Current AffairsLatest UpdatesTechnology

ಮುಂಬೈನಲ್ಲಿ Tesla ಮೊದಲ ಶೋ ರೂಮ್ ಆರಂಭ : ಟೆಸ್ಲಾ ಕಾರಿನ ವಿಶೇಷತೆಗಳೇನು..? ಬೆಲೆ ಎಷ್ಟು..?

Share With Friends

Tesla opens first showroom in India, Mumbai : ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾ ಕೊನೆಗೂ ಭಾರತದಲ್ಲಿ ತನ್ನ ಶೋರೂಂ ಆರಂಭಿಸಿದೆ. ಮುಂಬೈನ ಐಷಾರಾಮಿ ಪ್ರದೇಶ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ 4,000 ಚದರ ಅಡಿ ಜಾಗದಲ್ಲಿ ಈ ಶೋರೂಂ ಮಂಗಳವಾರ ಆರಂಭವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ (Devendra Fadnavis) ಟೆಸ್ಲಾ ಕಾರು ಶೋ ರೂಮ್‌ ಅನ್ನು ಉದ್ಘಾಟಿಸಿದರು.

ಜುಲೈ ಅಂತ್ಯದ ವೇಳೆಗೆ ಹೊಸದಿಲ್ಲಿಯಲ್ಲಿ ಎರಡನೇ ಶೋರೂಂ ತೆರೆಯುವ ನಿರೀಕ್ಷೆಯಿದೆ. ಈಗಾಗಲೇ ಟೆಸ್ಲಾ ಸ್ಥಳೀಯ ನೇಮಕಾತಿ ಹೆಚ್ಚಿಸಿದ್ದು, ಗೋದಾಮಿನ ಜಾಗಕ್ಕೂ ಹುಡುಕಾಟ ನಡೆಸುತ್ತಿದೆ. ಆದರೆ ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾದ ಭಾರತದ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯಾವುದೇ ಯೋಜನೆಗಳನ್ನು ಟೆಸ್ಲಾ ಹೊಂದಿಲ್ಲ.

ಈಗಾಗಲೇ ಜಾಗತಿಕ ಮಟ್ಟದಲ್ಲಿ ಟೆಸ್ಲಾದ ಮಾರಾಟ ಕುಸಿತ ಕಂಡಿದ್ದು, ನಿಧಾನಗತಿಯ ಮಾರಾಟವನ್ನು ಸರಿದೂಗಿಸಲು ಭಾರತಕ್ಕೆ ಕಾಲಿಟ್ಟಿದೆ. ಆದರೆ ತಕ್ಷಣದ ಮಾರಾಟಕ್ಕಿಂತ ಹೆಚ್ಚಾಗಿ, ಇಲ್ಲಿ ತನ್ನ ಕಾರುಗಳಿಗೆ ಇರುವ ಬೇಡಿಕೆ, ಬ್ರ್ಯಾಂಡ್‌ನ ಬಗ್ಗೆ ಇರುವ ಜನರ ಒಲವನ್ನು ಪರಿಶೀಲಿಸಲು ಮುಂದಾಗಿದೆ.

ಟೆಸ್ಲಾ ಕಾರಿನ ವಿಶೇಷತೆ ಏನು..? ಎಷ್ಟಿದೆ ದರ?
ಕಾರು ಬುಕ್ಕಿಂಗ್‌ ಮಾಡುವ ಗ್ರಾಹಕರು ಮುಂಗಡವಾಗಿ 22,220 ರೂ. ಹಣವನ್ನು ಪಾವತಿಸಬೇಕಾಗುತ್ತದೆ. ಕಾರುಗಳನ್ನು ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿತರಣೆ ಮಾಡಲಾಗುತ್ತದೆ.

ಶೋರೂಂ ಆರಂಭಿಸುತ್ತಿರುವ ಹೊತ್ತಲ್ಲೇ ಟೆಸ್ಲಾ ತನ್ನ ಕಾರಿನ ದರವನ್ನೂ ರಿವೀಲ್‌ ಮಾಡಿದೆ. ಟೆಸ್ಲಾ ಮಾಡೆಲ್ ವೈ 59.89 ಲಕ್ಷ ರೂ. (ಎಕ್ಸ್-ಶೋರೂಂ) ಆರಂಭಿಕ ಬೆಲೆಗೆ ಲಭ್ಯವಿದೆ. ಇದು ರಿಯರ್ ವೀಲ್ ಡ್ರೈವ್ (ಆರ್‌ಡಬ್ಲ್ಯೂಡಿ) ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಟೆಸ್ಲಾ ಮಾಡೆಲ್ ವೈ ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ ಕಾರಿಗೆ 67.89 ಲಕ್ಷ ರೂ. ದರ ಇದೆ.

ಮೈಲೇಜ್‌ ಎಷ್ಟು?
ಮಾಡೆಲ್‌ ವೈ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 500 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.9 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌ ಕಾರನ್ನು ಒಂದು ಬಾರಿ ಫುಲ್‌ ಚಾರ್ಜ್‌ ಮಾಡಿದರೆ 622 ಕಿ.ಮೀ ಪ್ರಯಾಣಿಸಬಹುದು. 201 ಕಿಮೀ/ಗಂ ಟಾಪ್‌ ಸ್ಫೀಡ್‌ ಆಗಿದ್ದು 5.6 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಆರ್‌ಡಬ್ಲ್ಯೂ ಡಿ ಆವೃತ್ತಿಯ ಟೆಸ್ಲಾ ಮಾಡೆಲ್ ವೈ ಕಾರು ಒಂದು ಬಾರಿ ಚಾರ್ಜ್‌ ಮಾಡಿದರೆ 500 ಕಿಮೀ ದೂರ ಕ್ರಮಿಸುತ್ತದೆ. ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ ಆವೃತ್ತಿಯು 622 ಕಿಮೀ ವ್ಯಾಪ್ತಿಯನ್ನು ಹೊಂದಿದೆ.

