Trump Tariff : ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್
Trump Tariff : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಬೆಳವಣಿಗೆಯಲ್ಲಿ ಔಷಧಗಳ (Pharmaceutical Product) ಆಮದಿನ ಮೇಲೆ ಶೇ.100ರಷ್ಟು ಸುಂಕ ಘೋಷಿಸಿದ್ದಾರೆ. ಇದು ಅಕ್ಟೋಬರ್ 1ರಿಂದ ಜಾರಿಯಾಗಲಿದೆ.
ಅಲ್ಲದೇ ಅಡುಗೆ ಮನೆಗೆ ಬಳಸುವ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್ – heavy trucks) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಜೊತೆಗೆ ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಈ ಘೋಷಣೆಯು ಭಾರತೀಯ ಔಷಧ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಬಹುದು. ಅಮೆರಿಕ ಭಾರತದ ಅತಿದೊಡ್ಡ ಔಷಧ ರಫ್ತು ಮಾರುಕಟ್ಟೆಯಾಗಿದೆ.ಅಮೆರಿಕದಲ್ಲಿ ಕೈಗೆಟುಕುವ ಜೆನೆರಿಕ್ ಔಷಧಿಗಳಿಗೆ ಭಾರಿ ಬೇಡಿಕೆಯಿದೆ. ಇದರಿಂದ ಕಂಪನಿಗಳು ಅಮೆರಿಕದಲ್ಲಿ ಉತ್ಪಾದನೆಯನ್ನು ಸ್ಥಾಪಿಸದ ಹೊರತು, ಭಾರತದ ಔಷಧ ವಲಯವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.
2024 ರಲ್ಲಿ, ಭಾರತವು ಅಮೆರಿಕಕ್ಕೆ 3.6 ಬಿಲಿಯನ್ ಡಾಲರ್ (ಸುಮಾರು ರೂ. 31,626 ಕೋಟಿ) ಮೌಲ್ಯದ ಔಷಧಿಗಳನ್ನು ರಫ್ತು ಮಾಡಿತ್ತು. ಆದರೆ 2025 ರ ಮೊದಲಾರ್ಧದಲ್ಲಿ, ಈ ಅಂಕಿ ಅಂಶವು 3.7 ಬಿಲಿಯನ್ ಡಾಲರ್ (ಸುಮಾರು ರೂ. 32,505 ಕೋಟಿ) ತಲುಪಿತ್ತು.
ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಸನ್ ಫಾರ್ಮಾ, ಲುಪಿನ್ ಮತ್ತು ಅರಬಿಂದೋ ಫಾರ್ಮಾದಂತಹ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ಕಂಪನಿಗಳ ಆದಾಯದ ಗಮನಾರ್ಹ ಭಾಗವು ಅಮೆರಿಕದಿಂದ ಬರುತ್ತಿದೆ ಮತ್ತು ಸುಂಕಗಳು ಅವುಗಳ ವೆಚ್ಚವನ್ನು ದ್ವಿಗುಣಗೊಳಿಸಬಹುದು.
ಸುಂಕ ನಿಯಮ ಏನು?
ಅಕ್ಟೋಬರ್ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100ರಷ್ಟು ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ್ರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯ್ತಿ ಸಿಗಲಿದೆ ಎಂದು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ
ಟ್ರಂಪ್ ಪೋಸ್ಟ್‌ನಲ್ಲಿ ಏನಿದೆ?
ಔಷಧಗಳ ಆಮದಿನ ಮೇಲೆ 100%, ಅಡುಗೆಮನೆ ಪಿಠೋಪಕರಣಗಳ ಮೇಲೆ 50%, ಸ್ನಾನಗೃಹ ಪಿಠೋಪಕರಣಗಳ ಮೇಲೆ 30% ಸುಂಕ ಹಾಗೂ ಭಾರೀ ಟ್ರಕ್‌ಗಳ (ಹೆವಿ ಟ್ರಕ್) ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿದೆ, ಇದು ತುಂಬಾ ಅನ್ಯಾಯ. ಅಲ್ಲದೇ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಪೀಟರ್‌ಬಿಲ್ಟ್, ಕೆನ್‌ವರ್ತ್, ಫ್ರೈಟ್‌ಲೈನರ್, ಮ್ಯಾಕ್ ಸೇರಿದಂತೆ ನಮ್ಮ ಇತರ ಟ್ರಕ್ ತಯಾರಕರನ್ನು ರಕ್ಷಿಸಲು ಹಾಗೂ ಅವರನ್ನು ಆರ್ಥಿಕ ಬಲಶಾಲಿಗಳನ್ನಾಗಿಸಲು ಹೆವಿ ಟ್ರಕ್ ಮೇಲೆ 25% ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ.
