ಆ. 22ರಂದು TET ಪರೀಕ್ಷೆ, ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ದಿನಾಂಕ: 22-08-2021ರ ಭಾನುವಾರದಂದು ರಾಜ್ಯದಾದ್ಯಂತ ನಡೆಯಲಿದ್ದು, ಅಧಿಸೂಚನೆಯಂತೆನಿಗದಿತ ಶುಲ್ಕ ಪಾವತಿಸಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ದಿನಾಂಕ: 12-08-2021 ರಿಂದ ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್‍ಸೈಟ್
www.schooleducation.kar.nic.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹದು.
#ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ..?
ನಲ್ಲಿಲಭ್ಯವಿರಿಸಿದೆ. ಅಭ್ಯರ್ಥಿಗಳು ತಮ್ಮ User Id ಮತ್ತು Password ಅನ್ನು ನಮೂದಿಸಿ download ಮಾಡಿಕೊಳ್ಳಬಹುದು.
# ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳು :
# 1. ಪರೀಕ್ಷೆಯ ಪೂರ್ವದಲ್ಲಿ:
* ದಿನಾಂಕ : 12/08/2021 ರಿಂದ ಆನ್‍ಲೈನ್‍ನಲ್ಲಿ ಅಭ್ಯರ್ಥಿಗಳ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಬಹುದು.
* ಅಭ್ಯರ್ಥಿಯು ಪರೀಕ್ಷಾ ಪ್ರವೇಶ ಪತ್ರವನ್ನು ಸಾಕಷ್ಟು ಮುಂಚಿತವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಂಡು, ತಮಗೆ ಹಂಚಿಕೆಯಾಗಿರುವ ಪರೀಕ್ಷಾ ಕೇಂದ್ರದ ವಿಳಾಸವನ್ನು ತಿಳಿದು, ಕನಿಷ್ಟ ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಸರಿಯಾದ ವಿಳಾಸವನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. (ವಿಶೇಷವಾಗಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು)
* ಪರೀಕ್ಷಾ ಕೇಂದ್ರದ ವಿಳಾಸಕ್ಕೆ ಸಂಬಂಧಿಸಿದಂತೆ ವಿವರ ಬೇಕಾದಲ್ಲಿ ತಾವು ಪರೀಕ್ಷೆ ಬರೆಯಲಿರುವ ಜಿಲ್ಲೆಯ KARTET-2021gರ ನೋಡಲ್ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯಬಹುದು. ನೋಡಲ್ ಅಧಿಕಾರಿಯ ದೂರವಾಣಿ ಸಂಖ್ಯೆ ವೆಬ್‍ಸೈಟ್‍ನಲ್ಲಿ ಲಭ್ಯವಿರಿಸಿದೆ.
* ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ರತಿ ಅಧಿವೇಶನದ ಪರೀಕ್ಷಾ ಪ್ರಾರಂಭದ ಅವಧಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಜರಿರುವುದು.
* ಅಭ್ಯರ್ಥಿಯು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿದ ಕೂಡಲೇ “ಆರೋಗ್ಯ ತಪಾಸಣಾ ಕೌಂಟರ್” ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವುದು.
* ಪರೀಕ್ಷೆಗೆ ಹಾಜರಾಗುವ ಪ್ರತಿ ಅಭ್ಯರ್ಥಿಯು ಕಡ್ಡಾಯವಾಗಿ ಮುಖಗವಸು (ಫೇಸ್ ಮಾಸ್ಕ್) ಧರಿಸಿರಬೇಕು.
* ಪ್ರತಿ ಅಭ್ಯರ್ಥಿಯು ತನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು.
* ಪ್ರತಿ ಅಭ್ಯರ್ಥಿಯು ತಮ್ಮದೇ ಆದ ನೀರಿನ ಬಾಟಲಿಗಳನ್ನು ತಪ್ಪದೇ ತರುವುದು.
* ಅಭ್ಯರ್ಥಿಯು ಪರೀಕ್ಷಾ ಕೇಂದ್ರ ಹಾಗೂ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವುದು.
* ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನೀಡಲಾಗುವುದು.
* ಕೊಠಡಿಯನ್ನು ಪ್ರವೇಶಿಸಿದ ನಂತರ, ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ತಮ್ಮ ಅರ್ಜಿ ಸಂಖ್ಯೆಯನ್ನು ನಮೂದಿಸಿರುವ ಡೆಸ್ಕ್‍ನಲ್ಲಿಯೇ ಕುಳಿತುಕೊಳ್ಳುವುದು.
* ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಅಥವಾ ಕೊಠಡಿಯ ಪಕ್ಕ, ಪರೀಕ್ಷೆಯ ಮೊದಲಾಗಲೀ ಅಥವಾ ನಂತರದಲ್ಲಾಗಲಿ ಗುಂಪು ಸೇರುವಂತಿಲ್ಲ.
* ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಯಾವುದೇ
ವಿನಾಯಿತಿ ಇರುವುದಿಲ್ಲ.
* ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಅವಕಾಶವಿರುವುದಿಲ್ಲ.
* ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಸ್ಯಾನಿಟೈಸರ್ ಮತ್ತು ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವುದು.
* ಕೇರಳ, ಮಹಾರಾಷ್ಟ್ರ ಮತ್ತು ಇನ್ನಿತರ ಹೊರರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳು ಕೋವಿಡ್-19 RAT or
RTPCR ಪರೀಕ್ಷೆ ಮಾಡಿಸಿ, ವರದಿಯನ್ನು ಪರೀಕ್ಷಾ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯ.
# 2. ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪರೀಕ್ಷೆ ಬರೆಯಲು ಪ್ರಾರಂಭಿಸುವುದಕ್ಕೆ ಪೂರ್ವದಲ್ಲಿ:
1. ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವುದು.
2. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ನಮೂದಿಸಿರುವ ಆಸನದಲ್ಲಿ ಕುಳಿತಿರುವ ಬಗ್ಗೆ
ಖಾತರಿಪಡಿಸಿಕೊಳ್ಳುವುದು.
3. ಪೂರ್ವ ಮುದ್ರಿತ ಓ.ಎಂ.ಆರ್.ನಲ್ಲಿ ಅಭ್ಯರ್ಥಿಯ ಅರ್ಜಿಯಲ್ಲಿನ ಮುಖ್ಯ ಅಂಶಗಳು ಪೂರ್ವ ಮುದ್ರಿತವಾಗಿರುವುದರಿಂದ ತನ್ನದೇ ಓ.ಎಂ.ಆರ್. ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು.
4. ಅಭ್ಯರ್ಥಿಗಳು ಪೂರ್ವ ಮುದ್ರಿತ ಓ.ಎಂ.ಆರ್ ಶೀಟ್‍ನಲ್ಲಿ ತಮ್ಮ ಅರ್ಜಿಸಂಖ್ಯೆಯನ್ನು ನಿಗದಿತ ಅಂಕಣದಲ್ಲಿ ತುಂಬಿ ಶೇಡ್ ಮಾಡುವುದು ಹಾಗೂ ಈಗಾಗಲೇ ಓ.ಎಂ.ಆರ್ ಶೀಟ್‍ನಲ್ಲಿ ಮುದ್ರಿತವಾಗಿರುವ ಅರ್ಜಿಸಂಖ್ಯೆ ಹಾಗೂ ತಾವು ¨ರೆದಿರುವ ಅರ್ಜಿಸಂಖ್ಯೆ ಒಂದೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು.
5. ಪೂರ್ವ ಮುದ್ರಿತ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಸ್ವೀಕರಿಸಿದ ನಂತರ ಓ.ಎಂ.ಆರ್.ನ ಕ್ರಮಸಂಖ್ಯೆ ಪ್ರಶ್ನೆಪತ್ರಿಕೆ ಪುಸ್ತಿಕೆಯ ಕ್ರಮ ಸಂಖ್ಯೆ ಎರಡೂ ಒಂದೇ ಆಗಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು. ಒಂದೊಮ್ಮೆ ಬೇರೆ ಓ.ಎಂ.ಆರ್ ಸಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ನೀಡಿದ್ದಲ್ಲಿ ನಿಮ್ಮದೇ ಪೂರ್ವಮುದ್ರಿತ ಓ.ಎಂ.ಆರ್ಸ ಹಿತ ಪ್ರಶ್ನೆಪತ್ರಿಕೆ ಪುಸ್ತಿಕೆಯನ್ನು ಪಡೆದುಕೊಂಡ ನಂತರವೇ ಉತ್ತರಿಸಲು ಪ್ರಾರಂಭಿಸುವುದು.
6. ಪೂರ್ವಮುದ್ರಿತ ಓ.ಎಂ.ಆರ್ ಸಂಖ್ಯೆ ಮತ್ತು ಪ್ರಶ್ನೆಪತ್ರಿಕೆ ಪುಸ್ತಿಕೆ ಕ್ರಮಸಂಖ್ಯೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ.
7. ಪೂರ್ವಮುದ್ರಿತ ಓ.ಎಂ.ಆರ್.ನಲ್ಲಿ ಅಭ್ಯರ್ಥಿಯು ಅರ್ಜಿ ಸಂಖ್ಯೆಯನ್ನು ನೀಡಿರುವ ನಿಗದಿತ ಅಂಕಣದಲ್ಲಿ ಅರ್ಜಿ ಸಂಖ್ಯೆಯನ್ನು ತಪ್ಪದೇ ತುಂಬಿ ಶೇಡ್ ಮಾಡುವುದು (ಓ.ಎಂ.ಆರ್ ನಲ್ಲಿ ಪೂರ್ವ ಮುದ್ರಿತವಾಗಿರುವ ಅರ್ಜಿಸಂಖ್ಯೆ ಮತ್ತು ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ಎರಡನ್ನೂ ನೋಡಿ ತಾಳೆಯಾಗುವಂತೆ ನಮೂದಿಸಬೇಕು)ಪೂರ್ವ ಮುದ್ರಿತ ಅರ್ಜಿಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿರುವ ಅರ್ಜಿಸಂಖ್ಯೆ ಒಂದೇ ಆಗದಿದ್ದಲ್ಲಿ ಅಂತಹ ಓ.ಎಂ.ಆರ್ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ.
8. ನಿಮ್ಮ ಪ್ರವೇಶ ಪತ್ರದ ಹಿಂಭಾಗದಲ್ಲಿ ಮುದ್ರಿತವಾಗಿರುವ ಬೆಲ್ ವೇಳಾಪಟ್ಟಿಯ ಬಗ್ಗೆ ಗಮನ ಹರಿಸುವುದು.
9. ಪೂರ್ವ ಮುದ್ರಿತ ಓ.ಎಂ.ಆರ್.ನ ಕೆಳಗೆ ನಿಗದಿಪಡಿಸಿರುವ ಚೌಕದಲ್ಲಿ ಅಭ್ಯರ್ಥಿಯು ಸಹಿ ಮಾಡಬೇಕು (ಸಹಿಯು ಅರ್ಜಿಯಲ್ಲಿ ಹಾಕಿರುವ ಸಹಿಗೆ ಹೋಲಿಕೆಯಾಗಬೇಕು) ಮತ್ತು ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು. ನಂತರ ತಮ್ಮ ಕೊಠಡಿ ಮೇಲ್ವಿಚಾರಕರಿಂದ ಪೂರ್ವ ಮುದ್ರಿತ ಓ.ಎಂ.ಆರ್.ನಲ್ಲಿ ಸಹಿಯನ್ನು ಮಾಡಿಸಿಕೊಳ್ಳಬೇಕು. ಅಭ್ಯರ್ಥಿಗಳ ಸಹಿ ಮತ್ತು ಹೆಬ್ಬೆಟ್ಟಿನ ಗುರುತು ಹಾಗೂ ಕೊಠಡಿ ಮೇಲ್ವಿಚಾರಕರ ಸಹಿ ಇಲ್ಲದಿರುವ ಓ.ಎಂ.ಆರ್.ಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.
10. ನಾಮಿನಲ್ ರೋಲ್‍ನಲ್ಲಿ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದೆಯೆ ಸಹಿ ಮಾಡಬೇಕು ಹಾಗೂ ಎಡಗೈ ಹೆಬ್ಬೆರಳಿನ ಗುರುತನ್ನು ಸ್ಪಷ್ಟವಾಗಿ ಒತ್ತಬೇಕು.
# 3. ಪರೀಕ್ಷೆಯ ಸಮಯದಲ್ಲಿ:
* ನಿಗದಿತ ಅವಧಿಗೆ (ಪತ್ರಿಕೆ-1, 9.30AM ಹಾಗೂ ಪತ್ರಿಕೆ -2, 2.00 PM) ಪರೀಕ್ಷೆ ಬರೆಯಲು ಪ್ರಾರಂಭಿಸುವುದು.
* ಪರೀಕ್ಷಾ ಗೌಪ್ಯತೆಗೆ ಮತ್ತು ನಿಯಮಗಳಿಗೆ ಚ್ಯುತಿ ಬರದಂತೆ ಪರೀಕ್ಷೆ ಬರೆಯುವುದು.