ಆರು ಬಣ್ಣಗಳಲ್ಲಿ ಲಭ್ಯ :
ಮಾಡೆಲ್ ವೈ ಆರು ಬಣ್ಣಗಳಲ್ಲಿ ಲಭ್ಯವಿದ್ದು, ಸ್ಟೆಲ್ತ್ ಗ್ರೇ, ಪರ್ಲ್ ವೈಟ್ ಮಲ್ಟಿ-ಕೋಟ್, ಡೈಮಂಡ್ ಬ್ಲ್ಯಾಕ್, ಗ್ಲೇಸಿಯರ್ ಬ್ಲೂ, ಕ್ವಿಕ್‌ಸಿಲ್ವರ್ ಮತ್ತು ಅಲ್ಟ್ರಾ ರೆಡ್. ಇದರಲ್ಲಿ ಸ್ಟೆಲ್ತ್ ಗ್ರೇ ಮಾತ್ರ ಮೇಲೆ ಉಲ್ಲೇಖಿಸಿದ ದರಕ್ಕೆ ಲಭ್ಯವಿದ್ದು, ಖರೀದಿದಾರರು ಇತರ ಬಣ್ಣಗಳಿಗೆ ಹೆಚ್ಚು ಪಾವತಿಸಬೇಕಾಗುತ್ತದೆ. ಗರಿಷ್ಠ 1,85,000 ರೂ.ವರೆಗೆ ನೀಡಬೇಕಾಗುತ್ತದೆ.

ಟೆಸ್ಲಾ ಕಾರಿಗೆ ಉದ್ಘಾಟನಾ ಆಫರ್ :
ಟೆಸ್ಲಾ ಶೋ ರೂಂ ಮುಂಬೈನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಸದ್ಯ ಟೆಸ್ಲಾದ ವೈ ಮಾಡೆಲ್ ಕಾರುಗಳ ಮೂಲಕ ಭಾರತದಲ್ಲಿ ಮಾರಾಟ ಆರಂಭಿಸುತ್ತಿದೆ. ಭಾರತದಲ್ಲಿ ಟೆಸ್ಲಾ ವೈ ಮಾಡೆಲ್ ಕಾರಿನ ಬೆಲೆ 61 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಉದ್ಘಾಟನಾ ಆಫರ್ ಈ ಮೂಲಕ ಈ ರೇರ್ ವೀಲ್ ಡ್ರೈವ್ ಕಾರು ಖರೀದಿಸಿದರೆ ಈ ಕಾರು 59.89 ಲಕ್ಷ ರೂಪಾಯಿಗೆ ಲಭ್ಯವಿದೆ. ಈ ಮೂಲಕ ಆರಂಭಿಕ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಬೇರೆ ದೇಶಗಳಲ್ಲಿ ದರ ಎಷ್ಟು?
ಮಾಡೆಲ್‌ ವೈ ಲಾಂಗ್‌ ರೇಂಜ್‌ ರಿಯರ್‌ ವೀಲ್‌ ಡ್ರೈವ್‌
ಅಮೆರಿಕ – 44,900 ಡಾಲರ್‌ (38.61 ಲಕ್ಷ ರೂ.)
ಚೀನಾ – 2,63,500 ಯುವಾನ್‌(31.55 ಲಕ್ಷ ರೂ.)
ಜರ್ಮನಿ – 45,970 ಯುರೋ(46.10 ಲಕ್ಷ ರೂ.)

ಭಾರತದಲ್ಲಿ ಉತ್ಪಾದನೆ ಇಲ್ಲ :
ಭಾರತದಲ್ಲಿ ಟೆಸ್ಲಾ ಉತ್ಪಾದನೆ ಕುರಿತು ಹಲವು ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಕಳೆದ ವಾರ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಟೆಸ್ಲಾ ಭಾರತದಲ್ಲಿ ಕಾರು ಉತ್ಪಾದನೆ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಟೆಸ್ಲಾ ಸದ್ಯ ಭಾರತದಲ್ಲಿ ಕಾರು ಮಾರಾಟ ಮಾಡಲು ಬಯಸುತ್ತಿದೆ. ಆದರೆ ಉತ್ಪಾದನೆ ಇಲ್ಲ ಎಂದಿದ್ದಾರೆ.

ಟೆಸ್ಲಾ ಅಮರಿಕ, ಚೀನಾ ಘಟಕಗಳಿಂದ ಕಾರು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದೆ. ಇದೇ ಕಾರಣದಿಂದ ಟೆಸ್ಲಾ ವೈ ಮಾಡೆಲ್ ಕಾರು 60 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ದುಬಾರಿ ಆಮದು ಸುಂಕ ಪಾವತಿ ಮಾಡಬೇಕಿದೆ. ಸದ್ಯ ಟೆಸ್ಲಾ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುವ ಪದ್ಧತಿಯಲ್ಲಿ ಮುಂದುುವರಿಯಲಿದೆ.

error: Content Copyright protected !!