ಸಮುದ್ರಯಾನ (Samudrayaan) : 5,000 ಮೀಟರ್ ಸಮುದ್ರದಾಳ ತಲುಪಲಿದ ಭಾರತೀಯ ಜಲಯಾತ್ರಿಗಳು
Samudrayaan : ಭಾರತದ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿ ಬಂದು ಹೊಸ ಇತಿಹಾಸ ಸೃಷ್ಟಿಸಿದ್ದರು. ಅದೇ ರೀತಿ ಈಗ ಭಾರತದ ಸಮುದ್ರಯಾನ ಯೋಜನೆಗೆ (Samudrayaan) ಪೂರ್ವಭಾವಿಯಾಗಿ ಇಬ್ಬರು ಭಾರತೀಯ ಜಲಯಾತ್ರಿಗಳು (Aquanauts) 2-3 ವಾರಗಳ ಹಿಂದೆ ಆಟ್ಲಾಂಟಿಕ್ ಸಾಗರೊಳಗೆ ಜಿಗಿದಿದ್ದಾರೆ.
ಫ್ರಾನ್ಸ್ ದೇಶದ ನಾಟೈಲ್ (Nautile) ಎನ್ನುವ ಸಬ್ಮರ್ಸಿಬಲ್ ನೌಕೆಯಲ್ಲಿ (Submersible) ಆಗಸ್ಟ್ 4 ಮತ್ತು 5ರಂದು ಜತೀಂದರ್ ಪಾಲ್ ಸಿಂಗ್ ಮತ್ತು ಆರ್ ರಮೇಶ್ ಅವರು 4,000-5,000 ಮೀಟರ್ ಸಮುದ್ರದಾಳಕ್ಕೆ ಹೋಗಿ ಬಂದಿದ್ದಾರೆ. ಇದು ಭಾರತಕ್ಕೆ ಬಹಳ ಮಹತ್ವದ್ದಾಗಿರುವ ಬೆಳವಣಿಗೆ. ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಂದಷ್ಟೇ ಮಹತ್ವದ್ದು.
ಭಾರತೀಯರು ಈ ಹಿಂದೆ ಸಾಕಷ್ಟು ಬಾರಿ ಸಬ್ಮರೈನ್ ಡೈವ್ಗಳನ್ನು ಮಾಡಿರುವುದುಂಟು. ಆದರೆ ಅವೆಲ್ಲವೂ 500 ಮೀಟರ್ಗಿಂತ ಕಡಿಮೆ ಆಳಕ್ಕೆ ಹೋಗಿದ್ದೇ ಹೆಚ್ಚು. ಜತೀಂದರ್ ಅವರು ಒಮ್ಮೆ 670 ಮೀಟರ್ ಆಳಕ್ಕೆ ಹೋಗಿ ಬಂದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಈಗ ಜತೀಂದರ್ ಪಾಲ್ ಸಿಂಗ್ ಅವರೇ ಮತ್ತೆ ಹೊಸ ದಾಖಲೆ ಮಾಡಿದ್ದಾರೆ. 5,002 ಮೀಟರ್ ಆಳಕ್ಕೆ ಹೋಗಿ ಬಂದಿದ್ದಾರೆ.
ಆರ್ ರಮೇಶ್ ಅವರು 4,025 ಮೀಟರ್ ಅಳದವರೆಗೂ ಹೋಗಿ ಬಂದಿದ್ದಾರೆ. ಭಾರತೀಯರು ಇಷ್ಟು ಆಳಕ್ಕೆ ಸಬ್ಮರೈನ್ ಡೈವ್ ಮಾಡಿರುವುದು ಇದೇ ಮೊದಲು. ವಿಶ್ವದಲ್ಲಿ ಭಾರತವೂ ಸೇರಿದಂತೆ ಆರು ದೇಶಗಳ ವ್ಯಕ್ತಿಗಳು ಮಾತ್ರವೇ ಈ ಆಳಕ್ಕೆ ಹೋಗಿ ಬಂದಿರುವುದು ಎಂದು ಹೇಳಲಾಗುತ್ತಿದೆ.
2027ಕ್ಕೆ ಸಿದ್ಧವಾಗಲಿದೆ ಭಾರತದ್ದೇ ಸ್ವಂತ ನೌಕೆ :
ಭಾರತದ ಜತೀಂದರ್ ಮತ್ತು ರಮೇಶ್ ಅವರು ಫ್ರಾನ್ಸ್ ದೇಶದ ನಾಟೈಲ್ ನೌಕೆಯಲ್ಲಿ ಸಮುದ್ರದ ಆಳಕ್ಕೆ ಹೋಗಿ ಬಂದಿದ್ದರು. ಆದರೆ, ಭಾರತವೇ ಸ್ವಂತವಾಗಿ ಮತ್ಸ್ಯ ಎನ್ನುವ ನೌಕೆಯನ್ನು ನಿರ್ಮಿಸುತ್ತಿದೆ. ಇದು 6,000 ಮೀಟರ್ ಆಳಕ್ಕೆ ಹೋಗಿ ಬರುವ ಸಾಮರ್ಥ್ಯ ಹೊಂದಿರಲಿದೆ. 2027ಕ್ಕೆ ಈ ನೌಕೆಯು ಆಳ ಸಮುದ್ರಕ್ಕೆ ಜಲಯಾತ್ರಿಗಳನ್ನು ಕರೆದೊಯ್ಯಲಿದೆ.
ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ಐಒಟಿ) ಸಬ್ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇಸ್ರೋದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಸಂಸ್ಥೆಯು ಕ್ರ್ಯೂ ಕ್ಯಾಪ್ಸೂಲ್ ವಿನ್ಯಾಸ ಮತ್ತು ತಯಾರಿಕೆ ಮಾಡುತ್ತಿದೆ.
ಆರು ದೇಶಗಳ ಸಾಲಿಗೆ ಸೇರಲಿರುವ ಭಾರತ :
ಈಗ ಸದ್ಯಕ್ಕೆ ಐದು ದೇಶಗಳು ಮಾತ್ರವೇ ಆಳ ಸಮುದ್ರಕ್ಕೆ ಹೋಗಬಲ್ಲ ಸಬ್ಮರ್ಸಿಬಲ್ ನೌಕೆಗಳನ್ನು ತಯಾರಿಸಿರುವುದು. ಅಮೆರಿಕ, ಜಪಾನ್, ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳು ಈ ಮೊದಲು ಜಲಾಂತರ್ಗಾಮಿ ನೌಕೆಗಳನ್ನು ಯಶಸ್ವಿಯಾಗಿ ಕಳುಹಿಸಿವೆ. 2027ರಲ್ಲಿ ಭಾರತದ ಸಮುದ್ರಯಾನ ಯಶಸ್ವಿಯಾದರೆ ಈ ಗುಂಪಿಗೆ ಆರನೇ ದೇಶ ಸೇರ್ಪಡೆಯಾದಂತಾಗುತ್ತದೆ.
ಸದ್ಯ ಚೀನಾದ ನೌಕೆಗಳು 10,000 ಮೀಟರ್ ಆಳಕ್ಕೆ ಜಲಯಾತ್ರಿಗಳನ್ನು ಕರೆದುಕೊಂಡು ಹೋಗಿ ಬಂದಿವೆ. ಇಷ್ಟು ಆಳಕ್ಕೆ ಬೇರಾವ ದೇಶಕ್ಕೂ ಹೋಗಿ ಬರಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಚೀನಾ ಮುಂಚೂಣಿಯಲ್ಲಿದೆ.
ಸಮುದ್ರಯಾನ ಯೋಜನೆ ಎಂದರೇನು?
ಬಗ್ಗೆ: ಸಮುದ್ರಯಾನ ಭಾರತದ ಮೊದಲ ಮಾನವ ಆಳ ಸಮುದ್ರ ಕಾರ್ಯಾಚರಣೆಯಾಗಿದೆ. ಇದು ಆಳ ಸಾಗರ ಕಾರ್ಯಾಚರಣೆಯ ಪ್ರಮುಖ ಅಂಶವಾಗಿದೆ. ಈ ಯೋಜನೆಯು 2027 ರ ವೇಳೆಗೆ ಮೂರು ಮನುಷ್ಯರನ್ನು ಮಾನವಸಹಿತ ಸಬ್‌ಮರ್ಸಿಬಲ್ ( ಮತ್ಸ್ಯ-6000 ) ನಲ್ಲಿ ಸಾಗರದಲ್ಲಿ 6,000 ಮೀಟರ್ ಆಳಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ .
ಇದು ಆಳ ಸಮುದ್ರದಲ್ಲಿ ಮಾನವಸಹಿತ ನೌಕಾಪಡೆಯ ಸಾಮರ್ಥ್ಯವನ್ನು ಹೊಂದಿರುವ ಆಯ್ದ ದೇಶಗಳ (ಯುಎಸ್, ರಷ್ಯಾ, ಚೀನಾ, ಜಪಾನ್, ಫ್ರಾನ್ಸ್) ಗುಂಪಿಗೆ ಸೇರುವ ಮೂಲಕ ಭಾರತದ ಕಾರ್ಯತಂತ್ರದ ಸ್ಥಾನವನ್ನು ಬಲಪಡಿಸುತ್ತದೆ.
ಪ್ರಮುಖ ಉದ್ದೇಶಗಳು:
ಆಳ ಸಮುದ್ರ ಗಣಿಗಾರಿಕೆ, ಸಬ್‌ಮರ್ಸಿಬಲ್‌ಗಳು ಮತ್ತು ಸಾಗರ ರೊಬೊಟಿಕ್ಸ್‌ಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು . ಖನಿಜ ನಿಕ್ಷೇಪಗಳಿಗೆ, ವಿಶೇಷವಾಗಿ ಪಾಲಿಮೆಟಾಲಿಕ್ ಗಂಟುಗಳಿಗೆ (ಕಬ್ಬಿಣ, ಮ್ಯಾಂಗನೀಸ್, ಕೋಬಾಲ್ಟ್, ನಿಕಲ್, ಅಪರೂಪದ ಭೂಮಿಯನ್ನು ಒಳಗೊಂಡಿರುವ) ಸಮೀಕ್ಷೆಗಳನ್ನು ನಡೆಸುವುದು.
