ದಾಖಲೆಯ 1.76 ಕೋಟಿ ರೂಪಾಯಿಗೆ ಮಾರಾಟವಾದ ಗಾಂಧೀಜಿ (Mahatma Gandhi) ಅಪರೂಪದ ಫೋಟೋ
Rare Oil Painting Of Mahatma Gandhi Sells For Rs 1.7 Crore In London : ಗಾಂಧೀಜಿಯವರ ಅಪರೂಪದ ತೈಲವರ್ಣ ಚಿತ್ರ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1931ರಲ್ಲಿ ಗಾಂಧೀಜಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್ಗೆ ಭೇಟಿ ನೀಡಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ಗಾಂಧೀಜಿಯ ಚಿತ್ರವನ್ನು ರಚಿಸಿದ್ದರು. ಗಾಂಧಿ ಕಲಾವಿದರೆದುರು ಕುಳಿತು ರಚಿಸಿದ ಏಕೈಕ ತೈಲವರ್ಣ ಚಿತ್ರ ಇದಾಗಿದೆ.
ಇದು ಬಹಳ ವಿಶೇಷವಾದ ಕಲಾಕೃತಿಯಾಗಿದೆ. ಈ ಕಲಾಕೃತಿಯನ್ನು 50 ರಿಂದ 70 ಸಾವಿರ ಪೌಂಡ್ಸ್ ಮೂಲಬೆಲೆ ನಿರ್ಧರಿಸಲಾಗಿತ್ತು, ಆದರೆ ಮಂಗಳವಾರ ಮುಕ್ತಾಯವಾದ ಹರಾಜಿನಲ್ಲಿ ಈ ಕಲಾಕೃತಿ 1,52,800 ಪೌಂಡ್ಸ್ (1.76 ಕೋಟಿ ರೂ.)ಗೆ ಹರಾಜಾಗಿದೆ ಎಂದು ಬೋನ್‌ಹ್ಯಾಮ್ಸ್ ಹರಾಜು ಕೇಂದ್ರದ ಮುಖ್ಯಸ್ಥೆ ರೈನಾನ್ ಡೆಮೆರಿ ತಿಳಿಸಿದ್ದಾರೆ.
ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್ ಬಿಡಿಸಿದ ಈ ಚಿತ್ರಕ್ಕೆ 50,000-70,000 ಪೌಂಡ್‌ಗಳ ಬೆಲೆ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಮೂರು ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ. ಟ್ರಾವೆಲ್ ಮತ್ತು ಎಕ್ಸ್‌ಪ್ಲೋರೇಷನ್ ಆನ್‌ಲೈನ್ ಮಾರಾಟದಲ್ಲಿ ಅತ್ಯುತ್ತಮ ಮಾರಾಟದ ಚಿತ್ರವಾಗಿಯೂ ಇದು ದಾಖಲೆ ನಿರ್ಮಿಸಿದೆ. ಗಾಂಧೀಜಿಯವರ ಈ ಚಿತ್ರವನ್ನು ಹಿಂದೆಂದೂ ಹರಾಜು ಹಾಕಿರಲಿಲ್ಲ ಎಂದು ಬೋನ್‌ಹ್ಯಾಮ್ಸ್ ಮಾರಾಟ ಮುಖ್ಯಸ್ಥ ರಿಯಾನಾನ್ ಡೆಮೆರಿ ಹೇಳಿದ್ದಾರೆ.
1974ರಲ್ಲಿ ಆಯಿಲ್ ಪೇಟಿಂಗ್‌ನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಹಿಂದೂ ಬಲಪಂಥೀಯ ಕಾರ್ಯಕರ್ತ ಚಾಕುವಿನಿಂದ ಫೋಟೋಗೆ ಹಾನಿ ಮಾಡಲು ಪ್ರಯತ್ನಿಸಿದ್ದರು. ಇಂದಿಗೂ ಈ ಫೋಟೋದ ಮೇಲೆ ಚಾಕುವಿನಿಂದ ಮಾಡಿದ ಹಾನಿಯನ್ನು ಗಮನಿಸಬಹುದು.
ಬ್ರಿಟಿಷ್ ಕಲಾವಿದೆ ಕ್ಲೇರ್ ಲಿಂಗ್ಟನ್ 1989ರಲ್ಲಿ ನಿಧನರಾಗುತ್ತಾರೆ. ಆನಂತರ ಈ ಆಯಿಲ್ ಪೇಂಟಿಂಗ್ ಕ್ಲೇರ್ ಲಿಂಗ್ಟನ್ ಕುಟುಂಬದ ಸುಪರ್ದಿಗೆ ಸೇರಿತು. 1931ರಲ್ಲಿ ಗಾಂಧೀಜಿಯವರು ಲಂಡನ್‌ನಲ್ಲಿ ನಡೆದ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಲಾವಿದ ಕ್ಲೇರ್ ಲೈಟನ್ ನೇರವಾಗಿ ಗಾಂಧೀಜಿಯವರನ್ನು ಭೇಟಿಯಾಗಿ ಈ ಚಿತ್ರ ಬಿಡಿಸಿದ್ದರು.