20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ‘ಸ್ಲೀಪಿಂಗ್ ಪ್ರಿನ್ಸ್’ (Sleeping Prince) ವಲೀದ್ ನಿಧನ
Saudi’s ‘Sleeping Prince’ Alwaleed Bin Khaled Dies After 20 Years In Coma
ಸೌದಿ ಅರೇಬಿಯಾ(Saudi Arabia) ದ ರಾಜಕುಮಾರ(Prince) ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್ (36) ಶನಿವಾರ ನಿಧನರಾಗಿದ್ದಾರೆ.ಅವರು ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದರು. ಅವರನ್ನು ‘ಸ್ಲೀಪಿಂಗ್ ಪ್ರಿನ್ಸ್ ‘ (Sleeping Prince) ಎಂದು ಕರೆಯಲಾಗುತ್ತಿತ್ತು. ಪ್ರಿನ್ಸ್ ಅಲ್ ವಲೀದ್ ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರ ಮಗ ಮತ್ತು ಬಿಲಿಯನೇರ್ ಪ್ರಿನ್ಸ್ ಅಲ್ ವಲೀದ್ ಬಿನ್ ತಲಾಲ್ ಅವರ ಸೋದರಳಿಯ.
ವಲೀದ್ 1990ರ ಏಪ್ರಿಲ್ನಲ್ಲಿ ಜನಿಸಿದ್ದರು. 2005 ರಲ್ಲಿ, ಲಂಡನ್‌ನಲ್ಲಿ ಮಿಲಿಟರಿ ತರಬೇತಿಯ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಬಳಿಕ ಅವರು ಕೋಮಾಗೆ ಜಾರಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಗಾಯಗಳು ಮತ್ತು ಆಂತರಿಕ ರಕ್ತಸ್ರಾವವಾಯಿತು. ಇದಾದ ನಂತರ, ಅವರು ಕೋಮಾಕ್ಕೆ ಜಾರಿದ್ದರು.