ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs
ನ.24ಕ್ಕೆ 53ನೇ CJI ಆಗಿ ಸೂರ್ಯಕಾಂತ್ ಅಧಿಕಾರ
ಇದೇ ನ.23 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನಿವೃತ್ತರಾಗುವ ಹಿನ್ನೆಲೆ ನ.24 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ರಾಷ್ಟ್ರಪತಿ ದೌಪದಿ ಮುರ್ಮು ಗುರುವಾರ ಭಾರತದ CJI ಆಗಿ ನೇಮಿಸಿದ್ದಾರೆ. 53 ನೇ ಸಿಜೆಐ ಆಗಿ, ನ್ಯಾಯಮೂರ್ತಿ ಸೂರ್ಯಕಾಂತ್ 2027ರ ಫೆಬ್ರವರಿ 9ರವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾ. ಸೂರ್ಯಕಾಂತ್ ಅವರನ್ನು ಸಿಜೆಐ ಬಿ.ಆರ್.ಗವಾಯಿ ಸೋಮವಾರ(ಅ. 27) ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು.
ಚಬಹಾರ್ ಬಂದರಿನ ಮೇಲಿನ ನಿರ್ಬಂಧಗಳಿಂದ ಭಾರತಕ್ಕೆ ಆರು ತಿಂಗಳ ವಿನಾಯಿತಿ ನೀಡಿದ ಅಮೆರಿಕ
US grants India six-month exemption from American sanctions on Chabahar port: MEA
ಇರಾನ್‌ನ ಚಾಬಹಾರ್ ಬಂದರಿನ(Chabahar port) ಮೇಲಿನ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ಆರು ತಿಂಗಳ ವಿನಾಯಿತಿ ನೀಡಿದೆ ಎಂದು ವಿದೇಶಾಂಗ ಸಚಿವಾಲಯ (MEA) ಗುರುವಾರ (ಅ.30) ತಿಳಿಸಿದೆ. ಇರಾನ್‌ನ ಚಾಬಹಾರ್ ಬಂದರು ಯೋಜನೆಯ ಮೇಲಿನ ನಿರ್ಬಂಧಗಳು ಸೆಪ್ಟೆಂಬರ್, 29 ರಂದು ಜಾರಿಗೆ ಬಂದ ಒಂದು ತಿಂಗಳ ನಂತರ ಭಾರತಕ್ಕೆ ತಾತ್ಕಾಲಿಕ ವಿನಾಯಿತಿ ನೀಡುವ ಬಗ್ಗೆ ಇತ್ತೀಚಿನ ಯುಎಸ್ನಿಂದ ನಿರ್ಧಾರ ಬಂದಿದೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ವ್ಯಾಪಕ ಪ್ರಯತ್ನದ ಭಾಗವಾಗಿ ಈ ನಿರ್ಬಂಧಗಳು ಜಾರಿಯಲ್ಲಿದ್ದವು. ಈ ಕ್ರಮವು ಭಾರತದ ಮೇಲೂ ಪರಿಣಾಮ ಬೀರಿದೆ. ಈ ನಿರ್ಬಂಧಗಳು ನಿರ್ದಿಷ್ಟವಾಗಿ ಚಾಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಗುರಿಯಾಗಿರಿಸಿಕೊಂಡಿದೆ. ಇರಾನ್ ಮೇಲೆ ವಿಶ್ವಸಂಸ್ಥೆಯ ವ್ಯಾಪಕ ನಿರ್ಬಂಧಗಳನ್ನು ಮತ್ತೆ ಹೇರಿದ ನಂತರ ಈ ಕ್ರಮಗಳು ಜಾರಿಗೆ ಬಂದವು.
ಹಿರಿಯ ನಟಿ ಉಮಾಶ್ರಿ’ಗೆ 2019ನೇ ಸಾಲಿನ ‘ಡಾ.ರಾಜ್ ಕುಮಾರ್’ ಪ್ರಶಸ್ತಿ
2019ನೇ ವರ್ಷದ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಸ್ಯಾಂಡಲ್ ವುಡ್ ಹಿರಿಯ ನಟಿ ಉಮಾಶ್ರೀಗೆ ನೀಡಲಾಗಿದೆ. ಅಲ್ಲದೇ ಪುಟ್ಟಣ್ಣ ಕಣಗಾಲ್, ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.
ಈ ಸಂಬಂಧ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2019ನೇ ಕ್ಯಾಲೆಂಡರ್ ವರ್ಷದ ಡಾ.ರಾಜ್ ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ.ವಿಷ್ಣುವರ್ಧನ್ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ನಗದ ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಪುಟ್ಟಣ ಕಣ್ಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್ ಆರ್ ನಂಜುಂಡೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 5 ಲಕ್ಷ ನಗದು, 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಡಾ.ವಿಷ್ಣು ವರ್ಧನ್ ಪ್ರಶಸ್ತಿಗೆ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 5 ಲಕ್ಷ ನಗದ ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
ಇನ್ನೂ 2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ಬೆಳ್ಳಿ ತೊರೆ-ಸಿನಿಮಾ ಪ್ರಬಂಧಗಳಿಗೆ ನೀಡಲಾಗಿದೆ. ಇದರ ಲೇಖಕರು ರಘುನಾಥ.ಚ.ಹ ಆಗಿದ್ದಾರೆ. ಇದು 20,000 ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.
2019ನೇ ವರ್ಷದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಗುಳೆ ಆಯ್ಕೆ ಮಾಡಲಾಗಿದೆ. ಇದರ ನಿರ್ಮಾಪಕರು ಮನೋಹರ್ ಎಸ್ ಐಯರ್ ಆಗಿದ್ದಾರೆ. ಇದು 25,000 ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ.
MEILನಿಂದ ದುಬೈ ಮಾಲೀಕತ್ವದ ತಮಿಳುನಾಡು ವಿದ್ಯುತ್ ಘಟಕ ಖರೀದಿ
MEIL Energy acquires 250 MW Lignite-based power plant in Tamil Nadu
ತಮಿಳುನಾಡಿನಲ್ಲಿ ಅಬುಧಾಬಿ ನ್ಯಾಷನಲ್ ಎನರ್ಜಿ ಕಂಪನಿ ಪಿಜೆಎಸ್ಸಿ (“ಟಕಾ”) ಮಾಲೀಕತ್ವದ “ಟಿಎಕ್ಯೂಎ-ನೆಯ್ವೇಲಿ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ನ (“ಟಕಾ ನೆಯ್ವೇಲಿ”) ಶೇ.100ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ದೇಶೀಯ ಮೂಲ ಸೌಕರ್ಯ ಸಂಸ್ಥೆ ಮೆಘಾ ಇಂಜಿನಿಯರ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿನ ತನ್ನ ಪ್ರಾಬಲ್ಯವನ್ನು ಇದೀಗ ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಈ ಸ್ವಾಧೀನವು ಎಂಇಐಎಲ್ನ (MEIL) ವಿಸ್ತೃತ ಇಂಧನ ಕ್ಷೇತ್ರದ ಬಂಡವಾಳಕ್ಕೆ ಗಮನಾರ್ಹ ಸೇರ್ಪಡೆಯಾಗಿದೆ. ಟಾಕಾ (TAQA) ನೆಯ್ವೇಲಿ ತಮಿಳುನಾಡಿನ ನೆಯ್ವೇಲಿಯಲ್ಲಿರುವ 250 ಮೆಘಾ ವ್ಯಾಟ್ ಲಿಗ್ನೈಟ್ ಆಧಾರಿತ ವಿದ್ಯುತ್ ಸ್ಥಾವರವನ್ನು ಹೊಂದಿದ್ದು, ಅದನ್ನು ನಿರ್ವಹಿಸುತ್ತಿದೆ. ಈ ವಿದ್ಯುತ್ ಸ್ಥಾವರವು ಸ್ಥಳೀಯ ಡಿಸ್ಕಾಮ್ನೊಂದಿಗೆ ದೀರ್ಘಾವಧಿಯ ವಿದ್ಯುತ್ ಕಡಿತ ಬದ್ಧತೆಯನ್ನು ಹೊಂದಿದೆ ಮತ್ತು ಬೆಳೆಯುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿದ್ಯುತ್ ಅನ್ನು ತಲುಪಿಸುವ ಸುಸ್ಥಾಪಿತ ದಾಖಲೆಯನ್ನು ಹೊಂದಿದೆ.
5.2 ಜಿಗಾ ವ್ಯಾಟ್ಗಿಂತಲೂ ಅಧಿಕ ಉತ್ಪಾದನಾ ಸ್ವತ್ತುಗಳನ್ನು ಹೊಂದಿರುವ ಈ ಸ್ವಾಧೀನವು, ಇಂಧನ ಕ್ಷೇತ್ರದಲ್ಲಿನ ಎಂಇಐಎಲ್ನ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ವಿಶ್ವಾಸಾರ್ಹ ಸೇವೆಯತ್ತ ಕೊಂಡೊಯ್ಯುಲಿದೆ. ಉತ್ತಮ ಗುಣಮಟ್ಟದ ಇಂಧನ ಸ್ವತ್ತುಗಳನ್ನು ಹೊಂದುವ ಮತ್ತು ನಿರ್ವಹಿಸುವ ಪ್ರಯಾಣದಲ್ಲಿ ಈ ಸ್ವಾಧೀನವು ಒಂದು ಮೈಲಿಗಲ್ಲು ಮತ್ತು ಇದು ಪ್ರಮುಖ ಮೂಲಸೌಕರ್ಯ ಸ್ವತ್ತುಗಳ ಮಾಲೀಕತ್ವದೊಂದಿಗೆ ಇ.ಪಿ.ಸಿ ಶ್ರೇಷ್ಠತೆಯನ್ನು ಪೂರೈಸುವ ನಮ್ಮ ದೀರ್ಘಕಾಲೀನ ಕಾರ್ಯತಂತ್ರವನ್ನು ಮುನ್ನಡೆಸುತ್ತದೆ.
ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ (ಎಂ.ಇ.ಐ.ಎಲ್) ಭಾರತದ ಪ್ರಮುಖ ವೈವಿಧ್ಯಮಯ ಸಂಘಟಿತ ದೇಶೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಮೂಲಸೌಕರ್ಯ, ಇಂಧನ, ಹೈಡ್ರೋಕಾರ್ಬನ್ಗಳು, ಉತ್ಪಾದನೆ ಮತ್ತು ಸಾರಿಗೆಯಲ್ಲಿ ಆಸಕ್ತಿ ಹೊಂದಿದೆ. ವಿದ್ಯುತ್, ತೈಲ ಮತ್ತು ಅನಿಲ, ನೀರಾವರಿ, ನೀರು ನಿರ್ವಹಣೆ ಮತ್ತು ಕೈಗಾರಿಕಾ ಉತ್ಪಾದನೆ ಸೇರಿದಂತೆ ಬಹು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಭಾರತದ ಸುಸ್ಥಿರ ಅಭಿವೃದ್ಧಿ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡುವ ದೊಡ್ಡ ಪ್ರಮಾಣದ, ಸಂಕೀರ್ಣ ಎಂಜಿನಿಯರಿಂಗ್ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಕಂಪನಿಯು ಬಲವಾದ ದಾಖಲೆಯನ್ನು ನಿರ್ಮಿಸಿ ಮುನ್ನುಗ್ಗುತ್ತಿದೆ.
ರೋಹಿತ್ ಶರ್ಮ ಜತೆ ಎಲೈಟ್ ಪಟ್ಟಿ ಸೇರಿದ ಸೂರ್ಯಕುಮಾರ್
Suryakumar Yadav joins Rohit Sharma in elite list
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ಗಳ ಎಲೈಟ್ ಪಟ್ಟಿ ಸೇರಿದ್ದಾರೆ. ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎರಡು ಸಿಕ್ಸರ್ ಬಾರಿಸುತ್ತಿದ್ದಂತೆ ಅವರು 150 ಸಿಕ್ಸರ್‌ಗಳ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ವಿಶ್ವದ 5ನೇ ಹಾಗೂ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು.
ಅತ್ಯಧಿಕ ಸಿಕ್ಸರ್ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿದೆ. ರೋಹಿತ್ 205 ಸಿಕ್ಸರ್ ಬಾರಿಸಿದ್ದಾರೆ. ಈ ದಾಖಲೆ ಮುರಿಯಲು ಸೂರ್ಯಕುಮಾರ್‌ಗೆ ಇನ್ನೂ 56 ಸಿಕ್ಸರ್‌ಗಳ ಅಗತ್ಯವಿದೆ. ರೋಹಿತ್ ನಿವೃತ್ತಿ ಹೇಳಿರುವ ಕಾರಣ ಸೂರ್ಯ ಮುಂದೆ ಅವಕಾಶವಿದೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 150+ ಸಿಕ್ಸರ್‌ಗಳು
ರೋಹಿತ್ ಶರ್ಮಾ-205
ಮುಹಮ್ಮದ್ ವಸೀಮ್-187
ಮಾರ್ಟಿನ್ ಗುಪ್ಟಿಲ್-173
ಜೋಸ್ ಬಟ್ಲರ್-172
ಸೂರ್ಯಕುಮಾರ್ ಯಾದವ್-150 *
‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಉಡಾವಣೆಗೊಂಡ ಕೇವಲ 3.5 ಗಂಟೆಗಳಲ್ಲೇ ಬಾಹ್ಯಾಕಾಶ ನಿಲ್ದಾಣ ತಲುಪಿ ಹೊಸ ದಾಖಲೆ ಬರೆದ ಚೀನಾದ ಶೆನ್ಝೌ-21(Shenzhou 21)
- ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಪಟ್ಟಿ (Central Government Schemes)
- Trishul Military Exercise : ಪಾಕ್ ಗಡಿ ಬಳಿ ʼತ್ರಿಶೂಲ್ʼ ಸಮರಾಭ್ಯಾಸ ಆರಂಭಿಸಿದ ಭಾರತ : Explanation
- ಇಂದಿರಾ ಗಾಂಧಿ ಅವರ ಕುರಿತ ಮಹತ್ವದ ಬಹು ಆಯ್ಕೆ ಪ್ರಶ್ನೆಗಳು ( MCQs on Indira Gandhi)
- Recruitment : ಮಂಡ್ಯ ಜಿಲ್ಲಾ ಪಂಚಾಯತ್ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ

