ಕೇಂದ್ರ ಬಜೆಟ್ ಕುರಿತು ತಿಳಿದುಕೊಂಡಿರಲೇಬೇಕಾದ ಸಾಮಾನ್ಯ ಜ್ಞಾನ
# ಬಜೆಟ್ ಆರಂಭವಾಗಿದ್ದು ಯಾವಾಗ.. ?
ಕೇಂದ್ರ ಸರಕಾರದ ವಾರ್ಷಿಕ ಹಣಕಾಸು ವರದಿಯನ್ನು ‘ಸಾಮಾನ್ಯ ಬಜೆಟ್’ ಎನ್ನಲಾಗುತ್ತದೆ. ಭಾರತದ ಮೊದಲ ಬಜೆಟ್ ಅನ್ನು 1860ರ ಏಪ್ರಿಲ್ 7 ರಂದು ಮಂಡಿಸಲಾಯಿತು. ಅಂದರೆ ಭಾರತದ ಕೇಂದ್ರ ಬಜೆಟ್‌ಗೆ 160 ವರ್ಷಗಳ ಇತಿಹಾಸವಿದೆ. ಮೊದಲ ಬಜೆಟ್ ಅನ್ನು ಬ್ರಿಟಿಷ್ ಸರ್ಕಾರದ ಅಂದಿನ ಹಣಕಾಸು ಸಚಿವರಾಗಿದ್ದ ಜೇಮ್ಸ್ ವಿಲ್ಸನ್ ಮಂಡಿಸಿದ್ದರು.
# ಸ್ವಾತಂತ್ರ್ಯ ನಂತರ ಮೊದಲು ಮಂಡನೆಯಾಗಿದ್ದು ಯಾವಾಗ?
ಸ್ವಾತಂತ್ರ್ಯ ನಂತರ ಸಂವಿಧಾನದ 112ನೇ ವಿಧಿಯಡಿ ಆಯ-ವ್ಯಯ (ಬಜೆಟ್) ಮಂಡಿಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಶಣ್ಮುಖಂ ಚೆಟ್ಟಿ ಅವರು 1947ರ ನವೆಂಬರ್ 26 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು. ಸಂವಿಧಾನ ಜಾರಿಯಾದ ನಂತರದ ಮೊದಲ ಬಜೆಟ್ಅನ್ನು 1950ರ ಫೆಬ್ರವರಿ 28 ರಂದು ಮಂಡಿಸಲಾಯಿತು.
# ಬಜೆಟ್ ರಜೆನೆಗೆ ಯಾರೆಲ್ಲ ಬೇಕು?
ಯೋಜನಾ ಆಯೋಗ, ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್, ಆಡಳಿತ ಸಚಿವಾಲಯ, ಹಣಕಾಸು ಸಚಿವಾಲಯ ಈ ಎಲ್ಲ ಏಜೆನ್ಸಿಗಳು ಸೇರಿ ಬಜೆಟ್ ರಚಿಸುತ್ತವೆ.
# ಬಜೆಟ್‌ನ ಇತರೆ ಆಸಕ್ತಿಕರ ಸಂಗತಿಗಳು ಯಾವುವು?
ಹಣಕಾಸು ಸಚಿವರ ಭಾಷಣವು ಸುರಕ್ಷಿತ ದಾಖಲೆಯಾಗಿದೆ.ಸಚಿವರ ಭಾಷಣ ಪ್ರತಿಯನ್ನು ಬಜೆಟ್‌ಗೆ ಎರಡು ದಿನಗಳ ಮೊದಲು ಮುದ್ರಿಸಲು ಕಳುಹಿಸಲಾಗುತ್ತದೆ.ಹಣಕಾಸು ಸಚಿವಾಲಯದ ಎಲ್ಲ ಅಧಿಕಾರಿಗಳು ಮತ್ತು ನೌಕರರು ಕಚೇರಿಯಲ್ಲೇ ಇರುತ್ತಾರೆ.ಕುಟುಂಬದೊಂದಿಗೆ ಮಾತನಾಡಲು ಸಹ ಸಿಬ್ಬಂದಿಗೆ ಅವಕಾಶವಿಲ್ಲ.ಬಜೆಟ್‌ನ ತಯಾರಿಕೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಸೇರಿದಂತೆ ಬಜೆಟ್‌ಗೆ ಸಂಬಂಧಿಸಿದ ಪ್ರತಿ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
