Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು / 19-07-2025 (Today’s Current Affairs)

Share With Friends

ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs

ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್-‌ ದೇಶದಲ್ಲೇ ಮೊದಲ ಬಾರಿ 9 ಜನರಿಗೆ ಜೀವಾವಧಿ ಶಿಕ್ಷೆ
India’s first digital arrest conviction: 9 sentenced to life by Bengal court
ಇತ್ತೀಚಿನ ಕೆಲ ತಿಂಗಳುಗಳ ಹಿಂದೆ ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಸೈಬರ್‌ ವಂಚಕರು ಅಮಾಯಕರಿಗೆ ಕರೆ ಮಾಡಿ, ಪೊಲೀಸರ ಸೋಗಿನಲ್ಲಿ ಮಾತನಾಡಿ ಡಿಜಿಟಲ್‌ ಅರೆಸ್ಟ್‌ ಮಾಡುವುದಾಗಿ ಹೇಳಿಕೊಂಡು ಬ್ಯಾಂಕ್‌ ಖಾತೆಯ ಮಾಹಿತಿಗಳನ್ನು ಪಡೆದು ವಂಚಿಸುತ್ತಿದ್ದರು. ಇದೀಗ ಈ ವಂಚನೆಗೆ ಸಂಬಂಧಪಟ್ಟಂತೆ ದೇಶದಲ್ಲೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ 9 ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯವು ಈ ತೀರ್ಪು ನೀಡಿದೆ. ಡಿಜಿಟಲ್ ಬಂಧನ ಸೈಬರ್ ವಂಚನೆ ಪ್ರಕರಣದಲ್ಲಿ ದೇಶದ ಮೊದಲ ಅಪರಾಧವೆಂದು ಸಾಬೀತಾದ ಒಂಬತ್ತು ವ್ಯಕ್ತಿಗಳಿಗೆ ಶುಕ್ರವಾರ ಐತಿಹಾಸಿಕ ತೀರ್ಪಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದು ಭಾರತದ ಸೈಬರ್‌ ಅಪರಾಧ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿದೆ.

ಅಪರಾಧ ನಡೆದು ಎಂಟು ತಿಂಗಳ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಶಿಕ್ಷೆಯನ್ನು ಪ್ರಕಟಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡಿದ್ದಾರೆ. ಶಿಕ್ಷೆಗೆ ಒಳಗಾದ ಒಂಬತ್ತು ಅಪರಾಧಿಗಳನ್ನು ಎಂಡಿ ಇಮ್ತಿಯಾಜ್ ಅನ್ಸಾರಿ, ಶಾಹಿದ್ ಅಲಿ ಶೇಖ್, ಶಾರುಖ್ ರಫೀಕ್ ಶೇಖ್, ಜತಿನ್ ಅನುಪ್ ಲಾಡ್ವಾಲ್, ರೋಹಿತ್ ಸಿಂಗ್, ರೂಪೇಶ್ ಯಾದವ್, ಸಾಹಿಲ್ ಸಿಂಗ್, ಪಠಾಣ್ ಸುಮೈಯಾ ಬಾನು, ಪಠಾಣ್ ಸುಮಯ್ಯ ಬಾನು ಮತ್ತು ಫಲ್ದು ಅಶೋಕ್ ಎಂದು ಗುರುತಿಸಲಾಗಿದೆ. ಇವರಲ್ಲಿ ನಾಲ್ವರು ಮಹಾರಾಷ್ಟ್ರದವರು, ಮೂವರು ಹರಿಯಾಣದವರು ಮತ್ತು ಇಬ್ಬರು ಗುಜರಾತ್‌ನವರು ಎನ್ನಲಾಗಿದೆ.


ತೆಲುಗು ಚಿತ್ರರಂಗದ ಹಾಸ್ಯ ನಟ ಫಿಶ್ ವೆಂಕಟ್ (Venkat Raj) ನಿಧನ


2036ರ ಒಲಿಂಪಿಕ್ಸ್‌ಗೆ ಸರ್ಕಾರ ಸಿದ್ಧತೆ ; 3000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ. ಸಹಾಯ ಧನ
2036 Olympics: Govt providing Rs 50,000/month to 3,000 athletes, says Amit Shah
2036ರ ಒಲಿಂಪಿಕ್ಸ್​ಗಾಗಿ ಭಾರತ ಸಕಲ ರೀತಿಯಲ್ಲೂ ಸನ್ನದ್ಧರನ್ನಾಗಬೇಕು ಎಂಬ ಆಶಯವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ 3 ಸಾವಿರ ಕ್ರೀಡಾಪಟುಗಳಿಗೆ ಮಾಸಿಕ 50,000 ರೂ.ಗಳ ಸಹಾಯ ಧನ ನೀಡುವುದಾಗಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಗೆಲುವು ಮತ್ತು ಸೋಲು ಆಟದ ಒಂದು ಭಾಗ. ಆದರೆ ನಾವು ಗೆಲ್ಲುವನ್ನು ಗುರಿಯನ್ನು ಹೊಂದಿರಬೇಕು. ಗೆಲುವಿಗಾಗಿ ಯೋಜಿಸುವುದು ಪ್ರತಿಯೊಬ್ಬರ ಸ್ವಭಾವದಲ್ಲಿ ಅಂತರ್ಗತವಾಗಿರಬೇಕು. ಅಲ್ಲದೆ ಗೆಲುವು ಅಭ್ಯಾಸವಾಗಬೇಕು. ಗೆಲ್ಲುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ವ್ಯಕ್ತಿಗಳು ನಿರಂತರವಾಗಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಕಳೆದ ದಶಕದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬಂದಿವೆ. ಬಜೆಟ್​ನಲ್ಲಿ ಕ್ರೀಡೆಗಳಿಗಾಗಿ ನೀಡಲಾಗುವ ಅನುದಾನ ಐದು ಪಟ್ಟು ಹೆಚ್ಚಿಸಲಾಗಿದೆ. ಅಲ್ಲದೆ ಸರ್ಕಾರವು ಸುಮಾರು 3,000 ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಒಲಿಂಪಿಕ್ಸ್​ಗೆ ಸಿದ್ಧತೆಯನ್ನು ರೂಪಿಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸುಮಾರು 3,000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ.ಗಳ ಸಹಾಯವನ್ನು ನೀಡಲಿದೆ. ಈ ಮೂಲಕ 2036 ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ವಿವರವಾದ ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಒಲಿಂಪಿಕ್ಸ್​ಗಾಗಿ ಪೂರ್ವ ತಯಾರಿಗಳನ್ನು ಆರಂಭಿಸಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.

