Job NewsLatest Updates

CFTRI Recruitment : ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Share With Friends

CFTRI Recruitment in Central Food Technological Research Institute
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ- ಸಿಎಫ್‌ಟಿಆರ್‌ಐ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಪಾಸಾದವರಿಗೆ ವಿವಿಧ ಹುದ್ದೆಗಳಿದ್ದು, ಇದೀಗ ಅಗತ್ಯ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಒಟ್ಟಾರೆ 16 ಹುದ್ದೆಗಳಿದ್ದು, ಅರ್ಜಿಗೆ ಮೇ 07, 2025 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ :
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ – 10 ಹುದ್ದೆಗಳು
ಜೂನಿಯರ್ ಸ್ಟೆನೋಗ್ರಾಫರ್ – 06 ಹುದ್ದೆಗಳು

ವೇತನ ಶ್ರೇಣಿ :
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : Rs.19,000- 63,200.
ಜೂನಿಯರ್ ಸ್ಟೆನೋಗ್ರಾಫರ್ : Rs.25,500 – 81,100.

ವಯೋಮಿತಿ :
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ ಹುದ್ದೆಗೆ 28 ವರ್ಷ ವಯಸ್ಸು ಮೀರಿರಬಾರದು. ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗೆ 27 ವರ್ಷ ವಯಸ್ಸು ಮೀರಿರಬಾರದು
ಒಬಿಸಿ ಕೆಟಗರಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವಿದ್ಯಾರ್ಹತೆ :
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ ಹುದ್ದೆಗೆ ದ್ವಿತೀಯ ಪಿಯುಸಿ ಜತೆಗೆ ಕಂಪ್ಯೂಟರ್ ಟೈಪಿಂಗ್ ಸ್ಕಿಲ್‌ ಹೊಂದಿರಬೇಕು.
ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗೆ ದ್ವಿತೀಯ ಪಿಯುಸಿ ಜತೆಗೆ ಸ್ಟೆನೋಗ್ರಫಿ ಕೌಶಲ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಮೇಲಿನ ಹುದ್ದೆಗಳಲ್ಲಿ ಆಸಕ್ತಿ ಇರುವವರು ವೆಬ್‌ ವಿಳಾಸ https://cftri.res.in / https://recruitment.cftri.res.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಅಧಿಕೃತ ವೆಬ್‌ಸೈಟ್‌ https://cftri.res.in/ ಗೆ ಭೇಟಿ ನೀಡಿ,

* Current Recruitments : ಪ್ರಸ್ತುತ ನೇಮಕಾತಿಗಳು : ಪ್ರಸ್ತುತ ನೇಮಕಾತಿಗಳು

error: Content Copyright protected !!