Job NewsLatest Updates

ರೈಲ್ವೆ ನೇಮಕಾತಿ ಮಂಡಳಿ(RRB)ಯಲ್ಲಿ 22,000 ಗ್ರೂಪ್ ಡಿ ಹುದ್ದೆಗಳ ನೇಮಕಾತಿ

Share With Friends

RRB Recruitment 2026 : ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB) 2026ನೇ ಸಾಲಿನ ಗ್ರೂಪ್ D ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 22,000 (ತಾತ್ಕಾಲಿಕ) ಗ್ರೂಪ್ D ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ITI ಹಾಗೂ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜನವರಿ 20, 2026ರಿಂದ ಆರಂಭವಾಗಲಿದ್ದು, ಫೆಬ್ರವರಿ 20, 2026ರಂದು ಕೊನೆಗೊಳ್ಳಲಿದೆ. ಅಭ್ಯರ್ಥಿಗಳು ಅಧಿಕೃತ RRB ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿವರಗಳು
ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆ ಹೆಸರು: ಗ್ರೂಪ್ D
ಒಟ್ಟು ಹುದ್ದೆಗಳು: 22,000 (ತಾತ್ಕಾಲಿಕ)
ವೇತನ: ರೂ. 18,000 (7ನೇ ವೇತನ ಆಯೋಗದ ಪ್ರಕಾರ)
ಅರ್ಹತೆ: ITI / 10ನೇ ತರಗತಿ
ವಯೋಮಿತಿ: 18 ರಿಂದ 33 ವರ್ಷ
ಅಧಿಕೃತ ವೆಬ್‌ಸೈಟ್: rrbchennai.gov.in, indianrailways.gov.in

ಖಾಲಿ ಸ್ಥಾನಗಳ ವಿವರ :
ಅಸಿಸ್ಟೆಂಟ್ (ಟ್ರ್ಯಾಕ್ ಮೆಷಿನ್) – 600
ಅಸಿಸ್ಟೆಂಟ್ (ಬ್ರಿಡ್ಜ್) – 600
ಟ್ರ್ಯಾಕ್ ಮೆಂಟೇನರ್ (ಗ್ರೂಪ್ IV) – 11,000
ಅಸಿಸ್ಟೆಂಟ್ (P-Way) – 300
ಅಸಿಸ್ಟೆಂಟ್ (TRD) – 800
ಅಸಿಸ್ಟೆಂಟ್ ಲೋಕೋ ಶೆಡ್ (ಇಲೆಕ್ಟ್ರಿಕಲ್) – 200
ಅಸಿಸ್ಟೆಂಟ್ ಆಪರೇಷನ್ಸ್ (ಇಲೆಕ್ಟ್ರಿಕಲ್) – 500
ಅಸಿಸ್ಟೆಂಟ್ (TL & AC) – 50
ಅಸಿಸ್ಟೆಂಟ್ (C & W) – 1,000
ಪಾಯಿಂಟ್ಸ್‌ಮ್ಯಾನ್ B – 5,000
ಅಸಿಸ್ಟೆಂಟ್ (S & T) – 1,500
ಒಟ್ಟು: 22,000 ಹುದ್ದೆಗಳು

ಅರ್ಹತಾ ಮಾನದಂಡ :
ಅಭ್ಯರ್ಥಿಗಳು 10ನೇ ತರಗತಿ ಅಥವಾ ITI ಪಾಸ್ ಆಗಿರಬೇಕು

ವಯೋಮಿತಿ (01-01-2026ಕ್ಕೆ ಅನ್ವಯ)
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 33 ವರ್ಷ
ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯ

ಅರ್ಜಿ ಶುಲ್ಕ :
ಶಾರ್ಟ್ ನೋಟಿಫಿಕೇಶನ್‌ನಲ್ಲಿ ಇನ್ನೂ ಪ್ರಕಟಿಸಲಾಗಿಲ್ಲ

ಮುಖ್ಯ ದಿನಾಂಕಗಳು
ಶಾರ್ಟ್ ನೋಟಿಫಿಕೇಶನ್ ಬಿಡುಗಡೆ: 23-12-2025
ಆನ್‌ಲೈನ್ ಅರ್ಜಿ ಆರಂಭ: 20-01-2026
ಆನ್‌ಲೈನ್ ಅರ್ಜಿ ಕೊನೆ ದಿನಾಂಕ: 20-02-2026

ಗಮನಿಸಿ: ಸಂಪೂರ್ಣ ವಿವರವಾದ ಅಧಿಸೂಚನೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಪರೀಕ್ಷಾ ಮಾದರಿಗಾಗಿ ಅಭ್ಯರ್ಥಿಗಳು RRB ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ

ಅಧಿಸೂಚನೆ :

image
image

✶ Read this also : Current Recruitments : ಪ್ರಸ್ತುತ ನೇಮಕಾತಿಗಳು



author avatar
spardhatimes
error: Content Copyright protected !!