ಸೂಪರ್ ಸ್ಟಾರ್ ರಜನಿಕಾಂತ್‌ಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಭಾರತದ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2019ನೇ ಸಾಲಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಘೋಷಣೆ ಮಾಡಲಾಗಿದೆ. ಕನ್ನಡ, ತಮಿಳು, ತೆಲಗು, ಮಲೆಯಾಳಂ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರಜನಿಕಾಂತ್ ಜಗತ್ ವಿಖ್ಯಾತರಾಗಿದ್ದಾರೆ. ಭಾರತದಲ್ಲಷ್ಟೇ ಅಲ್ಲ ಚೀನಾ, ಜಪಾನ್, ರಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಭಾಷಾಂತರಿತ ರಜನಿಕಾಂತ್ ಚಿತ್ರಗಳಿಗೆ ಜನಮನ್ನಣೆ ಸಿಕ್ಕಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದರು. ಚಿತ್ರರಂಗದ ನಟ, ನಿರ್ಮಾಪಕ, ಚಿತ್ರಕಥೆಗಾರ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸುತ್ತಿರುವುದಕ್ಕೆ ತಮಗೆ ಸಂತೋಷವಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಈ ಮೊದಲು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾಬೋಸ್ಲೆ, ನಿರ್ದೇಶಕ ಶುಭಾಶ್‍ಗಾಯ್, ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್‍ಲಾಲ್, ಹಿರಿಯ ನಟ ಬಿಸ್ವಜಿತ್ ಚಟರ್ಜಿ, ಗಾಯಕ ಶಂಕರ್ ಮಹದೇವನ್ ಅವರುಗಳನ್ನೊಳಗೊಂಡ ಆಯ್ಕೆ ಸಮಿತಿ ರಜನಿಕಾಂತ್ ಅವರ ಹೆಸರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಕೊನೆಗೆ ಕೇಂದ್ರ ಸರ್ಕಾರ ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಸ್ವರ್ಣ ಕಮಲ, 10 ಲಕ್ಷ ರೂ. ನಗದನ್ನು ಒಳಗೊಂಡಿದೆ.
ದಕ್ಷಿಣ ಭಾರತದಲ್ಲಿ ತಮಿಳಿನ ಎಲ್.ವಿ.ಪ್ರಸಾದ್ ಅವರಿಗೆ 1982ರಲ್ಲಿ, ಶಿವಾಜಿ ಗಣೇಶನ್ ಅವರಿಗೆ 1996ರಲ್ಲಿ, ರಜನಿಕಾಂತ್ ಅವರ ಗುರುಗಳಾದ ಕೆ.ಬಾಲಚಂದ್ರ ಅವರಿಗೆ 2010ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದರೆ, ಕನ್ನಡದ ಮೇರು ನಟ ಡಾ.ರಾಜ್‍ಕುಮಾರ್ ಅವರಿಗೆ 1995ರಲ್ಲಿ ಫಾಲ್ಕೆ ಪ್ರಶಸ್ತಿ ಪ್ರದಾನವಾಗಿದೆ. ತೆಲಗು ಚಿತ್ರರಂಗದ ಮೂವರಿಗೆ ಏಳು ಮಂದಿ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2018ರಲ್ಲಿ ಬಾಲಿವುಡ್‍ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಕೊರೊನಾದಿಂದಾಗಿ 2019ರ ಪ್ರಶಸ್ತಿಯನ್ನು ಘೋಷಣೆ ಮಾಡಲಿರಲಿಲ್ಲ. ಈಗ ಅಕೃತವಾಗಿ ಪ್ರಶಸ್ತಿ ಪ್ರಕಟವಾಗಿದೆ. ರಜನಿಕಾಂತ್ ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗಕ್ಕೆ ಕಾಲಿಟ್ಟ ಅವರು ಕ್ರಮೇಣ ತಮಿಳುನಾಡಿನಲ್ಲಿ ಪ್ರಖ್ಯಾತ ನಟರಾಗಿ ಇಂದು ತಲೈವ ಆಗಿದ್ದಾರೆ. ರಜನಿಕಾಂತ್ ಅವರ ಚಿತ್ರ ಬಿಡುಗಡೆ ದಿನ ದಕ್ಷಿಣ ಭಾರತದ ರಾಜ್ಯಗಳಲ್ಲಷ್ಟೇ ಅಲ್ಲ, ಉತ್ತರ ಭಾರತದ ಬಹಳಷ್ಟು ರಾಜ್ಯಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
# ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ :
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, ‘(ದುಂಡಿರಾಜ್ ಗೋವಿಂದ ಫಾಲ್ಕೆ)’ ಯವರ, ‘ಜನ್ಮ ಶತಾಬ್ದಿಯ ವರ್ಷ’ವಾದ 1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. ‘ಪ್ರತಿ ವರ್ಷದ ಪ್ರಶಸ್ತಿ’ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ’ದಲ್ಲಿ ನೀಡಲಾಗುತ್ತದೆ.