# ಬಜೆಟ್ಅನ್ನು ಯಾರು ಅನುಮೋದಿಸುತ್ತಾರೆ?
ಹಣಕಾಸು ಸಚಿವರಿಗೆ ಬಜೆಟ್‌ನ ಮೊದಲ ಕರಡು ಪ್ರತಿ ನೀಡಲಾಗುತ್ತದೆ.ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿಗಳ ಅನುಮೋದನೆ ಪಡೆಯಬೇಕು. ರಾಷ್ಟ್ರಪತಿಗಳ ಅನುಮೋದನೆಯ ನಂತರ ಕ್ಯಾಬಿನೆಟ್ ಮುಂದೆ ಬಜೆಟ್ ಮಂಡಿಸಲಾಗುತ್ತದೆ.ಕ್ಯಾಬಿನೆಟ್ ಅನುಮೋದನೆಯ ನಂತರ, ಇದನ್ನು ಸಂಸತ್ತಿನ ಉಭಯ ಸದನಗಳಲ್ಲಿ (ಮೊದಲು ಲೋಕಸಭೆಯಲ್ಲಿ ನಂತರ ರಾಜ್ಯಸಭೆ) ಮಂಡಿಸಲಾಗುತ್ತದೆ.
# ಬಜೆಟ್ ಅನ್ನು ಏಕೆ ತಯಾರಿಸಲಾಗುತ್ತದೆ..?
ಕೇಂದ್ರ ಅಥವಾ ರಾಜ್ಯದಲ್ಲಿ ಸರಕಾರ ರಚಿಸುವ ಯಾವುದೇ ರಾಜಕೀಯ ಪಕ್ಷ ಕೆಲವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಜವಾಬ್ದಾರಿಗಳನ್ನು ಹೊಂದಿರುತ್ತದೆ. ಭಾರತದಂತಹ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರದಲ್ಲಿ ಸರಕಾರ ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಹಂಚಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ, ಪ್ರಾದೇಶಿಕ ಅಸಮಾನತೆ ತಗ್ಗಿಸುವುದು, ರಕ್ಷಣಾ ಸಾಮರ್ಥ್ಯಗಳ ನವೀಕರಣ ಸೇರಿ ತೆರಿಗೆ ನಿರ್ಧಾರ, ಆರ್ಥಿಕ ಬೆಳವಣಿಗೆಗಳಿಗೆ ರೂಪುರೇಷೆಗಳನ್ನು ನಿರ್ಧರಿಸಲು ಬಜೆಟ್‌ನ್ನು ಕೇಂದ್ರ ವಿತ್ತ ಸಚಿವಾಲಯ ರೂಪಿಸುತ್ತದೆ.
# ಕೇಂದ್ರ ಬಜೆಟ್‌ನ ಗುರಿಯೇನು..?
ಸರಕಾರ ಮಂಡಿಸುವ ಬಜೆಟ್‌ನ ಪ್ರಮುಖ ಗುರಿಯೆಂದರೆ ರಾಷ್ಟ್ರದಾದ್ಯಂತ ಸಂಪನ್ಮೂಲಗಳ ಸರಿಯಾದ ಹಂಚಿಕೆ, ಗಳಿಕೆ ಮತ್ತು ಸಂಪತ್ತಿನ ವಿಷಯದಲ್ಲಿ ಅಸಮಾನತೆ ತಗ್ಗಿಸುವುದು, ಆರ್ಥಿಕ ಸ್ಥಿರತೆಗೆ ದಾರಿ ಮಾಡಿಕೊಡುವುದು, ಸಾರ್ವಜನಿಕ ಉದ್ಯಮಗಳನ್ನು ನಿರ್ವಹಿಸುವುದು, ಆರ್ಥಿಕ ಬೆಳವಣಿಗೆಗೆ ಯೋಜನೆ ರೂಪಿಸುವುದು ಹಾಗೂ ಪ್ರಾದೇಶಿಕ ಅಸಮಾನತೆಯನ್ನು ಪರಿಹರಿಸುವುದಾಗಿದೆ.
# ಬಜೆಟ್‌ನ ಪ್ರಾಮುಖ್ಯತೆ ಏನು..?
ಬಜೆಟ್ ಎನ್ನುವುದು ಸರಕಾರದ ಬ್ಯಾಲೆನ್ಸ್‌ಶೀಟ್ ಇದ್ದಂತೆ. ಮುಂದಿನ ಒಂದು ಆರ್ಥಿಕ ವರ್ಷದಲ್ಲಿ ಆಗಬೇಕಾದ ಕೆಲಸಗಳು, ಯೋಜನೆಗಳು ಹಾಗೂ ಅನುದಾನದ ವಿಂಗಡಣೆಯನ್ನು ಮಾಡಲು ಬಜೆಟ್ ಅನ್ನು ಸರಕಾರ ಹೊಂದಿರಬೇಕಾಗುತ್ತದೆ. ಪ್ರಮುಖವಾಗಿ ಸಂಪನ್ಮೂಲಗಳ ಹಂಚಿಕೆ ಮಾಡಲು ಮುಂಗಡ ಪತ್ರ ಬೇಕಾಗುತ್ತದೆ. ಹಾಗೂ ಬೆಲೆಯ ನಿಯಂತ್ರಣಕ್ಕಾಗಿ, ತೆರಿಗೆಯ ನಿರ್ಧಾರಕ್ಕಾಗಿ ಹಾಗೂ ಆರ್ಥಿಕ ಅಸಮಾನತೆಯನ್ನು ನೀಗಿಸಲು ಬಜೆಟ್ ಸರಕಾರಕ್ಕೆ ಪ್ರಮುಖವಾಗಿದೆ.
# ಭಾರತದ ಬಜೆಟ್ ಪಿತಾಮಹ ಯಾರು..?
ಭಾರತದ ಬಜೆಟ್ ಇತಿಹಾಸ ಗಮನಿಸಿದರೆ ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಹೋಗುವುದು ಅನಿವಾರ್ಯವಾಗುತ್ತದೆ. ಭಾರತದ ಬಜೆಟ್ ಪಿತಾಮಹ ಎಂದು ಕೂಡ ಬ್ರಿಟಿಷ್ ಅಧಿಕಾರಿ ಜೇಮ್ಸ್ ವಿಲ್ಸನ್ ಪಿಸಿ ಮಹಲಾನೋಬಿಸ್ ಅವರನ್ನು ಕರೆಯಲಾಗುತ್ತದೆ. ಇವರು 18 ಫೆಬ್ರವರಿ 1860ರಲ್ಲಿ ಭಾರತದ ಮೊದಲ ಬಜೆಟ್ ಮಂಡಿಸಿದ್ದರು.
ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆ ಮಾಡಿದ್ದು ಯಾರು..?
ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಮಂಡಿಸಿದ್ದು ಅಂದಿನ ಹಣಕಾಸು ಸಚಿವ ಆರ್‌ಕೆ ಷಣ್ಮುಖಮ್ ಶೆಟ್ಟಿ. 197.39 ಕೋಟಿ ರೂ. ಗಾತ್ರದ ಬಜೆಟ್‌ನ್ನು 1947ರಲ್ಲಿ ಅವರು ಮಂಡಿಸುತ್ತಾರೆ. ಅದಕ್ಕಿಂತಲೂ ಮುಂಚೆಯೂ ಬಜೆಟ್ ಮಂಡನೆಯಾಗುತ್ತಿತ್ತು. ಬ್ರಿಟಿಷ್ ಆಡಳಿತದ ಸಮಯದಲ್ಲಿ 1860ರಲ್ಲಿ ಮೊದಲ ಬಜೆಟ್ ಮಂಡನೆಯಾಗಿತ್ತು. ಅಂದಿನ ಬಜೆಟ್ ಅನ್ನು ಪಿಸಿ ಮಹಲಾನೋಬಿಸ್ ಮಂಡಿಸಿದ್ದರು. ಅವರನ್ನೇ ಭಾರತದ ಬಜೆಟ್ ಪಿತಾಮಹ ಎಂದೂ ಕರೆಯುತ್ತಾರೆ.
