GKScienceSpardha Times

ಮೂಲಮಾನಗಳು : CGS, FPS, MKS ಮತ್ತು SI ಪದ್ಧತಿಗಳು

Share With Friends

ದ್ರವ್ಯ ಮತ್ತು ಶಕ್ತಿಗಳು ಹಾಗೂ ಅವುಗಳಿಗಿರುವ ಪರಸ್ಪರ ಸಂಬಂಧಗಳ ನಿರೂಪಣೆಗೆ ಮಾಪನ ಅಥವಾ ಅಳತೆಯೇ ಆಧಾರ. ಇದನ್ನು ಅಳೆಯಲು ಅನೇಕ ಮಾನಗಳು ಬೇಕಾಗುತ್ತವೆ. ಇದಕ್ಕಾಗಿ ಯಾವುದಾದರೂ ಒಂದು ಮಾನವನ್ನು ನಿರ್ದಿಷ್ಟವಾಗಿಟ್ಟುಕೊಂಡು ಉಳಿದವುಗಳನ್ನು ಅದಕ್ಕೆ ಹೋಲಿಸಿ ನೋಡಬೇಕಾಗುತ್ತದೆ. ಹೀಗೆ ಹೋಲಿಕೆಗಾಗಿ ಬಳಸುವ ಆ ನಿರ್ದಿಷ್ಟ ಮಾನದಂಡವನ್ನು ‘ ಮೂಲಮಾನವೆಂದು’ ಕರೆಯಲಾಗುತ್ತದೆ.

ಅಳೆಯಬೇಕಾದ ಭೌತಲಕ್ಷಣಗಳು ಎಷ್ಟೇ ಇದ್ದರೂ ಅವುಗಳನ್ನು ಕೆಲವೇ ಮೂಲಮಾನಗಳ ಆಧಾರದ ಮೇಲೆ ಅಳೆಯಲಾಗುತ್ತದೆ. ಆ ಕೆಲವೇ ಪ್ರಮುಖವಾದ ಮೂಲಮಾನಗಳೆಂದರೆ ಉದ್ದ, ತೂಕ, ಮತ್ತು ಕಾಲ. ಈ ಮೂಲಮಾನಗಲನ್ನು ಆಧಾರವಾಗಿಟ್ಟುಕೊಂಡು ಉಳಿದವುಗಳ ಮೂಲಮಾನಗಳನ್ನು ಲೆಕ್ಕಾಚಾರ ಮಾಡುವುದು ಸುಲಭವಾಗುತ್ತದೆ.

ಈ ಮುರು ಮೂಲಭೂತ ಭೌತಲಕ್ಷಣಗಳನ್ನು ಅಳೆಯಲು ಅನೇಕ ಏಕಮಾನಗಲನ್ನು ಸೂಚಿಸಲಾಯಿತು. ಕಾಲ ಕಾಲಕ್ಕೆ ತಕ್ಕ ಹಾಗೆ ಅನೇಕ ಅಳತೆಯ ಪದ್ಧತಿಗಳು ಜಾರಿಗೆ ಬಂದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1. CGS ಪದ್ಧತಿ
ಈ ಪದ್ಧತಿಯು ಪ್ರಾಚೀನವಾದ ಅಳತೆ ಪದ್ಧತಿ. ಈ ಪದ್ಧತಿಯ ಪ್ರಕಾರ ಮೂಲಮಾನಗಳು ಈ ಕೆಳಕಂಡತಿವೆ.
ಉದ್ದ- ಸೆಂಟಿಮೀಟರ್
ರಾಶಿ- ಗ್ರಾಂ
ಕಾಲ- ಸೆಕೆಂಡ್

2. FPS ಪದ್ಧತಿ
ಈ ಪದ್ಧತಿಯು ಅಉS ಪದ್ಧತಿಯಂತೆ ಮೂರು ಭೌತ ಲಕ್ಷಣಗಳ ಏಕಮಾನಗಲನ್ನು ಸೂಚಿಸುತ್ತದೆ.
ಉದ್ದ- ಅಡಿ
ರಾಶಿ- ಪೌಂಡ್
ಕಾಲ- ಸೆಕೆಂಡ್

3. MKS ಪದ್ಧತಿ
ಮೇಲಿನ ಎರಡು ಪದ್ಧತಿಗಳ ಹಾಗೆಯೇ MKS ಸಹ ಮತ್ತೊಂದು ಪದ್ದತಿಯಾಗಿದೆ. ಇದರ ಏಕಮಾನವೆಂದರೆ,
ಉದ್ದ- ಮೀಟರ್
ರಾಶಿ – ಕಿಲೋಗ್ರಾಂ
ಕಾಲ – ಸೆಕೆಂಡ್

4. S.I ಪದ್ಧತಿ
ಮೇಲೆ ವಿವರಿಸಿದಂತೆ ಕಾಲಕಾಲಕ್ಕೆ ದೇಶ- ದೇಶಕ್ಕೆ ಅನೂಕೂಲವಾಗುವಂತೆ ಒಂದೊಂದು ದೇಶವು, ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಅದೂ ಅಲ್ಲದೇ ಭೌತಶಾಸ್ತ್ರವು ಬೆಳೆದಂತೆ ಭೌತಗುಣಗಳ ಅಳತೆಗೆ ಇನ್ನಷ್ಟು ಮೂಲಮಾನಗಳು ಅಗತ್ಯವಾಯಿತು. ಇಂತಹ ಅಗತ್ಯವನ್ನು ಪೂರೈಸಲು ವಿಶ್ವದಾದ್ಯಂತ ಒಪ್ಪಿ ಬಳಸುತ್ತಿರುವ ಪದ್ಧತಿಗೆ ಎಂದು ಸಂಕ್ಷೀಪ್ತವಾಗಿ ಹೆಸರಿಸಲಾಗಿದೆ.

S.I ವಿಸ್ತರಣಾ ರೂಪ-SYSTEM INTERNATIONAL UNITS
*ಈ ಪದ್ಧತಿಯನ್ನು 1971 ರಲ್ಲಿ ಜಾರಿಗೆ ತರಲಾಯಿತು.
*ಈ ಪದ್ಧತಿಯಲ್ಲಿ ಇದ್ದ 7 ಮೂಲಭೂತ ಪರಿಣಾಮಗಳು
ಉದ್ದ, ಸಮಯ, ಉಷ್ಣತೆ, ದ್ರವ್ಯರಾಶಿ, ವಸ್ತುವಿನ ಪ್ರಮಾಣ, ವಿದ್ಯುತ್ ಪ್ರವಾಹ, ಲೂಮಿನಸ್ ಇಂಟೆನ್ಸಿಟಿ.

• ಉದ್ದ – ಮೀಟರ್
MKS ಪದ್ಧತಿಯಲ್ಲಿ ಮೊದಲ ಬಾರಿಗೆ ಉದ್ದದ ಏಕಮಾನವನ್ನು ‘ ಮೀಟರ್ ‘ ಎಂದು ಗುರುತಿಸಲಾಯಿತು. S.I ಪದ್ಧತಿಗೂ ಇದೇ ಏಕಮಾನ ಮುಂದುವರೆಯಿತು. ಆದರೆ ಇಲ್ಲಿ ಎದುರಾದ ಒಂದು ಸಮಸ್ಯೆಯೆಂದರೆ 1 ಮೀಟರ್ ಎಂದರೆ ಎಷ್ಟು ಉದ್ದ?. ಒಂದೊಂದು ದೇಶವೂ, ಒಬ್ಬೊಬ್ಬ ವ್ಯಕ್ತಿಯೂ ತನ್ನದೇ ಆದ ಅಳತೆಯನ್ನು ಅನುಸರಿಸಿ ಬಿಡುತ್ತಾನೆ. ಆದರೆ ಈ ರೀತಿಯ ಸಮಸ್ಯೆಯನ್ನು ನಿವಾರಿಸಲು ಒಂದು ನಿರ್ದಿಷ್ಟವಾದ ಉದ್ದವನ್ನು ಗುರುತಿಸಿ ಒಂದು ಮೀಟರ್ ಎಂದರೆ ಇಷ್ಟೇ ಉದ್ದ ಎಂದು ನಿಗದಿಪಡಿಸಲಾಯಿತು.
ಫ್ರಾನ್ಸ ದೇಶದ ಸೆವರ್ಸ್ ಎಂಬ ನಗರದಲ್ಲಿ ತೂಕ ಮತ್ತು ಅಳತೆಯ ಅಂತರಾಷ್ಟ್ರೀಯ ಸಂಸ್ಥೆಯೊಂದಿದೆ. ಇದು ತೂಕ ಮತ್ತು ಅಲತೆಯ ಏಕಮಾನಗಳನ್ನು ನಿರ್ದಿಷ್ಟವಾಗಿ ಗುರ್ತಿಸಿದೆ.

• ತೂಕ – ಗ್ರಾಂ
ಇದೇ ಸೆವರ್ಸ್ ನಗರದ ಸಂಸ್ಥೆಯಲ್ಲಿ ಪ್ಲಾಟಿನಂ ಮತ್ತು ಇರಿಡಿಯಂ ಲೋಹಗಳಿಂದ ಮಾಡಿದ ಒಂದು ವರ್ತುಲಾಕಾರದ ಗುಂಡು ಇದೆ. ಇದರ ರಾಶಿ ಒಂದು ಕಿಲೋಗ್ರಾಂ. ಅದರ ಸಾವಿರದ ಒಂದನೇ ಭಾಗವೇ ಗ್ರಾಂ.

• ಕಾಲ- ಸೆಕೆಂಡ್
ಕಾಲವನ್ನು ನಿಖರವಾಗಿ ಅಳೆಯಲು ಸೀಸಿಯಮಂ ಗಡಯಾರವನ್ನು 1964 ರಲ್ಲಿ ಬಳಸಲಾಯಿತು. ಇದನ್ನು ಸೆಕೆಂಡ್‍ಗಳಲ್ಲಿ ಅಳೆಯುತ್ತಾರೆ. ಈ ಸೀಸಿಯಮಂ ಎರಡು ಗಡಿಯಾರಗಳು 5000 ವರ್ಷಗಳಲ್ಲಿ 1s ನಷ್ಟು ವ್ಯತ್ಯಾಸ ತೋರಿಸುತ್ತವೆ. ಹೈಡ್ರೋಜನ್ ಮೇಸರ್ ಬಳಸಿದ ಗಡಿಯಾರ 3,30,00,000 ವರ್ಷಗಳಲ್ಲಿ 1s ವ್ಯತ್ಯಾಸ ತೋರಿಸುತ್ತವಂತೆ.

ನಮ್ಮ ದೇಶದಲ್ಲಿ ತೂಕ ಮತ್ತು ಅಳತೆಗಳ ಹೋಲಿಕೆಯನ್ನು ನವದೆಹಲಿಯಲ್ಲಿರುವ ರಾಷ್ಟ್ರೀಯ ಭೌತ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ.

error: Content Copyright protected !!