* ಪರೀಕ್ಷಾ ಅವಧಿಯಲ್ಲಿ ಕೊನೆಯ 5 ನಿಮಿಷ ಉಳಿದಿರುವ ಬಗ್ಗೆ ಎಚ್ಚರದ ಗಂಟೆಯನ್ನು ಗಮನಿಸುವುದು.
* ಅಭ್ಯರ್ಥಿಯು ಉತ್ತರ ಪತ್ರಿಕೆಯನ್ನು ಒಪ್ಪಿಸುವಾಗ ನಾಮಿನಲ್ ರೋಲ್‍ನಲ್ಲಿ ಕಡ್ಡಾಯವಾಗಿ ಎರಡನೇ ಬಾರಿ ಸಹಿ
ಮಾಡುವುದು.
* ಎರಡನೇ ಬಾರಿ ಸಹಿ ಮಾಡದ ಪಕ್ಷದಲ್ಲಿ ಅಭ್ಯರ್ಥಿಗಳು ಪೂರ್ವ ಮುದ್ರಿತ ಓ.ಎಂ.ಆರ್ ಸಲ್ಲಿಸಿಲ್ಲ ಎಂದು
ಭಾವಿಸಿ ಮೌಲ್ಯ ಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ಇದಕ್ಕೆ ಸ್ವತಃ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
* ಅಭ್ಯರ್ಥಿಯು ಉತ್ತರಪತ್ರಿಕೆಯನ್ನ್ಪು ಕೊಠಡಿ ಮೇಲ್ವಿಚಾರಕರಿಗೆ ಒಪ್ಪಿಸಿದ ನಂತರವೇ ಕಾರ್ಬನ್‍ಲೆಸ್ ಪ್ರತಿಯನ್ನು
ಮತ್ತು ಪ್ರಶ್ನೆಪತ್ರಿಕೆಯನ್ನು ತೆಗೆದುಕೊಂಡು ಪರೀಕ್ಷಾ ಕೊಠಡಿಯಿಂದ ಹೋಗಬಹುದು.
# 4. ವಿಶೇಷ ಸೂಚನೆ:
* ಪರೀಕ್ಷೆ ಬೆಲ್ ನಂತರ (ಪತ್ರಿಕೆ-1, 9.30AM ಹಾಗೂ ಪತ್ರಿಕೆ-2, 2.00 PM) ಬರುವ ಯಾವುದೇ
ಅಭ್ಯರ್ಥಿಗಳಿಗೆ ಪರೀಕ್ಷೆಗೆ ಪ್ರವೇಶ ನೀಡುವುದಿಲ್ಲ.
* ಕೊವೀಡ್-19 ಸಂಬಂಧ ವಾರಾಂತ್ಯ ಲಾಕ್‍ಡೌನ್ ಘೋಷಿಸಿರುವ ಜಿಲ್ಲೆಗಳಲ್ಲಿ ಅಭ್ಯಥಿಗಳು ತಮ್ಮ ಸ್ವಂತ
ವಾಹನದಲ್ಲಿ ಪ್ರಯಾಣಿಸಲು ಅವಕಾಶ ನೀಡಿದೆ. ಈ ಸಂದರ್ಬದಲ್ಲಿ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಹಾಗೂ
ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಿ ಪರೀಕ್ಷೆಗೆ ಹಾಜರಾಗುವುದು.
# 5. ಸಾಮಾನ್ಯ ಸೂಚನೆಗಳು:
* ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಿರುವ ವಿಷಯ/ಮಾಧ್ಯಮದ ಪ್ರಶ್ನೆಪತ್ರಿಕೆಯನ್ನೇ ಉತ್ತರಿಸುವುದು
ಕಡ್ಡಾಯವಾಗಿರುತ್ತದೆ.
* ಪೂರ್ವ ಮುದ್ರಿತ ಓ.ಎಂ.ಆರ್. ನಲ್ಲಿ ಒಮ್ಮೆ ಬರೆದಿರುವುದನ್ನು ಪುನಃ ಬದಲಾಯಿಸುವುದು, ಚಿತ್ತು ಮಾಡುವುದು,
ಬಿಳಿ ಫ್ಲೂಯಿಡ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
* ಉತ್ತರಪತ್ರಿಕೆಯ ಮೇಲೆ ಯಾವುದೇ ಕಚ್ಚಾ ಕಾರ್ಯ(Rough work) ಮಾಡಬಾರದು ಹಾಗೂ ಯಾವುದೇ
ವರ್ಕ್‍ಷೀಟ್‍ನ್ನು ಓ.ಎಂ.ಆರ್ ಜೊತೆ ಕಟ್ಟಬಾರದು. (ಲಗತ್ತಿಸಬಾರದು).
* ಪರೀಕ್ಷಾ ಕೊಠಡಿಯೊಳಕ್ಕೆ ಉತ್ತರಿಸಲು ಬೇಕಾದ ನೀಲಿ ಅಥವಾ ಕಪ್ಪು ಶಾಯಿಯ ಬಾಲ್‍ಪಾಯಿಂಟ್ ಪೆನ್ ಮತ್ತು
ಗಣಿತಕ್ಕೆ ಸಂಬಂಧಿಸಿದ ಜಾಮೀಟ್ರಿ ಪರಿಕರಗಳನ್ನು ಮಾತ್ರ ಪ್ರವೇಶ ಪತ್ರದೊಂದಿಗೆ ತೆಗೆದುಕೊಂಡು ಹೋಗಲು
ಅವಕಾಶವಿರುತ್ತದೆ.
* ಕ್ಯಾಲ್‍ಕ್ಯುಲೇಟರ್, ಮೊಬೈಲ್, ಪೇಜರ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮತ್ತು
ಲಾಗ್‍ಟೇಬಲ್, ಬಿಳಿ ಫ್ಲೂಯಿಡ್ ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು
ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ.
* ಯಾವುದೇ ಅಭ್ಯರ್ಥಿಯು ನಕಲು ಮಾಡುವುದು ಅಥವಾ ಪೂರ್ವ ಮುದ್ರಿತ ಓ.ಎಂ.ಆರ್ ಬೇರೆಯವರಿಗೆ
ಕೊಡಲು ಪ್ರಯತ್ನಿಸುವುದು, ಮುಂತದವುಗಳನ್ನು ಪರೀಕ್ಷಾ ಕೊಠಡಿಯಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಪ್ರತಿ ಅಭ್ಯರ್ಥಿಯು ಮುಖ್ಯ ಅಧೀಕ್ಷಕರು ಅಥವಾ ಕೊಠಡಿ ಮೇಲ್ವಿಚಾರಕರು ನೀಡಿದ ಸೂಚನೆಗಳಿಗೆ /
ನಿಯಮಗಳಿಗೆ ಬದ್ಧರಾಗಿರಬೇಕು. ಹಾಗೂ ಅಭ್ಯರ್ಥಿಗಳ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿಯನ್ನು ಮುಖ್ಯ
ಅಧೀಕ್ಷಕರು ಅಥವಾ ಕೊಠಡಿ ಮೇಲ್ವಿಚಾರಕರು ಪಡೆಯಬಯಸಿದಲ್ಲಿ ಅಭ್ಯರ್ಥಿಗಳು ಆ ಮಾಹಿತಿಯನ್ನು ನೀಡಲು
ಸಿದ್ಧರಿರಬೇಕು.
* ಪರೀಕ್ಷಾ ಕೊಠಡಿಯಲ್ಲಿ ನಿಶ್ಯಬ್ಧತೆ, ಪರೀಕ್ಷಾ ಶಿಸ್ತನ್ನು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು. ಅಭ್ಯರ್ಥಿಯು
ಪರೀಕ್ಷಾ ಸೂಚನೆ / ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದ
ಪಕ್ಷದಲ್ಲಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
6. ವಿಶೇಷ ಚೇತನ ಅಭ್ಯರ್ಥಿಗಳಿಗೆ ಸೂಚನೆಗಳು:
* ವಿಶೇಷಚೇತನ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
* ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಂಗವಿಕಲತೆಯ ಪ್ರಮಾಣಪತ್ರವನ್ನಾಧರಿಸಿ ಪರೀಕ್ಷೆ ಬರೆಯಲು
ಒಂದು ಗಂಟೆಗೆ 20 ನಿಮಿಷಗಳಂತೆ 50 ನಿಮಿಷ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುವುದು. ಆನ್‍ಲೈನ್ ಅರ್ಜಿ ಸಲ್ಲಿಸುವಾಗ ಸಹಾಯಕ ಬರಹಗಾರರ (Sಛಿಡಿibe) ನ್ನು ಕೋರಿರುವವರು ಒಂದು ದಿನ