Current AffairsLatest Updates

ಕರ್ನಾಟಕದ ‘ಅತಿ ದೀರ್ಘಾವಧಿ ಮುಖ್ಯಮಂತ್ರಿ’ಯಾಗಿ ಸಿದ್ದರಾಮಯ್ಯ ದಾಖಲೆ

Share With Friends

ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ನಾಯಕ ಎಂಬ ಕೀರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಭಾಜನರಾಗಿದ್ದಾರೆ. ಇದುವರೆಗೆ 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಅವರು ಮುರಿದಿದ್ದಾರೆ.

ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರ ನಡೆಸಿ ರಾಜ್ಯದ ರಾಜಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣರಾಗಿದ್ದರು. ಇದೀಗ ಸಿದ್ದರಾಮಯ್ಯ ಅವರು ಕೂಡ ಅದೇ 7 ವರ್ಷ 239 ದಿನಗಳ ಆಡಳಿತಾವಧಿಯನ್ನು ಇಂದು ಪೂರ್ಣಗೊಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ.

ಸಿದ್ದರಾಮಯ್ಯ ಅವರು 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಪೂರ್ಣ ಐದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಿದ್ದರು. ಬಳಿಕ 2023ರಲ್ಲಿ ವರುಣಾ ಕ್ಷೇತ್ರದಿಂದ ಗೆಲುವು ಸಾಧಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರು.

ಕಳೆದ ಎರಡು ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಸಿದ್ದರಾಮಯ್ಯ ಅವರು ಚಾಣಾಕ್ಷ ರಾಜಕಾರಣಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ವಕೀಲ ವೃತ್ತಿಯಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಅವರು, ಹಲವು ರಾಜಕೀಯ ಸವಾಲುಗಳನ್ನು ಎದುರಿಸಿ, ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಸೇರಿ ವಿಪಕ್ಷ ನಾಯಕರಾಗಿ, ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳು ಮತ್ತು ಹಲವು ಕಲ್ಯಾಣಕಾರಿ ಕಾರ್ಯಕ್ರಮಗಳು ಜಾರಿಗೆ ಬಂದಿವೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಗ್ಯಾರಂಟಿ ಯೋಜನೆಗಳು ಪ್ರಮುಖ ಪಾತ್ರ ವಹಿಸಿದ್ದು, ಅದಕ್ಕೆ ಸಿದ್ದರಾಮಯ್ಯ ಅವರ ನಾಯಕತ್ವವೇ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ಮೂಲಕ ಅವರು ರಾಜ್ಯವನ್ನು ಅತಿ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರಿದ್ದಾರೆ.

ಲೋಕದಳ ಮತ್ತು ಜನತಾದಳದಲ್ಲಿಯೂ ತಮ್ಮ ರಾಜಕೀಯ ವರ್ಚಸ್ಸನ್ನು ಪ್ರದರ್ಶಿಸಿದ್ದ ಸಿದ್ದರಾಮಯ್ಯ ಅವರು, 2006ರಲ್ಲಿ ಕಾಂಗ್ರೆಸ್ ಸೇರಿದ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಶಾಸಕರಾಗಿ, ವಿಪಕ್ಷ ನಾಯಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ಅವರು ದೀರ್ಘ ರಾಜಕೀಯ ಪಯಣ ಮಾಡಿದ್ದಾರೆ.

ಅತ್ಯಧಿಕ ದಿನಗಳ ಆಡಳಿತದ ಜೊತೆಗೆ, ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯೂ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. ಇದುವರೆಗೆ 16 ಬಜೆಟ್‌ಗಳನ್ನು ಮಂಡಿಸಿರುವ ಅವರು, ಪ್ರಭಾವಿ ಅಹಿಂದಾ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.

ಇದುವರೆಗೆ ಮುಖ್ಯಮಂತ್ರಿಗಳ ಆಡಳಿತಾವಧಿ ಕ್ರಮ ಹೀಗಿದೆ:
ಸಿದ್ದರಾಮಯ್ಯ – 7 ವರ್ಷ 239 ದಿನ (06-01-2026 ರಂತೆ ) (ಇನ್ನೂ ಅಧಿಕಾರದಲ್ಲಿ ಮುಂದುವರೆದಿದ್ದಾರೆ )
ಡಿ. ದೇವರಾಜ ಅರಸು – 7 ವರ್ಷ 239 ದಿನ
ಎಸ್. ನಿಜಲಿಂಗಪ್ಪ – 7 ವರ್ಷ 175 ದಿನ
ರಾಮಕೃಷ್ಣ ಹೆಗ್ಡೆ – 5 ವರ್ಷ 216 ದಿನ
ಬಿ.ಎಸ್. ಯಡಿಯೂರಪ್ಪ – 5 ವರ್ಷ 82 ದಿನ

ಸಿದ್ಧರಾಮಯ್ಯ – ಸಂಕ್ಷಿಪ್ತ ಪರಿಚಯ :

ಸಿದ್ಧರಾಮಯ್ಯ ಅವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿದ್ಧರಾಮಯ್ಯ ಅವರು ಆಗಸ್ಟ್ 12, 1948ರಂದು ಮೈಸೂರು ಜಿಲ್ಲೆಯ ಸಿದ್ಧಾರಾಮನಹುಂಡಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸಿದ್ಧರಾಮಯ್ಯ ಮತ್ತು ತಾಯಿ ಬೋರಮ್ಮ. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದ ಅವರು, ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಶಿಕ್ಷಣ ಪಡೆದು ಕಾನೂನು ಪದವಿ (LLB) ಪಡೆದಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಅವರು ಕೆಲಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿ ಚಳವಳಿಯಿಂದ ಆರಂಭಿಸಿದರು. ನಂತರ ಜನತಾ ಪಕ್ಷ, ಜನತಾ ದಳ (ಸೆಕ್ಯುಲರ್) ಮೂಲಕ ಸಾಗಿದ ಅವರು, ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಣಕಾಸು ಸಚಿವ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದಾರೆ.

ಅವರು 2013ರಿಂದ 2018ರವರೆಗೆ ಹಾಗೂ 2023ರಿಂದ ಪ್ರಸ್ತುತವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ದಲಿತ–ಹಿಂದುಳಿದ ವರ್ಗಗಳ ಹಕ್ಕುಗಳು, ಬಡವರ ಪರ ಯೋಜನೆಗಳು ಅವರ ಆಡಳಿತದ ಪ್ರಮುಖ ಗುರುತುಗಳಾಗಿವೆ.

ಸರಳ ಜೀವನ ಶೈಲಿ, ಸ್ಪಷ್ಟವಾದ ಮಾತುಗಳು ಮತ್ತು ಜನಪರ ನೀತಿಗಳಿಂದ ಸಿದ್ಧರಾಮಯ್ಯ ಅವರು “ಅಹಿಂದ ನಾಯಕ” ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದಾರೆ.

ಸಿದ್ಧರಾಮಯ್ಯ ಸ್ಪರ್ಧಿಸಿದ ಮುಖ್ಯ ಚುನಾವಣೆಗಳು :

ವರ್ಷಕ್ಷೇತ್ರ/ಚುನಾವಣೆಫಲಿತಾಂಶಟಿಕೆಟ್ / ಪಕ್ಷ
1980Mysuru (Loksabha)ಸೋಲು
1983ChamundeshwariಜಯBharatiya Lok Dal
1985ChamundeshwariಜಯJanata Party
1989Chamundeshwariಸೋಲು
1994ChamundeshwariಜಯJanata Dal
1999Chamundeshwariಸೋಲು
2004ChamundeshwariಜಯJanata Dal
2006Chamundeshwari (Byelection)ಜಯCongress
2008VarunaಜಯCongress
2013VarunaಜಯCongress
2018ChamundeshwariಸೋಲುCongress
2018BadamiಜಯCongress
2023VarunaಜಯCongress

ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು

ಈ ಪಟ್ಟಿ ಒಟ್ಟು ಆಡಳಿತಾವಧಿ (multiple terms ಸೇರಿಸಿ) ಆಧಾರಿತವಾಗಿದೆ.

ಕ್ರಮಹೆಸರುರಾಜ್ಯಒಟ್ಟು ಸೇವಾ ಅವಧಿ
1ಪವನ್ ಕುಮಾರ್ ಚಾಮ್ಲಿಂಗ್ಸಿಕ್ಕಿಂಸುಮಾರು 24 ವರ್ಷ 165 ದಿನಗಳು
2ನವೀನ್ ಪಟ್ನಾಯಕ್ಒಡಿಶಾಸುಮಾರು 24 ವರ್ಷ 99 ದಿನಗಳು
3ಜ್ಯೋತಿ ಬಸುಪಶ್ಚಿಮ ಬಂಗಾಳಸುಮಾರು 23 ವರ್ಷ 137 ದಿನಗಳು
4ಗೆಗಾಂಗ್ ಅಪಾಂಗ್ಅರುಣಾಚಲ ಪ್ರದೇಶಸುಮಾರು 22 ವರ್ಷ 250 ದಿನಗಳು
5ಲಾಲ್ ಥನ್‌ಹಾವ್ಲಾಮಿಜೋರಾಂಸುಮಾರು 22 ವರ್ಷ 60 ದಿನಗಳು
6ವೀರಭದ್ರ ಸಿಂಗ್ಹಿಮಾಚಲ ಪ್ರದೇಶಸುಮಾರು 21 ವರ್ಷ 13 ದಿನಗಳು
7ಮಾಣಿಕ್ ಸರ್ಕಾರ್ತ್ರಿಪುರಾಸುಮಾರು 19 ವರ್ಷ 363 ದಿನಗಳು
8ನೀತೀಶ್ ಕುಮಾರ್ಬಿಹಾರಸುಮಾರು 19 ವರ್ಷಗಳಿಗಿಂತ ಹೆಚ್ಚು
9ಎಂ. ಕರುಣಾನಿಧಿತಮಿಳುನಾಡುಸುಮಾರು 18 ವರ್ಷ 362 ದಿನಗಳು
10ಪ್ರಕಾಶ್ ಸಿಂಗ್ ಬಾದಲ್ಪಂಜಾಬ್ಸುಮಾರು 18 ವರ್ಷ 350 ದಿನಗಳು

*ಪವನ್ ಕುಮಾರ್ ಚಾಮ್ಲಿಂಗ್ ಅವರು ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ.
*ನವೀನ್ ಪಟ್ನಾಯಕ್ ಅವರು ನಿರಂತರವಾಗಿ 24 ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು.
*ಜ್ಯೋತಿ ಬಸು ಅವರು ದೀರ್ಘಕಾಲ ಆಡಳಿತ ನಡೆಸಿದ ಕಮ್ಯೂನಿಸ್ಟ್ ನಾಯಕನಾಗಿದ್ದಾರೆ.

ಪ್ರಧಾನ ಮಂತ್ರಿ ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿರುವಂತೆಯೇ, ಒಂದು ರಾಜ್ಯದ ಮುಖ್ಯಮಂತ್ರಿ ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಂವಿಧಾನದ 164 ನೇ ವಿಧಿಯು ಮುಖ್ಯಮಂತ್ರಿಯನ್ನು (ಸಿಎಂ) ರಾಜ್ಯಪಾಲರು ನೇಮಿಸಬೇಕೆಂದು ಕಲ್ಪಿಸುತ್ತದೆ . ಮುಖ್ಯಮಂತ್ರಿಯ ಸಾಮಾನ್ಯ ಅಧಿಕಾರಾವಧಿ 5 ವರ್ಷಗಳು, ಆದರೆ ಭಾರತದಲ್ಲಿ ಅನೇಕ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನೇಕ ಮುಖ್ಯಮಂತ್ರಿಗಳಿದ್ದಾರೆ. ಜೂನ್ 2019 ರ ಮೊದಲು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಶ್ರೀ ಜ್ಯೋತಿ ಬಸು ಅವರು ಭಾರತದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು. ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 23 ವರ್ಷ, 137 ದಿನಗಳು ಸೇವೆ

author avatar
spardhatimes
error: Content Copyright protected !!