Current AffairsLatest Updates

Manoj Bharathiraja : ತಮಿಳು ನಟ-ನಿರ್ದೇಶಕ ಮನೋಜ್ ಭಾರತಿರಾಜ ನಿಧನ

Share With Friends

Tamil actor Manoj Bharathiraja dies

ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಭಾರತಿರಾಜ ಅವರ ಪುತ್ರ ಹಾಗು ತಮಿಳು ನಟ-ನಿರ್ದೇಶಕ ಮನೋಜ್ ಭಾರತಿರಾಜ (48) ಅವರು ನಿನ್ನೆ (ಮಾರ್ಚ್ 25) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಅಶ್ವತಿ (ನಂದನ), ಇಬ್ಬರು ಪುತ್ರಿಯರಾದ ಆರ್ಷಿತಾ ಮತ್ತು ಮತಿವಥಾನಿ ಅವರನ್ನು ಅಗಲಿದ್ದಾರೆ.

ಮನೋಜ್ 1999ರಲ್ಲಿ ತಮ್ಮ ತಂದೆ ಭಾರತಿರಾಜ ನಿರ್ದೇಶನದ ರೊಮ್ಯಾಂಟಿಕ್​ ಡ್ರಾಮಾ ‘ತಾಜ್ ಮಹಲ್’ ಮೂಲಕ ಚಿತ್ರರಂಗ ಪ್ರವೇಶಿಸಿದರು. ಚಿತ್ರದಲ್ಲಿ ರಿಯಾ ಸೇನ್ ಜೊತೆ ತೆರೆ ಹಂಚಿಕೊಂಡಿದ್ದರು. ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಭಾರತಿರಾಜ. 6 ರಾಷ್ಟ್ರ ಪ್ರಶಸ್ತಿ, 6 ತಮಿಳುನಾಡು ರಾಜ್ಯ ಪ್ರಶಸ್ತಿ, 4 ಫಿಲ್ಮ್ ಫೇರ್‌ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಭಾರತಿರಾಜ. ಇವರ ಪುತ್ರ ಮನೋಜ್ ಕುಮಾರ್ ಭಾರತಿರಾಜ. ನಟನಾಗಿ ಬಣ್ಣ ಹಚ್ಚುವ ಮುನ್ನ ತಂದೆ ಭಾರತಿರಾಜಗೆ ಅಸಿಸ್ಟೆಂಟ್‌ ಡೈರೆಕ್ಟರ್ ಆಗಿ ಮನೋಜ್ ಕುಮಾರ್‌ ಕೆಲಸ ಮಾಡಿದ್ದರು.

ಮಣಿರತ್ನಂ ಚಿತ್ರಕಥೆ ಬರೆದಿದ್ದರು. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದ ಈ ಚಿತ್ರ ತಮಿಳು ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡಿತ್ತು. ತಾಜ್ ಮಹಲ್ ನಂತರ ಮನೋಜ್ ಅವರು ಸಮುತಿರಂ, ಅಲ್ಲಿ ಅರ್ಜುನ, ವರುಷಮೆಲ್ಲಂ ವಸಂತಂ, ಕಡಲ್ ಪೂಕಲ್, ವಿರುಮನ್ ಮತ್ತು ಮಾನಾಡು ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2023ರಲ್ಲಿ ಮಾರ್ಗಳಿ ತಿಂಗಲ್ ಚಿತ್ರದ ಮೂಲಕ ನಿರ್ದೇಶನಕನಾಗಿಯೂ ಗುರುತಿಸಿಕೊಂಡರು.

1999ರಲ್ಲಿ ತೆರೆಗೆ ಬಂದ ‘ತಾಜ್ ಮಹಲ್’ ಚಿತ್ರದ ಮೂಲಕ ಮನೋಜ್ ಕುಮಾರ್ ಭಾರತಿರಾಜ ನಟನೆ ಆರಂಭಿಸಿದರು. ‘ಸಮುದಿರಂ’, ‘ಕಾದಲ್ ಪೂಕಳ್’, ‘ಅಲ್ಲಿ ಅರ್ಜುನ’, ‘ಪಲ್ಲವನ್’, ‘ಬೇಬಿ’, ‘ಚಾಂಪಿಯನ್’, ‘ಈಶ್ವರನ್’, ‘ಮಾನಾಡು’, ‘ವಿರುಮನ್’ ಮುಂತಾದ ಚಿತ್ರಗಳಲ್ಲಿ ಮನೋಜ್ ಕುಮಾರ್ ಭಾರತಿರಾಜ ಅಭಿನಯಿಸಿದ್ದಾರೆ.

author avatar
spardhatimes
error: Content Copyright protected !!