ವರ್ಣಭೇದ ನೀತಿ
ಮಾನವನ ಚರ್ಮದ ಬಣ್ಣ ( ಬಿಳಿ ಮತ್ತು ಕಪ್ಪು) ಆಧಾರಿತ ತಾರತಮ್ಯ ನೀತಿಯನ್ನು ವರ್ಣಭೇದ ನೀತಿ ಎನ್ನುತ್ತಾರೆ. ಬಿಳಿಯರು ಉನ್ನತ ಮಟ್ಟದವರೆಂದೂ ಕರಿಯರು ಕೀಳು ಮಟ್ಟದವರೆಂದು ಪರಿಗಣಿಸಿ ಕರಿಯರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಕ್ಕುಗಳನ್ನು ನಿರಾಕರಿಸಲಾಗಿತ್ತು.
ದಕ್ಷಿಣ ಆಫ್ರಿಕದಲ್ಲಿ ಇಂತಹ ನೀತಿಯನ್ನು ಬಿಳಿಯರು ಅನುಸರಿಸುತ್ತಿದ್ದರು. ಭಾರತದಲ್ಲಿಯೂ ಸಹ ಬ್ರಿಟಿಷರು ವರ್ಣಭೇದ ನೀತಿಯನ್ನು ಅನುಸರಿಸಿ ಭಾರತೀಯರಿಗೆ ಅವರ ಸಹಜ ಮಾನವಹಕ್ಕುಗಳನ್ನು ನಿರಾಕರಿಸಿದ್ದರು. ವರ್ಣಭೇದ ನೀತಿಯನ್ನು ಮೊದಲ ಬಾರಿಗೆ ವಿರೋಧಿಸಿದವರೆಂದರೆ ಅಮೆರಿಕದ ಅಧ್ಯಕ್ಷ ಅಬ್ರಾಹಂ ಲಿಂಕನ್”. “ ಯಾರು ಯಾರಿಗೂ ಗುಲಾಮರಲ್ಲ,
ಯಾರು ಯಾರಿಗೂ ಒಡೆಯರಲ್ಲ, ಎಂದು ಘೋಷಣೆ ಮಾಡುತ್ತ ಅವರು ಅಮೇರಿಕದಲ್ಲಿ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಸಿದರು. ಅಮೆರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧವಾಗಿ ಹೋರಾಡಿದ ಇನ್ನೊರ್ವರು ಜೂನಿಯರ್ ಮಾರ್ಟಿನ್ ಲೂಥರ್ ಕಿಂಗ್, ಇವರನ್ನು ‘ಅಮೆರಿಕದ ಗಾಂಧಿ’ ಎನ್ನುವರು.
ವರ್ಣಭೇದ ನೀತಿಯ ವಿರುದ್ಧ ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿ ಶಾಂತಿಯುತ ಚಳುವಳಿಯನ್ನು ನಡೆಸಿದರು. ತದನಂತರ ನೆಲ್ಸನ್ ಮಂಡೇಲರವರು ಇವರಿಂದ ಪ್ರಭಾವಿತರಾಗಿ ದಕ್ಷಿಣ ಆಫ್ರಿಕದ ಕರಿಯರ ಹಕ್ಕು ಬಾಧ್ಯತೆಗಳಿಗಾಗಿ ಸುಧೀರ್ಘ ಹೋರಾಟ ನಡೆಸಿದರು. ಈ ಹೋರಾಟದ ಫಲವಾಗಿ ವರ್ಣಭೇದ ನೀತಿಯು ಕೊನೆಗೊಂಡಿತು.