮನ್ನಾ ಮಾಡುವಿಕೆಗಾಗಿ

3. ಬೌದ್ಧರ ಕೆಲವು ಗುಹಾಂತರ ದೇವಾಲಯಗಳನ್ನು ಚೈತ್ಯಗಳೆಂತಲೂ, ಉಳಿದವುಗಳನ್ನು ವಿಹಾರಗಳೆಂತಲೂ ಕರೆಯುತ್ತಾರೆ. ಅವೆರಡರ ಮಧ್ಯದಲ್ಲಿರುವ ವ್ಯತ್ಯಾಸವೇನು?
ಎ. ವಿಹಾರಗಳು ಪೂಜಾಸ್ಥಳಗಲಾಗಿವೆ. ಚೈತ್ಯಗಳು ಸನ್ಯಾಸಿಗಳ ಆವಾಸ ಸ್ಥಾನ.
ಬಿ. ಚೈತ್ಯಗಳು ಪೂಜಾಸ್ಥಳಗಳು, ವಿಹಾರಗಳು ಸನ್ಯಾಸಿಗಳ ಆವಾಸ ಸ್ಥಾನ.
ಸಿ. ಚೈತ್ಯ ಎಂದರೆ ಸ್ತೂಪವಾಗಿದ್ದು ಗುಹೆಯ ಕೊನೆಯ ಭಾಗದಲ್ಲಿರುತ್ತವೆ. ವಿಹಾರ ಅದಕ್ಕೆ ಹೊಂದಿಕೊಂಡಿರುವ ಹಜಾರವಾಗಿದೆ.
ಡಿ. ಅವೆರಡರ ಮಧ್ಯೆ ಯಾವುದೇ ಭೌತಿಕ ಭಿನ್ನತೆಯಿಲ್ಲ.

4. ಬೌದ್ಧ ಧರ್ಮದ ಪ್ರಕಾರ ನಿರ್ವಾಣದ ನಿಜ ಅರ್ಥ ಏನು?
ಎ. ಆಸೆಯ ಬೆಂಕಿಯನ್ನು ಆರಿಸುವುದು.
ಬಿ. ಅಹಂನ ಸಂಪೂರ್ಣ ಶೂನ್ಯೀಕರಣ
ಸಿ. ಪರಮಸುಖ ಮತ್ತು ವಿಶ್ರಾಂತಿಯ ಅವಸ್ಥೆ
ಡಿ. ಎಲ್ಲಾ ಬಗೆಯ ಗ್ರಹಣಶಕ್ತಿಗಳನ್ನು ಮೀರಿದ ಮಾನಸಿಕ ಸ್ಥಿತಿ.

5. ಈ ಕೆಳಗಿನ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?
ಎ. ರಾಜೇಂದ್ರ 1 – ರಾಜಕೇಸರಿ
ಬಿ. ರಾಜೇಂದ್ರ 1 – ಪಂಡಿತ ಚೋಳ
ಸಿ. ಕುಲೋತ್ತುಂಗ 1 – ಸುಗಂ ತವಿರತ್ತ
ಡಿ. ರಾಜಾಧಿರಾಜ – ಅಹಲಂಕಾ

6. ಕ್ರಿ.ಶ 10 ನೇ ಶತಮಾನದ ಆರಂಭ ಭಾಗದಲ್ಲಿ ಅರಬ್ ಪ್ರವಾಸಿಯಾದ ಅಲ್ – ಮಸೂದಿಯು ಯಾರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ?
ಎ. ಧರ್ಮಪಾಲ
ಬಿ. ದೇವಪಾಲ
ಸಿ. ಗೋಪಾಲ
ಡಿ. ಲಕ್ಷ್ಮಣಸೇನ

7.ತಮಿಳುನಾಡಿನಲ್ಲಿರುವ ಪ್ರಸಿದ್ಧವಾದ ಚಿದಂಬರಂ ದೇವಾಲಯ ಯಾವ ದೇವರಿಗೆ ಮೀಸಲಾಗಿದೆ?
ಎ. ಸುಬ್ರಮಣ್ಯ
ಬಿ. ನಟರಾಜ
ಸಿ. ಪಾರ್ವತಿ
ಡಿ. ವಿಷ್ಣು

8. ರುದ್ರಸೇನ 2 ಮತ್ತು ಪ್ರಭಾವತಿಯ ಸಂತತಿಯವರು ಅನೇಕ ತಲೆಮಾರುಗಳವರೆಗೆ ಆಳ್ವಿಕೆ ನಡೆಸಿದ ಪ್ರದೇಶ ಯಾವುದು?
ಎ. ಕಾಶ್ಮೀರ
ಬಿ. ಬಂಗಾಳ
ಸಿ. ದಕ್ಕಣ
ಡಿ. ಕನ್ಯಾಕುಬ್ಜ