# ಕೇಂದ್ರ ಬಜೆಟ್ 2021 ಮುಖ್ಯ ಅಂಶಗಳು :
# ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ತಮ್ಮ ಮೂರನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಹಲವು ಘೋಷಣೆ ಮಾಡಿದ್ದು, 2021-22ರ ಬಜೆಟ್‌ನ ಒಟ್ಟು ಗಾತ್ರ 34.83 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
• 6 ಆಧಾರ ಸ್ಥಂಭಗಳ ಅಡಿ ಬಜೆಟ್ ಮಂಡಿಸಿ ಗಮನ ಸೆಳೆದ ನಿರ್ಮಲಾ ಸೀತಾರಾಮನ್
• ದೇಶಾದ್ಯಂತ ಸ್ವಚ್ಛ ಕುಡಿಯುವ ನೀರಿಗಾಗಿ ಜಲಜೀವನ ಅರ್ಬನ್ ವಾಟರ್ ಮಿಷನ್
• ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲು
• 20 ವರ್ಷಕ್ಕೂ ಹಳೆಯ ವಾಹನಗಳನ್ನು ಗುಜರಿ ಪಾಲು ಮಾಡಲು ನಿರ್ಧಾರ
• 15 ವರ್ಷಕ್ಕೂ ಹಳೆಯ ವಾಣಿಜ್ಯ ವಾಹನಗಳು ಗುಜರಿ ಪಾಲು
• ಶುದ್ಧಗಾಳಿ ಯೋಜನೆಗಾಗಿ 2 ಸಾವಿರ ಕೋಟಿ
• ರಾಜ್ಯಗಳಿಗೆ ತಲಾ 2 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಹಣ
• ದೇಶಾದ್ಯಂತ 11 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ
• ಹೆದ್ದಾರಿ ನಿರ್ಮಾಣದಲ್ಲಿ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪ. ಬಂಗಾಳಕ್ಕೆ ಆದ್ಯತೆ
• ಬೆಂಗಳೂರು ಮೆಟ್ರೋ – 2ಎ 2ಬಿ ಹಂತಕ್ಕೆ 14,788 ಕೋಟಿ ರೂ. ಅನುದಾನ
• 1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಲೈಸೆನ್ಸ್
• 1 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆ ವಿಸ್ತರಣೆ
• ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗುವಂತಾಗಲು ಯೋಜನೆ
• ಭಾರತೀಯ ರೈಲ್ವೆಗೆ 1.10 ಲಕ್ಷ ಕೋಟಿ ರೂ. ಮೀಸಲು
• ಅತ್ಯಂತ ಪ್ರಮುಖ ಕೈಗಾರಿಕಾ ವಲಯಗಳನ್ನು ಖಾಸಗೀಕರ ಮಾಡದಿರಲು ನಿರ್ಧಾರ
• ಷೇರು ಮಾರುಕಟ್ಟೆಗೆ ಎಲ್ಐಸಿ ಷೇರುಗಳ ಬಿಡುಗಡೆಗೆ ನಿರ್ಧಾರ
• 1.75 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ
• ಕೃಷಿಕರ ಆದಾಯ ದ್ವಿಗುಣಕ್ಕೆ ಸರ್ಕಾರದ ಸರ್ವ ಕ್ರಮದ ಭರವಸೆ
• ಒನ್ ನೇಷನ್.. ಒನ್ ರೇಷನ್ ಕಾರ್ಡ್ ಯೋಜನೆ ದೇಶಾದ್ಯಂತ ಜಾರಿ
• ಗೋಧಿ ಬೆಳೆಗಾರರಿಗೆ 75,000 ಕೋಟಿ, ಭತ್ತ ಬೆಳೆಗಾರರಿಗೆ 1.72 ಲಕ್ಷ ಕೋಟಿ
• ಎನ್ಜಿಒ ಸಹಭಾಗಿತ್ವದಲ್ಲಿ ದೇಶಾದ್ಯಂತ 100 ಸೈನಿಕ ಶಾಲೆ ಆರಂಭ
• 10ನೇ ತರಗತಿ ಪಾಸ್ ಆದ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
• ಭವಿಷ್ಯದಲ್ಲಿ ಡಿಜಿಟಲ್ ಜನಗಣತಿ ನಡೆಸಲು ಕೇಂದ್ರದ ನಿರ್ಧಾರ
• ಕೊರೊನಾದಿಂದ ಆದಾಯ ಸಂಗ್ರಹದಲ್ಲಿ ಭಾರೀ ಕುಸಿತ
• 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯ್ತಿ
# ಕೇಂದ್ರ ಸರಕಾರಕ್ಕೆ ಯಾವ ಯಾವ ಮೂಲಗಳಿಂದ ಎಷ್ಟು ಆದಾಯ ಬರುತ್ತದೆ. ಹಾಗೂ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಹಣ ವಿನಿಯೋಗಿಸಲಿದೆ ಎಂಬ ವಿವರ ಇಲ್ಲಿದೆ.