ಮತ್ಸ್ಯ-6000:
ಇದು ಭಾರತದ ಮೊದಲ ಸ್ವಯಂ ಚಾಲಿತ ಮಾನವಸಹಿತ ಸಬ್‌ಮರ್ಸಿಬಲ್ ಆಗಿದೆ . ಇದು ಗೋಳಾಕಾರದ ಟೈಟಾನಿಯಂ-ಮಿಶ್ರಲೋಹದಿಂದ ಮಾಡಲ್ಪಟ್ಟಿದೆ ಮತ್ತು ಮೂರು ಅಕ್ವಾನಾಟ್‌ಗಳನ್ನು 12 ಗಂಟೆಗಳ ಕಾಲ ಸಾಗಿಸಬಲ್ಲದು ಮತ್ತು ತುರ್ತು ಸಂದರ್ಭಗಳಲ್ಲಿ 96 ಗಂಟೆಗಳವರೆಗೆ ಅವುಗಳನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಇದು -3°C ಕಡಿಮೆ ತಾಪಮಾನದ ಪರಿಸ್ಥಿತಿಗಳಲ್ಲಿ 600bar ವರೆಗಿನ ಬಾಹ್ಯ ಒತ್ತಡವನ್ನು ತಡೆದುಕೊಳ್ಳುವ ನಿರೀಕ್ಷೆಯಿದೆ . ಇದು ಜೀವಾಧಾರಕ, ಅಕೌಸ್ಟಿಕ್ ಸಂವಹನ, ಲಿ-ಪೊ ಬ್ಯಾಟರಿಗಳು, ಡ್ರಾಪ್-ವೈಟ್ ಎಸ್ಕೇಪ್ ಮತ್ತು ಸಿಬ್ಬಂದಿ ಆರೋಗ್ಯ ಮೇಲ್ವಿಚಾರಣೆಗಾಗಿ ಬಯೋ-ವೆಸ್ಟ್‌ಗಳನ್ನು ಹೊಂದಿದೆ .ಮತ್ಸ್ಯ 6000 ಅಭಿವೃದ್ಧಿಯು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT), ಭೂ ವಿಜ್ಞಾನ ಸಚಿವಾಲಯ (MoES) ಮತ್ತು ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ನಡುವಿನ ಸಹಯೋಗವಾಗಿದೆ.
ಡೀಪ್ ಓಷನ್ ಮಿಷನ್ ಎಂದರೇನು?
ಉದ್ದೇಶ: ಆಳವಾದ ಸಾಗರದ ಜೀವಂತ ಮತ್ತು ನಿರ್ಜೀವ ಸಂಪನ್ಮೂಲಗಳನ್ನು ಅನ್ವೇಷಿಸಲು ಮತ್ತು ಸುಸ್ಥಿರವಾಗಿ ಬಳಸಿಕೊಳ್ಳಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಭೂ ವಿಜ್ಞಾನ ಸಚಿವಾಲಯ (MoES) 5 ವರ್ಷಗಳ ಅವಧಿಗೆ (2021-26) ಪ್ರಾರಂಭಿಸಿದೆ. ಇದು ಮೀನುಗಾರಿಕೆ, ಸಾಗಣೆ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಂತಹ ಸಮುದ್ರ ಕೈಗಾರಿಕೆಗಳನ್ನು ಒಳಗೊಂಡ ಭಾರತದ ನೀಲಿ ಆರ್ಥಿಕತೆಯನ್ನು ಉತ್ತೇಜಿಸುತ್ತದೆ .ಇದು ಹವಾಮಾನ ಬದಲಾವಣೆ ಸಂಶೋಧನೆಯನ್ನು ಬೆಂಬಲಿಸುತ್ತದೆ ಮತ್ತು UN ನ 2021–2030 ರ ‘ಸುಸ್ಥಿರ ಅಭಿವೃದ್ಧಿಗಾಗಿ ಸಾಗರ ವಿಜ್ಞಾನದ ದಶಕ’ ದೊಂದಿಗೆ ಹೊಂದಾಣಿಕೆ ಮಾಡುತ್ತದೆ.
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (01-09-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 01-09-2025 (Today’s Current Affairs)
- ಸಮುದ್ರಯಾನ (Samudrayaan) : 5,000 ಮೀಟರ್ ಸಮುದ್ರದಾಳ ತಲುಪಲಿದ ಭಾರತೀಯ ಜಲಯಾತ್ರಿಗಳು
- ಆನ್ಲೈನ್ ಗೇಮಿಂಗ್ ನಿಷೇಧ ಕಾಯ್ದೆ (ಮಸೂದೆ) : Online Gaming Bill 2025
- ಭಾರತೀಯ ರೈಲ್ವೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ನೇಮಕಾತಿ (Railways Recruitment)