ಶಿವರಾಂ ಕಾರಂತರ ಸಂಪೂರ್ಣ ಪರಿಚಯ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಶಿವರಾಮ ಕಾರಂತ (ಅಕ್ಟೋಬರ್ 10, 1902-ಸೆಪ್ಟೆಂಬರ್ 12, 1997)- “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ 1902, ಅಕ್ಟೋಬರ್ 10ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು 47. ತಮ್ಮ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.
ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾ ಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.
# ಕೃತಿಗಳು :
ಕವನ ಸಂಕಲನಗಳು : ರಾಷ್ಟ್ರಗೀತ ಸುಧಾಕರ, ಸೀಳ್ಗವನಗಳು
ಕಾದಂಬರಿಗಳು : ಅದೇ ಊರು, ಅದೆ ಮರ / ಅಳಿದ ಮೇಲೆ / ಅಂಟಿದ ಅಪರಂಜಿ / ಆಳ, ನಿರಾಳ / ಇದ್ದರೂ ಚಿಂತೆ / ಇನ್ನೊಂದೇ ದಾರಿ / ಇಳೆಯೆಂಬ
ಉಕ್ಕಿದ ನೊರೆ / ಒಡಹುಟ್ಟಿದವರು / ಒಂಟಿ ದನಿ / ಔದಾರ್ಯದ ಉರುಳಲ್ಲಿ / ಕಣ್ಣಿದ್ದೂ ಕಾಣರು / ಕನ್ನಡಿಯಲ್ಲಿ ಕಂಡಾತ / ಕನ್ಯಾಬಲಿ / ಕರುಳಿನ ಕರೆ
ಕೇವಲ ಮನುಷ್ಯರು / ಗೆದ್ದ ದೊಡ್ಡಸ್ತಿಕೆ / ಗೊಂಡಾರಣ್ಯ / ಜಗದೋದ್ಧಾರ ನಾ / ಜಾರುವ ದಾರಿಯಲ್ಲಿ / ದೇವದೂತರು / ಧರ್ಮರಾಯನ ಸಂಸಾರ
ನಷ್ಟ ದಿಗ್ಗಜಗಳು / ನಂಬಿದವರ ನಾಕ, ನರಕ / ನಾವು ಕಟ್ಟಿದ ಸ್ವರ್ಗ / ನಿರ್ಭಾಗ್ಯ ಜನ್ಮ / ಬತ್ತದ ತೊರೆ / ಭೂತ / ಮರಳಿ ಮಣ್ಣಿಗೆ / ಮುಗಿದ ಯುದ್ಧ
ಮೂಜನ್ಮ / ಮೈ ಮನಗಳ ಸುಳಿಯಲ್ಲಿ / ಮೊಗ ಪಡೆದ ಮನ / ವಿಚಿತ್ರ ಕೂಟ/ ಶನೀಶ್ವರನ ನೆರಳಿನಲ್ಲಿ / ಸನ್ಯಾಸಿಯ ಬದುಕು / ಸಮೀಕ್ಷೆ / ಸರಸಮ್ಮನ ಸಮಾಧಿ / ಸ್ವಪ್ನದ ಹೊಳೆ / ಹೆತ್ತಳಾ ತಾಯಿ
# ಚಲನಚಿತ್ರವಾಗಿರುವ ಕಾದಂಬರಿಗಳು :
ಕುಡಿಯರ ಕೂಸು / ಚಿಗುರಿದ ಕನಸು/ ಚೋಮನ ದುಡಿ(ಚಲನಚಿತ್ರವಾಗಿದೆ) / ಬೆಟ್ಟದ ಜೀವ / ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ)