# ಯಾರು ಈ ದಾದಾಸಾಹೇಬ್ ಫಾಲ್ಕೆ..?
ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, ‘ದುಂಡಿರಾಜ್ ಗೋವಿಂದ ಫಾಲ್ಕೆ’ಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು. ಅವರು ಗತಿಸಿ 12 ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ. ಭಾರತದಲ್ಲಿ ಚಲನಚಿತ್ರ ಲೋಕವನ್ನು ಸೃಷ್ಟಿಸಿದ ಅವರ ಮನೆಯಲ್ಲಿ ಇಟ್ಟ ಹೆಸರು, ‘ಧುಂಡಿರಾಜ್ ಗೋವಿಂದ ಫಾಲ್ಕೆ’ಯೆಂದು. ಧುಂಡಿರಾಜರು, ಬರೋಡದ, ‘ಕಲಾಭವನ’ದ ಶಿಕ್ಷಣ ಮುಗಿಸಿ, ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ‘ಚಿತ್ರಕಾರ’ರಾಗಿ, ‘ಛಾಯಾಚಿತ್ರಗಾರ’ರಾಗಿ 1903 ರಲ್ಲಿ ‘ಖಾಯಂ ನೌಕರಿ’ಯಲ್ಲಿ ಭರ್ತಿಯಾದರು. ಧುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಚಲನಚಿತ್ರರಂಗದ ಮಾಯಾಲೋಕವನ್ನು ಈ ‘ಹರಿಶ್ಚಂದ್ರ ಚಿತ್ರ’ದ ಮುಖಾಂತರ, ಭಾರತೀಯ ಜನತೆಗೆ ಇತ್ತವರು, ‘ದಾದಾಸಾಹೇಬ್ ಫಾಲ್ಕೆ’ಯವರು. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ, ‘ದಾದಾ ಸಾಹೇಬ್ ಫಾಲ್ಕೆ’.
‘ಧುಂಡಿರಾಜ್’, ಜನಿಸಿದ್ದು ಮಹಾರಾಷ್ಟ್ರದ ‘ನಾಸಿಕ್’ ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ ‘ತ್ರ್ಯಂಬಕೇಶ್ವರ’ದ ವೈದಿಕ ಮನೆತನದಲ್ಲಿ. ಜನನ 1870 , ಏಪ್ರಿಲ್ 30. ತಂದೆ ‘”ಜಿಶಾಸ್ತ್ರಿ ಫಾಲ್ಕೆ” ಸಂಸ್ಕೃತ ಶಿಕ್ಷಕರಾಗಿದ್ದರು.ಚಿಕ್ಕಂದಿನಿಂದಲೂ ಧುಂಡಿರಾಜ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು.
# ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ :
ಪ್ರಶಸ್ತಿ – ವರ್ಷ – ವಿಜೇತರು- ಚಿತ್ರರಂಗಕ್ಕೆ ಸೇವೆ
17ನೇಯ-1969 – ದೇವಿಕಾ ರಾಣಿ-ನಟಿ
18ನೇಯ-1970 – ಬಿ. ಎನ್. ಸರ್ಕಾರ್-ನಿರ್ಮಾಪಕ
19ನೇಯ-1971- ಪೃಥ್ವಿರಾಜ್ ಕಪೂರ್-ನಟ
20ನೇಯ-1972 -ಪಂಕಜ್ ಮಲಿಕ್-ಸಂಗೀತ ನಿರ್ದೇಶಕ
21ನೇಯ-1973-ರುಬಿ ಮೇಯರ್ಸ್ (ಸುಲೋಚನಾ)-ನಟಿ
22ನೇಯ-1974-ಬೊಮ್ಮಿರೆಡ್ಡಿ ನರಸಿಂಹ ರೆಡ್ಡಿ -ನಿರ್ದೇಶಕ
23ನೇಯ-1975-ಧೀರೇಂದ್ರನಾಥ ಗಂಗೂಲಿ-ನಟ, ನಿರ್ದೇಶಕ
24ನೇಯ-1976-ಕಾನನ್ ದೇವಿ-ನಟಿ
25ನೇಯ-1977-ನಿತಿನ್ ಬೋಸ್-ಛಾಯಾಚಿತ್ರಗ್ರಾಹಕ, ನಿರ್ದೇಶಕ, ಲೇಖಕ
26ನೇಯ-1978-ರಾಯ್ ಚಂದ್ ಬೊರಾಲ್-ಸಂಗೀತ ನಿರ್ದೇಶಕ, ನಿರ್ದೇಶಕ
27ನೇಯ-1979-ಸೊಹ್ರಾಬ್ ಮೋದಿ- ನಟ, ನಿರ್ದೇಶಕ, ನಿರ್ಮಾಪಕ
28ನೇಯ-1980 – ಪೈದಿ ಜಯರಾಜ್-ನಟ, ನಿರ್ದೇಶಕ
29ನೇಯ-1981 – ನೌಶಾದ್- ಸಂಗೀತ ನಿರ್ದೇಶಕ
30ನೇಯ-1982 – ಎಲ್. ವಿ. ಪ್ರಸಾದ್ ನಟ- ನಿರ್ದೇಶಕ, ನಿರ್ಮಾಪಕ
31ನೇಯ-1983 -ದುರ್ಗಾ ಖೋಟೆ-ನಟಿ
32ನೇಯ-1984 -ಸತ್ಯಜಿತ್ ರೇ-ರ್ದೇಶಕ
33ನೇಯ-1985 –ವಿ. ಶಾಂತಾರಾಂ-ನಟ, ನಿರ್ದೇಶಕ, ನಿರ್ಮಾಪಕ
34ನೇಯ-1986 – ಬಿ. ನಾಗಿ ರೆಡ್ಡಿ-ನಿರ್ಮಾಪಕ
35ನೇಯ-1987 -ರಾಜ್ ಕಪೂರ್-ನಟ, ನಿರ್ದೇಶಕ
36ನೇಯ-1988 -ಅಶೋಕ್ ಕುಮಾರ್-ನಟ
37ನೇಯ-1989 -ಲತಾ ಮಂಗೇಶ್ಕರ್-ಹಿನ್ನೆಲೆ ಗಾಯಕಿ
38ನೇಯ-1990 -ಅಕ್ಕಿನೇನಿ ನಾಗೇಶ್ವರರಾವ್-ನಟ
39ನೇಯ-1991 -ಭಾಲ್ಜಿ ಪೆಂಢಾರ್ಕರ್-ನಿರ್ದೇಶಕ, ನಿರ್ಮಾಪಕ, ಲೇಖಕ
40ನೇಯ-1992 -ಭೂಪೇನ್ ಹಜಾರಿಕಾ-ಸಂಗೀತ ನಿರ್ದೇಶಕ
