AppointmentsCurrent AffairsSpardha Times

ಬಾರ್‌ ಅಸೋಸಿಯೇಶನ್(SCBA) ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

Share With Friends

ಸುಪ್ರೀಂ ಕೋರ್ಟ್ (Supreme Court) ಬಾರ್ ಅಸೋಸಿಯೇಷನ್ ​​(SCBA) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ, ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್ (Kapil Sibal) ಅವರು ಭರ್ಜರಿ ಜಯಗಳಿಸಿದ್ದಾರೆ.

✦ ಬರೋಬ್ಬರಿ 23 ವರ್ಷಗಳ ಬಳಿಕ ಮತ್ತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆಯಾಗಿದ್ದು, ಸಿಬಲ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರಾಯ್ ಅವರನ್ನು ಸೋಲಿಸುವ ಮೂಲಕ ವಿಜಯಿಯಾದರು.
✦ ಪ್ರದೀಪ್ ರಾಯ್ 689 ಮತ ಗಳಿಸಿದರೆ, ಕಪಿಲ್ ಸಿಬಲ್ ಅವರು 1066 ಮತ ಗಳಿಸಿದರು. ಹಾಲಿ ಅಧ್ಯಕ್ಷ, ಹಿರಿಯ ವಕೀಲ ಡಾ. ಆದೀಶ್ ಸಿ ಅಗರವಾಲಾ ಅವರು 296 ಮತಗಳನ್ನು ಪಡೆದಿದ್ದಾರೆ.
✦ಈಗ ನಾಲ್ಕನೇ ಬಾರಿಗೆ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಮೂರು ಬಾರಿ, 1995-96, 1997-98 ಮತ್ತು 2001ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2001ರ ಬಳಿಕ ಅಂದರೆ 23 ವರ್ಷಗಳ ಬಳಿಕ ಮತ್ತೆ ಕಪಿಲ್ ಸಿಬಲ್‌ಗೆ ಅಧ್ಯಕ್ಷ ಸ್ಥಾನ ಒಲಿದಿದೆ.
✦ ಸುಮಾರು ಎರಡು ದಶಕಗಳ ನಂತರ ಸಿಬಲ್ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು 377 ಮತಗಳ ಅಂತರದಿಂದ ಸೋಲಿಸಿದ್ದಾರೆ.
✦ ಹಾರ್ವರ್ಡ್ ಕಾನೂನು ಶಾಲೆಯ ಪದವೀಧರರಾದ ಸಿಬಲ್ ಅವರು 1989-90ರ ಅವಧಿಯಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ಅವರನ್ನು 1983 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು. 1995 ಮತ್ತು 2002 ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮಾಜಿ ಸಚಿವರು ಮೂರು ಬಾರಿ SCBA ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

✦ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ :
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​( SCBA-Supreme Court Bar Association of India ) ಭಾರತೀಯ ವಕೀಲರ ಸಂಘವಾಗಿದ್ದು , ಇದು ಭಾರತದ ಸುಪ್ರೀಂ ಕೋರ್ಟ್‌ನ ಅಭ್ಯಾಸ ಮಾಡುವ ವಕೀಲರನ್ನು ಒಳಗೊಂಡಿದೆ .ಕಪಿಲ್ ಸಿಬಲ್ ಅವರು ಸಂಘದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ, ರಚನಾ ಶ್ರೀವಾಸ್ತವ ಉಪಾಧ್ಯಕ್ಷರಾಗಿದ್ದಾರೆ ಮತ್ತು ವಿಕ್ರಾಂತ್ ಯಾದವ್ ಕಾರ್ಯದರ್ಶಿಯಾಗಿದ್ದಾರೆ.

✦ ಗಮನಾರ್ಹ ಮಾಜಿ ಅಧ್ಯಕ್ಷರು :
ಅಶೋಕ್ ಕುಮಾರ್ ಸೇನ್
ರಾಮ್ ಜೇಠ್ಮಲಾನಿ
ಪಾವನಿ ಪರಮೇಶ್ವರ ರಾವ್
ಎಂ ಎನ್ ಕೃಷ್ಣಮಣಿ
ಕಪಿಲ್ ಸಿಬಲ್
ಪ್ರವೀಣ್ ಎಚ್. ಪಾರೇಖ್

Leave a Reply

Your email address will not be published. Required fields are marked *

error: Content Copyright protected !!