Job NewsLatest Updates

Technical Assistant Recruitment : RITES ಸಂಸ್ಥೆಯಲ್ಲಿ 150 ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ನೇಮಕಾತಿ

Share With Friends

RITES Senior Technical Assistant Recruitment 2025 – 150 Posts

ರೈಟ್‌ಸ್ ಲಿಮಿಟೆಡ್‌ (RITES Limited – A Govt. of India Enterprise) ಸಂಸ್ಥೆ 2025ನೇ ಸಾಲಿನಲ್ಲಿ ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (Mechanical) ಹುದ್ದೆಗಳಿಗೆ 150 ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಡಿಪ್ಲೋಮಾ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 9 ರಿಂದ ಡಿಸೆಂಬರ್ 30, 2025ರವರೆಗೆ rites.com ವೆಬ್‌ಸೈಟ್ ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ :
ಅಧಿಸೂಚನೆಯ ಪ್ರಕಾರ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಕ್ರಮವಾಗಿ 50, 75, 10 ಮತ್ತು 15 ಹುದ್ದೆಗಳು ಲಭ್ಯವಿದ್ದು ಒಟ್ಟು 150 ಹುದ್ದೆಗಳಿವೆ.

ಅರ್ಹತೆ ಮತ್ತು ಅನುಭವ :
ಮೆಕ್ಯಾನಿಕಲ್, ಪ್ರೊಡಕ್ಷನ್, ಮ್ಯಾನದ್ಯುಫ್ಯಾಕ್ಚರಿಂಗ್, ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಮುಂತಾದ ವಿಭಾಗಗಳಲ್ಲಿ ಡಿಪ್ಲೋಮಾ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೇಲ್ಪಟ್ಟ (Degree/PG) ಅರ್ಹತೆ ಹೊಂದಿದವರೂ ಅರ್ಹರು. ಸಾಮಾನ್ಯ/EWS ಅಭ್ಯರ್ಥಿಗಳು ಕನಿಷ್ಠ 50% ಅಂಕ, SC/ST/OBC/PWD ಅಭ್ಯರ್ಥಿಗಳು 45% ಅಂಕ ಹೊಂದಿರಬೇಕು. ಕನಿಷ್ಠ 2 ವರ್ಷಗಳ ಸಂಬಂಧಿತ ಅನುಭವ ಕಡ್ಡಾಯ. Apprenticeship ಅವಧಿಯನ್ನು ಅನುಭವವಾಗಿ ಪರಿಗಣಿಸಲಾಗುತ್ತದೆ.

ಸಂಬಳ ಮತ್ತು ವಯೋಮಿತಿ :
ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ರೂ. 29,735/- ಮಾಸಿಕ CTC ನೀಡಲಾಗುತ್ತದೆ. ವಯೋಮಿತಿ ಗರಿಷ್ಠ 40 ವರ್ಷ. SC/ST/OBC, PWD, ಎಕ್ಸ್-ಸರ್ವಿಸ್‌ಮನ್‌ಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ಲಭ್ಯ.

ಅರ್ಜಿಶುಲ್ಕ :
ಸಾಮಾನ್ಯ/OBC ಅಭ್ಯರ್ಥಿಗಳಿಗೆ ರೂ. 300 ಮತ್ತು EWS/SC/ST/PWD ಅಭ್ಯರ್ಥಿಗಳಿಗೆ ರೂ. 100 ಶುಲ್ಕ ನಿಗದಿಯಾಗಿದೆ.

ಪ್ರಮುಖ ದಿನಾಂಕಗಳು :
ಅರ್ಜಿ ಪ್ರಾರಂಭ: 09-12-2025
ಅಂತಿಮ ದಿನಾಂಕ: 30-12-2025
ಲೆಖಿತ ಪರೀಕ್ಷೆ: 11-01-2026 (3.00–5.30 PM)

ಆಯ್ಕೆ ವಿಧಾನ
ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿ 125 ಪ್ರಶ್ನೆಗಳ ಲೆಖಿತ ಪರೀಕ್ಷೆ ಮೂಲಕ ಮೌಲ್ಯಮಾಪನ ನಡೆಯಲಿದೆ. ನೆಗೆಟಿವ್ ಮಾರ್ಕಿಂಗ್ ಇಲ್ಲ. ನಂತರ ದಾಖಲೆ ಪರಿಶೀಲನೆ ನಡೆಯಲಿದ್ದು, ಅಂತಿಮ ಆಯ್ಕೆ RITES ನಿಯಮಾನುಸಾರ ಮಾಡಲಾಗುವುದು.

ಅಧಿಕೃತ ವೆಬ್‌ಸೈಟ್: www.rites.com
ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!