# ರೂಪಾಯಿ ಹೇಗೆ ಬರುತ್ತದೆ.?
ಸಾಲ ಮತ್ತು ಇತರ ಋುಣಗಳು=36 ಪೈಸೆ
ಕಾರ್ಪೊರೇಟ್ ತೆರಿಗೆ= 14 ಪೈಸೆ
ಆದಾಯ ತೆರಿಗೆ =14 ಪೈಸೆ
ಆಮದು ಸುಂಕ =3 ಪೈಸೆ
ಅಬಕಾರಿ ಸುಂಕ= 8 ಪೈಸೆ
ಜಿಎಸ್‌ಟಿ= 15 ಪೈಸೆ
ತೆರಿಗೆಯೇತರ ಆದಾಯ= 6 ಪೈಸೆ
ಸಾಲವಲ್ಲದ ಬಂಡವಾಳ ಸ್ವೀಕೃತಿ =5 ಪೈಸೆ
# ರೂಪಾಯಿ ಹೇಗೆ ವೆಚ್ಚವಾಗುತ್ತದೆ..?
ಕೇಂದ್ರ ಪ್ರಾಯೋಜಿತ ಯೋಜನೆಗಳು- 9 ಪೈಸೆ
ಕೇಂದ್ರ ವಲಯದ ಯೋಜನೆಗಳು- 13 ಪೈಸೆ
ಬಡ್ಡಿ ಪಾವತಿ -20 ಪೈಸೆ
ರಕ್ಷಣೆ -8 ಪೈಸೆ
ಸಹಾಯಧನ -9 ಪೈಸೆ
ಹಣಕಾಸು ಆಯೋಗ ಮತ್ತುಇತರ ವರ್ಗಾವಣೆ -10 ಪೈಸೆ
ರಾಜ್ಯಗಳ ಪಾಲು -16 ಪೈಸೆ
ಪಿಂಚಣಿ -5 ಪೈಸೆ
ಇತರೆ ವೆಚ್ಚ- 10 ಪೈಸೆ
ವಿತ್ತೀಯ ಕೊರತೆಯಲ್ಲಿ ಭಾರಿ ಏರಿಕೆ, 2021-22ರಲ್ಲಿ ಕೇಂದ್ರದಿಂದ 12.05 ಲಕ್ಷ ಕೋಟಿ ರೂ. ಸಾಲ!
ಕೇಂದ್ರ ಸರಕಾರದ ವೆಚ್ಚ (2021-21ರ ಬಜೆಟ್ ಅಂದಾಜು, ಕೋಟಿ ರೂಪಾಯಿಗಳಲ್ಲಿ)
ಪಿಂಚಣಿ 1,89,328
ರಕ್ಷಣೆ 3,47,088
ಸಹಾಯಧನ 3,35,361
ಕೃಷಿ ಮತ್ತು ಸಂಬಂಧಿತ ಚಟುವಟಕೆ 1,48,301
ವಾಣಿಜ್ಯ ಮತ್ತು ಕೈಗಾರಿಕೆ 34,623
ಈಶಾನ್ಯ ಭಾರತದ ಅಭಿವೃದ್ಧಿ 2,658
ಶಿಕ್ಷಣ 93,224
ಇಂಧನ 42,824
ವಿದೇಶಾಂಗ ವ್ಯವಹಾರ 18,155
ಹಣಕಾಸು 91,916
ಆರೋಗ್ಯ 74,602
ಗೃಹ ಸಚಿವಾಲಯ 1,13,521
ಬಡ್ಡಿ ಪಾವತಿ 8,09,701
ಐಟಿ ಮತ್ತು ದೂರ ಸಂಪರ್ಕ 53, 108
ಯೋಜನೆ ಮತ್ತು ಸಾಂಖ್ಯಿಕ 2,472
ಗ್ರಾಮೀಣಾಭಿವೃದ್ಧಿ 1,94,633
ವಿಜ್ಞಾನಕ್ಕೆ ಸಂಬಂಧಿಸಿದ ಇಲಾಖೆಗಳು 30,640
ಸಮಾಜ ಕಲ್ಯಾಣ 48,460
ತೆರಿಗೆ ಆಡಳಿತ 1,31,100
ರಾಜ್ಯಗಳಿಗೆ ವರ್ಗ 2,93,302
ಸಾರಿಗೆ 2,33,083
ಕೇಂದ್ರಾಡಳಿತ ಪ್ರದೇಶ 53,026
ನಗರಾಭಿವೃದ್ಧಿ 53,581
ಇತರೆ 87,528
ಒಟ್ಟು 34,83,236