ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs
ವಿಶ್ವದ ಟಾಪ್-10 ಪರಿಣತ ಟೆಕ್ಕಿಗಳ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸೇರಿ ಭಾರತದ 6 ನಗರಗಳು
ವಿಶ್ವದ ಟಾಪ್-10 ಪರಿಣತ ಟೆಕ್ಕಿಗಳ ನಗರಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು (Bengaluru) ಸ್ಥಾನ ಪಡೆದುಕೊಂಡಿದ್ದು, ಅಗ್ರ 10ರಲ್ಲಿ ಭಾರತದ 6 ನಗರಗಳಿರುವುದು ವಿಶೇಷ. ಕೋಲಿಯರ್ಸ್ (Colliers) ಗ್ಲೋಬಲ್ ಟೆಕ್ ಮಾರ್ಕೆಟ್ ವಿಶ್ವದ ಪರಿಣತ ಟೆಕ್ಕಿಗಳ (Global Tech Talent Hubs) ವರದಿ ಸಿದ್ಧಪಡಿಸಿ, ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಕರ್ನಾಟಕದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಹೆಮ್ಮೆಗೆ ಪಾತ್ರವಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
200ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆಯ ಟೆಕ್ ಉದ್ಯಮವನ್ನು ಆಧಾರವಾಗಿಟ್ಟುಕೊಂಡು, ಅದರ ಪ್ರತಿಭೆ, ಬಂಡವಾಳ ಸೇರಿದಂತೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿ ತಯಾರಿಸಿದೆ. ಜಾಗತಿಕವಾಗಿ ಪರಿಣಿತ ಟೆಕ್ಕಿಗಳ ಪಟ್ಟಿಯಲ್ಲಿ ಭಾರತ ಮತ್ತು ಚೀನಾ ತನ್ನ ಪ್ರಾಬಲ್ಯ ಮುಂದುವರೆಸಿದೆ.
ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಚೆನ್ನೈ, ಮುಂಬೈ ಈ ಪಟ್ಟಿಯಲ್ಲಿವೆ. ಈ ವರದಿಯು ಬೆಂಗಳೂರಿನಲ್ಲಿ ಪರಿಣಿತ ಟೆಕ್ಕಿಗಳಿದ್ದು, ಜಾಗತಿಕ ತಂತ್ರಜ್ಞಾನವನ್ನು ಆಕರ್ಷಿಸುತ್ತಿದ್ದಾರೆ. ಇತ್ತೀಚೆಗೆ ಯುವ ಟೆಕ್ಕಿಗಳೇ ಈ ವಲಯದಲ್ಲಿ ಹೆಚ್ಚಾಗುತ್ತಿದ್ದು, 2014-2022ರ ಅವಧಿಯಲ್ಲಿ 25 ವರ್ಷಕ್ಕಿಂತ ಕೆಳಗಿನ ಉದ್ಯೋಗಿಗಳ ಪ್ರಮಾಣ ಶೇ.9ರಷ್ಟು ಹೆಚ್ಚಾಗಿದೆ. ಇದು ಎಲ್ಲಾ ಉದ್ಯಮದ ಬೆಳವಣಿಗೆ ದರಕ್ಕಿಂತ ಶೇ.20ರಷ್ಟು ಅಧಿಕ ಎನ್ನಲಾಗಿದೆ.
ಉತ್ತಮ ಸೌಲಭ್ಯಗಳ ಲಭ್ಯತೆ ವಿಚಾರದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮುಂಚೂಣಿ :
ಬೆಂಗಳೂರು ಮತ್ತು ಹೈದರಾಬಾದ್ ಟೆಕ್ಕಿಗಳ ಆದ್ಯತೆ ಸ್ಥಳಗಳಾಗಿದ್ದು, ಪ್ರತಿಭಾ ಲಭ್ಯತೆ, ಮಾಹಿತಿ ತಂತ್ರಜ್ಞಾನ ಸೌಕರ್ಯ, ಕಡಿಮೆ ವೆಚ್ಚದಲ್ಲಿ ಉತ್ತಮ ಸೌಲಭ್ಯಗಳ ಲಭ್ಯತೆ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಜಾಗತಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತ ಉತ್ತಮ ಆಯ್ಕೆ ಎಂದು ಮೂಲಗಳು ತಿಳಿಸಿವೆ.
ಜುಲೈ 11 : ವಿಶ್ವ ಜನಸಂಖ್ಯಾ ದಿನ (World Population Day)
Ganeshotsav : ಗಣೇಶೋತ್ಸವವನ್ನು ರಾಜ್ಯ ಉತ್ಸವವೆಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ
‘ನೀಲಿ ಕ್ರಾಂತಿ’ : 11 ವರ್ಷಗಳಲ್ಲಿ ದ್ವಿಗುಣಗೊಂಡಿದೆ ಭಾರತದ ಮೀನು ಉತ್ಪಾದನೆ
ಭಾರತದ ಮೀನು ಉತ್ಪಾದನೆಯು 11 ವರ್ಷಗಳಲ್ಲಿ ದ್ವಿಗುಣಗೊಂಡು 95.79 ಲಕ್ಷ ಟನ್ಗಳಿಂದ 195 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ. ಇದು ಕೇಂದ್ರವು ಪ್ರಾರಂಭಿಸಿದ ದೇಶದ ‘ನೀಲಿ ಕ್ರಾಂತಿ’ಯ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಭುವನೇಶ್ವರದಲ್ಲಿ ರಾಷ್ಟ್ರೀಯ ಮೀನು ರೈತರ ದಿನದಂದು ಇದನ್ನು ಘೋಷಿಸಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್, ಒಳನಾಡಿನ ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ 140 ಪ್ರತಿಶತದಷ್ಟು ಬೆಳವಣಿಗೆ ನಡೆದಿದೆ ಎಂದು ಪ್ರತಿಪಾದಿಸಿದರು.
ಸಮುದ್ರಾಹಾರ ರಫ್ತು 60,500 ಕೋಟಿ ರೂಪಾಯಿಗಳನ್ನು ಮೀರಿದೆ, ಭಾರತವು ಸೀಗಡಿ ರಫ್ತಿನಲ್ಲಿ ಜಾಗತಿಕವಾಗಿ ತನ್ನ ಮುಂಚೂಣಿಯನ್ನು ಉಳಿಸಿಕೊಂಡಿದೆ ಎಂದು ಅವರು ಹೇಳಿದರು. ಹೊಸ ಮೀನುಗಾರಿಕೆ ಕ್ಲಸ್ಟರ್ಗಳು, ಐಸಿಎಆರ್ ತರಬೇತಿ ಕ್ಯಾಲೆಂಡರ್ ಮತ್ತು ಬೀಜ ಪ್ರಮಾಣೀಕರಣ ಮಾರ್ಗಸೂಚಿಗಳು ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಸಹ ಸಚಿವರು ಪ್ರಾರಂಭಿಸಿದರು. ಮೀನು ರೈತರು ಮತ್ತು ಮೀನುಗಾರಿಕಾ ಸಮುದಾಯಕ್ಕೆ ಗರಿಷ್ಠ ಪ್ರಯೋಜನವನ್ನು ನೀಡಲು ಐಸಿಎಆರ್-ಸಿಐಎಫ್ಎ ಸಂಶೋಧನೆಯನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ಸಚಿವರು ಒತ್ತು ನೀಡಿದರು.
Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ


