Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು / 25-07-2025 (Today’s Current Affairs)

Share With Friends

ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು (President Rule) ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ರಾಜ್ಯಸಭೆ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ರಾಜ್ಯಸಭೆಯಲ್ಲಿ ಮಂಡಿಸಿದ ಪ್ರಸ್ತಾವನೆಯನ್ನ ಸದನವು ಅಂಗೀಕರಿಸಿದೆ.ಆಗಸ್ಟ್ 13ರಿಂದ ಅನ್ವಯವಾಗುವಂತೆ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗಲಿದೆ.

ಮಣಿಪುರಕ್ಕೆ (Manipura) ಸಂಬಂಧಿಸಿದಂತೆ ಸಂವಿಧಾನದ 356ನೇ ವಿಧಿ ಅನ್ವಯ 2025ರ ಫೆಬ್ರವರಿ 13ರಂದು ರಾಷ್ಟ್ರಪತಿಗಳು ನೀಡಿದ ಸುಗ್ರೀವಾಜ್ಞೆಯನ್ನ 2025ರ ಆಗಸ್ಟ್ 13ರಿಂದ ಆರು ತಿಂಗಳ ಕಾಲ ಮುಂದುವರಿಸಲು ಸದನ ಒಪ್ಪಿಗೆ ನೀಡಬೇಕಿದೆ ಎಂದು ಸದನದಲ್ಲಿ ಮಂಡಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

2023ರ ಹೈಕೋರ್ಟ್‌ ಆದೇಶದ ವಿರುದ್ಧವಾಗಿ ಬುಡಕಟ್ಟು ಸಮುದಾಯದ ಮೆರವಣಿಗೆಯೊಂದನ್ನು ಆಯೋಜಿಸಲಾಗಿತ್ತು ಈ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಏರ್ಪಟ್ಟಿತು. ಇಲ್ಲಿಂದ ಸತತವಾಗಿ ಜನಾಂಗೀಯ ಹಿಂಸಾಚಾರ ಶುರುವಾಗಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದ್ರೆ ಈ ವರ್ಷ ಫೆಬ್ರವರಿ 13ರಂದು 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ರಾಜ್ಯದಲ್ಲಿ 1951ರಿಂದ ಇದು 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.

PM Modi : ಪ್ರಧಾನಿಯಾಗಿ ಇಂದಿರಾ, ನೆಹರು ದಾಖಲೆ ಹಿಂದಿಕ್ಕಿ ಹೊಸ ಇತಿಹಾಸ ಬರೆದ ನರೇಂದ್ರ ಮೋದಿ

ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
“ಮೆಣಸಿನ ರಾಣಿ” ಎಂದೇ ಪ್ರಸಿದ್ಧಳಾದ ರಾಣಿ ಚೆನ್ನಭೈರಾದೇವಿ (Rani Chennabhairadevi) ಅವರ ಸ್ಮರಣಾರ್ಥವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಅಂಚೆ ಚೀಟಿ ಬಿಡುಗಡೆ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ.

1552 ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹಾಡುವಳ್ಳಿ ಗೇರುಸೊಪ್ಪೆ ಅವಳಿ ಪಟ್ಟಣಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಎಲ್ಲ ಸಮಾಜದ ಎಲ್ಲ ಪ್ರಜೆಗಳಿಗೂ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದ್ದಳು. 1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯಲ್ಲಿ ಬಂಧನದಲ್ಲಿದ್ದು, ಜಿನಪದ್ಧತಿಗೆ ಅನುಗುಣವಾಗಿ ನಿರಾಹಾರ ವ್ರತಧಾರಿಯಾಗಿ ಸಲ್ಲೇಖದ ಮೂಲಕ ಇಹಲೋಕ ತ್ಯಜಿಸಿದ್ದಳು.

Gifts Tree : ಕಿಂಗ್ ಚಾರ್ಲ್ಸ್​​ಗೆ ವಿಶೇಷ ಉಡುಗೊರೆಯಾಗಿ ಗಿಡವೊಂದನ್ನು ನೀಡಿದ ಪ್ರಧಾನಿ ಮೋದಿ, ಏನಿದರ ವಿಶೇಷ..?

ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿ ಎಬಿ ಡಿವಿಲಿಯರ್ಸ್ ದಾಖಲೆ
AB De Villiers : ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ ವಿನಾಶಕಾರಿ ಬ್ಯಾಟಿಂಗ್​ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 41ನೇ ವಯಸ್ಸಿನಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಸಿದ್ದಾರೆ. ಕ್ರೀಸ್‌ಗೆ ಬಂದ ಕ್ಷಣದಿಂದಲೇ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ಕೇವಲ 41 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಒಟ್ಟು 51 ಎಸೆತಗಳಲ್ಲಿ 116 ರನ್ ಗಳಿಸಿದರು.

2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಭಾಗವಾಗಿ ಗುರುವಾರ (ಜುಲೈ 24) ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಇಂಗ್ಲೆಂಡ್ ಚಾಂಪಿಯನ್ಸ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಿತು.

153 ರನ್‌ಗಳ ಗುರಿಯೊಂದಿಗೆ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಬ್ಯಾಟಿಂಗ್ ಪ್ರಾರಂಭಿಸಿತು. ಆರಂಭಿಕರಾಗಿ ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್ ಕೇವಲ 41 ಎಸೆತಗಳಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಮೂಲಕ ತಮ್ಮ ಶತಕವನ್ನು ಪೂರೈಸಿದರು. ಅವರು 51 ಎಸೆತಗಳಲ್ಲಿ 116 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ 15 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸೇರಿವೆ.

ಡಿವಿಲಿಯರ್ಸ್ ಕೇವಲ 41 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಶತಕವಾಗಿದೆ. ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯಾದ ಬೆನ್ ಡಂಕ್ ಅವರ ಹೆಸರಿನಲ್ಲಿ ಅತಿ ವೇಗದ ಶತಕದ ದಾಖಲೆ ಇದೆ. ಈ ಲೀಗ್‌ನಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಡಿವಿಲಿಯರ್ಸ್. ಈ ಪಟ್ಟಿಯಲ್ಲಿ ಎರಡನೇ ಆಟಗಾರ ದಕ್ಷಿಣ ಆಫ್ರಿಕಾದ ಸರೆಲ್ ಎರ್ವೀ ಇದ್ದಾರೆ. ಇದೇ ಸಂದರ್ಭದಲ್ಲಿ ಡಿವಿಲಿಯರ್ಸ್ WCL ಇತಿಹಾಸದಲ್ಲೇ ಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 41 ವರ್ಷ 157 ದಿನಗಳಲ್ಲಿ ಶತಕ ಗಳಿಸಿದ್ದಾರೆ. ಬೆನ್ ಡಂಕ್ ಅವರು 37 ವರ್ಷಗಳು, 121 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಜಪಾನ್​ಗೆ ತೆರಳಿದ ಭಾರತದ 4 ಆನೆಗಳು
ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ ಯೋಜನೆ (International Animal Exchange) ಅಡಿಯಲ್ಲಿ ಸಾಕಾನೆಗಳಾದ ಸುರೇಶ್, ತುಳಸಿ, ಗೌರಿ ಮತ್ತು ಶ್ರುತಿ ಯನ್ನು ಗುರುವಾರ ಜಪಾನ್​​ಗೆ ರವಾನಿಸಲಾಗಿದೆ. 2023 ರಿಂದಲೂ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ಪ್ರಯತ್ನ ನಡೆಯುತ್ತಿದ್ದು, ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ಜಪಾನ್ ಮತ್ತು ಭಾರತ ದೇಶದ ರಾಯಭಾರ ಕಚೇರಿಗಳು ಸೇರಿದಂತೆ ಪ್ರಮುಖ ಇಲಾಖೆಗಳ ಸಹಕಾರದಿಂದ ಇಂದು ಸಾಧ್ಯವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ(Bannerghatta National Park)ದ ನಾಲ್ಕು ಆನೆಗಳು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ ದೇಶದ ಒಸಾಕಾ ಕಾನ್ಲೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾತಾರ್ ಏರ್ ವೇಸ್ B777-200F ಸರಕು ಸಾಗಣೆ ವಿಮಾನದಲ್ಲಿ ಕರೆದೊಯ್ಯಲಾಗಿದೆ.

8 ತಾಸು ವಿಮಾನ ಪ್ರಯಾಣಕ್ಕೆ ಆನೆಗಳಿಗೆ 3 ತಿಂಗಳುಗಳಿಂದ ತರಬೇತಿ :
ಸುಮಾರು 8 ತಾಸು ವಿಮಾನ ಪ್ರಯಾಣ ಇರಲಿದ್ದು, ಈಗಾಗಲೇ ಕಳೆದ ಮೂರು ತಿಂಗಳಿಂದ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಜಪಾನ್ ದೇಶದಿಂದ ಆಗಮಿಸಿದ್ದ ಮಾವುತರಿಗೆ ತರಬೇತಿ ಕೂಡ ನೀಡಲಾಗಿತ್ತು. ಜೊತೆಗೆ ಸಾಕಾನೆಗಳು ಅಲ್ಲಿನ ವಾತವರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ವೈದ್ಯಾಧಿಕಾರಿಗಳು, ನಾಲ್ವರು ಮಾವುತರು, ಓರ್ವ ಮೇಲ್ವಿಚಾರಕ ಮತ್ತು ಜೀವಶಾಸ್ತ್ರಜ್ಞೆ 15 ದಿನಗಳ ಮಟ್ಟಿಗೆ ತೆರಳಲಿದ್ದು, ಮಾವುತರು ಭಾರದ ಮನಸ್ಸಿನಲ್ಲಿ ಸಾಕಾನೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಡ್ರೋನ್‌ ಮೂಲಕ ಉಡಾಯಿಸಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ
DRDO Test-Fires UAV-Launched Precision Missile ULPGM-V3 in Andhra Pradesh
ಆಂಧ್ರಪ್ರದೇಶದ ಪರೀಕ್ಷಾ ವ್ಯಾಪ್ತಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಡ್ರೋನ್ ಮೂಲಕ ಉಡಾವಣೆ ಮಾಡಬಹುದಾದ ನಿಖರ ಮಾರ್ಗದರ್ಶಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿರುವ ರಾಷ್ಟ್ರೀಯ ಮುಕ್ತ ಪ್ರದೇಶ ಶ್ರೇಣಿಯಲ್ಲಿ (NOAR) ಈ ಪರೀಕ್ಷೆಯನ್ನು ನಡೆಸಲಾಯಿತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಶಸ್ವಿ ಪ್ರಯೋಗವನ್ನು ದೃಢಪಡಿಸಿದರು. ಡ್ರೋನ್‌ಗಳಿಂದ ಉಡಾಯಿಸಲು ವಿನ್ಯಾಸಗೊಳಿಸಲಾದ ULPGM-V3 ವ್ಯವಸ್ಥೆಯು, ಭಾರತದ ನಿಖರ-ದಾಳಿ ಸಾಮರ್ಥ್ಯಗಳ ಶಸ್ತ್ರಾಗಾರದಲ್ಲಿ ಅತ್ಯಾಧುನಿಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ, ಇದು ಮಾನವರಹಿತ ಮತ್ತು ಸ್ಮಾರ್ಟ್ ಯುದ್ಧ ವ್ಯವಸ್ಥೆಗಳಿಗೆ ವ್ಯಾಪಕವಾದ ಒತ್ತು ನೀಡುತ್ತದೆ.

ಅಶ್ಲೀಲತೆ ಪ್ರದರ್ಶಿಸುತ್ತಿದ್ದ ಉಲ್ಲು, ಬಿಗ್ ಶಾಟ್ಸ್, ಇತರ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ ನಿಷೇಧ
Govt bans Ullu, Big Shots, other apps & websites over vulgar content
‘ಆಕ್ಷೇಪಾರ್ಹ’ ಎಂದು ಪರಿಗಣಿಸಲಾದ ವಿಷಯವನ್ನು ಪ್ರದರ್ಶಿಸಿದ್ದಕ್ಕಾಗಿ ಸರ್ಕಾರವು ALTT, ULLU, Big Shots ಸೇರಿದಂತೆ ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ.ಅಶ್ಲೀಲ ವಿಷಯ ಸೇರಿದಂತೆ ಆಕ್ಷೇಪಾರ್ಹ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದ ಒಟ್ಟು 25 ಲಿಂಕ್‌ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುರುತಿಸಿದೆ. ಅಧಿಸೂಚನೆ ಹೊರಡಿಸುವ ಮೂಲಕ, ಭಾರತದಲ್ಲಿನ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷ್ಕ್ರಿಯಗೊಳಿಸುವಂತೆ ಸರ್ಕಾರ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP ಗಳು) ನಿರ್ದೇಶನ ನೀಡಿದೆ.

ALTT, ULLU, ಬಿಗ್ ಶಾಟ್ಸ್ ಆಪ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಆಪ್, ಕಂಗನ್ ಆಪ್, ಬುಲ್ ಆಪ್, ಜಲ್ವಾ ಆಪ್, ವಾವ್ ಎಂಟರ್ಟೈನ್ಮೆಂಟ್, ಲುಕ್ ಎಂಟರ್ಟೈನ್ಮೆಂಟ್, ಹಿಟ್ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್ಎಕ್ಸ್ ವಿಐಪಿ, ಹಲ್ಚುಲ್ ಆಪ್, ಮೂಡ್ಎಕ್ಸ್, ನಿಯಾನ್ಎಕ್ಸ್ ವಿಐಪಿ, ಫ್ಯೂಗಿ, ಮೊಜ್ಫ್ಲಿಕ್ಸ್ ಮತ್ತು ಟ್ರಿಫ್ಲಿಕ್ಸ್ ಮುಂತಾದವುಗಳು ಕ್ರಮ ಕೈಗೊಳ್ಳಲಾಗುತ್ತಿವೆ.

ಈ ಲಿಂಕ್‌ಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 67 ಮತ್ತು ಸೆಕ್ಷನ್ 67A, ಭಾರತೀಯ ನ್ಯಾಯ ಸಂಹಿತಾ 2023 ರ ಸೆಕ್ಷನ್ 294 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ 1986 ರ ಸೆಕ್ಷನ್ 4 ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ಸರ್ಕಾರ ಕಂಡುಕೊಂಡಿದೆ.

20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ‘ಸ್ಲೀಪಿಂಗ್ ಪ್ರಿನ್ಸ್​​’ (Sleeping Prince) ವಲೀದ್ ನಿಧನ


ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025)
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್
ಉದ್ಯೋಗ / ನೇಮಕಾತಿ / ಅಧಿಸೂಚನೆ / ಅರ್ಜಿ ಆಹ್ವಾನ ಕುರಿತ ಸುದ್ದಿಗಳು

error: Content Copyright protected !!