41ನೇಯ-1993 –ಮಜರೂಹ್ ಸುಲ್ತಾನಪುರಿ-ಗೀತ ರಚನೆಕಾರ
42ನೇಯ-1994 -ಲೀಪ್ ಕುಮಾರ್-ನಟ
43ನೇಯ-1995 -ರಾಜಕುಮಾರ್-ನಟ, ಹಿನ್ನೆಲೆ ಗಾಯಕ
44ನೇಯ-1996 -ಶಿವಾಜಿ ಗಣೇಶನ್ -ನಟ
45ನೇಯ-1997 –ಕವಿ ಪ್ರದೀಪ್-ಗೀತ ರಚನೆಕಾರ
46ನೇಯ-1998 -ಬಿ. ಆರ್. ಚೋಪ್ರಾ-ನಿರ್ದೇಶಕ, ನಿರ್ಮಾಪಕ
47ನೇಯ-1999 – ಹೃಷಿಕೇಶ್ ಮುಖರ್ಜಿ-ನಿರ್ದೇಶಕ
48ನೇಯ-2000 -ಆಶಾ ಭೋಸ್ಲೆ-ಹಿನ್ನೆಲೆ ಗಾಯಕಿ
49ನೇಯ-2001 -ಯಶ್ ಚೋಪ್ರಾ-ನಿರ್ದೇಶಕ, ನಿರ್ಮಾಪಕ
50ನೇಯ-2002 -ದೇವ್ ಆನಂದ್-ನಟ, ನಿರ್ದೇಶಕ, ನಿರ್ಮಾಪಕ
51ನೇಯ-2003 -ಮೃಣಾಲ್ ಸೇನ್-ನಿರ್ದೇಶಕ
52ನೇಯ-2004 -ಆಡೂರ್ ಗೋಪಾಲಕೃಷ್ಣನ್-ನಿರ್ದೇಶಕ
53ನೇಯ-2005 -ಶ್ಯಾಮ್ ಬೆನಗಲ್-ನಿರ್ದೇಶಕ
54ನೇಯ-2006 –ತಪನ್ ಸಿನ್ಹಾ-ನಿರ್ದೇಶಕ
55ನೇಯ-2007 -ಮನ್ನಾ ಡೇ-ಹಿನ್ನಲೆ ಗಾಯಕ
56ನೆಯ 2008 -ವಿ.ಕೆ.ಮೂರ್ತಿ-ಛಾಯಗ್ರಹಕ (ಸಿನಿಮಾಟೋಗ್ರಾಫರ್)
57ನೇಯ-2009 – ಡಿ. ರಾಮಾನಾಯ್ಡು-ನಿರ್ಮಾಪಕ
58ನೇಯ-2010 -ಕೆ. ಬಾಲಚಂದರ್-ನಿರ್ದೇಶಕ
59ನೇಯ-2011 -ಸೌಮಿತ್ರ ಚಟರ್ಜಿ-ನಟ
60ನೇಯ-2012 -ಪ್ರಾಣ್-ನಟ
61ನೇಯ-2013 -ಗುಲ್ಜಾರ್-ಕವಿ, ಗೀತ ರಚನೆಕಾರ, ನಿರ್ದೇಶಕ
62ನೇಯ-2014 -ಶಶಿ ಕಪೂರ್-ನಟ
63ನೆಯ -2015 -ಮನೋಜ್ ಕುಮಾರ್-ನಟ, ನಿರ್ದೇಶಕ
64ನೆಯ – 2016 -ಕಾಶಿನಾಧುನಿ ವಿಶ್ವನಾಥ್-ನಿರ್ದೇಶಕ-
65ನೆಯ-2017 -ವಿನೋದ್ ಖನ್ನಾ-ನಟ
66ನೆಯ-2018 -ಅಮಿತಾಭ್ ಬಚ್ಚನ್-ನಟ
67ನೆಯ-2019 – ರಜನಿ ಕಾಂತ್ -ನಟ
# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು