ಮಣ್ಣಿನ ಅಧ್ಯಯನ
1. ಮಣ್ಣು ಹೇಗೆ ಉಂಟಾಗುತ್ತದೆ?
• ಬೇರೆ ಬೇರೆ ರೀತಿಯ ವಾಯುಗುಣದಲ್ಲಿ ಕಲ್ಲುಗಳ ಶಿಥಿಲೀಕರಣ ಮತ್ತು ಒಡೆಯುವಿಕೆಯಿಂದ ಮಣ್ಣು ಉಂಟಾಗುತ್ತದೆ.
2. ಭಾರತದಲ್ಲಿ ಕಂಡುಬರುವ ವಿವಿಧ ರೀತಿಯ ಮಣ್ಣುಗಳು ಯಾವುವು?
• ಮೆಕ್ಕಲು ಮಣ್ಣು ,
• ಕಪ್ಪು ಮಣ್ಣು ಅಥವಾ ರೆಗೂರ್ ಮಣ್ಣು
• ಕೆಂಪು ಮಣ್ಣು
• ಜಂಬಟ್ಟಿಗೆ ಮಣ್ಣು ( ಲ್ಯಾಟರೈಟ್ ಮಣ್ಣು)
• ಮರುಭೂಮಿಯ ಮಣ್ಣು
• ಪರ್ವತ ಮಣ್ಣು
3. ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಯಾವುವು?
• ಗೋಧಿ, ಭತ್ತ, ಕಬ್ಬು, ಹತ್ತಿ, ಸೆಣಬು
4. ಎರಡು ಜಾತಿಯ ಮೆಕ್ಕಲು ಮಣ್ಣುಗಳು ಯಾವುವು?
• ಖದರ್ ಮತ್ತು ಭಂಗರ್. ಖದರ್ ಇತ್ತಿಚೆಗೆ ಸಂಚಯಗೊಂಡ ಮಣ್ಣು. ಭಂಗರ್ ಪುರಾತನ ಕಾಲದಲ್ಲಿ ಸಮಚಯತಗೊಂಡ ಮಣ್ಣು.
5. ಕಪ್ಪು ಮಣ್ಣು ಹೇಗೆ ಉಂಟಾಗಿದೆ?
• ಕಪ್ಪು ಮಣ್ಣು ಅಗ್ನಿಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿವೆ.
6. ಕಪ್ಪು ಮಣ್ಣಿನ ಉಪಯೋಗ ತಿಳಿಸಿ. ಮತ್ತು ಕಂಡುಬರುವ ಪ್ರದೇಶಗಳು ಯಾವುವು?
• ಇದರಲ್ಲಿ ಜೇಡಿ ಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಮಣ್ಣು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಹಾಗಾಗಿ ಇದು ಕಡಿಮೆ ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚು ಉಪಯುಕ್ತವಾಗಿದೆ.
• ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಕಂಡುಬರುತ್ತವೆ.
7. ಕಪ್ಪು ಮಣ್ಣಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಯಾವುವು?
• ಹತ್ತಿ, ಜೋಳ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು, ಎಣ್ಣೆಕಾಳುಗಳು, ನಿಂಬೆ, ಗೋಧಿ, ದ್ರಾಕ್ಷಿ ಮುಂತಾದವುಗಳು.
8. ಕೆಂಪು ಮಣ್ಣು ಹೇಗೆ ಉಂಟಾಗಿದೆ?
• ಕೆಂಪು ಮಣ್ಣು ಸ್ಪಟಿಕ ಶಿಲೆಗಳ ಶಿಥಿಲೀಕರಣದಿಂದ ಉಂಟಾಗಿದೆ.
9. ಕೆಂಪು ಮಣ್ಣಿನ ವೈಶಿಷ್ಟ್ಯಗಳೇನು?
• ಇದರಲ್ಲಿ ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಇದೆ. ಸಾಮಾನ್ಯವಾಗಿ ಇದು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡು ಬರುತ್ತವೆ.
10. ಕೆಂಪು ಮಣ್ಣಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಯಾವುವು?
• ಹೊಗೆಸೊಪ್ಪು, ಎಣ್ಣೆಕಾಳುಗಳು, ಭತ್ತ, ಕಬ್ಬು ಇತ್ಯಾದಿ.
11. ಲ್ಯಾಟರೈಟ್ ಮಣ್ಣಿನ ವೈಶಿಷ್ಟ್ಯಗಳೇನು?
• ಲ್ಯಾಟರೈಟ್ ಮಣ್ಣು ಅತಿ ಹೆಚ್ಚು ಉಷ್ಣಾಂಶವಿರುವ ಮತ್ತು ಅತಿ ಹೆಚ್ಚು ಮಳೆ ಬೀಳುವ ಕಡೆಗಳಲ್ಲಿ ಕಂಡುಬರುತ್ತವೆ. ಈ ಮಣ್ಣಿನಲ್ಲಿ ಫಲವತ್ತತೆ ಕಡಿಮೆ. ಇದರಲ್ಲಿ ಸಾರಜನಕ ಮತ್ತು ಲವಣಗಳ ಕೊರತೆ ಇದೆ.
12. ಲ್ಯಾಟರೈಟ್ ಮಣ್ಣು ಯಾವ ಬೆಳೆಗೆ ಸೂಕ್ತವಾಗಿದೆ?
• ಕಾಫಿ ಮತ್ತು ಟೀ , ಇತರ ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿದೆ.
13. ಪರ್ವತದ ಮಣ್ಣು ಯಾವ ಪ್ರದೇಶದಲ್ಲಿದೆ?
• ಪರ್ವತದ ಮಣ್ಣು ಹಿಮಾಲಯದ ತಗ್ಗುಭಾಗದ ಇಳಿಜಾರು, ಬೆಟ್ಟಗಳಿಂದ ಕೂಡಿದ ಜಮ್ಮು, ಕಾಶ್ಮೀರ , ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ ,ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಂಚಲಗಳಲ್ಲಿ ಕಂಡುಬರುತ್ತವೆ.
14. ಮರುಭೂಮಿಯ ಮಣ್ಣು ಕೃಷಿ ಯೋಗ್ಯವಲ್ಲ, ಏಕೆ?
• ಮರುಭೂಮಿಯ ಮಣ್ಣಿನಲ್ಲಿ ಮರಳು ಹೆಚ್ಚಾಗಿದೆ. ಇದರಲ್ಲಿ ಸಾರಜನಕ ಮತ್ತು ಜೈವಿಕಾಂಶ ಬಹಳ ಕಡಿಮೆ ಪ್ರಮಾಣದಲ್ಲಿದೆ. ರಂಜಕ ಮತ್ತು ನೀರಿನಲ್ಲಿ ಕರಗುವ ಲವಣಗಳು ಹೆಚ್ಚಿನ ಪ್ರಮಾಣದಲ್ಲಿವೆ. ಹಾಗಾಗಿ ಈ ಮಣ್ಣು ಕೃಷಿಗೆ ಯೋಗ್ಯವಲ್ಲ.
15. ಕಪ್ಪು ಮಣ್ಣು ಹತ್ತಿ ಬೆಳೆಗೆ ಹೆಚ್ಚು ಯೋಗ್ಯವಾಗಿದೆ. ಕಾರಣವೇನು?
• ಅದು ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.