✦ ದ.ರಾ.ಬೇಂದ್ರೆಯವರ ಸಂಪೂರ್ಣ ಪರಿಚಯ
# ನಾಟಕ :
ಅವಳಿ ನಾಟಕಗಳು / ಏಕಾಂಕ ನಾಟಕಗಳು / ಐದು ನಾಟಕಗಳು / ಕಟ್ಟೆ ಪುರಾಣ / ಕಠಾರಿ ಭೈರವ / ಕರ್ಣಾರ್ಜುನ / ಕೀಚಕ ಸೈರಂಧ್ರಿ / ಗರ್ಭಗುಡಿ
ಗೀತ ನಾಟಕಗಳು / ಜಂಬದ ಜಾನಕಿ / ಜ್ಯೂಲಿಯಸ್ ಸೀಸರ್ / ಡುಮಿಂಗೊ / ದೃಷ್ಟಿ ಸಂಗಮ / ನವೀನ ನಾಟಕಗಳು / ನಾರದ ಗರ್ವಭಂಗ / ಬಿತ್ತಿದ ಬೆಳೆ
ಬೆವರಿಗೆ ಜಯವಾಗಲಿ / ಬೌದ್ಧ ಯಾತ್ರಾ / ಮಂಗಳಾರತಿ / ಮುಕ್ತದ್ವಾರ / ಯಾರೊ ಅಂದರು / ವಿಜಯ / ವಿಜಯ ದಶಮಿ / ಸರಳ ವಿರಳ ನಾಟಕಗಳು
ಸಾವಿರ ಮಿಲಿಯ / ಹಣೆ ಬರಹ / ಹಿರಿಯಕ್ಕನ ಚಾಳಿ / ಹೇಗಾದರೇನು? / ಹೇಮಂತ
# ಸಣ್ಣ ಕತೆ :
ಕವಿಕರ್ಮ / ತೆರೆಯ ಮರೆಯಲ್ಲಿ / ಹಸಿವು / ಹಾವು / ಭಾರತೀಯ ಶಿಲ್ಪ / ಯಕ್ಷಗಾನ ಬಯಲಾಟ / ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು
# ಹರಟೆ/ವಿಡಂಬನೆ :
ಗ್ನಾನ / ಚಿಕ್ಕ ದೊಡ್ಡವರು / ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು / ಮೈಗಳ್ಳನ ದಿನಚರಿಯಿಂದ
ಮೈಲಿಕಲ್ಲಿನೊಡನೆ ಮಾತುಕತೆಗಳು / ಹಳ್ಳಿಯ ಹತ್ತು ಸಮಸ್ತರು
# ವೈಜ್ಞಾನಿಕ :
ಅದ್ಭುತ ಜಗತ್ತು (1. ವಿಚಿತ್ರ ಖಗೋಲ, 2. ನಮ್ಮ ಭೂಖಂಡಗಳು) / ಉಷ್ಣವಲಯದ ಆಗ್ನೇಸ್ಯ / ಪ್ರಾಣಿ ಪ್ರಪಂಚದ ವಿಸ್ಮಯಗಳು / ಮಂಗನ ಕಾಯಿಲೆ / ವಿಜ್ಞಾನ ಮತ್ತು ಅಂಧಶೃದ್ಧೆ / ವಿಶಾಲ ಸಾಗರಗಳು /ಹಿರಿಯ ಕಿರಿಯ ಹಕ್ಕಿಗಳು
# ಪ್ರವಾಸ ಕಥನ : ಅಪೂರ್ವ ಪಶ್ಚಿಮ / ಅರಸಿಕರಲ್ಲ / ಅಬೂವಿನಿಂದ ಬರಾಮಕ್ಕೆ / ಪಾತಾಳಕ್ಕೆ ಪಯಣ / ಪೂರ್ವದಿಂದ / ತ್ಯಪೂರ್ವಕ್ಕೆ / ಯಕ್ಷರಂಗಕ್ಕಾಗಿ ಪ್ರವಾಸ
# ಆತ್ಮಕಥನ : ಸ್ಮೃತಿಪಟಲದಿಂದ (1,2,3) / ಹುಚ್ಚು ಮನಸ್ಸಿನ ಹತ್ತು ಮುಖಗಳು
# ಮಕ್ಕಳ ಪುಸ್ತಕಗಳು :
ಅನಾದಿ ಕಾಲದ ಮನುಷ್ಯ / ಒಂದೇ ರಾತ್ರಿ ಒಂದೇ ಹಗಲು / ಗಜರಾಜ / ಗೆದ್ದವರ ಸತ್ಯ / ಢಂ ಢಂ ಢೋಲು / ನರನೋ ವಾನರನೋ