9. ಚೋಳರ ಸೇನೆಯ ಅತ್ಯಂತ ಪ್ರಬಲವಾದ ಅಂಶ…….
ಎ. ಪದಾತಿದಳ
ಬಿ. ನೌಕಾದಳ
ಸಿ. ಅಶ್ವದಳ
ಡಿ. ಗಜಸೇನೆ

10. ಸ್ವಾತಂತ್ರ್ಯ ಸಂಗ್ರಾಮದ ಗುರಿ ಸ್ವರಾಜ್ಯ ಅಥವಾ ಸ್ವಯಂ ಆಡಳಿತ ಎಂದು ಘೋಷಿಸಿದ ರಾಷ್ಟ್ರೀಯ ನಾಯಕರು-
ಎ. ಗೋಪಾಲಕೃಷ್ಣ ಗೋಖಲೆ
ಬಿ. ಬಾಲಗಂಘಾಧರ ತಿಲಕ
ಸಿ. ಗಾಂಧೀಜಿ
ಡಿ. ಜವಾಹರಲಾಲ್ ನೆಹರು

11. ಬಾರ್ಡೋಲಿ ಸತ್ಯಾಗ್ರಹದ ನಾಯಕರು…..
ಎ. ಗಾಂಧೀಜಿ
ಬಿ. ವಲ್ಲಭಬಾಯಿ ಪಟೇಲ್
ಸಿ. ಲಾಲಾ ಲಜಪತ್‍ರಾಯ್
ಡಿ. ಜವಾಹರಲಾಲ್ ನೆಹರು

12. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಹು ಶಕ್ತಿಯುತವಾದ ಘೋಷಣೆ “ ಮಾಡು ಇಲ್ಲವೆ ಮಡಿ” ಈ ಘೋಷಣೆ ಕೊಟ್ಟವರು ಯಾರು?
ಎ. ಬಾಲಗಂಗಾಧರ ತಿಲಕ
ಬಿ ಗಾಂಧೀಜಿ
ಸಿ. ಆವಾಹರಲಾಲ್ ನೆಹರೂ
ಡಿ. ಸುಭಾಷಚಂದ್ರ ಬೋಸ್

13. ಮೊದಲ ಜಾಗತಿಕ ಯುದ್ಧದ ನಂತರ ಬ್ರಿಟಿಷರು ಆನುಸರಿಸಿದ ಟರ್ಕಿಯನ್ನು ನಿಶಸ್ತ್ರೀಕರಣಗೊಳಿಸುವ ಭಾರತದಲ್ಲಿ —– ಗೆ ದಾರಿ ಮಾಡಿಕೊಟ್ಟಿತು.
ಎ. ಅಸಹಕಾರ ಚಳುವಳಿ
ಬಿ. ಯಂಗ್ ಟರ್ಕ್ ಚಳುವಳಿ
ಸಿ. ಖಿಲಾಫತ್ ಚಳುವಳಿ
ಡಿ. ನಾಗರಿಕ ಕಾನೂನು ಭಂಗ ಚಳುವಳಿ

14. ಲಾಲಾ ಹರ್‍ದಯಾಳ್, ವಿ.ಡಿ. ಸಾವರ್ಕರ್ ಮತ್ತು ಶ್ಯಾಮ್‍ಜಿ ಕೃಷ್ಣಶರ್ಮ ಅವರು — ಆಗಿದ್ದರು.
ಎ. ಸಮಾಜ ಸುಧಾರಕರು
ಬಿ. ಕ್ರಾಂತಿಕಾರಕರು
ಸಿ. ಮಂದಗಾಮಿಗಳು
ಡಿ. ತೀವ್ರಗಾಮಿಗಳು

15. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ
ಎ. ರಾಜಕೀಯದ ಬಗ್ಗೆ ಅನೇಕ ಉಲ್ಲೇಖಗಳಿವೆ
ಬಿ. ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಮಾತ್ರ ವಿವರಗಳಿವೆ.
ಸಿ. ಸಾರ್ವಜನಿಕ ಅರ್ಥವ್ಯವಸ್ಥೆಯ ಬಗ್ಗೆ ವಿವರಗಳಿವೆ.***
ಡಿ. ತೆರಿಗೆಗಳ ಪಾವತಿಯ ಬಗ್ಗೆ ತಿಳುವಳಿಕೆಗಳಿವೆ.

16. ಕಾಂಗ್ರೆಸ್ ಇತಿಹಾಸದಲ್ಲಿ ಈ ಕೆಳಗಿನ ಘಟನೆಗಳು ಘಟಿಸಿದವು. ಅವುಗಳ ಕಾಲಾನುಕ್ರಮ ಸರಣಿಯನ್ನು ಗುರುತಿಸಿ.
1. ಲಂಡನ್‍ನಲ್ಲಿ ನಡೆದ ದುಂಡುಮೇಜಿನ ಪರಿಷತ್ತು
2. ಸತ್ಯಾಗ್ರಹ ಚಳುವಳಿ ಆರಂಭ
3. ಭಾರತ ಬಿಟ್ಟು ತೊಲಗಿ ಚಳುವಳಿ ಆರಂಭ
ಸಂಕೇತಗಳು:
ಎ. 1 2 3
ಬಿ. 1 3 2
ಸಿ. 2 3 1
ಡಿ. 2 1 3

