Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು / 24-09-2025 (Today’s Current Affairs)

Share With Friends

ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs

ಲೆಜೆಂಡರಿ ಅಂಪೈರ್ ಡಿಕೀ ಬರ್ಡ್ ನಿಧನ :
Legendary cricket umpire Dickie Bird dies aged 92
ಕ್ರಿಕೆಟ್ ಜಗತ್ತಿನಲ್ಲಿ ದೀರ್ಘಕಾಲ ತಮ್ಮ ಛಾಪು ಮೂಡಿಸಿದ್ದ ಲೆಜೆಂಡರಿ ಅಂಪೈರ್ ಹೆರಾಲ್ಡ್ ಡಿಕೀ ಬರ್ಡ್ ಅವರು 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಡಿಕಿ ಬರ್ಡ್ ತಮ್ಮ ವೃತ್ತಿಜೀವನವನ್ನು ಪ್ರಥಮ ದರ್ಜೆ ಕ್ರಿಕೆಟಿಗರಾಗಿ ಪ್ರಾರಂಭಿಸಿದರು. ಅವರು 1956 ರಲ್ಲಿ ಯಾರ್ಕ್‌ಷೈರ್ ಪರ ಮತ್ತು ನಂತರ ಲೀಸೆಸ್ಟರ್‌ಶೈರ್ ಪರ ಆಡಿದರು. ಆದಾಗ್ಯೂ, ಮೊಣಕಾಲಿನ ಗಾಯವು ಅವರ ಆಟದ ವೃತ್ತಿಜೀವನವನ್ನು ಮುಂದುವರಿಸಲು ಅಡ್ಡಿಯಾಯಿತು. ಅವರು ಅಂಪೈರ್ ಆಗಿ ತಮ್ಮ ಹೊಸ ಪ್ರಯಾಣವನ್ನು ಪ್ರಾರಂಭಿಸಿದರು, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಅಂಪೈರ್‌ಗಳಲ್ಲಿ ಒಬ್ಬರಾದರು.

ಡಿಕಿ ಬರ್ಡ್ 1973 ರಿಂದ 1996 ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲ ಅಂಪೈರ್ ಆಗಿದ್ದರು. ಅವರು ಒಟ್ಟು 66 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿದ್ದರು. ಇದರಲ್ಲಿ ಮೂರು ವಿಶ್ವಕಪ್ ಫೈನಲ್‌ಗಳು ಸೇರಿವೆ. ಅಂಪೈರಿಂಗ್‌ನಲ್ಲಿ ಅವರ ನಿರ್ಧಾರಗಳು ಬಹಳ ನಿಖರವಾಗಿದ್ದವು. ಅವರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಆಟಗಾರರಿಗೆ ಸಂಪೂರ್ಣ ವಿಶ್ವಾಸವಿತ್ತು. ಅವರ ಕ್ರೀಡಾ ಮನೋಭಾವ, ಹಾಸ್ಯಪ್ರಜ್ಞೆ ಮತ್ತು ವಿಶಿಷ್ಟ ಶೈಲಿಯಿಂದ, ಅವರು ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಬಹಳ ಜನಪ್ರಿಯ ವ್ಯಕ್ತಿಯಾದರು.

ಡಿಕಿ ಬರ್ಡ್ ಕೇವಲ ಅಂಪೈರ್ ಆಗಿರಲಿಲ್ಲ, ಕ್ರೀಡಾ ಜಗತ್ತಿನಲ್ಲಿ ಅವರು ಒಬ್ಬ ಮಹಾನ್ ವ್ಯಕ್ತಿಯೂ ಆಗಿದ್ದರು. ಅವರಿಗೆ 1986 ರಲ್ಲಿ MBE ಮತ್ತು 2012 ರಲ್ಲಿ OBE ಪ್ರಶಸ್ತಿ ನೀಡಲಾಯಿತು. ಅವರ ತವರು ಬಾರ್ನ್ಸ್ಲಿಯಲ್ಲಿ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಯಿತು.


Voter-Deletionವೋಟರ್‌ ಐಡಿ ದುರುಪಯೋಗ ತಡೆಗೆ ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ


ಜಗತ್ತಿನ ಶೇ. 2 ಅಗ್ರ ವಿಜ್ಞಾನಿಗಳ ಸಾಲಿನಲ್ಲಿ ಪತಂಜಲಿ ಆಚಾರ್ಯ ಬಾಲಕೃಷ್ಣ
Acharya Balkrishna recognised among world’s top 2% scientists by Stanford University
ಪತಂಜಲಿ ಸಹ-ಸಂಸ್ಥಾಪಕರಾದ ಆಚಾರ್ಯ ಬಾಲಕೃಷ್ಣ (Acharya Balkrishna) ಅವರು ವಿಶ್ವದ ಶೇ. 2 ಅಗ್ರಮಾನ್ಯ ವಿಜ್ಞಾನಿಗಳ ಸಾಲಿಗೆ ಸೇರಿದ್ದಾರೆ. ಎಲ್​ಸೆವಿಯರ್ (Elsevier) ಸಹಯೋಗದಲ್ಲಿ ಅಮೆರಿಕದ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯ (Stanford University) ರಿಸರ್ಚ್ ಗ್ರೂಪ್​ವೊಂದು, ಜಾಗತಿಕವಾಗಿರುವ ಅಗ್ರಮಾನ್ಯ ವಿಜ್ಞಾನಿಗಳು ಹಾಗೂ ಸಂಶೋಧಕರ ಪಟ್ಟಿಯೊಂದನ್ನು ಮಾಡಿದೆ. ಇದರಲ್ಲಿ ಆಚಾರ್ಯ ಬಾಲಕೃಷ್ಣ ಅವರ ಹೆಸರೂ ಸೇರಿದೆ.ಆಚಾರ್ಯ ಬಾಲಕೃಷ್ಣ ಅವರಿಗೆ ಸಿಕ್ಕಿರುವ ಈ ಮಾನ್ಯತೆಯು ಪತಂಜಲಿ ಸಂಸ್ಥೆಗೆ ಮಾತ್ರವಲ್ಲ, ಆಯುರ್ವೇದ ವಿಜ್ಞಾನಕ್ಕೆ ಸಿಕ್ಕ ಒಂದು ಗೌರವ ಹಾಗೂ ದೇಶಕ್ಕೂ ಸಿಕ್ಕ ಒಂದು ಹೆಮ್ಮೆ ಎಂದು ಭಾವಿಸಲಾಗಿದೆ.