ಒಟ್ಟಿನಲ್ಲಿ 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಬೇಕೆಂಬ ಸಂಕಲ್ಪ ತೊಟ್ಟಿರುವ ಕೇಂದ್ರ ಸರ್ಕಾರವು ಈಗಾಗಲೇ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆಯೋಜನೆಗಾಗಿ ಔಪಚಾರಿಕ ಬಿಡ್ ಸಲ್ಲಿಸಿದೆ. ಈ ಬಿಡ್​ ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, 2036 ರಲ್ಲಿ ಭಾರತವು ಚೊಚ್ಚಲ ಬಾರಿ ಜಾಗತಿಕ ಕ್ರೀಡಾಕೂಟಕ್ಕೆ ಆತಿಥ್ಯವಹಿಸಲಿದೆ.

ಅಕ್ಟೋಬರ್ 15, 2023… ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದಲ್ಲಿ ಮಾತನಾಡಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2036 ರಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧವಾಗಿದ್ದು, ಅಂತಹ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದು ಉಚ್ಛರಿಸಿದ್ದರು. ಅಲ್ಲದೆ ಮುಂಬರುವ ಒಲಿಂಪಿಕ್ಸ್​ ಆತಿಥ್ಯಕ್ಕಾಗಿ ಭಾರತ ಬಿಡ್ಡಿಂಗ್ ನಡೆಸುವುದನ್ನು ಇದೇ ವೇಳೆ ಪ್ರಧಾನಿ ಖಚಿತ ಪಡಿಸಿದ್ದರು. ಇದಾದ ಬಳಿಕ ನವೆಂಬರ್ 2024 ರಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತಾರಾಷ್ಟ್ರೀಯ ಒಲಿಂಪಿಕ್‌ ಅಸೋಸಿಯೇಷನ್‌ನ ಆತಿಥೇಯ ಆಯೋಗಕ್ಕೆ ಆಶಯ ಪತ್ರವನ್ನು ಕಳುಹಿಸಿ, 2036 ರ ಜಾಗತಿಕ ಕ್ರೀಡಾಕೂಟದ ಆತಿಥ್ಯಕ್ಕೆ ಔಪಚಾರಿಕ ಬಿಡ್ ಸಲ್ಲಿಸಿತು.


9,741.7 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದ ಬಿಸಿಸಿಐ (BCCI)


ದೇಶದ ಮೊದಲ ಸ್ವದೇಶಿ ಸೆಮಿಕಂಡಕ್ಟರ್ ಚಿಪ್ ಈ ವರ್ಷ ಬಿಡುಗಡೆ
First made in India semiconductor chip to be rolled out this year: Ashwini Vaishnaw
ದೇಶದ ಮೊದಲ ಸ್ವದೇಶಿ ಸೆಮಿಕಂಡಕ್ಟರ್ ಚಿಪ್ ಅನ್ನು ಈ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಕೇಶವ್ ಮೆಮೋರಿಯಲ್ ಎಜುಕೇಷನಲ್ ಸೊಸೈಟಿಯ 85 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಭಾರತವು ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಹೇಳಿದರು. ಸರ್ಕಾರ ಈಗಾಗಲೇ ಆರು ಸೆಮಿಕಂಡಕ್ಟರ್ ಸ್ಥಾವರಗಳನ್ನು ಅನುಮೋದಿಸಿದೆ ಮತ್ತು ಅವುಗಳ ನಿರ್ಮಾಣ ನಡೆಯುತ್ತಿದೆ ಎಂದು ಅವರು ಹೇಳಿದರು. ಈ ವರ್ಷ ದೇಶವು ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಅನ್ನು ಹೊಂದಲಿದೆ ಎಂದರು.

ಭಾರತ AI ಮಿಷನ್‌ನ ಭಾಗವಾಗಿ, ಉಚಿತ ಡೇಟಾಸೆಟ್‌ಗಳು ಮತ್ತು ಇತರವುಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ವೈಷ್ಣವ್ ಹೇಳಿದರು. ಕೃತಕ ಬುದ್ಧಿಮತ್ತೆ (AI) ಬಳಕೆಯಲ್ಲಿ ಸುಮಾರು ಒಂದು ಮಿಲಿಯನ್ ಜನರಿಗೆ ತರಬೇತಿ ನೀಡಲಾಗುತ್ತಿದೆ. 2047 ರ ವೇಳೆಗೆ ಭಾರತವು ವಿಶ್ವದ ಅಗ್ರ ಎರಡು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದರು.


ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025)
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್

error: Content Copyright protected !!