17. ಪುಷ್ಯಮಿತ್ರ ಶುಂಗನಿಂದ ಹತನಾದ ಕೊನೆಯ ಮೌರ್ಯ ಅರಸ ಯಾರು?
ಎ. ಜಲೌಕ
ಬಿ. ಸಂಪ್ರತಿ
ಸಿ. ಬೃಹದ್ರತ
ಡಿ. ದಶರಥ

18. ಇವುಗಳಲ್ಲಿ ಯಾವುದು ಗಾಂಧಾರ ಕಲಾಶೈಲಿಯ ಲಕ್ಷಣವಲ್ಲ.?
ಎ. ಈ ಕಲಾಶೈಲಿಯ ಹೆಚ್ಚಿನ ಚಿತ್ರಗಳೆಲ್ಲ ಬೌದ್ಧ ಶಿಲ್ಪಗಳು
ಬಿ. ಅವು ಸಂಪೂರ್ಣವಾಗಿ ಭಾರತೀಯ ಮೂಲದ ಸ್ಫೂರ್ತಿಯನ್ನು ಪ್ರಕಟಿಸುತ್ತದೆ.
ಸಿ. ಈ ಕಲಾಶೈಲಿಯಲ್ಲಿ ಬುದ್ಧನ ಮುಖಕ್ಕೆ ಅಪೋಲೋ ದೇವತೆಯ ಮುಖ ಮಾದರಿಯಾಗಿದೆ.
ಡಿ. ಬುದ್ಧನ ಸಂಘಾಟಿಯು ಅವನ ಎರಡೂ ಭುಜಗಳನ್ನು ಮುಚ್ಚಿರುತ್ತವೆ.

19. ಕೆಳಗಿನ ಯಾರು ಮೌರ್ಯರ ಕಾಲದಲ್ಲಿ ಭೂಕಂದಾಯವನ್ನು ವಸೂಲಿ ಮಾಡುವ ಅಧಿಕಾರಿಗಳಾಗಿದ್ದರು?
ಎ. ರಾಜುಕರು
ಬಿ. ಅಗ್ರ ನೋಮಿಗಳು
ಸಿ. ವ್ಯವಹಾರಿಕರು
ಡಿ. ಮಹಾಮಾತ್ರರು

20. ‘ಜೈಜವಾನ್ ಜೈ ಕಿಸಾನ್ ‘ ಈ ಉದ್ಧರಣ ಯಾರಿಗೆ ಸೇರಿದ್ದು?
ಎ. ಜವಾಹರ್‍ಲಾಲ್ ನೆಹರೂ
ಬಿ. ಲಾಲ್ ಬಹದ್ದೂರ್ ಶಾಸ್ತ್ರಿ
ಸಿ. ಇಂದಿರಾಗಾಂಧಿ
ಡಿ. ಮಹಾತ್ಮಾಗಾಂಧಿ

[ ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ ]

# ಉತ್ತರಗಳು :
1. ಬಿ. 2 ಮತ್ತು 3
2. ಬಿ. ಭೂಮಿಯ ಒಡೆತನವನ್ನು ಅದರ ಉಳುಮೆ ಮಾಡುವ ರೈತರಿಗೆ ನೀಡಬೇಕು.
3. ಬಿ. ಚೈತ್ಯಗಳು ಪೂಜಾಸ್ಥಳಗಳು, ವಿಹಾರಗಳು ಸನ್ಯಾಸಿಗಳ ಆವಾಸ ಸ್ಥಾನ.
4. ಎ. ಆಸೆಯ ಬೆಂಕಿಯನ್ನು ಆರಿಸುವುದು.
5. ಡಿ. ರಾಜಾಧಿರಾಜ – ಅಹಲಂಕಾ
6. ಬಿ. ದೇವಪಾಲ
7. ಬಿ. ನಟರಾಜ
8. ಸಿ. ದಕ್ಕಣ
9. ಎ. ಪದಾತಿದಳ
10. ಸಿ. ಗಾಂಧೀಜಿ

11. ಬಿ. ವಲ್ಲಭಬಾಯಿ ಪಟೇಲ್
12. ಬಿ ಗಾಂಧೀಜಿ
13. ಸಿ. ಖಿಲಾಫತ್ ಚಳುವಳಿ
14. ಬಿ. ಕ್ರಾಂತಿಕಾರಕರು
15. ಡಿ. 2 1 3
16. ಸಿ. ಬೃಹದ್ರತ
17. ಬಿ. ಅವು ಸಂಪೂರ್ಣವಾಗಿ ಭಾರತೀಯ ಮೂಲದ ಸ್ಫೂರ್ತಿಯನ್ನು ಪ್ರಕಟಿಸುತ್ತದೆ.
18. ಬಿ. ಅಗ್ರ ನೋಮಿಗಳು
19. ಬಿ. ಲಾಲ್ ಬಹದ್ದೂರ್ ಶಾಸ್ತ್ರಿ

error: Content Copyright protected !!