ಮರಿಯಪ್ಪನ ಸಾಹಸಗಳು / ಮಂಗನ ಮದುವೆ / ಸೂರ್ಯ ಚಂದ್ರ / ಹುಲಿರಾಯ / ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ 10 ಪುಸ್ತಕಗಳು / ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು 133 / ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : 42
ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು : Folk Art of Karnataka / Karnataka Paintings / My Concern for Life, Literature and Art
Picturesque South Kanara / Yakshagana
# ಬಿರುದು/ಪ್ರಶಸ್ತಿಗಳು: ಯಕ್ಷಗಾನ ಬಯಲಾಟ ಕೃತಿಗೆ-ಕೇಂದ್ರ ಸಾಹಿತ್ಯ ಪ್ರಶಸ್ತಿ. ಮೈಮನಗಳ ಸುಳಿಯಲ್ಲಿ ಪಂಪ ಪ್ರಶಸ್ತಿ ಮೂಕಜ್ಜಿಯ ಕನಸುಗಳು ಜ್ಞಾನಪೀಠ ಪ್ರಶಸ್ತಿ.
# ಜೀವನ ಚರಿತ್ರೆ: ಕೆ.ಕೆ. ಹೆಬ್ಬಾರ್, ರಾಮಕೃಷ್ಣ ಪರಮಹಂಸರು
# ಸಾಲಿಗ್ರಾಮದಲ್ಲಿ ಸ್ಮಾರಕ : ಡಾ. ಕಾರಂತರ ಹುಟ್ಟೂರಾದ ಸಾಲಿಗ್ರಾಮದಲ್ಲಿ (ಉಡುಪಿ ಜಿಲ್ಲೆ), ಕಾರಂತ ಸ್ಮೃತಿಚಿತ್ರ ಶಾಲೆ ಎಂಬ ಸುಂದರ ಬಹುಮಹಡಿ ಕಟ್ಟಡದಲ್ಲಿ, ಕಾರಂತರ ಕುರಿತಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಅವರ ಕಾದಂಬರಿಗಳ ಆಶಯದ ದೊಡ್ಡ ದೊಡ್ಡ ಭಿತ್ತಿ ಚಿತ್ರಗಳು, ಯಕ್ಷಗಾನದ ದಿರಿಸುಗಳು, ಕಾದಂಬರಿಗಳ ಹಳೆಯ ಪ್ರತಿಗಳು, ಕಾರಂತರು ಬರೆದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ ಮತ್ತಿತರ ವಸ್ತುಗಳನ್ನೊಂಡ ಸುಂದರ ವಸ್ತು ಸಂಗ್ರಹಾಲಯ ಇದು. ಸಾಲಿಗ್ರಾಮದ ಪೇಟೆಯಲ್ಲಿ ಹೆದ್ದಾರಿಯ ಬದಿಯಲ್ಲೇ ಇರುವ ಈ ಕಟ್ಟಡವನ್ನು ಕಂಡರೆ, ಕಾರಂತರ ಬಗ್ಗೆ ಅಭಿಮಾನ ಉಕ್ಕುತ್ತದೆ. ಮಾಲಿನಿಮಲ್ಯ ಅವರು ನೋಡಿಕೊಳ್ಳುತ್ತಿರುವ ಈ ಸಂಗ್ರಹಾಲಯವನ್ನು ನೋಡಲು ಸದಾ ಅವಕಾಶವಿದೆ.