ಆಚಾರ್ಯ ಬಾಲಕೃಷ್ಣ ಅವರು ಭಾರತದ ಪ್ರಾಚೀನ ಆಯುರ್ವೇದ ತತ್ವದೊಂದಿಗೆ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯನ್ನು ಮೇಳೈಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ನಾವೀನ್ಯತೆಯನ್ನೊಳಗೊಂಡಿರುವ ಅವರ ಸಂಶೋಧನಾ ಕಾರ್ಯಕ್ಕೆ ಜಾಗತಿಕವಾಗಿ ವಿಜ್ಞಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ಗಿಡಮೂಲಿಕೆಗಳು ಹಾಗೂ ಸಾಂಪ್ರದಾಯಿಕ ಔಷಧಗಳ ಉಪಯುಕ್ತತೆ ಬಗ್ಗೆ ಅನ್ವೇಷಣೆ ಮಾಡಲು ಇತರ ವಿಜ್ಞಾನಿಗಳಿಗೆ ಆಚಾರ್ಯ ಬಾಲಕೃಷ್ಣರು ಪ್ರೇರಣೆ ನೀಡಿದ್ದಾರೆ.

ಆಚಾರ್ಯ ಬಾಲಕೃಷ್ಣ ಅವರು ಸಮಗ್ರವಾದ ಹರ್ಬಲ್ ಎನ್​ಸೈಕ್ಲೋಪಿಡಿಯಾ ರೂಪಿಸಿದ್ದಾರೆ. ಇದರಲ್ಲಿ ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ಪೂರ್ಣ ಮಾಹಿತಿ ಇದೆ. ಸಂಶೋಧಕರಿಗೆ ಇದು ಬಹಳ ಅಮೂಲ್ಯವಾದ ಮಾಹಿತಿ ಕಣಜದಂತಾಗಿದೆ. ಅಂತಾರಾಷ್ಟ್ರೀಯ ಸಮುದಾಯವೂ ಕೂಡ ಈ ಕಾರ್ಯವನ್ನು ಸ್ಲಾಘಿಸಿದೆ. ಇದಲ್ಲದೇ ಉತ್ತರಾಖಂಡ್​ನ ಮಾಲಗಾನ್​ನಲ್ಲಿ ಹರ್ಬಲ್ ವರ್ಲ್ಡ್ ಸೆಂಟರ್ ಮೂಲಕ ಆಚಾರ್ಯರು ವಿಶ್ವಾದ್ಯಂತ ಇರುವ ವಿವಿಧ ಸಾಂಪ್ರದಾಯಿಕ ವೈದ್ಯಕೀಯ ಆಚರಣೆಗಳನ್ನು ಪ್ರಚುರಗೊಳಿಸುವ ಕೆಲಸ ಮಾಡುತ್ತಿದ್ದಾರೆ.


✶ಸರ್ವಕಾಲಿಕ ಗರಿಷ್ಠ ಬೆಲೆ ತಲುಪಿದ ಚಿನ್ನದ ಬೆಲೆ :
Gold price hits all-time high, reaches Rs 223, 000 per tola
ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ (Gold Price) 10 ಗ್ರಾಂಗೆ 2,700 ರೂ.ಯಷ್ಟು ಏರಿಕೆಯಾಗಿದ್ದು (Price Hike), ಸರ್ವಕಾಲಿಕ ಗರಿಷ್ಠ ಮಟ್ಟದ 1,18,900 ರೂ. ಬೆಲೆಗೆ ತಲುಪಿದೆ. ಅಮೆರಿಕವು ಎಚ್-1ಬಿ ವೀಸಾ (H-1B Visa) ಶುಲ್ಕವನ್ನು ಹೆಚ್ಚಿಸಿದ ನಂತರದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಮತ್ತಷ್ಟು ಕುಸಿದಿದೆ. ಈ ನಡುವೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಕ್ರಮದಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದ್ದು, 99.9% ರಷ್ಟು ಪರಿಶುದ್ಧ ಚಿನ್ನದ ಬೆಲೆ ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ 10 ಗ್ರಾಂಗೆ 1,16,200 ರೂ. ಆಗಿತ್ತು. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 11,537 ರೂ. ಇದೆ. ಬೆಳ್ಳಿಯ ಬೆಲೆ ಇಂದು ತಟಸ್ಥ ಆಗಿದೆ. ಗ್ರಾಂ ಬೆಲೆ 140 ರೂ. ಆಗಿದೆ, ಕೆಜಿ ಬೆಲೆ 1,40,000 ರೂ ಆಗಿದೆ.


ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025)
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್
ಉದ್ಯೋಗ / ನೇಮಕಾತಿ / ಅಧಿಸೂಚನೆ / ಅರ್ಜಿ ಆಹ್ವಾನ ಕುರಿತ ಸುದ್ದಿಗಳು
CURRENT AFFAIRS QUIZ PDF : ಪ್ರಚಲಿತ ಘಟನೆಗಳ ಕ್ವಿಜ್ PDF
error: Content Copyright protected !!