Job NewsLatest Updates

Railway Recruitment : ರೈಲ್ವೆ ಇಲಾಖೆಯಲ್ಲಿ 5,810 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Share With Friends

Railway Recruitment : ರೈಲ್ವೆ ನೇಮಕಾತಿ ಮಂಡಳಿಗಳು (RRB ಗಳು) ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವೀಧರ) ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು (CEN) ಬಿಡುಗಡೆ ಮಾಡಿವೆ. ಈ ಪ್ರಮುಖ ನೇಮಕಾತಿ ಅಭಿಯಾನವು ವಿವಿಧ ಹುದ್ದೆಗಳಲ್ಲಿ ಒಟ್ಟು 5810 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅವರು ಅಕ್ಟೋಬರ್ 21, 2025 ರಿಂದ ನವೆಂಬರ್ 20, 2025 ರವರೆಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
•ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ – ‌161
•ಸ್ಟೇಷನ್ ಮಾಸ್ಟರ್ – 615 ಹುದ್ದೆ
•ಗೂಡ್ಸ್ ಟ್ರೈನ್ ಮ್ಯಾನೇಜರ್ – 3,416 ಹುದ್ದೆ
•ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – 921 ಹುದ್ದೆ
•ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 638 ಹುದ್ದೆ
•ಟ್ರಾಫಿಕ್ ಅಸಿಸ್ಟೆಂಟ್ – 59 ಹುದ್ದೆ

ವಿದ್ಯಾರ್ಹತೆ :
ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಟೈಪಿಂಗ್ ಬರುವುದು ಕಡ್ಡಾಯ.

ವಯೋಮಿತಿ :
18 ರಿಂದ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ.

ವೇತನ:
•ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ – ₹35,400
•ಸ್ಟೇಷನ್ ಮಾಸ್ಟರ್ – ₹35,400
•ಗೂಡ್ಸ್ ಟ್ರೈನ್ ಮ್ಯಾನೇಜರ್ – ₹29,200
•ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – ₹29,200
•ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – ₹29,200
•ಟ್ರಾಫಿಕ್ ಅಸಿಸ್ಟೆಂಟ್ – ₹25,500

ಅರ್ಜಿ ಶುಲ್ಕ:
ನವೆಂಬರ್ 20ರೊಳಗೆ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – ₹500 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇಎಸ್‌ಎಂ, ಇಬಿಸಿ, ವಿಶೇಷ ಚೇತನ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ– ₹250

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 21.10.2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ – 20.11.2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ – 22.11.2025

ಉದ್ಯೋಗ ಸ್ಥಳ
•ಅಹಮದಾಬಾದ್‌– 79 ಹುದ್ದೆಗಳು
•ಅಜ್ಮೀರ್‌ – 345 ಹುದ್ದೆಗಳು
•ಬೆಂಗಳೂರು – 241 ಹುದ್ದೆಗಳು
•ಭೂಪಾಲ್‌ – 382 ಹುದ್ದೆಗಳು
•ಭುವನೇಶ್ವರ – 231 ಹುದ್ದೆಗಳು
•ಬಿಲಾಸ್ಪುರ – 864 ಹುದ್ದೆಗಳು ‌
•ಚಂಡೀಗಢ – 199 ಹುದ್ದೆಗಳು
•ಚೆನ್ನೈ – 187 ಹುದ್ದೆಗಳು
•ಗೋರಖ್‌ಪುರ – 111 ಹುದ್ದೆಗಳು
•ಗುವಾಹಟಿ – 56 ಹುದ್ದೆಗಳು
•ಜಮ್ಮು ಹಾಗೂ ಶ್ರೀನಗರ – 32 ಹುದ್ದೆಗಳು
•ಕೋಲ್ಕತ್ತ – 685 ಹುದ್ದೆಗಳು
•ಮಾಲ್ಡಾ – 522 ಹುದ್ದೆಗಳು
•ಮುಂಬೈ – 596 ಹುದ್ದೆಗಳು
•ಮುಜಫರ್‌ಪುರ – 21 ಹುದ್ದೆಗಳು
•ಪಟ್ನಾ – 23 ಹುದ್ದೆಗಳು
•ಪ್ರಯಾಗ್‌ರಾಜ್‌ – 110 ಹುದ್ದೆಗಳು
•ರಾಂಚಿ – 651 ಹುದ್ದೆಗಳು
•ಸಿಕಂದರಾಬಾದ್‌ – 396 ಹುದ್ದೆಗಳು
•ಸಿಲಿಗುರಿ – 21 ಹುದ್ದೆಗಳು
•ತಿರುವನಂತಪುರಂ – 58 ಹುದ್ದೆಗಳು


Current Recruitments : ಪ್ರಸ್ತುತ ನೇಮಕಾತಿಗಳು

error: Content Copyright protected !!