ಟ್ರಂಪ್ ಸುಂಕದಿಂದ ಭಾರತದ ಮೇಲಾಗುವ ಪರಿಣಾಮ ಏನು?
ಟ್ರಂಪ್‌ನ ಈ ಹೊಸ ತೆರಿಗೆ ನೀತಿಯಿಂದ ಭಾರತದ ಮೇಲೆ ಭಾರೀ ದೊಡ್ಡ ಪ್ರಮಾಣದ ಪರಿಣಾಮ ಬೀರಲಿದೆ. ಅಮೆರಿಕಕ್ಕೆ ಆಮದಾಗುವ ಔಷಧೀಯ ಉತ್ಪನ್ನಗಳ ಮೇಲೆ ಟ್ರಂಪ್ 100% ಸುಂಕ ವಿಧಿಸಿರುವುದರಿಂದ ಅಕ್ಟೋಬರ್ 1ರಿಂದ ಭಾರತದ ಔಷಧ ಉತ್ಪಾದಕ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಯುಎಸ್ ಭಾರತದ ಫಾರ್ಮಾ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಅದ್ರಲ್ಲೂ ಪ್ರಮುಖವಾಗಿ ಕೈಗೆಟುವಂತಹ ಜೆನೆರಿಕ್ ಮೆಡಿಸಿನ್‌ಗಳು ಸಹ ಒಳಗೊಂಡಿವೆ. 2024ರಲ್ಲಿ ಭಾರತವು $3.6 ಬಿಲಿಯನ್ ಡಾಲರ್‌ನಷ್ಟು (31,626 ಕೋಟಿ ರೂಪಾಯಿ) ಮೌಲ್ಯದ ಔಷಧೀಯ ಉತ್ಪನ್ನಗಳು ಅಮೆರಿಕಾಕ್ಕೆ ರಫ್ತು ಮಾಡಿದೆ. ಅದೇ ರೀತಿಯಲ್ಲಿ ಈ ವರ್ಷ 2025ರ ಮೊದಲಾರ್ಧದಲ್ಲಿ $3.7 ಬಿಲಿಯನ್ (32,505 ಕೋಟಿ ರೂಪಾಯಿ) ಮೌಲ್ಯದ ಔಷಧಿಗಳನ್ನು ರಫ್ತು ಮಾಡಿದೆ.
ಪ್ರಮುಖ ಔಷಧೀಯ ಕಂಪನಿಗಳಾದ ಡಾ. ರೆಡ್ಡಿಸ್, ಸನ್ ಫಾರ್ಮಾ, ಲುಪಿನ್ ಮತ್ತು ಔರೊಬಿಂದೊ ಯುಎಸ್ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಪಡೆದಿವೆ. ಆದ್ರೆ ಟ್ರಂಪ್ ಸುಂಕದಿಂದಾಗಿ ಭಾರತದ ಪ್ರಮುಖ ಔಷಧಿ ತಯಾರಕ ಕಂಪನಿಗಳು ತೊಂದರೆಯನ್ನು ಎದುರಿಸುವಂತಾಗಿದೆ.
- First Female Dentist : ಭಾರತದ ಮೊದಲ ಮಹಿಳಾ ದಂತವೈದ್ಯೆ ಯಾರು..?
- Teaching Recruitment : KVAFSU ಅಧ್ಯಾಪಕರ ನೇಮಕಾತಿ 2025 – 25 ಹುದ್ದೆಗಳಿಗೆ ಅರ್ಜಿ ಆಹ್ವಾನ
- Bank Recruitment : ರಾಯಚೂರು ಡಿಸಿಸಿಸಿ ಬ್ಯಾಂಕ್ ನೇಮಕಾತಿ 2025 – 70 ಹುದ್ದೆಗಳಿಗೆ ಅರ್ಜಿ ಆಹ್ವಾನ
- Intelligence Bureau Recruitment : 362 ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November

